• Home
  • »
  • News
  • »
  • entertainment
  • »
  • Sudeep Adopted 31 Cows: ಕಿಚ್ಚನ ಒಂದ್ ಒಳ್ಳೆ ಕೆಲಸ! ಎಲ್ಲ ಸ್ಟಾರ್ಸ್​ಗೂ ಇದು ಮಾದರಿ!

Sudeep Adopted 31 Cows: ಕಿಚ್ಚನ ಒಂದ್ ಒಳ್ಳೆ ಕೆಲಸ! ಎಲ್ಲ ಸ್ಟಾರ್ಸ್​ಗೂ ಇದು ಮಾದರಿ!

ಪುಣ್ಯ ಕೋಟಿ ದತ್ತು ತೆಗೆದುಕೊಳ್ಳಿ ಎಂದ ಕಿಚ್ಚ ಸುದೀಪ್

ಪುಣ್ಯ ಕೋಟಿ ದತ್ತು ತೆಗೆದುಕೊಳ್ಳಿ ಎಂದ ಕಿಚ್ಚ ಸುದೀಪ್

ರಾಜ್ಯದಲ್ಲಿರೋ ಪ್ರತಿ ಜಿಲ್ಲೆಗೆ ಒಂದು ಹಸು ಅನ್ನೋ ಲೆಕ್ಕದಲ್ಲಿ ಒಟ್ಟು 31 ಜಿಲ್ಲೆಯಿಂದ 31 ಹಸುಗಳನ್ನ ಕಿಚ್ಚ ಸುದೀಪ್ ದತ್ತು ಪಡೆದುಕೊಂಡಿದ್ದಾರೆ. ಈ ಒಂದು ಕೆಲಸದಿಂದ ಸುದೀಪ್ ಫ್ಯಾನ್ಸ್ ಕೂಡ ತುಂಬಾ ಖುಷಿಯಾಗಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

    ಅಭಿನಯ ಚಕ್ರವರ್ತಿ ಕಿಚ್ಚ (Sudeepa) ಸುದೀಪ್ ಈಗೊಂದು ಸ್ಪೂರ್ತಿದಾಯಕ ಕೆಲಸ ಮಾಡಿದ್ದಾರೆ. ತಮ್ಮ ಈ ಒಂದು ಕೆಲಸದಲ್ಲಿ ಎಲ್ಲರೂ ಭಾಗಿ ಆಗಿ ಅಂತಲೂ (Request) ಮನವಿ ಮಾಡಿದ್ದಾರೆ. ಹೌದು, ಕಿಚ್ಚ ಸುದೀಪ್ ಅವರ ಈ ಒಂದು ಮಹತ್ವದ ಕೆಲಸದ ಬಗ್ಗೆ ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ. ತಮ್ಮ ಮನೆಯ ಅಂಗಳದಲ್ಲಿಯೇ ಈ ಒಂದು ಕೆಲಸಕ್ಕೆ ಚಾಲನೆ ಸಿಕ್ಕಿದೆ. ಇದನ್ನ ನಿಜಕ್ಕೂ ಎಲ್ಲರೂ ಮೆಚ್ಚಿಕೊಂಡಿದ್ದಾರೆ.  ಫ್ಯಾನ್ಸ್ ಅಂತೂ ಫುಲ್ ಖುಷ್ ಆಗಿದ್ದಾರೆ.  ತಮ್ಮ ನೆಚ್ಚಿನ ನಾಯಕನ ಈ ಕೆಲಸದ ಬಗ್ಗೆ ಹೆಮ್ಮೆಪಟ್ಟುಕೊಂಡಿದ್ದಾರೆ. ಹಾಗೇನೆ  ಕಿಚ್ಚ (Kichcha Sudeepa) ಸುದೀಪ್ ಮನವಿ ಮಾಡಿಕೊಂಡಂತೆ ಎಲ್ಲರೂ ಪಾಲಿಸಿದ್ರೆ, ಆ ಮೂಕ ಜೀವವನ್ನ ಉಳಿಸಿದ ಪುಣ್ಯ ಕೂಡ ಎಲ್ಲರಿಗೂ ಬರುತ್ತದೆ.  ಇದರ ಬಗ್ಗೆ ಇಲ್ಲೊಂದಿಷ್ಟು ವಿವರ ಇಲ್ಲಿದೆ.


    ಅಭಿನಯ ಚಕ್ರವರ್ತಿ ಈಗ ಪುಣ್ಯಕೋಟಿಯ ರಾಯಭಾರಿ


    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಯಭಾರಿ ಆಗಿದ್ದಾರೆ. ಈ ಹಿಂದೆ ಅನೇಕ ಒಳ್ಳೆ ವಿಚಾರಕ್ಕೆ ಕಿಚ್ಚ ಸುದೀಪ್ ರಾಯಭಾರಿ ಆಗಿದ್ದರು. ಆದರೆ ಈಗ ರಾಯಭಾರಿ ಆಗಿರೋ ಈ ಒಂದು ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


    Kannada Actor Sudeepa Adopted 31 Cows for Cow Protection
    ಮನೆಯಲ್ಲಿ ಗೋ ಪೂಜೆ ಮಾಡಿದ ಸುದೀಪ್


    ನಿಜ, ಕಿಚ್ಚ ಸುದೀಪ್ ಈಗ ಸರ್ಕಾರದ "ಪುಣ್ಯ ಕೋಟಿ ದತ್ತು ಯೋಜನೆ" ಗೆ ರಾಯಭಾರಿ ಆಗಿದ್ದಾರೆ. ಕಿಚ್ಚ ಸುದೀಪ್ ತಮ್ಮ ಮನೆಯಲ್ಲಿಯೇ ಇಂದು ಈ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಎಲ್ಲರಲ್ಲೂ ಮನವಿ ಕೂಡ ಮಾಡಿದ್ದಾರೆ.


    ಪುಣ್ಯ ಕೋಟಿ ಯೋಜನೆಗೆ ಸಾಥ್ ಕೊಟ್ಟ ಕಿಚ್ಚ ಸುದೀಪ್
    ಪುಣ್ಯ ಕೋಟಿ ದತ್ತು ಯೋಜನೆ ಹಿಂದೆ ಕಾರಣವೂ ಇದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಆದ್ಮೇಲೆ ರಾಜ್ಯದಲ್ಲಿ ಅನೇಕ ಗೋ ಶಾಲೆ ಓಪನ್ ಆಗಿವೆ. ಇಲ್ಲಿರೋ ಗೋವುಗಳನ್ನ ದತ್ತು ತೆಗೆದುಕೊಂಡ್ರೆ, ಗೋವುಗಳ ರಕ್ಷಣೆ ಆಗುತ್ತದೆ ಅನ್ನೋದೇ ಈ ಯೋಜನೆ ಉದ್ದೇಶವೂ ಆಗಿದೆ.




    ಈ ಹಿನ್ನೆಲೆಯಲ್ಲಿಯೇ ಕಿಚ್ಚ ಸುದೀಪ್ ರಿಂದ ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸೋ ಕೆಲಸ ಮಾಡುತ್ತಿದೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಕಿಚ್ಚ ಸುದೀಪ್ ರಾಯಭಾರಿ ಆಗಿದ್ದಾರೆ. ಜನರಲ್ಲಿ ಪುಣ್ಯ ಕೋಟಿ ದತ್ತು ತೆಗೆದುಕೊಳ್ಳುಲು ಮನವಿ ಕೂಡ ಈಗ ಮಾಡುತ್ತಿದ್ದಾರೆ.


    ಪುಣ್ಯ ಕೋಟಿ ದತ್ತು ತೆಗೆದುಕೊಳ್ಳಿ ಎಂದ ಕಿಚ್ಚ ಸುದೀಪ್
    ಕಿಚ್ಚ ಸುದೀಪ್ ಪುಣ್ಯ ಕೋಟಿ ಯೋಜನೆಯ ರಾಯಭಾರಿ ಅಷ್ಟೇ ಆಗಿಲ್ಲ. ಎಲ್ಲರೂ ಹಸುಗಳನ್ನ ದತ್ತು ತೆಗೆದುಕೊಳ್ಳಿ ಅಂತಲೂ ಹೇಳ್ತಿಲ್ಲ. 31 ಹಸುಗಳನ್ನ ದತ್ತು ಕೂಡ ಪಡೆದುಕೊಂಡಿದ್ದಾರೆ.




    ರಾಜ್ಯದಲ್ಲಿರೋ ಪ್ರತಿ ಜಿಲ್ಲೆಗೆ ಒಂದು ಹಸು ಅನ್ನೋ ಲೆಕ್ಕದಲ್ಲಿ ಒಟ್ಟು 31 ಜಿಲ್ಲೆಯಿಂದ 31 ಹಸುಗಳನ್ನ ಕಿಚ್ಚ ಸುದೀಪ್ ದತ್ತು ಪಡೆದುಕೊಂಡಿದ್ದಾರೆ. ಈ ಒಂದು ಕೆಲಸದಿಂದ ಸುದೀಪ್ ಫ್ಯಾನ್ಸ್ ಕೂಡ ತುಂಬಾ ಖುಷಿಯಾಗಿದ್ದಾರೆ.


    ಸುದೀಪ್ ಮನೆಯಲ್ಲಿ ಗೋ ಪೂಜೆ ಮಾಡಿದ ಸುದೀಪ್
    ಕಿಚ್ಚ ಸುದೀಪ್ ತಮ್ಮ ಮನೆಯಲ್ಲಿಯೇ ಗೋವು ಪೂಜೆ ಮಾಡಿದ್ದಾರೆ. ಗೋವು ಪೂಜೆ ಮಾಡುವ ಮೂಲಕ ಕಿಚ್ಚ ಸುದೀಪ್ ತಮ್ಮ ಸ್ಪೂರ್ತಿದಾಯಕ ಕೆಲಸಕ್ಕೂ ಚಾಲನೆ ಕೊಟ್ಟಿದ್ದಾರೆ.


    ಇದನ್ನೂ ಓದಿ: Actress Ramya: ನನಗೆ ಸಂತೋಷ ಮುಖ್ಯ, ಮದುವೆ ಆಗಲ್ಲ ಎಂದು ಮೋಹಕ ತಾರೆ ರಮ್ಯಾ!


    ಸಚಿವ ಪ್ರಭು ಚವ್ಹಾಣ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಕಾರಣ, ಇಂತಹ ಒಂದು ಒಳ್ಳೆ ಕೆಲಸಕ್ಕೆ ತಮ್ಮನ್ನ ರಾಯಭಾರಿಯಾಗಿ ಆಯ್ಕೆ ಮಾಡಿದಕ್ಕೆ ಮನಸಾರೆ ಧನ್ಯವಾದ ತಿಳಿಸಿದ್ದಾರೆ.


    ಹೀಗೆ ಕಿಚ್ಚ ಸುದೀಪ್ ಗೋ ರಕ್ಷಣೆಗೆ ಎಲ್ಲರಲ್ಲೂ ಮನವಿ ಮಾಡಿದ್ದಾರೆ. ಚಿತ್ರರಂಗದ ಕಲಾವಿದರು, ಸಾರ್ವಜನಿಕ ಸಂಘ ಸಂಸ್ಥೆಗಳು ಗೋವುಗಳನ್ನ ದತ್ತು ಪಡೆದುಕೊಳ್ಳಿ ಅಂತಲೂ ಕಿಚ್ಚ ಸುದೀಪ್ ಹೇಳಿದ್ದಾರೆ.

    First published: