• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kichcha Sudeep: ಗೆಳೆಯನ ಚಿತ್ರದಲ್ಲಿ ನಟಿಸಲು ಸಂಭಾವನೆ ಪಡೆಯಲಿಲ್ಲ ಕಿಚ್ಚ ಸುದೀಪ್! ಕಾರಣ ಏನು?

Kichcha Sudeep: ಗೆಳೆಯನ ಚಿತ್ರದಲ್ಲಿ ನಟಿಸಲು ಸಂಭಾವನೆ ಪಡೆಯಲಿಲ್ಲ ಕಿಚ್ಚ ಸುದೀಪ್! ಕಾರಣ ಏನು?

ಉಸಿರೇ ಉಸಿರೇ ಚಿತ್ರಕ್ಕೆ ಕಿಚ್ಚನ ಭರ್ಜರಿ ಬಲ

ಉಸಿರೇ ಉಸಿರೇ ಚಿತ್ರಕ್ಕೆ ಕಿಚ್ಚನ ಭರ್ಜರಿ ಬಲ

ಉಸಿರೇ ಉಸಿರೇ ಚಿತ್ರದಲ್ಲಿ ಕಿಚ್ಚನ ಸುದೀಪ್ ಅಭಿನಯ. ಗೆಳೆಯ ರಾಜೀವ್‌ಗಾಗಿ ಸಂಭಾವನೆ ಪಡೆಯದೇ ಅಭಿನಯಿಸಿದ್ರ ಕಿಚ್ಚ ಸುದೀಪ್? ಚಿತ್ರದಲ್ಲಿ ಕಿಚ್ಚನ ಪಾತ್ರ ಹೇಗಿರುತ್ತದೆ? ಈ ಬಗೆಗಿನ ಮಾಹಿತಿ ಇಲ್ಲಿದೆ ಓದಿ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:
  • published by :

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರ (Usire Usire Movie) ಜೀವನದಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಗೆಳೆಯರ ಇನ್ನೂ ಕೆಲವು ಚಿತ್ರಗಳ ನಿರೂಪಣೆ ಕೂಡ ಮಾಡಿದ್ದಾರೆ. ಮಹತ್ವದ ಪಾತ್ರ ಹುಡುಕಿಕೊಂಡು (Usire Usire Movie Latest Updates) ಬಂದ್ರೆ, ಆಯಾ ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಕೂಡ ಮಾಡಿದ್ದಾರೆ. ಹಾಗೇನೆ ಕಿಚ್ಚನ ಹುಡುಕಿಕೊಂಡು ಬಂದ ಚಿತ್ರವೊಂದರಲ್ಲಿ ಕಿಚ್ಚ ಸುದೀಪ್ ಇದೀಗ (Sudeep Acted in Usire Usire) ಪ್ರಮುಖ ಪಾತ್ರವನ್ನ ಮಾಡಿದ್ದಾರೆ. ಆ ಚಿತ್ರದ ಹೆಸರೇನು? ಶೂಟಿಂಗ್ ಶುರು ಆಯಿತೇ? ಕಿಚ್ಚನ ರೋಲ್ ಏನು? ಈ ಚಿತ್ರವನ್ನ ಯಾರಿಗಾಗಿ ಕಿಚ್ಚ ಸುದೀಪ್ ಮಾಡಿದ್ದಾರೆ. ಈ ಎಲ್ಲ (Usire Usire Film Updates) ಮಾಹಿತಿ ಇಲ್ಲಿದೆ ಓದಿ.


ಸಂಭಾವನೆ ಪಡೆಯದೇ ಅಭಿನಯಿಸಿದ ಕಿಚ್ಚ ಸುದೀಪ್


ಕಿಚ್ಚ ಸುದೀಪ್ ಅಭಿನಯದ ಹೊಸ ಚಿತ್ರದ ಹೆಸರು ಉಸಿರೇ ಉಸಿರೇ ಅಂತ ಇದೆ. ಈ ಚಿತ್ರದ ನಾಯಕ ಯಾರು? ಈ ಒಂದು ಪ್ರಶ್ನೆಗೆ ಉತ್ತರ ಸಿಂಪಲ್ ಆಗಿಯೇ ಇದೆ. ಉಸಿರೇ ಉಸಿರೇ ಚಿತ್ರಕ್ಕೆ ರಾಜೀವ ನಾಯಕರಾಗಿದ್ದಾರೆ.


Kannada Actor Sudeepa Acted in Usire Usire Movie
ರಾಜೀವ್‌ಗಾಗಿಯೇ ಉಸಿರೇ ಉಸಿರೇ ಚಿತ್ರದಲ್ಲಿ ಕಿಚ್ಚನ ಅಭಿನಯ


ರಾಜೀವ್ ಯಾರು ಅನ್ನೋದನ್ನ ಹೇಳೋದೇ ಬೇಡ. ರಾಜೀವ್ ಎಲ್ಲರಿಗೂ ಗೊತ್ತಿರೋ ಕ್ರಿಕೆಟರ್ ಅಂತಲೇ ಹೇಳಬಹುದು. ಎಲ್ಲರಿಗೂ ಗೊತ್ತಿರೋ ಕಲಾವಿದ ಅಂತಲೂ ಹೇಳಬಹುದು. ಹೌದು, ಇದಕ್ಕೂ ಹೆಚ್ಚಾಗಿ ರಾಜೀವ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆತ್ಮೀಯ ಅನ್ನೋದು ಕೂಡ ಅಷ್ಟೇ ವಿಶೇಷ ಅಂತ ಹೇಳಬಹುದು




ಉಸಿರೇ ಉಸಿರೇ ಚಿತ್ರದಲ್ಲಿ ದೇವರಾಜ್ ಸ್ಪೆಷಲ್ ಲುಕ್


ರಾಜೀವ್ ಅಭಿನಯದ ಉಸಿರೇ ಉಸಿರೇ ಸಿನಿಮಾದಲ್ಲಿ ದೇವರಾಜ್ ಅವರು ಕೂಡ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಕೂಡ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಈ ಹಿಂದೇನೆ ಇತ್ತು. ಆದರೆ ಈಗ ಅದು ಕಾರ್ಯರೂಪಕ್ಕೆ ಬಂದಿದೆ ಅಂತ ಹೇಳಬಹುದು.


ಕಿಚ್ಚ ಸುದೀಪ್ ಬೇರೆ ಬೇರೆ ಕೆಲಸಗಳ ಮಧ್ಯೆ ಇದೀಗ ಒಪ್ಪಿಕೊಂಡ ಈ ಚಿತ್ರದ ಕೆಲಸವನ್ನ ಮುಗಿಸಿಕೊಡುತ್ತಿದ್ದಾರೆ. ಹಾಗಾಗಿಯೇ ಉಸಿರೇ ಉಸಿರೇ ಸಿನಿಮಾ ತಂಡದ ಚಿತ್ರೀಕರಣದಲ್ಲಿ ಇದೀಗ ಹಲ್‌ಚಲ್ ಎದ್ದಿದೆ.


ರಾಜೀವ್‌ಗಾಗಿಯೇ ಉಸಿರೇ ಉಸಿರೇ ಚಿತ್ರದಲ್ಲಿ ಕಿಚ್ಚನ ಅಭಿನಯ


ಹೌದು, ಕಿಚ್ಚ ಸುದೀಪ್ ಉಸಿರೇ ಉಸಿರೇ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅದೇ ಪಾತ್ರದ ಚಿತ್ರೀಕರಣ ಈಗ ನಡೆಯುತ್ತಿದೆ. ಇನ್ನೂ ಒಂದು ವಿಶೇಷ ಏನಂದ್ರೆ, ಗೆಳೆಯ ರಾಜೀವ್‌ಗಾಗಿಯೇ ಈ ಚಿತ್ರದಲ್ಲಿ ಯಾವುದೇ ಸಂಭಾವನೆ ಪಡೆಯದೇ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ ಅನ್ನು ಮಾಹಿತಿ ಕೂಡ ಇದೆ.


ಆದರೆ ಅಧಿಕೃತವಾಗಿ ಈ ಬಗ್ಗೆ ಸಿನಿಮಾ ತಂಡ ಎಲ್ಲೂ ಹೇಳಿಕೊಂಡಿಲ್ಲ. ಸುದೀಪ್ ಕೂಡ ಈ ಕುರಿತು ಏನೂ ಮಾತನಾಡಿಲ್ಲ. ಫ್ರೀಯಾಗಿಯೇ ಸುದೀಪ್ ಈ ಒಂದು ಪಾತ್ರ ಮಾಡಿದ್ದಾರೆ ಅನ್ನೋ ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದೆ.


Kannada Actor Sudeepa Acted in Usire Usire Movie
ಸಂಭಾವನೆ ಪಡೆಯದೇ ಅಭಿನಯಿಸಿದ ಕಿಚ್ಚ ಸುದೀಪ್


ಉಸಿರೇ ಉಸಿರೇ ಚಿತ್ರಕ್ಕೆ ಕಿಚ್ಚನ ಭರ್ಜರಿ ಬಲ


ಉಸಿರೇ ಉಸಿರೇ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಆದರೆ ಕಿಚ್ಚ ಸುದೀಪ್ ಪಾತ್ರದ ಚಿತ್ರೀಕರಣಕ್ಕಾಗಿ ಕಾದಿತ್ತು ಅನಿಸುತ್ತದೆ. ಹಾಗಾಗಿಯೇ ಈಗ ಆ ಕೆಲಸವೂ ಆಗುತ್ತಿದೆ. ಇನ್ನು ಚಿತ್ರವನ್ನ ಸಿ.ಎಂ.ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ.


ಇದನ್ನೂ ಓದಿ: Kichcha Sudeep: ಕಿಚ್ಚನ ಪ್ರಚಾರಕ್ಕೆ ಬಿಜೆಪಿ ಬಿಗ್ ಪ್ಲಾನ್​, ಇತ್ತ ನಟ ಸುದೀಪ್​ಗೆ ಶಾಕ್ ಕೊಟ್ಟ ಜೆಡಿಎಸ್!


ಉಸಿರೇ ಉಸಿರೇ ಚಿತ್ರದಲ್ಲಿ ಶ್ರೀಜಿತ ನಾಯಕಿ ಆಗಿದ್ದಾರೆ. ತಾರಾ, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ ಹಾಗೂ ತೆಲುಗು ನಟರಾದ ಆಲಿ, ಬ್ರಹ್ಮಾನಂದಂ, ಮಂಜು ಪಾವಗಡ ಅಭಿನಯಿಸಿದ್ದಾರೆ. ವಿವೇಕ್ ಚಕ್ರವರ್ತಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಉಳಿದಂತೆ ಉಸಿರೇ ಉಸಿರೇ ಚಿತ್ರಕ್ಕೆ ಕಿಚ್ಚನ ಅಭಿನಯ ಮತ್ತಷ್ಟು ಬಲ ತಂದುಕೊಟ್ಟಿದೆ.

top videos
    First published: