ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್​..!

Anitha E | news18
Updated:February 21, 2019, 5:42 PM IST
ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್​..!
  • News18
  • Last Updated: February 21, 2019, 5:42 PM IST
  • Share this:
-ಅನಿತಾ ಈ, 

ಕಿಚ್ಚ ಸುದೀಪ್​ ಎಷ್ಟೇ ಎತ್ತರಕ್ಕೆ ಬೆಳೆದರೂ ಅಭಿಮಾನಿಗಳಿಗೆ ಮಾತ್ರ ಸದಾ ಹತ್ತಿರವಾಗಿಯೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ತನ್ನ ಅಭಿಮಾನಿಗಳಿಗಾಗಿಯೇ ಸಕ್ರಿಯವಾಗಿರುತ್ತಾರೆ ಎಂದರೆ ತಪ್ಪಾಗದು.

ಇದನ್ನೂ ಓದಿ: ರಶ್ಮಿಕಾಗೆ ಮದುವೆ ಪ್ರಪೋಸಲ್: ಕಿರಿಕ್​ ಬೆಡಗಿ Too Much Love ಎಂದಿದ್ಯಾರಿಗೆ ಗೊತ್ತಾ..?

ಹೌದು, ಅಭಿಮಾನಿಗಳು ಸದಾ ಕಿಚ್ಚನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿರುತ್ತಾರೆ. ಹೀಗಾಗಿಯೇ ಅಭಿಮಾನಿಗಳು ಯಾವಾಗ ಏನೇ ಪ್ರಶ್ನೆ ಕೇಳಿದರೂ, ಅವರ ಖುಷಿಯನ್ನು ಹಂಚಿಕೊಂಡರೂ ಸುದೀಪ್​ ಅದಕ್ಕೆ ಪ್ರತಿಕ್ರಿಯಿಸುತ್ತಾರೆ.

ಇದರಿಂದಾಗಿಯೇ ಕಿಚ್ಚ ಎಂದರೆ ಅಭಿಮಾನಿಗಳು ಜೀವ ಬಿಡೋದು. ಇತ್ತೀಚೆಗೆ ಕಿಚ್ಚನ ಪುಟ್ಟ ಅಭಿಮಾನಿಯೊಬ್ಬರು ಅವರನ್ನು ಭೇಟಿ ಮಾಡಲು ಕಾಯುತ್ತಿರುವ ವಿಡಿಯೋವನ್ನು ಮಾಡಿ ಆ ಅಭಿಮಾನಿಯ ಮನೆಯವರು ಟ್ವಿಟರ್​ ಮೂಲಕ ಕಿಚ್ಚನಿಗೆ ಕಳುಹಿಸಿದ್ದರು.

That's sweet.. 🤗😍❤ Thank eww for the love..!!!@KicchaSudeep @iampriya06 pic.twitter.com/WSJ9OYV4qh


9 ವರ್ಷದ ಬಾಲಕಿಗೆ ದೀಪಿಕಾಗೆ ಕಿಚ್ಚ ಎಂದರೆ ಜೀವ. ಅವರ  ಸಿನಿಮಾಗಳನ್ನು ನೋಡುತ್ತಲೇ ಇಷ್ಟಪಡಲು ಆರಂಭಿಸಿದ ದೀಪಿಕಾಗೆ ಒಂದೇ ಒಂದು ಸಲವಾದರೂ ಕಿಚ್ಚನನ್ನು ಭೇಟಿಯಾಗಬೇಕೆಂಬ ಆಸೆ. ಆದರೆ ಈ ಬಾಲಕಿ ಬುದ್ದಿಮಾಂದ್ಯತೆಯಿಂದ ಬಳಲುತ್ತಿದ್ದು, ಈ ವಿಷಯವನ್ನ ವೀಡಿಯೋ ಮಾಡಿ ಕಿಚ್ಚಾ ಸುದೀಪ್‍ಗೆ ಟ್ವಿಟರ್ ಮೂಲಕ ದೀಪಿಕಾ ಕಡೆಯವರು ಕಳುಹಿಸಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಕಿಚ್ಚ ದೀಪಿಕಾಗೆ ವೀಡಿಯೋ ಕಾಲ್ ಮಾತನಾಡಿದ್ದಾರೆ.

Thanks soo mch for helping me communicate wth this child... it was a sweet moment speaking to her on a video cal.. Mch luv always 🤗🙏🏼 https://t.co/lvSrWCQpvs



ವಿಡಿಯೋ ಕಾಲ್​ನಲ್ಲಿ ಮಾತನಾಡುವಾಗ ದೀಪಿಕಾ ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಅದಕ್ಕೂ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದಾರೆ. ಅಮ್ಮನ ಜತೆ ಮನೆಗೆ ಬರುವಂತೆ ಸುದೀಪ್​ ತಿಳಿಸಿದ್ದು, ಕೆಲ ಸಮಯ ದೀಪಿಕಾ ಜತೆ ಮಾತನಾಡಿದ್ದಾರೆ. ಜತೆಗೆ ದೀಪಿಕಾ ಆಸೆಯನ್ನು ತನ್ನವರೆಗೂ ಮುಟ್ಟುವಂತೆ ಮಾಡಿರುವವರಿಗೂ ಧನ್ಯವಾದ ತಿಳಿಸಿದ್ದಾರೆ ಸುದೀಪ್​.

Pulwama Attack: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾದ ಬಿ-ಟೌನ್​ ಸೆಲೆಬ್ರಿಟಿಗಳು..!

First published:February 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading