ಕನ್ನಡ ಚಿತ್ರರಂಗದಲ್ಲಿ ಡೈರೆಕ್ಟರ್ (Srinagar Kitty New Movie) ನಾಗಶೇಖರ್ ಒಂದು ಸಿನಿಮಾ ಮಾಡಿದ್ದರು. ಈ ಚಿತ್ರದ ಪ್ರತಿ ಪಾತ್ರಗಳು ಎಲ್ಲರನ್ನೂ ಕಾಡಿದ್ದವು. ಸಂಜು ವೆಡ್ಸ್ ಗೀತಾ ಎಲ್ಲರ ಮನಸ್ಸಿನಲ್ಲಿ ಇನ್ನೂ ಹಾಗೆ ಇದೆ. ಚಿತ್ರದಲ್ಲಿ ವಿಲನ್ (Gowli Movie) ಪಾತ್ರಧಾರಿ ಅರುಣ್ ಸಾಗರ್, ವಿಲನ್ ಏಟಿಗೆ ನಲುಗುವ ನಾಯಕಿ ಸ್ಯಾಂಡಲ್ವುಡ್ ಕ್ವೀನ್ ರಮ್ಯ, ನಾಯಕಿಗಾಗಿ ಹಂಬಲಿಸೋ ನಾಯಕ ಸಂಜು ಎಲ್ಲರೂ ಜನಮಾನಸದಲ್ಲಿ ಇನ್ನೂ ಇದ್ದಾರೆ. ಜಸ್ಸಿ ಗಿಫ್ಟ್ ಅವರ ಸಂಗೀತ ಇನ್ನೂ ತಾಜಾ ಆಗಿಯೇ ಇವೆ. ಇಂತಹ ಚಿತ್ರದಲ್ಲಿ ಅಭಿನಯಿಸಿದ್ದ (Gowli Movie Trailer Release) ನಾಯಕ ನಟ ಶ್ರೀನಗರ ಕಿಟ್ಟಿ, ಈಗ ಮತ್ತೊಂದು ಕಾಡುವ ಕಥೆಯೊಂದಿಗೆ ಬರ್ತಿದ್ದಾರೆ. ಇದಕ್ಕಾಗಿ ಇವರ ರೂಪವೇ (Srinagar Kitty New Film) ಬದಲಾಗಿ ಹೋಗಿದೆ.
ಗೌಳಿ ಚಿತ್ರಕ್ಕಾಗಿ ಶ್ರೀನಗರ ಕಿಟ್ಟಿ ಸಂಪೂರ್ಣ ತಲ್ಲೀನ
ಗೌಳಿ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಿಮಗೆ ಗುರುತು ಸಿಗೋದಿಲ್ಲ. ಗೌಳಿ ಪಾತ್ರದಲ್ಲಿ ಅಷ್ಟೊಂದು ತಲ್ಲೀನತೆಯಿಂದಲೇ ಅಭಿನಯಿಸಿದ್ದಾರೆ. ಗೌಳಿ ಚಿತ್ರದ ಟ್ರೈಲರ್ ನೋಡಿದಾಕ್ಷಣ ಮನ ಕಲುಕುವ ದೃಶ್ಯಗಳು ನಿಮ್ಮಲ್ಲಿ ಏನೋ ಒಂದು ಭಾವನೆ ಮೂಡಿಸುತ್ತವೆ.
ನೈಜ ಕಥೆಯ ಚಿತ್ರಣ ಹಾಗಾಗಿಯೇ ನಿಮ್ಮ ಎದೆಯಲ್ಲಿ ಉಳಿದು ಬಿಡುತ್ತದೆ. ಮನಸಿಗೆ ತುಂಬಾ ಕಷ್ಟ ಅನಿಸೋ ದೃಶ್ಯಗಳು, ಅನ್ಯಾಯದ ವಿರುದ್ಧ ಬಂಡೇಳುವ ಗೌಳಿ, ಗೌಳಿಗೆ ಬುದ್ದಿ ಹೇಳೋ ಪಾತ್ರಗಳು, ನಾನು, ನನ್ನ ಮಗಳು ಮತ್ತು ಪತ್ನಿ ಅನ್ನೋ ಗೌಳಿಯ ಒಂದು ಪುಟ್ಟ ಸಂಸಾರ ಎಲ್ಲದರ ಚಿತ್ರಣ ಟ್ರೈಲರ್ ನಲ್ಲಿ ದೊರೆಯುತ್ತದೆ.
ಪೊಲೀಸ್ ಪಾತ್ರದಲ್ಲಿ ಶರತ್ ಲೋಹಿತಾಶ್ವ ಅಬ್ಬರ
ಗೌಳಿ ಚಿತ್ರದ ಪಾತ್ರಗಳು ಎಲ್ಲರನ್ನೂ ಕಾಡುವ ರೀತಿಯಲ್ಲಿಯೆ ಇವೆ. ಪ್ರತಿ ಕ್ಯಾರೆಕ್ಟರ್ನಲ್ಲೂ ನೈಜ ಸ್ಪರ್ಶ ಇದೆ. ಅದನ್ನ ಟ್ರೈಲರ್ನಲ್ಲಿ ನೋಡ್ತಾ ಹೋದಂತೆ, ನಿಮಗೆ ಗೌಳಿ ಬದುಕಿನ ಅಸಲಿ ಚಿತ್ರಣ ಸಿಗುತ್ತದೆ.
ಶರತ್ ಲೋಹಿತಾಶ್ವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಪಾತ್ರದ ಹಾವ-ಭಾವ ಮತ್ತು ಡೈಲಾಗ್ ಕೇಳಿದ್ರೆ ಸಾಕು, ಇಡೀ ಚಿತ್ರಕ್ಕೆ ಇವರೇ ವಿಲನ್ ಅನಿಸೋಕೆ ಒಂದು ನಿಮಿಷ ಕೂಡ ಬೇಕಾಗಿಲ್ಲ. ಹಾಗೆ ಶರತ್ ಲೋಹಿತಾಶ್ವ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಗೌಳಿ ಚಿತ್ರದಲ್ಲಿ ಗಮನ ಸೆಳೆದ ರಂಗಾಯಣ ರಘು
ಗೌಳಿಯ ಗೆಳೆಯನಂತೆ ಆಪ್ತನಂತೆ ರಂಗಾಯಣ ರಘು ಇಲ್ಲಿ ಕಾಣಿಸುತ್ತಾರೆ. ಗೌಳಿಯಲ್ಲಿ ಇರೋ ಆ ಕಿಚ್ಚನ್ನ ಬಡಿದೆಬ್ಬಿಸೊ ಕೆಲಸವನ್ನ ಈ ಒಂದು ಪಾತ್ರ ಇಲ್ಲಿ ಮಾಡುತ್ತದೆ ಅನ್ನೋದನ್ನ ಟ್ರೈಲರ್ ನೋಡಿಯೇ ಹೇಳಬಹುದು.
ಯಶ್ ಶೆಟ್ಟಿ ಸದ್ಯ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ವಿಶೇಷ ರೂಪದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಗೌಳಿ ಚಿತ್ರದಲ್ಲೂ ಯಶ್ ಶೆಟ್ಟಿ ನಟಿಸಿದ್ದಾರೆ.
ಆದರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ ಇಲ್ಲಿ ವಿಲನ್ ಅನಿಸೋ ಹಾಗೆ ಕಾಣಿಸಿಕೊಂಡಿದ್ದಾರೆ. ಕಾಕ್ರೋಚ್ ಖ್ಯಾತಿಯ ನಟ ಸುಧಿ ಕೂಡ ಇಲ್ಲಿ ವಿಚಿತ್ರ ಪಾತ್ರದಲ್ಲಿಯೇ ಕಂಗೊಳಿಸುತ್ತಿದ್ದಾರೆ.
ಗೌಳಿ ಚಿತ್ರದಲ್ಲಿ ಮನಕಲಕುವ ನೈಜ ಕಥೆ ಚಿತ್ರಣ
ಡೈರೆಕ್ಟರ್ ಸೂರಾ ಈ ಮೂಲಕ ಸತ್ಯ ಘಟನೆಯನ್ನ ಆಧರಿಸಿಯೇ ಗೌಳಿ ಸಿನಿಮಾ ಮಾಡಿದ್ದಾರೆ. ಗ್ಲಾಮರಸ್ ನಟಿ ಪಾವನಾ ಕೂಡ ಇಲ್ಲಿ ಡಿ ಗ್ಲಾಮರ್ ರೋಲ್ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ ಅವರಂತೂ ನೈಜವಾಗಿಯೇ ಅಭಿನಯಿಸಿದ್ದಾರೆ ಅಂತಲೇ ಹೇಳಬಹುದು.
ಗೌಳಿ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಲಾಂಗ್ ಬಿಯರ್ಡ್ ಮತ್ತು ಲಾಂಗ್ ಹೇರ್ ಮೆಂಟೇನ್ ಮಾಡಿದ್ದಾರೆ. ತುಂಬಾನೇ ಡೆಡಿಕೇಟೆಡ್ ಆಗಿಯೇ ಅಭಿನಯಿಸಿರೋ ಈ ಚಿತ್ರದ ಟ್ರೈಲರ್ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೌಳಿ ಚಿತ್ರದ ಟ್ರೈಲರ್ ಮೆಚ್ಚಿದ ಸ್ಟಾರ್ ನಟರ ಫ್ಯಾನ್ಸ್
ಕಿಚ್ಚನ ಅಭಿಮಾನಿಗಳು, ವಿನೋದ್ ಪ್ರಭಾಕರ್ ಅಭಿಮಾನಿಗಳು ಹೀಗೆ ಬಹುತೇಕ ಸ್ಟಾರ್ ನಟರ ಅಭಿಮಾನಿಗಳು ಗೌಳಿ ಚಿತ್ರದ ಟ್ರೈಲರ್ ನೋಡಿ ತುಂಬಾ ಖುಷಿ ಪಟ್ಟಿದ್ದಾರೆ. ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.
ಇದನ್ನೂ ಓದಿ: Vijayananda Movie Actor: ನಿರ್ದೇಶಕಿಯನ್ನೇ ಮದುವೆಯಾದ ನಟ! 9 ವರ್ಷಗಳ ಪ್ರೀತಿಗೆ ಮೂರು ಗಂಟಿನ ಬೆಸುಗೆ!
ಗೌಳಿ ಚಿತ್ರಕ್ಕೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಕೊಟ್ಟಿದ್ದಾರೆ. ಒಳ್ಳೆ ಸಂಗೀತದ ನಿರೀಕ್ಷೆಯನ್ನೂ ನಾವು ಮಾಡಬಹುದು. ಇನ್ನು ಫೆಬ್ರವರಿ-24 ರಂದು ಗೌಳಿ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ