ರೋರಿಂಗ್ ಸ್ಟಾರ್ ಶ್ರೀಮುರಳಿ (Srii Murali New Movie) ಅಭಿನಯದ ಬಘೀರ ಚಿತ್ರದ ಹೊಸ ಸುದ್ದಿ ಹೊರ ಬಿದ್ದಿದೆ. ಅಧಿಕೃತವಾಗಿ ಇದನ್ನ ಸಿನಿಮಾ ಟೀಮ್ ಎಲ್ಲೂ ಹೇಳಿಕೊಂಡಿಲ್ಲ. ಆದರೆ (Bagheera Movie Updates) ವೈರಲ್ ಆಗುತ್ತಿರೋ ಈ ಸುದ್ದಿ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಬಘೀರ ಚಿತ್ರದ ಚಿತ್ರೀಕರಣ ಸಮಯದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಪೆಟ್ಟು ಮಾಡಿಕೊಂಡು ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಒಂದು ಗ್ಯಾಪ್ನಲ್ಲಿ ಚಿತ್ರಕ್ಕೆ ಮತ್ತೊಬ್ಬ ಮಹಾನ್ ನಟನ ಎಂಟ್ರಿ ಸುದ್ದಿ ಕೇಳಿ ಬರುತ್ತಿದೆ. ಈ ನಟ ಬೇರೆ ಭಾಷೆಯಲ್ಲಿ (Kannada Movie Updates) ಭಾರೀ ಹೆಸರು ಮಾಡಿದ್ದಾರೆ. ಇನ್ನೇನು ಶೂಟಿಂಗ್ನಲ್ಲೂ ಆ (Kannada Movie) ಕಲಾವಿದ ಭಾಗಿ ಆಗುತ್ತಾರೆ ಅನ್ನುವ ಸುದ್ದಿ ಕೂಡ ಇದೆ. ಇದರ ಸುತ್ತದ ಸ್ಟೋರಿ ಇಲ್ಲಿದೆ.
ಬಘೀರನ ಅಂಗಳಕ್ಕೆ ಮಲಯಾಳಂ ನಟನ ಆಗಮನ?
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾದ ಎರಡು ಹಂತದ ಚಿತ್ರೀಕರಣ ಆಗಿದೆ. ಡೈರೆಕ್ಟರ್ ಸೂರಿ ತಮ್ಮ ಚಿತ್ರದ ಕೆಲಸವನ್ನ ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಮುಂದಿನ ಹಂತದ ಚಿತ್ರೀಕರಣದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಮನೆಯಲ್ಲಿ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲಿಯೇ ಈ ಚಿತ್ರಕ್ಕೆ ಮತ್ತೊಬ್ಬ ನಟನ ಎಂಟ್ರಿ ಸುದ್ದಿ ಭಾರೀ ವೈರಲ್ ಆಗಿದೆ.
ಬಘೀರ ಚಿತ್ರದಲ್ಲಿ ಮಲೆಯಾಳಂ ನಟನ ಅಭಿನಯ
ಬಘೀರ ಸಿನಿಮಾದಲ್ಲಿ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ಚಿತ್ರೀಕರಣವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.
ಇದೇ ನಟನ ಎದುರು ಅಭಿನಯಿಸೋಕೆ ಮಲಯಾಳಂ ನಟನ ಆಯ್ಕೆ ಆಗಿರೋ ಸುದ್ದಿ ಹರಿದಾಡುತ್ತಿದೆ. ಮಲಯಾಳಂ ಮತ್ತು ತೆಲುಗು ಭಾಷೆಯ ಚಿತ್ರದಲ್ಲಿ ಈಗಾಗಲೇ ಈ ನಟ ಹೆಸರು ಮಾಡಿದ್ದಾರೆ. ಹಾಗೇನೆ ಈಗಾಗಲೇ ಕನ್ನಡದ ಧೂಮಮ್ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಬಘೀರನಿಗೆ ಸಾಥ್ ಕೊಡಲು ಬಂದ ಫಹದ್ ಫಾಸಿಲ್!
ಬಘೀರ ಚಿತ್ರದಲ್ಲಿ ಫಹಾದ್ ಫಾಸಿಲ್ ಕೂಡ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿಬಿಐ ಆಫೀಸರ್ ರೋಲ್ ಅನ್ನ ಈ ಚಿತ್ರದಲ್ಲಿ ಫಹದ್ ನಿರ್ವಹಿಸುತ್ತಿದ್ದಾರೆ ಅನ್ನೋ ಸುದ್ದಿ ಕೂಡ ಇದೆ.
ಬಘೀರ ಚಿತ್ರ ತಂಡ ಸದ್ಯಕ್ಕೆ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದೆ. ಚಿತ್ರೀಕರಣ ಮುಂದಿನ ಹಂತದ ಪ್ಲಾನಿಂಗ್ ಕೂಡ ಈಗ ನಡೆಯುತ್ತಿದೆ.
ಫಹದ್ ಫಾಸಿಲ್ ಪಾತ್ರದ ಮೂಲಕವೇ 3 ಹಂತದ ಚಿತ್ರೀಕರಣ ಶುರು ಆಗುತ್ತಿದೆ ಅನ್ನುವ ಸುದ್ದಿ ಇದೆ. ಮುಂದಿನ ತಿಂಗಳಿನಿಂದಲೇ ಬಘೀರ ಶೂಟಿಂಗ್ ಶುರು ಆಗಬಹುದು. ನಾಯಕ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಆ ಹೊತ್ತಿಗೆ ಶೂಟಿಂಗ್ ಮಾಡಲು ರೆಡಿ ಆಗಬಹುದು ಅನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿಗೆ 3 ತಿಂಗಳು ರೆಸ್ಟ್
ಚಿತ್ರೀಕರಣದ ಸಮಯದಲ್ಲಿ ಪೆಟ್ಟು ಮಾಡಿಕೊಂಡಿರೋ ನಟ ಶ್ರೀಮುರಳಿ ಸದ್ಯ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಎಡಗಾಲಿನ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಿಸಿಕೊಂಡಿದ್ದಾರೆ. ವೈದ್ಯರ ಸಲಹೆಯಂತೆ ಮೂರು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ: Pathaan Movie: ಆನ್ಲೈನ್ನಲ್ಲಿ ಶಾರುಖ್ ಖಾನ್ ಸಿನಿಮಾ ಪಠಾಣ್ ಲೀಕ್!
ಇನ್ನು ಸಿನಿಮಾದ ಡೈರೆಕ್ಟರ್ ಡಾಕ್ಟರ್ ಸೂರಿ ತಮ್ಮ ಈ ಚಿತ್ರದ ಶೂಟಿಂಗ್ ಅನ್ನು ಮಂಗಳೂರು ಮತ್ತು ಗೋವಾದಲ್ಲಿ ಮಾಡಿಕೊಂಡು ಬಂದಿದ್ದಾರೆ. ಮುಂದಿನ ಶೂಟಿಂಗ್ ಪ್ಲಾನ್ ಮಾಡಿಕೊಳ್ಳುವಲ್ಲಿ ಸದ್ಯ ಬ್ಯುಸಿ ಇದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಈ ಚಿತ್ರದ ಬಗ್ಗೆ ಇಷ್ಟು ಸುದ್ದಿಗಳು ವೈರಲ್ ಆಗಿದೆ. ಬಾಕಿ ಮಾಹಿತಿಗಾಗಿ ಕಾಯ್ತಾಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ