ರೋರಿಂಗ್ ಸ್ಟಾರ್ ಶ್ರೀಮುರಳಿ (Sri Murali Cinema) ಚಿತ್ರ ಜೀವನದಲ್ಲಿ ಉಗ್ರಂ ಚಿತ್ರ ತುಂಬಾ ಮಹತ್ವದ ಚಿತ್ರ ಆಗಿದೆ. ಈ ಸಿನಿಮಾ ಬರುವವರೆಗೂ ಹೇಳಿಕೊಳ್ಳೂವಂತೆ ಸಕ್ಸಸ್ ಶ್ರೀಮುರಳಿ (Ugramm Movie) ಅವರಿಗೆ ಮರೀಚಿಕೆಆಗಿತ್ತು. ಆದರೆ ಉಗ್ರಂ ಸಿನಿಮಾ ಅಲ್ಲಿವರೆಗೂ ಕಾದಿದ್ದ ಶ್ರೀಮುರಳಿಗೆ ಸಕ್ಸಸ್ ತಂದು (Super Hit Ugramm Movie) ಕೊಟ್ಟಿತ್ತು. ಬೆಂಗಳೂರಿನ ನರ್ತಕಿ ಥಿಯೇಟರ್ನಲ್ಲಿ ಶ್ರೀಮುರಳಿ ಮೊದಲ ದಿನ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ಗೆ (Prashanth Neel First Cinema) ಕುಣಿದು ಕುಪ್ಪಳಿಸಿದ್ದರು. ಒಂದೇ ಒಂದು ಒಳ್ಳೆ ಸಿನಿಮಾ ಕೊಡಬೇಕು ಅಂತ ಕಾದು ಕುಳಿತಿದ್ದ ಶ್ರೀಮುರಳಿ ಅಂದು ಖುಷಿಯ ತುತ್ತ ತುದಿಯಲ್ಲಿ ಕುಳಿತಿದ್ದರು. ನಿಜ, ಉಗ್ರಂ ಚಿತ್ರ ಶ್ರೀಮುರಳಿ ಬದುಕಿನ ದಿಕ್ಕನ್ನ ಬದಲಿಸಿತ್ತು. ಉಗ್ರಂ ಬರುವವರೆಗೂ ಅನೇಕ ಸಿನಿಮಾಗಳನ್ನ ಶ್ರೀಮುರಳಿ ಮಾಡಿದ್ದರು.
ಆದರೆ ಜನಕ್ಕೆ ಸಿನಿಮಾಗಳು ಅಷ್ಟೇನು ಹಿಡಿಸಿರಲಿಲ್ಲ. ಇದರಿಂದ ಶ್ರೀಮುರಳಿ ಕಂಗೆಟ್ಟಿರಲಿಲ್ಲ. ತಮ್ಮ ಪ್ರಯತ್ನವನ್ನ ಮುಂದುವರೆಸಿದ್ದರು.
ಉಗ್ರಂ ಡೈರೆಕ್ಟರ್ ಪ್ರಶಾಂತ್ ನೀಲ್ ಮೊದಲ ಸಿನಿಮಾ
ಉಗ್ರಂ ಒಂದು ಅದ್ಭುತ ಪ್ರಯತ್ನದ ಸಿನಿಮಾ ಆಗಿದೆ. ಈ ಒಂದು ಸಿನಿಮಾದ ಹಿಂದೆ ಇದ್ದ ಆ ನಿರ್ದೇಶಕ ಯಾರು ಗೊತ್ತೇ? ಹೌದು, ಇಡೀ ವಿಶ್ವವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದ, ಅದೇ ಪ್ರಶಾಂತ್ ನೀಲ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು.
2014, ಫೆಬ್ರವರಿ 21 ರಂದು ತೆರೆಗೆ ಬಂದಿದ್ದ ಉಗ್ರಂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲಿವರೆಗೂ ಒಂದೇ ರೀತಿಯ ಸಿನಿಮಾ ನೋಡಿದ್ದ ಪ್ರೇಕ್ಷಕರಿಗೆ ಉಗ್ರಂ ಸಿನಿಮಾ ಬೇರೆ ಫೀಲ್ ಕೊಟ್ಟಿತ್ತು. ಅದಕ್ಕೆ ಜನ ಈ ಚಿತ್ರವನ್ನ ಗೆಲ್ಲಿಸಿಯೇ ಬಿಟ್ಟರು.
ಕನ್ನಡ ಚಿತ್ರರಂಗದಲ್ಲಿ ಉಗ್ರಂ ಹೊಸ ಅಲೆ
ಉಗ್ರಂ ಚಿತ್ರ ಟಿಂಟ್ ಬೇರೆ ಥರ ಇತ್ತು. ಸಿನಿಮಾದಲ್ಲಿ ಇದ್ದ ಪಾತ್ರಗಳೂ ವಿಭಿನ್ನವಾಗಿದ್ದವು. ಚಿತ್ರ-ವಿಚಿತ್ರ ರೂಪದ ಪಾತ್ರಗಳ ನಡುವೆ ಹರಿಪ್ರಿಯಾ ಮತ್ತು ಶ್ರೀಮುರಳಿ ಲವ್ ಸ್ಟೋರಿ ಕೂಡ ಇತ್ತು.
ಉಗ್ರಂ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ, ಅಗಸ್ತ್ಯ ಹೆಸರಿನ ಪಾತ್ರ ಮಾಡಿದ್ದರು. ಹರಿಪ್ರಿಯಾ ಅವರು ನಿತ್ಯಾ ಅನ್ನುವ ಪಾತ್ರದಲ್ಲಿ ಮಿಂಚಿದ್ದರು. ಆದರೆ ಡೈರೆಕ್ಟರ್ ಪ್ರಶಾಂತ್ ನೀಲ್ ಇಲ್ಲಿ ಲವ್ ಸ್ಟೋರಿಗೆ ಒತ್ತು ಕೊಟ್ಟಿರಲಿಲ್ಲ.
ನಾಯಕ ಅಗಸ್ತ್ಯನಲ್ಲಿರೋ ಆ ಉಗ್ರ ರೂಪದ ದರುಶನ ಮಾಡಿಸಿದ್ದರು. ಅದಕ್ಕಾಗಿಯೇ ಮುಘೋರ್ ಎಂಬ ಕಾಲ್ಪನಿಕ ಊರನ್ನೆ ಹುಟ್ಟುಹಾಕಿದ್ದರು. ಭೂಗತ ಲೋಕದ ವಿಭಿನ್ನ ರೂಪವನ್ನ ಪ್ರಶಾಂತ್ ನೀಲ್ ಇಲ್ಲಿ ಕಟ್ಟಿಕೊಟ್ಟಿದ್ದರು. ಈ ಕಾರಣಕ್ಕೇನೆ ಸಿನಿಮಾ ಜನರಲ್ಲಿ ಹೊಸ ಫೀಲ್ ಕೊಟ್ಟಿತ್ತು ಅಂತಲೇ ಹೇಳಬಹುದು.
ಉಗ್ರಂ ಚಿತ್ರದಲ್ಲಿ ತಿಲಕ್-ಶ್ರೀಮುರಳಿ ಅಬ್ಬರ
ಬಾಲಾ ಹೆಸರಿನ ಪಾತ್ರದಲ್ಲಿ ನಟ ತಿಲಕ್ ಅಬ್ಬರಿಸಿದ್ದರು. ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ತಿಲಕ್ ಪಾತ್ರಗಳು ಇಲ್ಲಿ ಸಿನಿಪ್ರೇಕ್ಷಕರಿಗೆ ಬಹಳಷ್ಟು ಇಷ್ಟ ಆಗಿದ್ದವು. ಅಂತಹ ಈ ಚಿತ್ರ ತೆರೆಗೆ ಬಂದು ಫೆಬ್ರವರಿ-21ಕ್ಕೆ 9 ವರ್ಷ ಪೂರ್ಣ ಆಗಿದೆ.
ಹಾಗೇ ಈ ಚಿತ್ರದ ಇನ್ನೂ ಒಂದಷ್ಟು ವಿಷಯವನ್ನ ಮೆಲುಕು ಹಾಕೋದಾದ್ರೆ, ಕೆಜಿಎಫ್ ಚಿತ್ರಕ್ಕೂ ಮುಂಚೇನೆ ಉಗ್ರಂ ಚಿತ್ರದ ಕೆಲವು ಮಹತ್ವದ ದೃಶ್ಯಗಳನ್ನ ಕೆಜಿಎಫ್ನ ಸೈನೈಡ್ ಹಿಲ್ಸ್ ಅಲ್ಲಿ ತೆಗೆಯಲಾಗಿತ್ತು. ಪ್ರಶಾಂತ್ ನೀಲ್ ಈ ಜಾಗವನ್ನ ಇಲ್ಲೂ ಅದ್ಭುತವಾಗಿಯೇ ಬಳಸಿಕೊಂಡಿದ್ದರು.
ಇದನ್ನೂ ಓದಿ: Dhanush Sir Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್
ಕೆಜಿಎಫ್ ಸೈನೈಡ್ ಹಿಲ್ ಅಲ್ಲಿ ಉಗ್ರಂ ಚಿತ್ರೀಕರಣ
ಉಗ್ರಂ ಸಿನಿಮಾವನ್ನ ಬೆಂಗಳೂರು, ಕೋಲಾರ, ಮೈಸೂರುಗಳಲ್ಲಿ ಚಿತ್ರೀಕರಿಸಿದ್ದು ಅಲ್ಲದೇ, ಕಲಬುರಗಿಯಲ್ಲೂ ಚಿತ್ರೀಕರಿಸಲಾಗಿತ್ತು. ಕಲಬುರಗಿಯಲ್ಲಿ ತೆಗೆದ ದೃಶ್ಯವನ್ನೆ ಮುಘೋರ್ ಎಂಬ ಊರಾಗಿ ತೋರಿಸಿದ್ದರು.
ಹಾಗೆ ಉಗ್ರಂ ಚಿತ್ರದ ಹಿಂದೆ ಕೆಜಿಎಫ್ ರವಿ ಬಸ್ರೂರು ಕೂಡ ಇದ್ದರು. ಚಿತ್ರಕ್ಕೆ ಸಾಹಿತ್ಯವನ್ನು ಕೂಡ ಮಾಡಿಕೊಟ್ಟಿದ್ದರು. ಕ್ಯಾಮೆರಾಮನ್ ಭುವನ್ ಗೌಡ ಇಡೀ ಚಿತ್ರಕ್ಕೆ ಬೇರೆಯದ್ದೇ ಫೀಲ್ ಕೊಟ್ಟಿದ್ದರು.
ಜನರ ಸಿನಿ ಅಭಿರುಚಿ ಬದಲಿಸಿದ ಉಗ್ರಂ ಸಿನಿಮಾ
ಉಗ್ರಂ ಸಿನಿಮಾ ಹೀಗೆ ಎಲ್ಲರ ಶ್ರಮದಿಂದ ಅದ್ಭುತವಾಗಿಯೇ ಬಂದಿತ್ತು. ಕನ್ನಡ ಜನತೆಗೆ ಹೊಸ ಫೀಲ್ ಅನ್ನ ಕೊಟ್ಟು ಗೆದ್ದು ಬೀಗಿತ್ತು. ಈ ಚಿತ್ರವನ್ನ ನೋಡಿದ್ರೆ, ಇದು ಒಂದು ರೀತಿ ಕೆಜಿಎಫ್ ಚಿತ್ರದ ತಯಾರಿನೇ ಆಗಿತ್ತು ಅನಿಸುತ್ತದೆ.
ಒಟ್ಟಾರೆ, ಉಗ್ರಂ ಸಿನಿಮಾ ಪ್ರೇಕ್ಷಕರ ಅಭಿರುಚಿ ಬದಲಿಸಿತು. ಎಲ್ಲರನ್ನೂ ಈಗಲೂ ಒಂದು ಸೆಳೆತದಿಂದ ಉಳಿಸಿದೆ ಅಂತಲೂ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ