ಕನ್ನಡದಲ್ಲಿ ಒಂದು ಒಳ್ಳೆ ಸಿನಿಮಾ ಬಂದಿತ್ತು. 'ಇರುವುದೆಲ್ಲವ (Iruvudellava Bittu) ಬಿಟ್ಟು' ಅನ್ನೋದೇ ಈ ಚಿತ್ರದ ವಿಶೇಷ ಶೀರ್ಷಿಕೆ ಆಗಿತ್ತು. ಈ ಚಿತ್ರದಲ್ಲಿ ಮೇಘನಾ ರಾಜ್ ಹಾಗೂ ತಿಲಕ್ ಕೂಡ ಅಭಿನಯಿಸಿದ್ದಾರೆ. ಇವರ ನಡುವೆ ಇನ್ನೂ ಒಂದು ಪಾತ್ರ ಕೂಡ ಇತ್ತು. ಅದನ್ನ ಯುವ ನಾಯಕ ನಟ ಶ್ರೀ (Shri Mahadev) ಮಹದೇವ ನಿಭಾಯಿಸಿದ್ದರು. ಅದಾದ್ಮೇಲೆ ಶ್ರೀ ಮಹಾದೇವ ಯಾವ ಸಿನಿಮಾ (Cinema) ಮಾಡಿದ್ರು? ಈ ಒಂದು ಪ್ರಶ್ನೆಗೆ ಈಗ ಒಂದು ಉತ್ತರ ಸಿಕ್ಕಿದೆ. ಹಾಗೆ ಒಪ್ಪಿಕೊಂಡ ಸಿನಿಮಾದ ಹೆಸರು 'ಜಸ್ಟ್ ಪಾಸ್’ (Just Pass) ಅಂತಲೇ ಇದೆ. ಈ ಚಿತ್ರದಲ್ಲಿ ಶ್ರೀ ಮಹದೇವಗಾಗಿಯೇ ನಾಯಕಿಯ ಹುಡುಕಾಟ ಕೂಡ ನಡೆದಿತ್ತು. ಆದರೆ ಅದು ಅಷ್ಟು ಬೇಗ ಆಗಿರಲಿಲ್ಲ. ಈಗ ಅದು ಸಾಧ್ಯವಾಗಿದೆ.
ಕೊನೆಗೂ ಈ 'ಜಸ್ಟ್ ಪಾಸ್’ ಹೀರೋಗೆ (Heroine Selected) ನಾಯಕಿ ಸಿಕ್ಕಿದ್ದಾಳೆ. ಈ ಅಪ್ಡೇಟ್ ಮಾಹಿತಿಯ ಜೊತೆಗಿನ ಒಂದು ಸ್ಟೋರಿ ಇಲ್ಲಿದೆ.
'ಜಸ್ಟ್ ಪಾಸ್’ ಆದ ಹುಡುಗನಿಗೆ ಸಿಕ್ಕಳು ಹೀರೋಯಿನ್!
ಕನ್ನಡ ಚಿತ್ರರಂಗಕ್ಕೆ ಅನೇಕ ಕಿರುತೆರೆ ಕಲಾವಿದರು ಬಂದಿದ್ದಾರೆ. ಬರ್ತಾನೇ ಇದ್ದಾರೆ. ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ನಟಿಸಿದ್ದ ನಟ ಶ್ರೀ ಮಹಾದೇವ ಅದ್ಭುತವಾಗಿಯೇ ನಟಿಸಿದ್ದರು. ತಮ್ಮ ಅಭಿನಯದ ಮೂಲಕವೇ ಇಡೀ ಚಿತ್ರದಲ್ಲಿ ವಿಶೇಷವಾಗಿಯೇ ಗಮನ ಸೆಳೆದಿದ್ದರು.
ಇರುವದೆಲ್ಲವ ಬಿಟ್ಟು ಸಿನಿಮಾ ಬಳಿಕ ನಟ ಶ್ರೀ ಮಹಾದೇವ ಇನ್ನೂ ಒಂದು ಸಿನಿಮಾ ಮಾಡಿದ್ರು. ಅದರ ಹೆಸರು ಮಜ್ವಾಗಿಯೇ ಇದೆ. ಅದನ್ನ 'ಗಜಾನನ ಗ್ಯಾಂಗ್' ಅಂತಲೇ ಕರೆದರು. ಈ ಸಿನಿಮಾದಲ್ಲಿ ಶ್ರೀ ಅದ್ಭುತವಾಗಿಯೇ ಅಭಿನಯಿಸಿದ್ದರು. ಈಗ 'ಜಸ್ಟ್ ಪಾಸ್’ ಆಗಿದ್ದಾರೆ ಅಷ್ಟೆ.
'ಜಸ್ಟ್ ಪಾಸ್’ ಚಿತ್ರಕ್ಕೆ ಪ್ರಣತಿ ನಾಯಕಿ ಆಗಿ ಆಯ್ಕೆ
ಅದೇ ನಟನ ಇನ್ನೂಂದು ಸಿನಿಮಾ 'ಜಸ್ಟ್ ಪಾಸ್’. ಈ ಚಿತ್ರ ಇನ್ನೂ ಸೆಟ್ಟೇರಿಲ್ಲ. ಈಗಷ್ಟೇ ಸಿನಿಮಾದ ಅಧಿಕೃತ ಮಾಹಿತಿ ಹೊರಗೆ ಬಿದ್ದಿದೆ. ಇನ್ನು ಚಿತ್ರದ ನಾಯಕಿಯ ಹುಡುಕಾಟದಲ್ಲಿದ್ದ ಸಿನಿಮಾ ತಂಡಕ್ಕೆ ಈಗ ನಾಯಕಿನೂ ಸಿಕ್ಕಾಗಿದೆ. ವಿಶೇಷವೆಂದ್ರೆ ಈ ನಟಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಫ್ಯಾಮಿಲಿ ವಾರ್ ಸೀಸನ್-2 ನಲ್ಲಿ ರನ್ನರ್ ಅಪ್ ಆಗಿದ್ದಾರೆ.
ಇದೇ ಡಿಸೆಂಬರ್-14 ರಂದು ಸೆಟ್ಟೇರಲಿದೆ 'ಜಸ್ಟ್ ಪಾಸ್’ ಸಿನಿಮಾ
ನವ ನಟಿ ಪ್ರಣತಿ ಈ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಸಿನಿಮಾದ ಕೆಲಸ ಇನ್ನೂ ಆರಂಭಿಕ ಹಂತದಲ್ಲಿಯೇ ಇದೆ. ಇನ್ನೇನು ಇದೇ ಡಿಸೆಂಬರ್-14 ರಂದು 'ಜಸ್ಟ್ ಪಾಸ್’ ಸಿನಿಮಾ ಸೆಟ್ಟೇರುತ್ತಿದೆ.
'ಜಸ್ಟ್ ಪಾಸ್’ ಚಿತ್ರಕ್ಕೆ ಕೆ.ಎಂ.ರಘು ಡೈರೆಕ್ಷನ್
ಕೆ.ಎಂ.ರಘು ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಯವಕರೆಲ್ಲ ಇಷ್ಟಪಡೋ ಕಥೆಯನ್ನೆ ಮಾಡಿದ್ದಾರೆ. ಕಾಲೇಜ್ ವಿಷಯವನ್ನೇ ಆಧರಿಸಿರೋ ಈ ಚಿತ್ರದ ಬಹುತೇಕ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದೆ. ಇನ್ನೇನೂ ಶೂಟಿಂಗ್ ಹೋಗೋಕೆ ತಂಡ ಪ್ಲಾನ್ ಮಾಡಿಕೊಳ್ಳುತ್ತಿದೆ.
ಕಾಲೇಜ್ ಕಥೆಯೊಂದಿಗೆ ಬರ್ತಿದ್ದಾರೆ ತರ್ಲೆ ವಿಲೇಜ್ ಡೈರೆಕ್ಟರ್!
ಕೆ.ಎಂ. ರಘು ಈ ಹಿಂದೆ ಒಂದಷ್ಟು ಸಿನಿಮಾ ಮಾಡಿದ್ದಾರೆ. ತರ್ಲೆ ವಿಲೇಜ್, ಪರಸಂಗ, ದೊಡ್ಡಹಟ್ಟಿ ಬೋರೇಗೌಡ ಹೀಗೆ ಒಂದಷ್ಟು ಸಿನಿಮಾ ಮೂಲಕ ಗಮನ ಸೆಳೆಯೋ ಕೆಲಸ ಮಾಡಿದ್ದಾರೆ. ಆದರೆ ಈ ಸಲ ಕೆ.ಎಂ.ರಘು ಕಾಲೇಜ್ ವಿಷಯದ ಮೇಲೆ ಸಿನಿಮಾ ಮಾಡ್ತಿದ್ದಾರೆ.
'ಜಸ್ಟ್ ಪಾಸ್’ ಅಂದ್ಮೇಲೆ ಇಲ್ಲಿ ಕಾಲೇಜ್ ಕಥೇನೆ ಇರಬೇಕು. ಆ ನಿಟ್ಟಿನಲ್ಲಿಯೇ ಸ್ಕ್ರಿಪ್ಟ್ ಕೆಲಸ ಮುಗಿಸಿರೋ ರಘು ಇಷ್ಟು ದಿನ ನಾಯಕಿಯ ಹುಡುಕಾಟ ನಡೆಸಿದ್ದರು. ಈಗ ನಾಯಕಿ ಕೂಡ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: SA RI GA MA PA: ಸರಿಗಮಪ ವೇದಿಕೆಯಲ್ಲಿ ದೊಡ್ಮನೆ ವೈಭವ, ಶಿವಣ್ಣನಿಗೆ ಹಾಡಿನ ಮೂಲಕ ಮೋಡಿ ಮಾಡಿದ ದಿಯಾ!
ಇದೇ ತಿಂಗಳು ಸಿನಿಮಾ ಸೆಟ್ಟೇರುತ್ತಿದೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ದೀಪಕ್ ರೈ ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸದ್ಯಕ್ಕೆ ಇಷ್ಟೇ ಮಾಹಿತಿ ಹೊರ ಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ