3 ದಿಗ್ಗಜರನ್ನು ಒಟ್ಟುಗೂಡಿಸಿದ್ದ ಶಿವರಾಮ್​​: ಅಣ್ಣಾವ್ರು ಅಂದ್ರೆ ಇವ್ರಿಗೆ ಪಂಚ ಪ್ರಾಣ..!

ಮೂವರು ಸೂಪರ್​ ಸ್ಟಾರ್​​ಗಳನ್ನು ಒಂದೇ ಸಿನಿಮಾದಲ್ಲಿ ಜೊತೆಯಾಗಿಸಿ  ಶಿವರಾಮ್​ ಅವರು ಸಿನಿಮಾ ಮಾಡಿದ್ದರು. ಶಿವರಾಂ ಅವರು ನಿರ್ಮಿಸಿದ್ದ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್, ರಜನಿಕಾಂತ್​, ಕಮಲ್ ಹಾಸನ್​ ನಟಿಸಿದ್ದರು.

ಹಿರಿಯ ನಟ ಶಿವರಾಮ್​ ಇನ್ನಿಲ್ಲ

ಹಿರಿಯ ನಟ ಶಿವರಾಮ್​ ಇನ್ನಿಲ್ಲ

  • Share this:
ಕನ್ನಡ ಚಿತ್ರರಂಗದಲ್ಲಿ ಸುಮಾರು ಆರು ದಶಕಗಳಿಂದ ನಾಯಕ, ಪೋಷಕ ನಟ, ಹಾಸ್ಯನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಶಿವರಾಮ್​(Shivaram) ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಸಿನಿ ಅಂಗಳದಲ್ಲಿ ಶಿವರಾಮ್ ಅಂಕಲ್, ಶಿವರಾಮ್ ಅಣ್ಣ ಅಂತಾನೇ ಗುರುತಿಸಿಕೊಂಡಿದ್ದರು. ಚಂದನವನದ ಎಲ್ಲ ಸೂಪರ್ ಸ್ಟಾರ್(Super Star)ಗಳ ಜೊತೆಯಲ್ಲಿ ಶಿವರಾಮ್ ನಟಿಸಿದ್ದರು. ವಿಷ್ಣುವರ್ಧನ್, ಡಾ. ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಎಲ್ಲ ದಿಗ್ಗಜರ ಜೊತೆ ನಟಿಸಿದ್ದಾರೆ. ಆರಂಭದಲ್ಲಿ ಕಾಲೇಜು ಹುಡುಗ, ಹೀರೋ ಸೋದರ ಮತ್ತು ಕಾಮಿಡಿ(Comedy) ಪಾತ್ರಗಳಲ್ಲಿ ಶಿವರಾಮ್ ನಟಿಸುತ್ತಿದ್ರು. 1965 ರಲ್ಲಿ ಬೆರೆತ ಜೀವ ಸಿನಿಮಾ ಮೂಲಕ ಶಿವರಾಂ ಚಿತ್ರರಂಗ ಪ್ರವೇಶಿಸಿದ್ದರು. ಶಿವರಾಮಣ್ಣ ಅವರು ತನ್ನ ಸಹೋದರ ಎಸ್.ರಾಮನಾಥನ್‍ ಜೊತೆಯಲ್ಲಿ 'ರಾಶಿ ಬ್ರದರ್ಸ್'(Rashi Brothers) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ, ಅದರಲ್ಲಿ ಹಿಂದಿ(Hindi ಚಿತ್ರ ಕೂಡ ಸೇರಿದೆ. ಈ ನಿರ್ಮಾಣ ಸಂಸ್ಥೆಯಲ್ಲಿ ಮೂವರು ಸೂಪರ್​ ಸ್ಟಾರ್​​ಗಳನ್ನು ಒಂದೇ ಸಿನಿಮಾದಲ್ಲಿ ಜೊತೆಯಾಗಿಸಿ  ಶಿವರಾಮ್​ ಅವರು ಸಿನಿಮಾ ಮಾಡಿದ್ದರು. ಶಿವರಾಂ ಅವರು ನಿರ್ಮಿಸಿದ್ದ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್(Amithab Bachachan)​, ರಜನಿಕಾಂತ್(Rajanikanth)​, ಕಮಲ್ ಹಾಸನ್(Kamal Hasan)​ ನಟಿಸಿದ್ದರು.

‘ಗಿರಿಫ್ತಾರ್’​ ಎಂಬ ಸಿನಿಮಾ  ನಿರ್ಮಿಸಿದ್ದ ಶಿವರಾಮ್​

6 ದಶಕಗಳಿಗೂ ಅಧಿಕ ಕಾಲ ಚಿತ್ರರಂಗಕ್ಕೆ ತಮ್ಮ ಕಲಾ ಸೇವೆಯನ್ನು ಶಿವರಾಂ ಮಾಡಿದ್ದಾರೆ. ಬರೀ ಕನ್ನಡ ಅಷ್ಟೆ ಅಲ್ಲದೇ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲೂ ಶಿವರಾಮ್​ ಅವರ ಕೊಡುಗೆ ಅಪಾರ. ಮೂವರು ಸೂಪರ್​ ಸ್ಟಾರ್​​ಗಳನ್ನು ಒಂದೇ ಸಿನಿಮಾದಲ್ಲಿ ಕಾಣುವಂತೆ ಮಾಡಿದ್ದರು. ಆಗಿನ ಕಾಲದಲ್ಲಿ ಈ ಮೂರು ಸೂಪರ್​ ಸ್ಟಾರ್​​ಗಳನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದು ಸುಲಭದ ಮಾತಲ್ಲ. ನಟ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ರಜನೀಕಾಂತ್ ಅವರು 'ಗಿರಫ್ತಾರ್' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಮೂವರು ಒಂದೆ ತೆರೆ ಮೇಲೆ ಕಾಣಿಸಿಕೊಂಡಿದ್ದು ಅದೇ ಮೊದಲು, ಅದೇ ಕೊನೆ. ಇದರ ಸಂಪೂರ್ಣ ಕ್ರೆಡಿಟ್ ರಾಶಿ ಬ್ರದರ್ಸ್ ಪ್ರೊಡಕ್ಷನ್ ಹೌಸ್‌ಗೆ ತಲುಪುತ್ತದೆ. ಇದು ನಿಜಕ್ಕೂ ದಾಖಲೆಯ ವಿಷಯ.ಇದನ್ನು ಓದಿ: ಕಳಚಿತು ಮತ್ತೊಂದು ಕೊಂಡಿ: ಚಂದನವನದ ಶಿವರಾಮ್​ ಇನ್ನೂ ನೆನಪು ಮಾತ್ರ..

ಹೃದಯ ಸಂಗಮ ನಿರ್ದೇಶಿಸಿದ್ದ ಶಿವರಾಮ್​

1972ರಲ್ಲಿ ತೆರೆ ಕಂಡ 'ಹೃದಯ ಸಂಗಮ' ಚಿತ್ರಕ್ಕೆ ಶಿವರಾಮ್​ ನಿರ್ದೇಶನ ಮಾಡಿದ್ದರು. ಎಚ್ ಎನ್ ಮುದ್ದುಕೃಷ್ಣ ಈ ಸಿನಿಮಾ ನಿರ್ಮಾಣ ಮಾಡಿದ್ದರು, ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದರು. ಜಯರಾಮ್, ಲೋಕನಾಥ್, ಅಶ್ವತ್ಥ್, ಪಂಡರಿಬಾಯಿ, ಟಿ ಎನ್ ಬಾಲಕೃಷ್ಣ, ಜಯಕುಮಾರಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. 18 ವಾರಗಳ ಕಾಲ ಈ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಡಾ.ರಾಜ್​ಕುಮಾರ್​ ರಾಜಣ್ಣ ಹಾಗೂ ಕುಮಾರ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಆಗಿನ ಕಾಲದಲ್ಲೇ ದಾಖಲೆಯ ಕಲೆಕ್ಷನ್​ ಮಾಡಿತ್ತು.

ಇದನ್ನು ಓದಿ: ಹಿರಿಯ ನಟ ಶಿವರಾಮ್ ಅಂತಿಮ ದರ್ಶನ ಪಡೆದ ಚಿತ್ರರಂಗದ ಗಣ್ಯರು- 1 ಗಂಟೆಗೆ ಅಂತಿಮ ವಿಧಿ ವಿಧಾನ

ಅಣ್ಣಾವ್ರ ಜೊತೆ ಹೆಚ್ಚು ಸಿನಿಮಾ ಮಾಡಿದ್ದ ಶಿವರಾಮ್​

ಡಾ.ರಾಜ್​ಕುಮಾರ್​ ಅವರ ಕುಟುಂಬಕ್ಕೂ ಶಿವರಾಮ್​ ತೀರ ಹತ್ತಿರವಾಗಿದ್ದರು. ಅಣ್ಣಾವ್ರ ಜೊತೆಗೆ ಶಿವರಾಂ ಹೆಚ್ಚು ಸಿನಿಮಾ ಮಾಡಿದ್ದಾರೆ. 'ಚಲಿಸುವ ಮೋಡಗಳು' , 'ಶ್ರಾವಣ ಬಂತು' , 'ಹಾಲು ಜೇನು', 'ಹೊಂಬಿಸಿಲು', 'ಹೊಸ ಬೆಳಕು', 'ಗುರು ಶಿಷ್ಯರು' , 'ಸಿಂಹದಮರಿ ಸೈನ್ಯ' , 'ಮಕ್ಕಳ ಸೈನ್ಯ', 'ಬಯಸದೆ ಬಂದ ಭಾಗ್ಯ', 'ಹೊಂಬಿಸಿಲು', 'ಸಿಂಹದ ಮರಿ ಸೈನ್ಯ', 'ಭಜರಂಗಿ', 'ಹೃದಯವಂತ, 'ಆಪ್ತಮಿತ್ರ', 'ಕೇರ್ ಆಫ್ ಫುಟ್ ಪಾಥ್', 'ಪಲ್ಲವಿ ಅನುಪಲ್ಲವಿ', 'ಗೀತಾ', 'ಗುರು ಶಿಷ್ಯರು', 'ಸಿಪಾಯಿ ರಾಮು', 'ನಾನೊಬ್ಬ ಕಳ್ಳ', 'ಗೌತಮ್', 'ಮುಯ್ಯಿಗೆ ಮುಯ್ಯಿ' ಮುಂತಾದ ಸಿನಿಮಾಗಳಲ್ಲಿ ಶಿವರಾಮ್​ ನಟಿಸಿದ್ದಾರೆ.
Published by:Vasudeva M
First published: