ದೊಡ್ಮನೆ ಕುಟುಂಬಕ್ಕೆ ಗುರುಸ್ವಾಮಿಗಳಾಗಿದ್ದ ಶಿವರಾಂ :ಅಯ್ಯಪ್ಪ ದೇವರ ಮೇಲಿತ್ತು ಅಪಾರ ಭಕ್ತಿ

ಅಯ್ಯಪ್ಪನ ದರ್ಶನ ಮಾಡುವುದು, ಗುರು ಸ್ವಾಮಿಗಳಾಗುವುದು ಎಂದರೆ ಸಣ್ಣ ಮಾತಲ್ಲ. ಇದಕ್ಕೆ ಕಠಿಣ ತಪಸ್ಸು ಅಗತ್ಯ. ದೈಹಿಕ ಮತ್ತು ಮಾನಸಿಕವಾಗಿ ಅವರು ಪರಿಶುದ್ಧರಾಗಿರಬೇಕಾಗುತ್ತಾದೆ. ಕಠಿಣ ವ್ರತ ಪಾಲನೆ ಮಾಡಬೇಕು.

ಅಯ್ಯಪ್ಪ ವ್ರತಾಧಾರಿಗಳೊಂದಿಗೆ ಶಿವರಾಂ

ಅಯ್ಯಪ್ಪ ವ್ರತಾಧಾರಿಗಳೊಂದಿಗೆ ಶಿವರಾಂ

 • Share this:
  ಚಿತ್ರರಂಗದಲ್ಲಿ ಯಾವುದೇ ಆಧ್ಯಾತ್ಮಿಕ ಕಾರ್ಯಕ್ರಮವಿರಲಿ ಅಲ್ಲಿ ನಟ ಶಿವರಾಂ ಅವರು ಹಾಜರಾಗುತ್ತಿದ್ದರು. ಶಿವರಾಂ (Kannada veteran Actro Shivarm) ಅವರ ಹೆಚ್ಚು ದೈವ ಭಕ್ತರಾಗಿದ್ದರು. ಅದರಲ್ಲೂ ಅಯ್ಯಪ್ಪನ ದರ್ಶನಕ್ಕಾಗಿ ಪ್ರತಿಬಾರಿ ಅವರು ಶಬರಿ ಮಲೆ (Sabrimala) ಯಾತ್ರೆ ನಡೆಸುತ್ತಿದ್ದರು. ಸರಿಸುಮಾರು 48 ಬಾರಿ ಅವರು ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ವಿಶೇಷ ಎಂದರೆ ರಾಜ್​ ಕುಮಾರ್ ಕುಟುಂಬದ ಗುರುಸ್ವಾಮಿಗಳಾಗಿದ್ದರು ನಟ ಶಿವರಾಂ. ಶಿವರಾಂ ಅವರ ಮಾರ್ಗದರ್ಶನದಲ್ಲಿ ನಟ ಶಿವರಾಜ್​​ ಕುಮಾರ್​, ರಾಘವೇಂದ್ರ ರಾಜ್​​ ಕುಮಾರ್, ಪುನೀತ್​ ರಾಜ್​ ಕುಮಾರ್​​ ಸೇರಿದಂತೆ ಅನೇಕ ನಟರು ಶಬರಿ ಮಾಲೆ ಯಾತ್ರೆಯನ್ನು ಹಲವು ಬಾರಿ ಕೈಗೊಂಡಿದ್ದಾರೆ.

  ಗುರುಸ್ವಾಮಿ ಆಗುವುದು ಸುಲಭವಲ್ಲ
  ಅಯ್ಯಪ್ಪನ ದರ್ಶನ ಮಾಡುವುದು, ಗುರು ಸ್ವಾಮಿಗಳಾಗುವುದು ಎಂದರೆ ಸಣ್ಣ ಮಾತಲ್ಲ. ಇದಕ್ಕೆ ಕಠಿಣ ತಪಸ್ಸು ಅಗತ್ಯ. ದೈಹಿಕ ಮತ್ತು ಮಾನಸಿಕವಾಗಿ ಅವರು ಪರಿಶುದ್ಧರಾಗಿರಬೇಕಾಗುತ್ತಾದೆ. ಕಠಿಣ ವ್ರತ ಪಾಲನೆ ಮಾಡಬೇಕು. ಈ ರೀತಿ 18 ಬಾರಿ ಶಬರಿ ಮಾಲೆಯ ಕಠಿಣ ವ್ರತ ಕೈಗೊಂಡು ದರ್ಶನ ಮಾಡಿ ಬಂದವರು ಮಾತ್ರ ಈ ಗುರು ಸ್ವಾಮಿ ಆಗಲು ಸಾಧ್ಯ.

  ಅದೇ ರೀತಿ ಕೆಟ್ಟ ಚಟಗಳುಮ ದುರಾಭ್ಯಾಸ, ದುಷ್ಟ ಚಿಂತನೆಗಳಿದ್ದ ದೂರವಿದ್ದ ಶಿವರಾಂ ಅವರು ಅಯ್ಯಪ್ಪನ ಪರಮ ಭಕ್ತರಾಗಿದ್ದರು. ಇದೇ ಕಾರಣಕ್ಕೆ ಶಿವರಾಂ ಅವರನ್ನು ದೊಡ್ಮನೆ ಗುರಸ್ವಾಮಿಗಳಾಗಿ ಸ್ವೀಕರಿ, ಅವರ ಮಾರ್ಗದರ್ಶನದಲ್ಲಿ ಪ್ರತಿ ಬಾರಿ ಅಯ್ಯಪ್ಪನ ದರ್ಶನಕ್ಕೆ ಹೋಗುತ್ತಿದ್ದರು.

  ಅಪ್ಪು ಹಿಂದೆಯೇ ಅಗಲಿದೆ ಶಿವರಾಂ
  ದೊಡ್ಮನೆಗೂ ನಟ ಶಿವರಾಂ ಅವರಿಗೂ ಅವಿನಾಭಾವ ಸಂಬಂಧ. ಚೆನ್ನೈನಲ್ಲಿದ್ದಾಗ ತಮಿಳು ನಟ ಎಂ ಎನ್​ ನಂಬಿಯಾರ್ ಅವರನ್ನು ಗುರುಸ್ವಾಮಿಗಳಾಗಿ ಸ್ವೀಕರಿಸಿ ಶಬರಿಮಾಲೆ ಯಾತ್ರೆ ನಡೆಸುತ್ತಿದ್ದ ದೊಡ್ಮನೆ ಸದಸ್ಯರು. ಬೆಂಗಳೂರಿಗೆ ಬಂದ ಬಳಿಕ ನಟ ಶಿವರಾಂ ಅವರ ಮಾರ್ಗದರ್ಶನ ಪಡೆಯಲು ಶುರು ಮಾಡಿದರು. ಇದರ ಹೊರತಾಗಿಯೂ ನಟ ಶಿವರಾಂ ದೊಡ್ಮನೆ ಜೊತೆಗೆ ಆಪ್ತ ಭಾವನೆ ಹೊಂದಿದ್ದರು. ಪುನೀತ್​ ರಾಜ್​ ಕುಮಾರ್ ಹೃದಯಾಘಾತದಿಂದ ಅಕಾಲಿ ಅಗಲಿಕೆ ಸುದ್ದಿ ತಿಳಿದ ಅವರು ಕಣ್ಣೀರಿಟ್ಟು, ಭಾವನಾತ್ಮಕವಾಗಿ ಕುಸಿದಿದ್ದರು 

  ಇದನ್ನು ಓದಿ: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ: ಹಿರಿಯ ನಟ ಶಿವರಾಮ್ ಇನ್ನಿಲ್ಲ

  ನಿರ್ದೇಶಕನಾಗಬೇಕು ಎಂದ ಕನಸು ಹೊತ್ತು ಬಂದಿದ್ದ ಶಿವರಾಂ

  ಜನವರಿ 28 1938ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಗಡಿಭಾಗದ ಚೂಡಸಂದ್ರದಲ್ಲಿ ಜನಿಸಿದ್ದರು. 7 ಜನರ ಮಕ್ಕಳಲ್ಲಿ ಒಬ್ಬರಾಗಿದ್ದ ಇವರು ವಿದ್ಯಾರ್ಥಿ ದೆಸೆಯಿಂದಲೇ ರಂಗಭೂಮಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಬಂದಿದ್ದ ಅವರಿಗೆ ರಂಗಭೂಮಿ ಸೆಳೆತದಿಂದ ಗೆಳೆಯರ ಜೊತೆ ಶಾರದ ನಾಟಕ ಮಂಡಳಿ ಸ್ಥಾಪಿಸಿ ನಾಟಕ ಆಡುತ್ತಿದ್ದರು. 1954ರಲ್ಲಿ ಚಿತ್ರಕಲಾವಿದ ಸಂಸ್ಥೆ ಸೇರಿದ್ದರು.

  ಇದನ್ನು ಓದಿ: ಕಳಚಿತು ಮತ್ತೊಂದು ಕೊಂಡಿ: ಚಂದನವನದ ಶಿವರಾಮ್​ ಇನ್ನೂ ನೆನಪು ಮಾತ್ರ..

  ಚಲನಚಿತ್ರರಂಗದಲ್ಲಿ ಆಸಕ್ತಿ ಹೊಂದಿದ್ದ ಅವರು ಸಹ ನಿರ್ದೇಶಕ ಆಗಬೇಕು ಎಂಬ ಕನಸನ್ನು ಹೊಂದಿದ್ದರು. ಆದರೆ, ಆದಾಗಲೇ ನಾನು ಅನೇಕ ನಾಟಕಗಳಲ್ಲಿ ನಟಿಸಿದ ಕಾರಣ ನಿರ್ದೇಶಕ ಕೋರಲ್​ ಸೀತಾರಾಮ್​ ಶಾಸ್ತ್ರಿಗಳು ಬೆರೆತ ಜೀವ ಎಂಬ ಸಿನಿಮಾಗೆ ಬಣ್ಣ ಹಚ್ಚುವಂತೆ ತಿಳಿಸಿದರು. ಇದಾದ ಬಳಿಕ 1970ರ ಬಳಿಕ ಹೆಚ್ಚೆಚ್ಚು ಸಿನಿಮಾ ಸಿಕ್ಕಿದವು. ಶರ ಪಂಜರ ಸಿನಿಮಾ ಜೀವನದ ತಿರುವು ನೀಡಿತು.

  ಡ್ರೈವರ್​ ಹನುಮಂತು ಚಿತ್ರದಲ್ಲಿ ನಾಯಕನಟನಾಗಿಯೂ ನಟಿಸಿದ್ದ ಶಿವರಾಂ ಅವರಿಗೆ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ತಾಯಿ ಸಾಹೇಬ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಅನೇಕ ಸಂಘ ಸಂಸ್ಥೆಗಳ ಪ್ರತಿಷ್ಟಿತ ಪ್ರಶಸ್ತಿ ಪಡೆದಿದ್ದಾರೆ

  ನಟ ಶಿವರಾಂ ಅಗಲಿಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಚಿತ್ರರಂಗದ ಸಿನಿ ತಾರೆಯರು ಕಂಬನಿ ಮಿಡಿದಿದ್ದಾರೆ.
  Published by:Seema R
  First published: