ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar in hubballi) ಸದ್ಯ ತಮ್ಮ ವೇದ (vedha kannada movie) ಚಿತ್ರದ ಪ್ರಚಾರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿಯೇ ದೊಡ್ಡ ಬಜೆಟ್ನ ಈ ಸಿನಿಮಾ ಮಾಡಿದ್ದಾರೆ. ಇದರ ಪ್ರಚಾರಾರ್ಥ (Shivarajkumar movies) ಎಲ್ಲೆಡೆ ಓಡಾಡ್ತಿದ್ದಾರೆ. ರಾಜ್ಯದ ಪ್ರಮುಖ ಊರುಗಳಿಗೂ ಹೋಗುತ್ತಿದ್ದಾರೆ. ಆದರೆ ಹುಬ್ಬಳ್ಳಿ ಈ ನಾಯಕ ನಟನಿಗೆ ವಿಶೇಷವಾದ ಸ್ಥಳವೇ ಆಗಿದೆ. ವಿಶೇಷವಾಗಿ ಇಲ್ಲಿಯೇ (Shivarajkumar visits Siddharoodha Math) ಸಿದ್ದಾರೂಢಮಠ ಕೂಡ ಲಕ್ಕಿಯೆಷ್ಟ್ ಪ್ಲೇಸ್ ಆಗಿದೆ. ಇದಕ್ಕೆ ಕಾರಣವೂ ಇದೆ. ಅದು ಏನು? ಅದನ್ನ ನಾವು ನಿಮ್ಗೆ ಇಲ್ಲಿ ಹೇಳಿದ್ದೇವೆ. ಅದು ಇಲ್ಲೆ ಮುಂದಿದೆ ಓದಿ.
ಸಿದ್ದಾರೂಢಮಠ ಮತ್ತು ರಾಜ್ ಫ್ಯಾಮಿಲಿ
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಫ್ಯಾಮಿಲಿಗೆ ಸಿದ್ದಾರೂಢಮಠ ತುಂಬಾ ವಿಶೇಷವಾದ ಜಾಗವೇ ಆಗಿದೆ. ರಾಜಕುಮಾರ್ ಫ್ಯಾಮಿಲಿಯ ಯಾರೇ ಬಂದ್ರೂ ಅಷ್ಟೇನೆ. ಸಿದ್ದಾರೂಢಮಠಕ್ಕೆ ಬಂದು ಹೋಗ್ತಾರೆ. ಅಷ್ಟು ವಿಶೇಷವಾದ ಈ ಮಠಕ್ಕೂ ಮತ್ತು ರಾಜ್ ಫ್ಯಾಮಿಲಿಗೂ ಒಂದು ನಂಟಿದೆ.
ಸಿದ್ದಾರೂಢಮಠಕ್ಕೆ ಎಲ್ಲೆಡೆಯಿಂದಲೂ ಜನ ಬರ್ತಾರೆ. ಮಹಾರಾಷ್ಟ್ರದಿಂದಲೂ ಈ ಸಿದ್ದಾರೂಢಮಠಕ್ಕೆ ಬರೋರು ಹೆಚ್ಚಿದ್ದಾರೆ. ಸಿದ್ದಾರೂಢರ ಭಕ್ತರು ಎಲ್ಲೆಡೆ ಇರೋದು ವಿಶೇಷ. ದೂರದ ಊರುಗಳಿಂದಲೇ ಇಲ್ಲಿಗೆ ಬರೋದು ಇದೆ.
ರಾಜ್ ಫ್ಯಾಮಿಲಿಗೆ ಲಕ್ಕಿ ಪ್ಲೇಸ್ ಸಿದ್ದಾರೂಢಮಠ
ನಿಜ, ರಾಜಕುಮಾರ್ ಫ್ಯಾಮಿಲಿಗೆ ಸಿದ್ದಾರೂಢಮಠ ವಿಶೇಷವಾದ ಜಾಗವೇ ಆಗಿದೆ. ಈ ವಿಶೇಷವನ್ನ ತಿಳಿಯಲು ಕೊಂಚ ಬ್ಲ್ಯಾಕ್ ಆ್ಯಂಡ್ ವೈಟ್ ದಿನಗಳಿಗೇನೆ ಜಾರಬೇಕು. ಯಾಕೆಂದ್ರೆ, ಆ ವಿಶೇಷ ವಿಷಯ ಅಲ್ಲಿಗೆ ಅಡಗಿದೆ.
ಒಂದು ಕಾಲದಲ್ಲಿ ಹುಬ್ಬಳ್ಳಿ ಕಲಾವಿದರಿಗೆ ಸ್ವರ್ಗವೇ ಆಗಿತ್ತು. ದೂರದ ಬೆಂಗಳೂರಿನಿಂದ ಬರುವ ಚಿತ್ರಕಲಾವಿದರಿಗೆ ಕರ್ಮಭೂಮಿಯೂ ಆಗಿತ್ತು. ಹಾಗೆ ನಾಟಕ ಟ್ರೂಪ್ಗಳನ್ನ ಕಟ್ಟಿಕೊಂಡು ಬರುವ ಚಿತ್ರ ಕಲಾವಿದರು ಅನೇಕರು.
ಡಾಕ್ಟರ್ ರಾಜ್ ಸಿದ್ದಾರೂಢರ ಆರಾಧಕರು
ಗುಬ್ಬಿ ಕಂಪನಿಯ ನಾಟಕಗಳು ಇಲ್ಲಿ ಪ್ರದರ್ಶನ ಕಾಣುತ್ತಿದ್ದವು. ಆಗ ರಾಜಕುಮಾರ್ ಅವರು ದೂರದ ಬೆಂಗಳೂರಿನಿಂದಲೂ ಬರ್ತಿದ್ದರು. ಹಾಗೆ ಇಲ್ಲಿಗೆ ಬಂದಾಗ ರಾಜಕುಮಾರ್ ಅವರು ಇದೇ ಸಿದ್ದಾರೂಢಮಠಕ್ಕೆ ಭೇಟಿಕೊಡುತ್ತಿದ್ದರು. ಇದೇ ಮಠದಲ್ಲಿಯೇ ಕೆಲ ಕಾಳ ಉಳಿದುಕೊಂಡಿದ್ದರು.
ಆ ದಿನದಿಂದಲೂ ರಾಜ್ ಆ್ಯಂಡ್ ರಾಜ್ ಫ್ಯಾಮಿಲಿ ಈ ಸಿದ್ದಾರೂಢರಿಗೆ ನಡೆದುಕೊಂಡು ಬಂದಿದ್ದಾರೆ. ಎಷ್ಟೇ ಎತ್ತರಕ್ಕೂ ಹೋದರೂ ಸರಿಯೇ, ರಾಜಕುಮಾರ್ ಆಗಿರಲಿ, ರಾಜ್ ಫ್ಯಾಮಿಲಿಯ ಸದಸ್ಯರೇ ಆಗಿರಲಿ, ಎಲ್ಲರೂ ಹುಬ್ಬಳ್ಳಿಗೆ ಬಂದಾಗ ಭೇಟಿಕೊಟ್ಟು ಹೋಗ್ತಾರೆ.
ಸಿದ್ದಾರೂಢ ಮಠದ ಅಂಗಳದಲ್ಲಿ ರಾಜ್ ಸಿನಿಮಾ ಶೂಟಿಂಗ್
ರಾಜಕುಮಾರ್ ಅಭಿನಯದ "ಆಕಸ್ಮಿಕ" ಸಿನಿಮಾದ ಚಿತ್ರೀಕರಣ ಸಿದ್ದಾರೂಢಮಠದ ಅಂಗಳದಲ್ಲಿಯೇ ನಡೆದಿತ್ತು. ವಿಶೇಷವಾಗಿ ಈ ಚಿತ್ರದ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಹಾಡು ಇಲ್ಲಿಯೇ ಚಿತ್ರೀಕರಣ ಆಗಿತ್ತು. ಅಷ್ಟು ವಿಶೇಷವಾದ ಈ ಮಠದ ಬಗ್ಗೆ ರಾಜ್ ಫ್ಯಾಮಿಲಿಗೆ ಈಗಲೂ ಅಪಾರ ನಂಬಿಕೆ ಇದೆ.
ಹುಬ್ಬಳ್ಳಿಗೆ ಬಂದ್ರೆ ಸಿದ್ದಾರೂಢಮಠಕ್ಕೆ ಭೇಟಿಕೊಡುತ್ತೇವೆ. ನಮ್ಮ ತಂದೆಯವರ ಆಕಸ್ಮಿಕ ಚಿತ್ರ ಇಲ್ಲಿಯೇ ಚಿತ್ರೀಕರಣ ಆಗಿತ್ತು. ಹುಬ್ಬಳ್ಳಿ ನನಗೆ ವಿಶೇಷವಾದ ಊರು. ಈ ಊರಿನಿಂದ ಸ್ವಲ್ಪ ದೂರದಲ್ಲಿಯೇ ಇರೋ ಸವದತ್ತಿಯಲ್ಲಿ ನನ್ನ ಅಭಿನಯದ ಶ್ರೀರಾಮ್ ಚಿತ್ರದ ಚಿತ್ರೀಕರಣವೂ ಆಗಿದೆ. ಮೈಲಾರಿ ಸಿನಿಮಾದ ಚಿತ್ರೀಕರಣವೂ ಇದೇ ಭಾಗದಲ್ಲಿ ಆಗಿದೆ ಎಂದು ಶಿವರಾಜ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Shiva Rajkumar: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಶಿವಣ್ಣ!? ಪಾಲಿಟಿಕ್ಸ್ ಪ್ರವೇಶದ ಬಗ್ಗೆ ಹ್ಯಾಟ್ರಿಕ್ ಹೀರೋ ಹೇಳಿದ್ದೇನು?
ರಾಜ್ ಫ್ಯಾಮಿಲಿಗೆ ಹುಬ್ಬಳ್ಳಿ ಬಗ್ಗೆ ವಿಶೇಷ ಗೌರವ ಇಟ್ಟುಕೊಂಡಿದೆ. ರಾಜಕುಮಾರ್ ಕಾಲದಿಂದಲೂ ಸಿದ್ದಾರೂಢಮಠಕ್ಕೆ ಈ ಫ್ಯಾಮಿಲಿಯ ಮಂದಿ ನಡೆದುಕೊಂಡು ಬಂದಿದ್ದಾರೆ. ಅದೇ ರೀತಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೂಡ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ್ರೆ ಸಿದ್ದಾರೂಢಮಠಕ್ಕೂ ಭೇಟಿಕೊಟ್ಟೇ ಮುಂದೆ ಹೋಗ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ