• Home
  • »
  • News
  • »
  • entertainment
  • »
  • Ghost Film Shooting: ಚಿತ್ರದ ಹೆಸರು ಘೋಸ್ಟ್! ಇಲ್ಲಿ ದೆವ್ವಗಳಿಲ್ಲ, ಮತ್ತೇನು?

Ghost Film Shooting: ಚಿತ್ರದ ಹೆಸರು ಘೋಸ್ಟ್! ಇಲ್ಲಿ ದೆವ್ವಗಳಿಲ್ಲ, ಮತ್ತೇನು?

ಘೋಸ್ಟ್ ಸಿನಿಮಾದ ಶಿವರಾಜ್ ಕುಮಾರ್ ಲುಕ್

ಘೋಸ್ಟ್ ಸಿನಿಮಾದ ಶಿವರಾಜ್ ಕುಮಾರ್ ಲುಕ್

ಡೈರೆಕ್ಟರ್ ಈಗಾಗಲೇ ಒಂದು ವಿಷಯವನ್ನ ಕ್ಲಿಯರ್ ಮಾಡಿದ್ದಾರೆ. ಕನ್ನಡದ ಘೋಸ್ಟ್ ಚಿತ್ರದಲ್ಲಿ ದೆವ್ವ ಇಲ್ಲ. ಇದೊಂದು ಹಾರರ್ ಸಿನಿಮಾ ಕೂಡ ಅಲ್ಲವೇ ಅಲ್ಲ. ಇದು ಬೇರೆ ರೀತಿಯ ಕನ್ನಡ ಸಿನಿಮಾ ಆಗಿದೆ. ಇಲ್ಲಿ ಸಾಹಸಕ್ಕೆ ಭಾರೀ ಒತ್ತುಕೊಡಲಾಗಿದೆ.

  • News18 Kannada
  • Last Updated :
  • Bangalore, India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ (Shivarajkumar) ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ (Cinema Shooting) ಚಿತ್ರೀಕರಣ ಆರಂಭಗೊಂಡಿದೆ. ಬೆಂಗಳೂರಿನ ಮಿನರ್ವ ಮಿಲ್​ ನಲ್ಲಿ ಚಿತ್ರಕ್ಕಾಗಿಯೇ ಅದ್ದೂರಿ ಸೆಟ್ ಕೂಡ ರೆಡಿ ಆಗಿದೆ. ನಿರ್ದೇಶಕ ಶ್ರೀನಿ (Director Srini) ಈ ಮೂಲಕ ಹೊಸ ರೀತಿಯ ಕಥೆಯನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಸುಮಾರು 3 ಕೋಟಿ ವೆಚ್ಚದಲ್ಲಿ ಚಿತ್ರಕ್ಕೆ ಮೋಹನ್ ಬಿ.ಕೆರೆ ಕಲಾ (Art Director) ನಿರ್ದೇಶನದಲ್ಲಿ ಸೆಟ್ ಹಾಕಲಾಗಿದೆ. ಮೈಸೂರಿನಲ್ಲೂ ನಾಲ್ಕು ರೀತಿಯ ಸೆಟ್ ಹಾಕಲಾಗುತ್ತಿದೆ. ಆದರೆ ಮೊದಲ ಹಂತದ ಚಿತ್ರೀಕರಣ ಮಿನರ್ವ ಮಿಲ್ ಜೈಲು ಸೆಟ್​​ನಲ್ಲಿಯೇ ಹೆಚ್ಚು ಕಡಿಮೆ 24 ದಿನಗಳವರೆಗೂ ಸಿನಿಮಾ ಶೂಟಿಂಗ್ ಪ್ಲಾನ್ ಆಗಿದೆ. ಇಷ್ಟೆಲ್ಲ ಪ್ಲಾನಿಂಗ್​ನ ಸಿನಿಮಾಕ್ಕೆ ಈಗ ಮುಹೂರ್ತ ಆಗಿದೆ.


ಘೋಸ್ಟ್ ಚಿತ್ರಕ್ಕೆ ಗೀತಾ ಶಿವರಾಜ್​ ಕುಮಾರ್ ಕ್ಲಾಪ್
ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಲಾಂಚ್ ಆಗಿದೆ. ಪತ್ನಿ ಗೀತಾ ಶಿವರಾಜ್​ಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.


ಜೈಲಿನಲ್ಲಿಯೇ ಘೋಸ್ಟ್ ಸಿನಿಮಾ ಶೂಟಿಂಗ್ ಯಾಕೆ?
ಘೋಸ್ಟ್ ಸಿನಿಮಾ ವಿಶೇಷ ಕಥೆಯನ್ನೆ ಹೊಂದಿದೆ. ಈ ಕಥೆಯ ಬಹುತೇಕ ಭಾಗ ಜೈಲಿನಲ್ಲಿಯೇ ನಡೆಯುತ್ತದೆ. ಈ ಒಂದು ಕಾರಣಕ್ಕೇನೆ ಭಾರೀ ವೆಚ್ಚದಲ್ಲಿ ಜೈಲು ಸೆಟ್ ಹಾಕಲಾಗಿದೆ.


Kannada Actor Shivarajkumar Acted Ghost Cinema Now Started Shooting
ಘೋಸ್ಟ್ ಸಿನಿಮಾದ ಮುಹೂರ್ತದ ಸಮಯ


ಘೋಸ್ಟ್ ಸಿನಿಮಾದಲ್ಲಿ ಇನ್ನೂ ಒಂದು ವಿಶೇಷ ಇದ್ದು, ಮಲೆಯಾಳಂ ನಟ ಜಯರಾಮ್ ಈ ಚಿತ್ರದ ಮೂಲಕವೇ ಕನ್ನಡಕ್ಕೂ ಬರುತ್ತಿದ್ದಾರೆ. ಇವರ ಈ ಸಿನಿಮಾಕ್ಕೆ ಘೋಸ್ಟ್ ಅನ್ನೋ ಟೈಟಲ್ ಇಡಲಾಗಿದೆ. ಆದರೆ ಇದು ಹಾರರ್ ಸಿನಿಮಾನೇನಾ? ಅನ್ನೋ ಪ್ರಶ್ನೆಗೆ ಡೈರೆಕ್ಟರ್ ಶ್ರೀನಿ ಬೇರೆಯದ್ದೇ ಉತ್ತರ ಕೊಡ್ತಾರೆ.


ಘೋಸ್ಟ್ ಸಿನಿಮಾದ ಟೈಟಲ್ ಕೇಳಿದಾಕ್ಷಣ ಇದೊಂದು ಹಾರರ್ ಸಿನಿಮಾ ಅನಿಸುತ್ತದೆ. ಭೂತ-ಪ್ರೇತ ಇದ್ದೇ ಇರುತ್ತವೆ ಅನ್ನೋ ಅಂದಾಜು ಮೂಡಿರುತ್ತದೆ.  ಆದರೆ ಕನ್ನಡದ ಈ ಘೋಸ್ಟ್ ಸಿನಿಮಾ ಬೇರೆ ಸಿನಿಮಾನೇ ಆಗಿದೆ.  ಇಲ್ಲಿರೋ ಕಥೆ ಕೂಡ ವಿಭಿನ್ನವಾಗಿದೆ. ಅದರ ಚಿತ್ರೀಕರಣಕ್ಕೂ ಸಖತ್ ಪ್ಲಾನ್ ಮಾಡಲಾಗಿದೆ.


ನಮ್ಮ ಘೋಸ್ಟ್ ಸಿನಿಮಾ ದೆವ್ವದ ಹಾರರ್ ಸಿನಿಮಾ ಅಲ್ಲ
ಡೈರೆಕ್ಟರ್ ಈಗಾಗಲೇ ಒಂದು ವಿಷಯವನ್ನ ಕ್ಲಿಯರ್ ಮಾಡಿದ್ದಾರೆ. ಕನ್ನಡದ ಘೋಸ್ಟ್ ಚಿತ್ರದಲ್ಲಿ ದೆವ್ವ ಇಲ್ಲ. ಇದೊಂದು ಹಾರರ್ ಸಿನಿಮಾ ಕೂಡ ಅಲ್ಲವೇ ಅಲ್ಲ. ಇದು ಬೇರೆ ರೀತಿಯ ಕನ್ನಡ ಸಿನಿಮಾ ಆಗಿದೆ. ಇಲ್ಲಿ ಸಾಹಸಕ್ಕೇನೆ ಭಾರೀ ಒತ್ತುಕೊಡಲಾಗಿದೆ.


ಇದನ್ನೂ ಓದಿ: Adipurush: ಪ್ರಭಾಸ್, ಸೈಫ್ ಅಲಿ ಖಾನ್ ಸೇರಿ ಆದಿಪುರುಷ್ ತಂಡದ ಐವರ ವಿರುದ್ಧ ಕೇಸ್!


ಘೋಸ್ಟ್ ಸಿನಿಮಾದಲ್ಲಿ ಭಾರೀ ಸಾಹಸಗಳ ಅಬ್ಬರ
ಘೋಸ್ಟ್ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳು ಇವೆ. ಇವುಗಳನ್ನ ಅಷ್ಟೇ ಚೆನ್ನಾಗಿಯೇ ತೆಗೆಯಲು ಪಕ್ಕಾ ಪ್ಲಾನ್ ಕೂಡ ಮಾಡಲಾಗಿದೆ. ಮಹೇಂದ್ರ ಸಿಂಹ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.


ಮಾಸ್ತಿ ಮಸ್ತ್ ಡೈಲಾಗ್ ಬರೆಯುತ್ತಿದ್ದಾರೆ. ಕನ್ನಡದ ಘೋಸ್ಟ್ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಸಂಗೀತ ಕೊಡುತ್ತಿದ್ದು, ಈ ಸಿನಿಮಾದಲ್ಲಿ ಕಲಾವಿದರ ದೊಡ್ಡ ದಂಡು ಕೂಡ ಇದೆ.


ಘೋಸ್ಟ್ ಚಿತ್ರದಲ್ಲಿ ನಟ ಅಭಿಜೀತ್ ಅಭಿನಯ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ನಟ ಅಭಿಜೀತ್ ಅಭಿನಯಿಸುತ್ತಿದ್ದಾರೆ. ಪ್ರಶಾಂತ್ ನಾರಾಯಣ್, ದತ್ತಣ್ಣ, ಸತ್ಯ ಪ್ರಕಾಶ್ ಹೀಗೆ ಇನ್ನು ಹಲವರು ಅಭಿನಯಿಸಿದ್ದಾರೆ.


ಇದನ್ನೂ ಓದಿ: Rajamouli: ರಾಜಮೌಳಿ ಸಿನಿಮಾದಲ್ಲಿ ನಟಿಸಲು ನೋ ಎಂದ ಸ್ಟಾರ್ ನಟರಿವರು


ಕನ್ನಡದ ಈ ಘೋಸ್ಟ್ ಚಿತ್ರವನ್ನ ಸಂದೇಶ್ ನಾಗರಾಜ್ ಪುತ್ರ ಸಂದೇಶ್ ನಿರ್ಮಿಸುತ್ತಿದ್ದು ಈಗ ಸಿನಿಮಾಕ್ಕೆ ಮುಹೂರ್ತ ಆಗಿದೆ. ಗಣ್ಯರೆಲ್ಲ ಬಂದು ಸಿನಿಮಾ ತಂಡಕ್ಕೆ ಶುಭ ಕೋರಿದ್ದಾರೆ.

First published: