• Home
  • »
  • News
  • »
  • entertainment
  • »
  • Vedha Film Teaser: ಮತ್ತೆ ಮಚ್ಚು ಹಿಡಿದ ಶಿವಣ್ಣ, ಈ ಬಾರಿ ಹೆಣ್ಣು ಮಕ್ಕಳ ಬೆನ್ನಿಗೆ ನಿಂತಿರೋದು 'ವೇದ'!

Vedha Film Teaser: ಮತ್ತೆ ಮಚ್ಚು ಹಿಡಿದ ಶಿವಣ್ಣ, ಈ ಬಾರಿ ಹೆಣ್ಣು ಮಕ್ಕಳ ಬೆನ್ನಿಗೆ ನಿಂತಿರೋದು 'ವೇದ'!

ರೊಚ್ಚಿಗೆದ್ದ ಶಿವಣ್ಣನ ಹೋರಾಟ ಯಾರ ವಿರುದ್ಧ?

ರೊಚ್ಚಿಗೆದ್ದ ಶಿವಣ್ಣನ ಹೋರಾಟ ಯಾರ ವಿರುದ್ಧ?

ಶಿವರಾಜ್ ಕುಮಾರ್ ಆಕ್ರೋಶದ ಕಣ್ಣುಗಳು, ಕೈಯಲ್ಲಿ ಕುಲುಮೆಯಿಂದ ಹೊರ ತೆಗೆದ ಮಚ್ಚು, ಎದೆಯಲ್ಲಿ ಅಡಗಿದ ಸಿಟ್ಟು ಹೊರಹಾಕಿದ ಪರಿ, ನಿಜಕ್ಕೂ ಒಮ್ಮೆ ರೋಮಾಂಚನಗೊಳಿಸುತ್ತದೆ. ಅಷ್ಟು ಅದ್ಭುತವಾಗಿಯೇ ಶಿವರಾಜ್​ ಕುಮಾರ್ ಇಲ್ಲಿ ಕಾಣಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಈ ತಿಂಗಳು ಅಂತಹ (Bigg Film) ದೊಡ್ಡ ಸಿನಿಮಾಗಳು ಇಲ್ಲ. ಇದ್ದರೂ ಕಾಂತಾರ ರೇಂಜ್​ಗೆ ಇರೋದಿಲ್ಲ ಅನ್ನೋ ಅಂದಾಜು ಕೂಡ ಇದೆ. ಆದರೆ ನವೆಂಬರ್​​ ಕಳೆದ ಬಳಿಕ ಬರೋ ಡಿಸೆಂಬರ್​​ನಲ್ಲಿ (December Dhamaka) ಧಮಾಕಾ ಆಗಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj kumar)​ ಕುಮಾರ್ ಅಭಿನಯದ ವೇದ ಚಿತ್ರ ಡಿಸೆಂಬರ್​​ನಲ್ಲಿಯೇ ರಿಲೀಸ್ ಆಗುತ್ತಿದೆ. ಚಿತ್ರದ ಬಗ್ಗೆ ದಿನೇ ದಿನೇ ನಿರೀಕ್ಷೆ ಹೆಚ್ಚಾಗುತ್ತಿದೆ. ದಂಗೆ ಎದ್ದ ಹೆಣ್ಣು ಮಕ್ಕಳು ಏನೆಲ್ಲ ಮಾಡ್ತಾರೆ ಅನ್ನೋದನ್ನ ಈಗ ಹೊರ ಬಿಟ್ಟಿರುವ (Teaser)ಟೀಸರ್​​ನಲ್ಲಿಯೇ ತಿಳಿಯಬಹುದು. ಮಹಿಳೆಯರ ಪರ ನಿಂತು ಶಿವರಾಜ್​ ಕುಮಾರ್​ ಹೋರಾಟ ಮಾಡ್ತಾರೆ ಅನ್ನೋ ಸತ್ಯವೂ ಈಗ ರಿವೀಲ್ ಆಗಿದೆ. ಆದರೆ ಯಾರ ವಿರುದ್ಧ ಅನ್ನೋದೇ ಈಗಿರೋ ಇಂಟ್ರಸ್ಟಿಂಗ್ ಫ್ಯಾಕ್ಟ್.


ದಂಗೆ ಎದ್ದ ಹೆಣ್ಣು ಮಕ್ಕಳು ಧಗ ಧಗಿಸಿದ ಆಕ್ರೋಶ


ವೇದ ಸಿನಿಮಾದಲ್ಲಿ ಒಂದು ಹೋರಾಟ ಇದೆ. ಈ ಹೋರಾಟ 1960 ರ ಕಥೆ ಹೇಳುತ್ತದೆ. ಹೆಣ್ಣು ಮಕ್ಕಳ ಆಕ್ರೋಶದ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮಹಿಳಾ ಪರ ಹೋರಾಟ ನಡೆಸಿದ್ದಾರೆ. ಇದನ್ನ ನಾವು ಹೇಳ್ತಿಲ್ಲ. ಸಿನಿಮಾದ ಈಗೀನ ಟೀಸರ್ ಹಾಗೆ ಕಲ್ಪಿಸುವಂತೆ ಮಾಡಿದೆ.


ಮಹಿಳೆಯರು ದಂಗೆ ಎದ್ದ ಟೈಮ್ ಅದು ಅನಿಸುತ್ತದೆ. ಕೈಗೆ ಸಿಕ್ಕ ಕಲ್ಲು, ಮಚ್ಚು ಎಲ್ಲವನ್ನೂ ಹಿಡಿದು ಅದ್ಯಾರನ್ನೋ ಹೊಡೆದು ಹಾಕುವ ಮಹಿಳೆಯರ ಚಿತ್ರಣ ಈಗ ನಮಗೆ ಚಿತ್ರದ ಟೀಸರ್​​ನಲ್ಲಿ ದೊರೆಯುತ್ತದೆ.


Kannada Actor Shivaraj Kumar Vedha Film Teaser Released
ಡಿಸೆಂಬರ್​-23 ರಂದು ವೇದ ಸಿನಿಮಾ ಎಲ್ಲೆಡೆ ರಿಲೀಸ್


ಮಚ್ಚು ಹಿಡಿದ ಹೆಣ್ಣು ಮಕ್ಕಳ ಹಿಂದೆ ವೇದ ಶಿವರಾಜ್​ ಕುಮಾರ್


ಮಚ್ಚು ಹಿಡಿದು ಹೋರಾಟಕ್ಕೆ ಹೊರಟ ಶಿವರಾಜ್​ ಕುಮಾರ್ ಅವರ ಆಕ್ರೋಶದ ಒಂದು ಝಲಕ್ ಇಲ್ಲಿ ಸಿಗುತ್ತದೆ. ಇಲ್ಲಿವರೆಗೂ ಶಿವರಾಜ್ ಕುಮಾರ್ ಪಾತ್ರದ ಖದರ್​ ಅನ್ನು ಪೋಸ್ಟರ್​ ನಲ್ಲಿ ಮಾತ್ರ ನೋಡಿದ್ದೇವೆ, ಅದಕ್ಕೆ ಪೂರಕ ಎಂಬಂತೆ ಇದೆ ಸಿನಿಮಾದ ಟೀಸರ್.


ಇದನ್ನೂ ಓದಿ: Sundar Raj: ಮೊಮ್ಮಗ ರಾಯನ್ ಬಗ್ಗೆಆ ಒಂದು ಭವಿಷ್ಯ ನುಡಿದ ಮೇಘನಾ ತಂದೆ ಸುಂದರ್ ರಾಜ್!


ವೇದ ಸಿನಿಮಾದಲ್ಲಿ ಹೋರಾಟ ಇದೆ. ಕಿಚ್ಚಿನ ಆಕ್ರೋಶವೂ ಇದೆ. ಇದನ್ನ ಅಷ್ಟೇ ಚೆನ್ನಾಗಿಯೇ ತೆಗೆದಿದ್ದಾರೆ ಅನ್ನೋದನ್ನ ಟೀಸರ್ ಸಾರಿ, ಸಾರಿ ಹೇಳುವಂತಿದೆ. ಸಿನಿಮಾದಲ್ಲಿ ಶಿವರಾಜ್​ ಕುಮಾರ್ ಬೇರೆ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ.


ರೊಚ್ಚಿಗೆದ್ದ ಶಿವಣ್ಣನ ಹೋರಾಟ ಯಾರ ವಿರುದ್ಧ?


ಶಿವರಾಜ್ ಕುಮಾರ್ ಆಕ್ರೋಶದ ಕಣ್ಣುಗಳು, ಕೈಯಲ್ಲಿ ಕುಲುಮೆಯಿಂದ ಹೊರ ತೆಗೆದ ಮಚ್ಚು, ಎದೆಯಲ್ಲಿ ಅಡಗಿದ ಸಿಟ್ಟನ್ನು ಹೊರಹಾಕಿದ ಪರಿ, ನಿಜಕ್ಕೂ ಒಮ್ಮೆ ರೋಮಾಂಚನಗೊಳಿಸುತ್ತದೆ. ಅಷ್ಟು ಅದ್ಭುತವಾಗಿಯೇ ಶಿವರಾಜ್​ ಕುಮಾರ್ ಇಲ್ಲಿ ಕಾಣಿಸಿದ್ದಾರೆ.




1960 ರ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳೂ ಆಗಿವೆ. ಇನ್ನಿಲ್ಲದಂತೆ ಅನೇಕರು ಅಟ್ಟಹಾಸ ಮೆರೆದಿದ್ದಾರೆ. ಇದೆಲ್ಲದರ ವಿರುದ್ಧ ದಂಗೆ ಎದ್ದ ಘಟನೆಗಳೂ ಇವೆ. ಅದರಲ್ಲಿ ಯಾವುದರ ಮೇಲೆ ಈ ಸಿನಿಮಾ ಅನ್ನೋದು ಅಷ್ಟೆ ಕುತೂಹಲಕಾರಿಯಾಗಿದೆ.


ಶಿವರಾಜ್ ಕುಮಾರ್ 125 ನೇ ಸಿನಿಮಾ ಎಂಬುದೇ ವಿಶೇಷ
ಕನ್ನಡದ ವೇದ ಸಿನಿಮಾ ಶಿವರಾಜ್​ ಕುಮಾರ್ ಚಿತ್ರ ಜೀವನದ ವಿಶೇಷ ಸಿನಿಮಾ. ಇಲ್ಲಿವರೆಗೂ ಮಾಡಿರೋ ಎಲ್ಲ ಚಿತ್ರಗಳಿಗಿಂತಲೂ ಇದು ವಿಭಿನ್ನವಾಗಿದೆ. ಅದಕ್ಕೂ ಹೆಚ್ಚಾಗಿ ಇದು ಶಿವರಾಜ್​​ಕುಮಾರ್ ಅವರ 125 ನೇ ಚಿತ್ರವೇ ಆಗಿದೆ.




ಡೈರೆಕ್ಟರ್ ಎ.ಹರ್ಷ ಇದನ್ನ ಅಷ್ಟೇ ಪ್ರೀತಿಯಿಂದ ಮತ್ತು ಕಾಳಜಿಯಿಂದಲೇ ನಿರ್ದೇಶನ ಮಾಡಿದ್ದಾರೆ. 1960 ಕಾಲ ಘಟ್ಟದ ಕಥೆ ಇದಾಗಿರೋದ್ರಿಂದ ಮೂರು ರೀತಿಯ ಗೆಟಪ್​​ನಲ್ಲಿಯೇ ಶಿವರಾಜ್​ ಕುಮಾರ್ ಅವರನ್ನ ಇಲ್ಲಿ ನೋಡಬಹುದು.


ಡಿಸೆಂಬರ್​-23 ರಂದು ವೇದ ಸಿನಿಮಾ ಎಲ್ಲೆಡೆ ರಿಲೀಸ್
ಕನ್ನಡದ ವೇದ ಸಿನಿಮಾ ರಿಲೀಸ್​ ಡೇಟ್ ಫಿಕ್ಸ್ ಆಗಿದೆ. ವರ್ಷದ ಕೊನೆ ತಿಂಗಳು ಡಿಸೆಂಬರ್​-23 ರಂದು ಚಿತ್ರವನ್ನ ರಿಲೀಸ್ ಮಾಡಲಾಗುತ್ತಿದೆ. ಕನ್ನಡದ ಮಟ್ಟಿಗೆ ಡಿಸೆಂಬರ್​​ನಲ್ಲಿ ಈ ಸಿನಿಮಾ ದೊಡ್ಡ ಧಮಾಕಾ ಮಾಡೋ ಹಾಗೆ ಕಾಣುತ್ತಿದೆ.

First published: