ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಅಭಿನಯದ 'ವೇದ' ಸಿನಿಮಾದ ಹಾಡು ಹಿಟ್ ಆಗಿದೆ. ಅರ್ಜುನ್ ಜನ್ಯ (Arjun Janya) ಸಂಗೀತದ ಗೀತೆಗಳು ಸೂಪರ್ ಹಿಟ್ ಆಗುತ್ತಿದೆ. ಸಿನಿಮಾ ರಿಲೀಸ್ ಆಗೋ ಮುನ್ನವೇ ಈ ಚಿತ್ರದ ಗೀತೆಯನ್ನ ಜನಪ್ರಿಯ ಸಂಗೀತ ಕಾರ್ಯಕ್ರಮದಲ್ಲಿ ಹಾಡಿರೋದು ವಿಶೇಷ. 15 ವರ್ಷದ ಸ್ಪರ್ಧಿ ಈ ಗೀತೆಯನ್ನ ಮೊದಲ ಬಾರಿಗೆ ಸ್ಟೇಜ್ (Stage) ಮೇಲೆ ಹಾಡಿ ರೋಮಾಂಚನಗೊಳಿಸಿದ್ದಾಳೆ. ಇದನ್ನ ಕೇಳಿದ ಶಿವಣ್ಣ (Shivanna) ವ್ಹಾರೇ ವ್ಹಾ ಎಂದಿದ್ದಾರೆ. ಅರ್ಜುನ್ ಜನ್ಯ ಕೂಡ ಹಾಡಿ ಕೇಳಿ ಫುಲ್ ಥ್ರಿಲ್ ಆಗಿದ್ದಾರೆ. ಒಂದು ದೊಡ್ಡ ಭರವಸೆಯನ್ನ ಕೂಡ ಕೊಟ್ಟಿದ್ದಾರೆ.
ಸಿನಿಮಾ ಬರೋ ಮೊದಲೇ ವೇದಿಕೆ ಮೇಲೆ 'ವೇದ' ಹವಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ವರ್ಷದ ಕೊನೆ ತಿಂಗಳು 23ರಂದು ವೇದ ಚಿತ್ರ ಎಲ್ಲೆಡೆ ತೆರೆಗೆ ಬರುತ್ತಿದೆ. ಇದರ ಬೆನ್ನಲ್ಲಿಯೇ ಸಿನಿಮಾದ ಹಾಡುಗಳಲ್ಲಿ ಒಂದು ಹಾಡಂತೂ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ.
ಚಿತ್ರದ ಈ ಒಂದು ಗೀತೆ ಸೂಪರ್ ಆಗಿಯೇ ಇದೆ. ವಿ. ನಾಗೇಂದ್ರ ಪ್ರಸಾದ್ ಬರೆದ ಈ ಹಾಡನ್ನ ಖ್ಯಾತ ಗಾಯಕಿ ಮಂಗ್ಲಿ ಹಾಡಿದ್ದಾರೆ. ಶಿವಣ್ಣ ಇದಕ್ಕೆ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಈ ಹಾಡು ಶಿವಣ್ಣನ ಪಾತ್ರದ ಖದರ್ ಅನ್ನ ಕಟ್ಟಿಕೊಡುತ್ತಿದೆ.
ಮೊಟ್ಟ ಮೊದಲ ಬಾರಿಗೆ ವೇದಿಕೆ ಮೇಲೆ 'ಗಿಲ್ಲಕ್ಕೋ ಶಿವ' ಹಾಡು
ಸಾಮಾನ್ಯವಾಗಿ ಹಾಡುಗಳು ಚಿತ್ರ ಬರುವ ಮುಂಚೇನೆ ಗಮನ ಸೆಳೆದಿರುತ್ತವೆ. ಹಿಟ್ ಆಗೋದು ಅಷ್ಟೇ ಕಾಮನ್ ಬಿಡಿ. ಆದರೆ, ಸಿನಿಮಾ ಬರೋ ಮುಂಚೇನೆ ವೇದಿಕೆ ಮೇಲೆ ಹಾಡೊಂದನ್ನ ಹಾಡೋದು ತೀರ ಕಡಿಮೆ. ಈ ವಿಷಯದಲ್ಲಿ ವೇದ ಸಿನಿಮಾಕ್ಕೆ ಆ ಲಕ್ ಬಂದಿದೆ.
ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ವೇದ ಚಿತ್ರದ ಗಿಲ್ಲಕ್ಕೋ ಶಿವ ಹಾಡನ್ನ 15 ವರ್ಷದ ಸ್ಪರ್ಧಿ ಶಿವಾನಿ ನವೀನ್ ಕೊಪ್ಪ ವೇದಿಕೆ ಮೇಲೆ ಹಾಡಿದ್ದಾರೆ. ಅಲ್ಲಿದ್ದ ನಿರ್ಣಾಯಕರಾದ ಅರ್ಜುನ್ ಜನ್ಯ ಹಾಗೂ ಅತಿಥಿ ಶಿವರಾಜ್ ಕುಮಾರ್ ಅವರ ದಿಲ್ ಕದ್ದು ಬಿಟ್ಟಿದ್ದಾರೆ.
ಮೊದಲೇ ಯಾಕೆ ಸಿಗಲಿಲ್ಲ ಈ ವಿಶೇಷ ಕಂಠಸಿರಿ?
ಶಿವಾನಿ ನವೀನ್ ಕೊಪ್ಪ ಹಾಡಿರೋ ಗಿಲ್ಲಕ್ಕೋ ಶಿವ ಹಾಡನ್ನ ಕೇಳಿದ ಶಿವಣ್ಣ ತುಂಬಾ ಖುಷಿ ಆಗಿದ್ದಾರೆ. ತಮ್ಮ ಚಿತ್ರದ ಹಾಡನ್ನ ಈ ಹುಡುಗಿ ಅದ್ಭುತವಾಗಿಯೇ ಹಾಡಿದ್ದಾಳೆ ಎಂದು ಖುಷಿಪಟ್ಟಿದ್ದಾರೆ. ಮೊದಲೇ ಸಿಕ್ಕಿದ್ದರೇ ಈ ಹುಡುಗಿಯಿಂದಲೇ ಗಿಲ್ಲಕ್ಕೋ ಶಿವ ಹಾಡು ಹಾಡಿಸಬಹುದಿತ್ತು ಎಂದು ಕೂಡ ಶಿವಣ್ಣ ಹೇಳಿದ್ದಾರೆ.
ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಕೂಡ ಶಿವಾನಿ ಹಾಡು ಕೇಳಿ ಥ್ರಿಲ್ ಆಗಿದ್ದಾರೆ. ಇನ್ಮುಂದೆ ನಮ್ಮ ಯಾವುದೇ ಶೋ ಇರಲಿ, ಅಲ್ಲಿ ಈ ಗಿಲ್ಲಕ್ಕೋ ಶಿವ ಹಾಡನ್ನ ನೀನೇ ಹಾಡಬೇಕು ಅಂತಲೂ ಅರ್ಜುನ್ ಜನ್ಯ ಹೇಳಿದ್ದಾರೆ.
ಹೀಗೆ ಅತಿ ಹೆಚ್ಚು ಜನರನ್ನ ಸೆಳೆದ ವೇದ ಚಿತ್ರದ ಗಿಲ್ಲಕ್ಕೋ ಶಿವ ಹಾಡು ಸೂಪರ್ ಹಿಟ್ ಆಗಿದೆ. ಇದೇ ರೀತಿ ಡಿಸೆಂಬರ್ 10 ಹಾಗೂ ಡಿಸೆಂಬರ್ 11 ರಂದು ಚಿತ್ರದ ಹಾಡುಗಳನ್ನ ಸಿನಿಮಾ ನಿರ್ದೇಶಕ ಎ. ಹರ್ಷ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: Kantara 2: ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತಾರಾ 2 ಸಿನಿಮಾಗೆ ದೈವದ ಅನುಮತಿ ಕೇಳಿದ ಚಿತ್ರತಂಡ
ಉಳಿದಂತೆ ಗಿಲ್ಲಕ್ಕೋ ಶಿವ ಹಾಡು ಇಡೀ ವೇದ ಚಿತ್ರದ ಶಿವಣ್ಣನ ಪಾತ್ರದ ಖದರ್ ಕಟ್ಟಿಕೊಟ್ಟಿದೆ. ಚಿತ್ರ ನೋಡುವಾಗ, ನಿಜಕ್ಕೂ ಈ ಸಿನಿಮಾ ಎಲ್ಲರಿಗೂ ಥ್ರಿಲ್ ಮೂಡಿಸೋದಂತೂ ಗ್ಯಾರಂಟಿ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ