ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಅಭಿನಯದ ವೇದ ಸಿನಿಮಾದ ವೈಬ್ರೇಷನ್ (Vibration) ಶುರು ಆಗಿದೆ. ಚಿತ್ರದ ಪ್ರಮೋಷನ್ ಕೂಡ ಜೋರಾಗಿದೆ. ವಿನೂತನವಾಗಿ ಸಿನಿಮಾವನ್ನ ಈಗ ಪ್ರಮೋಟ್ (Promote) ಮಾಡಲಾಗುತ್ತಿದೆ. ಸಿನಿಮಾದ ಒಂದೊಂದೆ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಸಿನಿಮಾದ ಪಾತ್ರಗಳ ಪರಿಚಯ ಮಾಡಿದ್ದರು. ವೆಪನ್ ಆಫ್ ವೇದ ಟೀಸರ್ ರಿಲೀಸ್ ಮಾಡಿ, ಶಿವರಾಜ್ ಕುಮಾರ್ ಪಾತ್ರದ ಖದರ್ ಅನ್ನ ರಿವೀಲ್ ಮಾಡಲಾಗಿದೆ. ಮೊನ್ನೆ ಮೊನ್ನೆ ಈ ಸಿನಿಮಾದ ಗಿಲ್ಲಕ್ಕೋ ಶಿವ ಲಿರಿಕಲ್ (Lyrical Song) ಹಾಡು ಹೊರ ಬಂದಿದೆ. ಇದು ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ. ಈ ಒಂದು ಕ್ರೇಜ್ ಇರೋವಾಗ್ಲೇ, ಸಿನಿಮಾ ತಂಡ ಚಿತ್ರದ ಇನ್ನೂ ಒಂದು ಟೀಸರ್ ರಿಲೀಸ್ಗೆ ಸಜ್ಜಾಗಿದೆ. ಅದರ ವಿವರ ಇಲ್ಲಿದೆ ಓದಿ.
ಕನ್ನಡದ ವೇದ ಚಿತ್ರ ಪ್ರಚಾರಕ್ಕೆ ಹೊಸ ಹೊಸ ಐಡಿಯಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ಪ್ರಮೋಷನ್ ತುಂಬಾ ಚೆನ್ನಾಗಿಯೇ ಪ್ಲಾನ್ ಮಾಡಲಾಗಿದೆ. ಸಿನಿಮಾದ ಪ್ರತಿ ಪೋಸ್ಟರ್ ಒಂದೊಂದು ಕಥೆ ಹೇಳುತ್ತವೆ. ಸಿನಿಮಾದ ಟೀಸರ್ ಇಡೀ ಕಥೆಯ ಝಲಕ್ ಅನ್ನ ಬಿಟ್ಟುಕೊಡುತ್ತಿವೆ.
ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಿರೀಕ್ಷೆ ಮಾಡದ ರೀತಿಯಲ್ಲಿಯೇ
ಕಾಣಿಸಿಕೊಂಡಿದ್ದಾರೆ. ವೇದ ಹೆಸರಿನ ಪಾತ್ರ ಮಾಡೋ ಮೂಲಕ ಶಿವಣ್ಣ ತಮ್ಮ ಅಭಿನಯ ಕಲೆಯನ್ನ ಓರೆಗೆ ಹಚ್ಚಿದಂತೆ ಕಾಣುತ್ತಿದ್ದಾರೆ. ಅಷ್ಟು ಆಳವಾಗಿಯೇ ಈ ಒಂದು ಪಾತ್ರದಲ್ಲಿ ಇಳಿದಿರೋ ಶಿವಣ್ಣನ ಈ ಚಿತ್ರದಲ್ಲಿ ಪ್ರಚಾರ ಪ್ರತಿ ಟೀಸರ್ಗೂ ಒಂದೊಂದು ಥೀಮ್ ಇದೆ.
ವೇದ ಚಿತ್ರದ ಪ್ರತಿ ಟೀಸರ್ಗೂ ಒಂದೊಂದು ಥೀಮ್!
ವೇದ ಚಿತ್ರದ ಪ್ರಚಾರದ ಪ್ಲಾನಿಂಗ್ ಪಕ್ಕಾ ಆಗಿಯೇ ಇದೆ. ನಿರ್ದೇಶಕ ಎ.ಹರ್ಷಾ ತಮ್ಮ ಈ ಚಿತ್ರವನ್ನ ಪ್ಲಾನ್ ಮಾಡಿಕೊಂಡೇ ಪ್ರಮೋ ಮಾಡುತ್ತಿದ್ದಾರೆ. ಅದರಂತೆ ಟೀಸರ್ಗೂ ಒಂದೊಂದು ಥೀಮ್ ಟೈಟಲ್ ಕೂಡ ಇಟ್ಟಿದ್ದಾರೆ.
ಈ ಹಿಂದೆ ವೆಪನ್ ಆಫ್ ವೇದ ಅಂತಲೇ ಹೆಸರಿಟ್ಟು, ಟೀಸರ್ ಬಿಟ್ಟಿದ್ದರು. ಅದರಲ್ಲಿ ಶಿವರಾಜ್ ಕುಮಾರ್ ಮತ್ತು ಚಿತ್ರದ ಇತರ ಪಾತ್ರಗಳು ಬಳಸುವ ವೆಪನ್ ಗಳ ಚಿತ್ರಣವೇ ಇತ್ತು. ಲಾಂಗು ಮತ್ತು ಕಲ್ಲುಗಳನ್ನ ಇಲ್ಲಿಯ ಪಾತ್ರಗಳು ಆಯುಧವಾಗಿಯೇ ಬಳಸಿಕೊಂಡಿರೋದು ತಿಳಿಯಿತು.
ರಾಯಚೂರಿನಲ್ಲಿ ವೇದ ಸಿನಿಮಾದ ಟೀಸರ್ ರಿಲೀಸ್
ಈ ಮೊದಲೇ ಹೇಳಿದಂತೆ ವೇದ ಚಿತ್ರದ ಪ್ರಚಾರದ ಪ್ಲಾನ್ ಚೆನ್ನಾಗಿಯೇ ಇದೆ. ಚಿತ್ರದ ಒಂದೊಂದು ಕಂಟೆಂಟ್ ಅನ್ನ ಒಂದೊಂದೂ ಊರಲ್ಲಿ ರಿಲೀಸ್ ಮಾಡ್ತಿರೋದು ವಿಶೇಷವಾಗಿಯೇ ಕಾಣುತ್ತಿದೆ.
ಮೊನ್ನೆ ಮಂಡ್ಯದ ಪಾಂಡವರಪುರದಲ್ಲಿ ವೇದ ಚಿತ್ರದ ಗಿಲ್ಲಕ್ಕೋ ಶಿವ ಹಾಡನ್ನ ರಿಲೀಸ್ ಮಾಡಿದರು. ಅದ್ದೂರಿಯಾಗಿಯೇ ನಡೆದ ಈ ಕಾರ್ಯಕ್ರಮದಲ್ಲಿ ಹಾಡು ರಿಲೀಸ್ ಆಯಿತು. ಅಷ್ಟೇ ಗಮನ ಸೆಳೆಯಿತು.
ರಾಯಚೂರಿನಲ್ಲಿ ವೇದ ಸಿನಿಮಾ ಟೀಸರ್ ರಿಲೀಸ್ ಪ್ಲಾನ್
ಸೋಲ್ ಆಫ್ ವೇದ (Soul of Vedha) ಸಿನಿಮಾ ಟೀಸರ್ ರಾಯಚೂರಿನಲ್ಲಿ ರಿಲೀಸ್ ಆಗುತ್ತಿದೆ. ಇಲ್ಲಿಯ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿಯೇ ವೇದ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ.
ವೇದ ಸಿನಿಮಾದ ಇದೇ ಡಿಸೆಂಬರ್ 23 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ರಾಜ್ಯಾದ್ಯಂತ ಬಿಡುಗಡೆ ಆಗ್ತಿರೋ ಈ ಚಿತ್ರವನ್ನ, ರಿಲೀಸ್ ಮುಂಚೇನೆ ವಿಭಿನ್ನವಾಗಿಯೇ ರಾಜ್ಯದೆಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ. ಅದ್ದೂರಿ ಕಾರ್ಯಕ್ರಮಗಳ ಮೂಲಕವೇ ವೇದ ಚಿತ್ರದ ಕಂಟೆಂಟ್ ರಿವೀಲ್ ಆಗುತ್ತಿದೆ.
ಇದನ್ನೂ ಓದಿ: Sharan Horror Film: ಕನ್ನಡದ ಹಾಸ್ಯ ನಾಯಕ ನಟನ ಹೊಸ ಜರ್ನಿ; ಶರಣ್, ಚಿಕ್ಕಣ್ಣ ಮತ್ತೆ ಜೋಡಿ ಮೋಡಿ!
ಡಿಸೆಂಬರ್-03 ರಂದು ಸಂಜೆ 5 ಗಂಟೆಗೆ ಟೀಸರ್ ರಿಲೀಸ್
ರಾಯಚೂರಿನಲ್ಲಿ ಡಿಸೆಂಬರ್ 03 ರಂದು ಸಂಜೆ ವೇಳೆ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಅದ್ದೂರಿಯಾಗಿಯೇ ಈ ಒಂದು ಟೀಸರ್ ರಿಲೀಸ್ ಆಗುತ್ತಿದೆ. ಸೋಲ್ ಆಫ್ ವೇದ ಅಂತಲೇ ಹೇಳಿರೋ ಈ ಟೀಸರ್ನಲ್ಲಿ ಚಿತ್ರದ ಪ್ರಮುಖ ವಿಷಯ ರಿವೀಲ್ ಆಗೋ ಸಾಧ್ಯತೆನೂ ಇದೆ. ಯಾವುದಕ್ಕೂ ವೇಟ್ ಮಾಡೋಣ ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ