• Home
  • »
  • News
  • »
  • entertainment
  • »
  • Shivaraj Kumar: ಹ್ಯಾಟ್ರಿಕ್ ಹೀರೋ ಫುಲ್ ಬ್ಯುಸಿ! ಜೈಲರ್ ಚಿತ್ರದಲ್ಲಿ ಶಿವನ ಹೊಸ ರೂಪ

Shivaraj Kumar: ಹ್ಯಾಟ್ರಿಕ್ ಹೀರೋ ಫುಲ್ ಬ್ಯುಸಿ! ಜೈಲರ್ ಚಿತ್ರದಲ್ಲಿ ಶಿವನ ಹೊಸ ರೂಪ

ಜೈಲರ್ ಚಿತ್ರದಲ್ಲಿ ಶಿವಣ್ಣನ ಪಾತ್ರ ಏನು?

ಜೈಲರ್ ಚಿತ್ರದಲ್ಲಿ ಶಿವಣ್ಣನ ಪಾತ್ರ ಏನು?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತುಂಬಾ ಬ್ಯುಸಿ ಇದ್ದಾರೆ. ವರ್ಷಕ್ಕೆ ನಾಲ್ಕೈದು ಸಿನಿಮಾಗಳನ್ನು ಮಾಡುತ್ತಾರೆ ತಮ್ಮ ವಯಸ್ಸನ್ನೂ ಮೀರಿ ಕೆಲಸ ಮಾಡುತ್ತಾರೆ. ಬ್ಯಾಕ್ ಟು ಬ್ಯಾಕ್ ಅನ್ನೋ ಹಾಗೆ ಒಪ್ಪಿಕೊಂಡ ಚಿತ್ರಗಳನ್ನ ಮಾಡಿ ಮುಗಿಸುತ್ತಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಸಿನಿಮಾ ಪಯಣ ಈ ವರ್ಷ ಜೋರಾಗಿಯೇ ಇದೆ. ಒಂದಲ್ಲ ಎರಡಲ್ಲ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ವರ್ಷಕ್ಕೆ ನಾಲ್ಕೈದು ಚಿತ್ರಗಳಲ್ಲಿ ಶಿವರಾಜ್​ ಕುಮಾರ್ ಅಭಿನಯಿಸುತ್ತಾರೆ. ಇದಕ್ಕೇ ಅಲ್ವೇ ಸಿನಿಮಾಗಳ ಸಂಖ್ಯೆ (Vedha) ಈಗ 125 ಆಗಿರೋದು. ಈ ವರ್ಷ ಇನ್ನೂ ವಿಶೇಷ ಏನೂ ಅಂದ್ರೆ, ಹ್ಯಾಟ್ರಿಕ್ ಹೀರೋ ಜೈಲರ್ (Jailer) ಹೆಸರಿನ ತಮಿಳು ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಜೊತೆಗೂ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕಣ ಶುರು ಆಗಿದೆ. ಈ ಬಗ್ಗೆ ಶಿವರಾಜ್​ ಕುಮಾರ್ ಫೇಸ್ ಬುಕ್​​ ನಲ್ಲೂ ಫೋಟೋ ಸಮೇತ ಹೇಳಿಕೊಂಡಿದ್ದರು. ಹೀಗೆ ಫುಲ್ ಬ್ಯುಸಿ ಇರೋ ಶಿವಣ್ಣನ ಸಿನಿಮಾಗಳ ಸುತ್ತದ ಒಂದು ಸ್ಟೋರಿ ಇಲ್ಲಿದೆ ಓದಿ.

ಟಗರು ಶಿವನ ಸಿನಿಪಯಣ ಈ ವರ್ಷವೂ ಸೂಪರೋ ಸೂಪರ್


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತುಂಬಾ ಬ್ಯುಸಿ ಇದ್ದಾರೆ. ವರ್ಷಕ್ಕೆ ನಾಲ್ಕೈದು ಸಿನಿಮಾಗಳ ಮಾಡುತ್ತಾರೆ. ತಮ್ಮ ವಯಸ್ಸನ್ನೂ ಮೀರಿ ಕೆಲಸ ಮಾಡುತ್ತಾರೆ. ಬ್ಯಾಕ್ ಟು ಬ್ಯಾಕ್ ಅನ್ನೋ ಹಾಗೆ ಒಪ್ಪಿಕೊಂಡ ಚಿತ್ರಗಳನ್ನ ಮಾಡಿ ಮುಗಿಸುತ್ತಿದ್ದಾರೆ.


ಈಗ ಶಿವಣ್ಣ ಒಪ್ಪಿಕೊಂಡ ಸಿನಿಮಾಗಳಲ್ಲಿ ಕನ್ನಡದ ಘೋಸ್ಟ್ ಸಿನಿಮಾ ಇದೆ. ಡೈರೆಕ್ಟರ್ ಶ್ರೀನಿ ಈಗಾಗಲೇ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. ಬೆಂಗಳೂರಿನ ಮಿನರ್ವ ಮಿಲ್ಸ್​ ನಲ್ಲಿ ಇದಕ್ಕಾಗಿಯೇ ಜೈಲ್ ಸೆಟ್ ಹಾಕಲಾಗಿದೆ. ಇಲ್ಲಿಯೇ ಬಹುತೇಕ ಭಾಗ ಚಿತ್ರೀಕರಣ ನಡೆಯುತ್ತದೆ.


Kannada Actor Shivaraj Kumar New Project Details
ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಶಿವರಾಜ್ ಕುಮಾರ್


ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಶಿವರಾಜ್ ಕುಮಾರ್


ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ "ಜೈಲರ್" ಚಿತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಹಿಂದೇನೆ ಈ ಸುದ್ದಿ ಭಾರೀ ವೈರಲ್ ಆಗಿತ್ತು. ಈಗ ಅದು ನಿಜವಾಗಿದೆ.




ಘೋಸ್ಟ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡ ಶಿವಣ್ಣ, ಮೊದಲೇ ಒಪ್ಪಿಕೊಂಡಂತೆ ಜೈಲರ್ ಚಿತ್ರದಲ್ಲಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸುದ್ದಿ ಅಲ್ಲದೇ, ತಮಿಳು ನಟ ಧನುಷ್ ಅಭಿನಯದ "ಕ್ಯಾಪ್ಟನ್ ಮಿಲ್ಲರ್" ಸಿನಿಮಾದಲ್ಲೂ ಶಿವಣ್ಣ ಅಭಿನಯಿಸುತ್ತಾರೆ ಎಂಬ ಸುದ್ದಿ ಕೂಡ ಇದೆ.


ಜೈಲರ್ ಚಿತ್ರದಲ್ಲಿ ಶಿವಣ್ಣನ ಪಾತ್ರ ಏನು?


ಹೌದು, ಈ ಒಂದು ಕುತೂಹಲ ಇದ್ದೇ ಇದೆ. ಮೊನ್ನೆಯಿಂದಲೇ ಜೈಲರ್ ಚಿತ್ರದ ಚಿತ್ರೀಕರಣ ಆಂಭಗೊಂಡಿದೆ. ಶಿವರಾಜ್​ ಕುಮಾರ್ ಇಲ್ಲಿ ಪ್ರಮುಖ ಪಾತ್ರವನ್ನೆ ಮಾಡುತ್ತಿದ್ದಾರೆ.
ಇಷ್ಟು ಬಿಟ್ಟರೇ ಬೇರೆ ಏನೂ ರಿವೀಲ್ ಆಗಿಲ್ಲ. ಆದರೆ ಶಿವಣ್ಣ ಚಿತ್ರೀಕರಣದ ಆರಂಭವಾದ ದಿನ ತಮ್ಮ ಫೇಸ್ ಬುಕ್ ಪೇಜ್​ ನಲ್ಲಿ ತಮ್ಮ ಪಾತ್ರದ ಒಂದು ಫೋಟೋ ಹಂಚಿಕೊಂಡು ಎಲ್ಲರಲ್ಲೂ ಒಂದು ಕುತೂಹಲ ಮೂಡಿಸಿದ್ದರು.


ಮಮ್ಮಿ ಡೈರೆಕ್ಟರ್ ಲೋಹಿತ್ ಚಿತ್ರದಲ್ಲೂ ಶಿವಣ್ಣ
ಮಮ್ಮಿ ಡೈರೆಕ್ಟರ್ ಲೋಹಿತ್ ಚಿತ್ರವನ್ನ ಕೂಡ ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ. "ವೈರಮುಡಿ" ಅಂತಲೇ ಈ ಚಿತ್ರಕ್ಕೆ ಶೀರ್ಷಿಕೆ ಇದೆ. ಆದರೆ ಈ ಸಿನಿಮಾ ಯಾವಾಗ ಶುರು ಆಗುತ್ತದೆ ಅನ್ನೋ ಮಾಹಿತಿ ಇನ್ನು ಹೊರ ಬಿದ್ದಿಲ್ಲ. ಯುವ ಡೈರೆಕ್ಟರ್ ಲೋಹಿತ್ ಈಗಾಗಲೇ ಟೈಮ್ ಲೂಪ್​ ಮೇಲೆ ಪ್ರಜ್ವಲ್ ದೇವರಾಜ್​ ಗೆ ಸಿನಿಮಾ ಮಾಡುತ್ತಿದ್ದಾರೆ.


Kannada Actor Shivaraj Kumar New Project Details
ಶಿವಣ್ಣನ 125 ನೇ ವೇದ ಸಿನಿಮಾದ ಹವಾ ಶುರು


ಇದಾದ್ಮೇಲೆ ವೈರಮುಡಿ ಸಿನಿಮಾ ಮಾಡ್ತೀನಿ ಅಂತಲೂ ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಹೇಳಿಕೊಂಡಿದ್ದಾರೆ. ಅಲ್ಲಿಗೆ ವೈರಮುಡಿ ಸಿನಿಮಾ ಈಗಲೇ ಶುರು ಆಗೋದಿಲ್ಲ ಅನ್ನೋದು ಪಕ್ಕಾ ಅಂದುಕೊಳ್ಳಬಹುದು.


ಉತ್ತರಕಾಂಡ ಚಿತ್ರದಲ್ಲೂ ಶಿವರಾಜ್ ಕುಮಾರ್


ಸ್ಯಾಂಡಲ್​ವುಡ್ ಕ್ವೀನ್ ರಮ್ಯ ಮತ್ತು ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಸಿನಿಮಾ ಸೆಟ್ ಏರಿದೆ. ಈ ಚಿತ್ರದ ಚಿತ್ರೀಕರಣ ಜನವರಿಯಿಂದಲೇ ಶುರು ಆಗುತ್ತದೆ.
ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಅಭಿನಯಿಸುತ್ತಾರೆ ಅನ್ನೋ ಮಾಹಿತಿ ಹರಿದಾಡುತ್ತಿದೆ. ಆದರೆ ಯಾವುದು ಇನ್ನೂ ಅಧಿಕೃತವಾಗಿ ಅನೌನ್ಸ್ ಆಗಿಲ್ಲ ಅಷ್ಟೆ.


ಶಿವಣ್ಣನ 125 ನೇ ವೇದ ಸಿನಿಮಾದ ಹವಾ ಶುರು
ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾ ಯಾವುದು? ಇದರ ಬಗ್ಗೆ ಹೆಚ್ಚಿಗೆ ಹೇಳೋದೇ ಬೇಡ. ಅದು ವೇದ ಅಂತ ಎಲ್ಲರೂ ಹೇಳುತ್ತಾರೆ. ಸಿನಿಮಾ ಅಷ್ಟೊಂದು ಮೋಡಿ ಈಗಲೇ ಮಾಡಿದೆ.


ಇದನ್ನೂ ಓದಿ: Ragini Dwivedi: ಚೆನ್ನೈಯಲ್ಲಿ ಪೆಟ್ಟು, ಬಾಲಿವುಡ್​ನಲ್ಲಿ ರೆಸ್ಟು, ಮುಂಬೈಗೆ ಹಾರಲಿರೋ ರಾಗಿಣಿ ದ್ವಿವೇದಿ!


ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅದ್ಭುತವಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. 1960 ಒಂದು ಅದ್ಭುತ ಕಥೆಗೆ ಶಿವಣ್ಣ ಇಲ್ಲಿ ಜೀವ ತುಂಬಿದ್ದಾರೆ. ದಂಗೆ ಎದ್ದ ಮಹಿಳೆಯರ ಹಿಂದೆ ನಿಂತು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ.


ಎ.ಹರ್ಷ ನಿರ್ದೇಶನದ ಈ ವೇದ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಡಿಸೆಂಬರ್-23 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕೆ ಶಿವಣ್ಣ ಉತ್ತರ ಕರ್ನಾಟಕದ ಕಡೆಗೂ ಬರೋ ಸಾಧ್ಯತೆ ಇದೆ. ತಮ್ಮ ನಿರ್ಮಾಣದ ಈ ಚಿತ್ರದ ಬಗ್ಗೆ ಶಿವಣ್ಣನಿಗೆ ಭಾರೀ ಹೋಪ್ ಕೂಡ ಇದೆ.

First published: