ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar New Movie) ಅಭಿನಯದ ಮಫ್ತಿ ಚಿತ್ರ ಕನ್ನಡಿಗರಿಗೆ ಹೊಸ ರೀತಿಯ ಅನುಭವ ಕೊಟ್ಟಿದೆ. 6 ವರ್ಷದ ಹಿಂದೆ ತೆರೆಗೆ ಬಂದ ಈ ಚಿತ್ರ ಈಗಲೂ ಎಲ್ಲರ ಮನಸ್ಸಿನಲ್ಲಿದೆ. ಕನ್ನಡಿಗರ ಈ ಚಿತ್ರ ಈಗ (Tamil Movie) ತಮಿಳಿನಲ್ಲಿ ಪತ್ತು ತಲಾ ಅಂತ ರಿಮೇಕ್ ಆಗಿದೆ. ಇದು ಮತ್ತೊಂದು ವಿಷಯ ಬಿಡಿ. ಆದರೆ ಈಗಿನ ವಿಷಯ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಮಫ್ತಿ ಚಿತ್ರ ರಿಲೀಸ್ ಆಗಿ ಹಿಟ್ ಆದಾಗ, ಡೈರೆಕ್ಟರ್ (Murti Director Narthan) ನರ್ತನ್ ಹೆಸರು ಕೂಡ ಎಲ್ಲೆಡೆ ಪಸರಿಸಿತು. ಇದರ ಬೆನ್ನಲ್ಲಿಯೇ ಶಿವಣ್ಣ ಮತ್ತು ನರ್ತನ್ ಮತ್ತೊಂದು (Bhairathi Ranagal) ಸಿನಿಮಾ ಮಾಡ್ತಾರೆ ಅನ್ನೊ ಸುದ್ದಿ ದಟ್ಟವಾಗಿ ಹರಡಿತ್ತು.
ಅದೇ ಚಿತ್ರ ಅತೀ ಶೀಘ್ರದಲ್ಲಿಯೇ ಸೆಟ್ಟೇರುತ್ತದೆ. ಇದರ ಒಟ್ಟು ಚಿತ್ರಣ ಇಲ್ಲಿದೆ ಓದಿ.
ಭೈರತಿ ರಣಗಲ್ ಹೆಸರಲ್ಲಿ ರಣ..ರಣ ಅಂದ್ರು ಶಿವಣ್ಣ!
ಮಫ್ತಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಅದ್ಭುತ ರೋಲ್ ಮಾಡಿದ್ದರು. ನೋಡಲು ರಫ್ ಅಂಡ್ ಟಫ್ ಅನಿಸಿದ್ರೂ ಮನಸ್ಸಿಂದ ತುಂಬಾ ಸಾಫ್ಟ್ ಆಗಿಯೇ ಇತ್ತು ಚಿತ್ರದ ಇವರ ಪಾತ್ರ. ಚಿತ್ರದ ಡೈರೆಕ್ಟರ್ ನರ್ತನ್ ಈ ಒಂದು ಪಾತ್ರಕ್ಕೆ ವಿಶೇಷ ಹೆಸರನ್ನೆ ಇಟ್ಟಿದ್ದರು.
ಭೈರತಿ ರಣಗಲ್ ಹೆಸರಿನ ಪಾತ್ರದ ಮೂಲಕ ಶಿವಣ್ಣ ಕನ್ನಡಿಗರ ಮನದಲ್ಲಿ ಹೊಸ ರೀತಿಯಲ್ಲಿ ಜಾಗ ಮಾಡಿಕೊಂಡರು. ಗ್ಯಾಂಗಸ್ಟರ್ ರೀತಿ ಕಂಡು ಸಾಫ್ಟ್ ಪ್ರೇಕ್ಷಕರಲ್ಲಿ ವಾವ್ ಅನ್ನೋ ರೀತಿ ಫೀಲ್ ಮೂಸಿದ್ದರು.
ಭೈರತಿ ರಣಗಲ್ ಮತ್ತು ಗಣ ಸೂಪರ್ ಕಾಂಬಿನೇಷನ್
ಭೈರತಿ ರಣಗಲ್ ಪಾತ್ರದ ಮೂಲಕ ಶಿವಣ್ಣ ಎಲ್ಲರ ಹೃದಯದ ಗೆದ್ದರೆ, ರೋರಿಂಗ್ ಸ್ಟಾರ್ ಶ್ರೀಮುರಳಿ ಈ ಚಿತ್ರದಲ್ಲಿ ಅಂಡರ್ ಕವರ್ ಕಾಪ್ ಗಣ ಪಾತ್ರದಲ್ಲಿಯೇ ಮಿಂಚಿದ್ದರು.
ಇವರ ಕಾಂಬಿನೇಷನ್ನಲ್ಲಿ ಇಡೀ ಚಿತ್ರ ಬೇರೆ ರೀತಿಯಲ್ಲಿಯೇ ಗಮನ ಸೆಳೆದಿತ್ತು. ಇವರ ಮಧ್ಯ ಇನ್ನೂ ಒಂದು ಪಾತ್ರವೂ ಇತ್ತು. ಅದನ್ನ ಮಧು ಗುರುಸ್ವಾಮಿ ನಿರ್ವಹಿಸಿದ್ದರು. ಸಿಂಗ ಅನ್ನೋ ಈ ಪಾತ್ರ ತಮಿಳಿನ ಚಿತ್ರ ನಿರ್ಮಾಪಕರಿಗೂ ಇಷ್ಟ ಆಗಿತ್ತು. ಹಾಗಾಗಿಯೇ ಮಫ್ತಿ ಚಿತ್ರದ ತಮಿಳಿನ ರಿಮೇಕ್ ಪತ್ತು ತಲಾ ಚಿತ್ರದಲ್ಲಿ ಮಧು ಗುರುಸ್ವಾಮಿ ನಟಿಸಿದ್ದಾರೆ.
ಶಿವಣ್ಣ ಭೈರತಿ ರಣಗಲ್ ಆಗಿಯೇ ಬಂದೇ ಬರ್ತಾರೆ!
ಮಫ್ತಿ ಚಿತ್ರ ಹಿಟ್ ಆದ್ಮೇಲೆ ಭೈರತಿ ರಣಗಲ್ ಹೆಸರಿನ ಸಿನಿಮಾ ಬರುತ್ತದೆ ಅಂತಲೇ ಸುದ್ದಿ ಆಗಿತ್ತು. ಡೈರೆಕ್ಟರ್ ನರ್ತನ್ ಕೂಡ ಇದರ ಮೇಲೆ ಕೆಲಸ ಮಾಡಿದ್ದಾರೆ. ಅದೇ ಚಿತ್ರವೇ ಈಗ ಸೆಟ್ಟೇರುತ್ತಿದೆ.
ಹೌದು, ಭೈರತಿ ರಣಗಲ್ ಚಿತ್ರವನ್ನ ಶಿವರಾಜ್ ಕುಮಾರ್ ಮಾಡ್ತಿದ್ದಾರೆ. ಡೈರೆಕ್ಟರ್ ನರ್ತನ್ ಈ ಹಿಂದೇನೆ ಶಿವಣ್ಣನಿಗೆ ಕಥೆ ಹೇಳಿದ್ದಾರೆ. ಅದನ್ನ ಶಿವಣ್ಣ ಈಗಾಗಲೇ ಒಪ್ಪಿ ಕೂಡ ಆಗಿದೆ.
ಭೈರತಿ ರಣಗಲ್ ಚಿತ್ರಕ್ಕೆ ನರ್ತನ್ ಡೈರೆಕ್ಟರ್!
ಭೈರತಿ ರಣಗಲ್ ಸಿನಿಮಾ ಕುರಿತಂತೆ ಡೈರೆಕ್ಟರ್ ನರ್ತನ್ ಶಿವಣ್ಣನ ಜೊತೆಗೆ ಮಾತುಕಥೆ ನಡೆಸುತ್ತಿದ್ದಾರೆ.
ಇನ್ನೇನು ಮೂರ್ನಾಲ್ಕು ದಿನದಲ್ಲಿ ಈ ಮಾಹಿತಿ ಅಧಿಕೃತವಾಗಿಯೇ ಹೊರಬೀಳುತ್ತಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ಚಿತ್ರದ ಇತರ ಮಾಹಿತಿ ಕೂಡ ರಿವೀಲ್ ಆಗುತ್ತವೆ. ಚಿತ್ರದಲ್ಲಿ ಯಾರೆಲ್ಲ ಇದ್ದಾರೆ. ಏನೆಲ್ಲ ವಿಶೇಷತೆಗಳು ಇರಬಹುದು. ಚಿತ್ರ ಯಾವಾಗ ಶುರು ಆಗುತ್ತದೆ. ಹೀಗೆ ಭೈರತಿ ರಣಗಲ್ ಸಿನಿಮಾದ ಇನ್ನಿತರ ವಿಷಯ ರಿವೀಲ್ ಆಗಿವೆ. ಬಲ್ಲ ಮೂಲಗಳ ಪ್ರಕಾರ ಡೈರೆಕ್ಟರ್ ನರ್ತನ್ ಇದಕ್ಕೆ ಸಂಬಂಧಿಸಿದಂತೆ ಮಾತನಾಡಲು ಬೆಂಗಳೂರಿಗೆ ಬಂದಿದ್ದಾರೆ.
ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಕನ್ಫರ್ಮ್ ಆಗುತ್ತದೆ. ಹೆಚ್ಚು ಕಡಿಮೆ ಫೆಬ್ರವರ-15 ರಂದು ಈ ಚಿತ್ರಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ ಹೊರ ಬೀಳಲಿದೆ ಅನ್ನೋದು ಬಲ್ಲ ಮೂಲಗಳ ಮಾಹಿತಿ ಆಗಿದೆ.
ವೇದ ಚಿತ್ರ ಆದ್ಮೇಲೆ ಭೈರತಿ ರಣಗಲ್ ಆಗಿ ಬರ್ತಾರೆ ಶಿವಣ್ಣ
ಶಿವಣ್ಣ ತಮ್ಮ ನಿರ್ಮಾಣದ ವೇದ ಚಿತ್ರದ ಮೂಲಕ ಕನ್ನಡಿಗರ ಮನದಲ್ಲಿ ಹೊಸ ಜಾಗ ಮಾಡಿಕೊಂಡಿದ್ದಾರೆ. ಇದೇ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಯಲ್ಲೂ ಶಿವ ವೇದ ಆಗಿ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: Mukhyamantri Chandru: ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ದೂರು! ಬಂಧನಕ್ಕೆ ಆಗ್ರಹ
ಶಿವಣ್ಣ ಸಿನಿಮಾಗಳು ಬೇರೆ ಭಾಷೆಯಲ್ಲು ಬರುತ್ತಿದೆ. ಭೈರತಿ ರಣಗಲ್ ಪಾತ್ರ ಮಾಡಿದ್ದ ಮಫ್ತಿ ಚಿತ್ರವನ್ನೆ ತೆಗೆದುಕೊಂಡ್ರೆ, ಈ ಚಿತ್ರ ತಮಿಳಿನಲ್ಲಿ ರಿಮೇಕ್ ಆಗಿದೆ. ಭೈರತಿ ರಣಗಲ್ ಪಾತ್ರವನ್ನ ಇಲ್ಲಿ ನಟ ಸಿಂಬು ಮಾಡಿದ್ದಾರೆ.
ಮಾರ್ಚ್-30 ರಂದು ಚಿತ್ರ ರಿಲೀಸ್ ಕೂಡ ಆಗುತ್ತಿದೆ. ಇದರ ಮಧ್ಯ ಈಗ ಶಿವಣ್ಣನ ಭೈರತಿ ರಣಗಲ್ ಸಿನಿಮಾ ಅತಿ ಶೀಘ್ರದಲ್ಲಿಯೇ ಸೆಟ್ಟೇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ