• Home
  • »
  • News
  • »
  • entertainment
  • »
  • Ghost Film: ಘೋಸ್ಟ್ ಸಿನಿಮಾ ಶಿವರಾಜ್ ಕುಮಾರ್ ಕ್ಯಾರೆಕ್ಟರ್ ಸೀಕ್ರೆಟ್ ರಿವೀಲ್!

Ghost Film: ಘೋಸ್ಟ್ ಸಿನಿಮಾ ಶಿವರಾಜ್ ಕುಮಾರ್ ಕ್ಯಾರೆಕ್ಟರ್ ಸೀಕ್ರೆಟ್ ರಿವೀಲ್!

ಗನ್ ಹಿಡಿದು ಸ್ಟೈಲ್ ಆಗಿಯೇ ಕಂಡ ಶಿವರಾಜ್ ಕುಮಾರ್!

ಗನ್ ಹಿಡಿದು ಸ್ಟೈಲ್ ಆಗಿಯೇ ಕಂಡ ಶಿವರಾಜ್ ಕುಮಾರ್!

ಮಲೆಯಾಳಂ ನಟ ಜಯರಾಮ್ ಪಾತ್ರದ ಮೊದಲ ಚಿತ್ರೀಕರಣ ಆಗಿದೆ. ಅವರ ಪಾತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಅದು ಇನ್ನೂ ಇದೆ. ಮೊದಲ ಹಂತದ ಶೂಟಿಂಗ್ ಮಾತ್ರ ಈಗ ಆಗಿದೆ ಅಂತಲೇ ಡೈರೆಕ್ಟರ್ ಶ್ರೀನಿ ನ್ಯೂಸ್-18 ಕನ್ನಡದ ಡಿಜಿಟಲ್​ಗೆ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಅಭಿನಯದ ಘೋಸ್ಟ್ ಸಿನಿಮಾದ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಿದೆ. ಚಿತ್ರದ ಪಾತ್ರದ ಸುತ್ತ ಇರೋ ಕುತೂಹಲ ಕೂಡ ಈಗ ಕೊಂಚ ತಣಿಸಿದೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರ ಹೇಗಿದೆ? ಹೇಗೆಲ್ಲ ಕಾಣಿಸುತ್ತದೆ? ನಿಜವಾಗ್ಲೂ ಶಿವರಾಜ್ ಕುಮಾರ್ ಇಲ್ಲಿ (Ghost) ಘೋಸ್ಟ್​? ಇಲ್ಲವೇ ಕೈದಿನಾ? ಇವೆಲ್ಲದರ ಮೇಲೆ ಬೆಳಕು ಚೆಲ್ಲೋ ಒಂದು ವೀಡಿಯೋ (Video) ಹೊರಗೆ ಬಂದಿದೆ. ವಿಶೇಷವೆಂದ್ರೆ ಈ ಒಂದು ವೀಡಿಯೋವನ್ನ ಸಿನಿಮಾ ಡೈರೆಕ್ಟರ್ ಶ್ರೀನಿ (Reveal) ರಿವೀಲ್ ಮಾಡಿದ್ದಾರೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರದ ಗತ್ತು ಕೂಡ ನಮಗೆ ಇದರಲ್ಲಿಯೇ ತಿಳಿದು ಬಿಡುತ್ತದೆ. ಇದರ ಬಗೆಗಿನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.


ಘೋಸ್ಟ್ ಸಿನಿಮಾ ಡೈರೆಕ್ಟರ್ ಶ್ರೀನಿ ತಮ್ಮ ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ನ್ಯೂಸ್​-18 ಕನ್ನಡ ಡಿಜಿಟಲ್​ ಜೊತೆಗೆ ಮಾತನಾಡಿರೋ ಶ್ರೀನಿ, ಇಲ್ಲಿವರೆಗೂ ಏನೆಲ್ಲಾ ಆಗಿದೆ ಅನ್ನೋದನ್ನ ಕೂಡ ಸಂಕ್ಷಿಪ್ತವಾಗಿಯೇ ತಿಳಿಸಿದ್ದಾರೆ.


ಘೋಸ್ಟ್ ಸಿನಿಮಾದಲ್ಲಿ ಶಿವಣ್ಣ ಕೈದಿನಾ-ಜೈಲರಾ?


ಘೋಸ್ಟ್ ಸಿನಿಮಾದ ಬಗ್ಗೆ ಒಂದು ಕುತೂಹಲ ಇದೆ. ಆ ಕುತೂಹಲ ಕೆರಳಿಸೊ ಕೆಲಸವನ್ನ ಚಿತ್ರದ ಟೈಟಲ್ ಮಾಡಿದೆ. ಘೋಸ್ಟ್ ಟೈಟಲ್ ಇಟ್ಟುಕೊಂಡು ಡೈರೆಕ್ಟರ್ ಶ್ರೀನಿ ಇಲ್ಲಿ ದೆವ್ವದ ಕಥೆಯನ್ನಂತೂ ಹೇಳ್ತಿಲ್ಲ. ಆದರೆ ಮಬ್ಬು ಗತ್ತಲಿನ ಜೈಲಿನಲ್ಲಿಯೇ ಏನೋ ಹೊಸದನ್ನೆ ಕ್ರಿಯೇಟ್ ಮಾಡಿದ್ದಾರೆ.


Kannada Actor Shivaraj Kumar Ghost Film Secret Reveal
ಘೋಸ್ಟ್ ಸಿನಿಮಾದ ಮೇಕಿಂಗ್ ರಿವೀಲ್


ಘೋಸ್ಟ್ ಸಿನಿಮಾದಲ್ಲಿ ಶಿವಣ್ಣ ಗೆಟಪ್ ಸಖತ್ ಆಗಿಯೇ ಇದೆ. ಸಖತ್ ಸ್ಟೈಲಿಶ್ ಆಗಿಯೂ ಇದೆ. ಕೈಯಲ್ಲಿ ಗನ್ ಹಿಡಿದು ಮಸ್ತ್ ಪೋಸ್ ಹಿಡಿದಿರೋ ಶಿವಣ್ಣ ಈಗೊಂದು ಕುತೂಹಲ ಕೆರಳಿಸಿದ್ದಾರೆ.




ಗನ್ ಹಿಡಿದು ಸ್ಟೈಲ್ ಆಗಿಯೇ ಕಂಡ ಶಿವರಾಜ್ ಕುಮಾರ್!
ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಕೈದಿನಾ? ಜೈಲರಾ ಅನ್ನೋ ಪ್ರಶ್ನೆ ಇದೆ. ಈ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಸಿನಿಮಾ ತಂಡ ಯಾವುದನ್ನೂ ಇನ್ನು ಬಿಟ್ಟುಕೊಟ್ಟಿಲ್ಲ. ಹಾಗಂತ ಸಿನಿಮಾದ ಇತರ ಕೆಲವು ವಿಷಯಗಳನ್ನ ಡೈರೆಕ್ಟರ್ ಹೇಳಿದ್ದಾರೆ.


ಘೋಸ್ಟ್ ಸಿನಿಮಾದಲ್ಲಿ ಶಿವಣ್ಣನ ಪಾತ್ರದ ಬಗ್ಗೆ ಕುತೂಹಲ ಇದೆ. ಅದರಲ್ಲೂ ಸಿನಿಮಾವನ್ನ ಜೈಲ್ ಸೆಟ್​​ನಲ್ಲಿಯೇ ತೆಗೆಯಲಾಗುತ್ತಿದೆ. ಈಗಾಗಲೇ ಸಿನಿಮಾದ ಪ್ರಮುಖ ದೃಶ್ಯಗಳನ್ನೆ ಚಿತ್ರೀಕರಣ ಮಾಡಲಾಗಿದೆ. ಅದರ ಒಂದು ಝಲಕ್ ಈಗ ಮೇಕಿಂಗ್ ವೀಡಿಯೋದಲ್ಲಿ ರಿವೀಲ್ ಆಗಿದೆ.


ಘೋಸ್ಟ್ ಸಿನಿಮಾದ ಮೇಕಿಂಗ್ ರಿವೀಲ್
ಘೋಸ್ಟ್ ಚಿತ್ರದ ಮೇಕಿಂಗ್ ವೀಡಿಯೋ ಹೊರ ಬಂದಿದೆ. ಡೈರೆಕ್ಟರ್ ಶ್ರೀನಿ ತಮ್ಮ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗ ಆಗಿದೆ. ಈಗಷ್ಟೇ ಸಿನಿಮಾದ ಒಂದಷ್ಟು ದೃಶ್ಯಗಳನ್ನ ಮಾತ್ರ ತೆಗೆಯಲಾಗಿದೆ.



ಮಲೆಯಾಳಂ ನಟ ಜಯರಾಮ್ ಪಾತ್ರದ ಒಂದಷ್ಟು ಭಾಗದ ಚಿತ್ರೀಕರಣ ಆಗಿದೆ. ಅವರ ಪಾತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಅದು ಇನ್ನೂ ಇದೆ. ಮೊದಲ ಹಂತದ ಶೂಟಿಂಗ್ ಮಾತ್ರ ಈಗ ಆಗಿದೆ ಅಂತಲೇ ಡೈರೆಕ್ಟರ್ ಶ್ರೀನಿ ಹೇಳಿದ್ದಾರೆ.


Kannada Actor Shivaraj Kumar Ghost Film Secret Reveal
ಮೊದಲ ಹಂತದ ಚಿತ್ರೀಕರಣದ ಮೇಕಿಂಗ್ ಮಾತ್ರ ರಿವೀಲ್


ಮೊದಲ ಹಂತದ ಚಿತ್ರೀಕರಣದ ಮೇಕಿಂಗ್ ಮಾತ್ರ ರಿವೀಲ್
ಘೋಸ್ಟ್ ಸಿನಿಮಾ ತಂಡ ಈಗ ಮೊದಲ ಹಂತದ ಚಿತ್ರೀಕರಣ ವೀಡಿಯೋ ಮಾತ್ರ ರಿವೀಲ್ ಮಾಡಿದೆ. ಹೆಚ್ಚು ಕಡಿಮೆ 15 ರಿಂದ 20 ದಿನ ಚಿತ್ರೀಕರಣದಲ್ಲಿ ತೆಗೆದ ಒಂದಷ್ಟು ಮೇಕಿಂಗ್ ವೀಡಿಯೋವನ್ನ ಒಟ್ಟು ಮಾಡಿ, ಅದ್ಭುತವಾದ ಒಂದು ವೀಡಿಯೋ ಮಾಡಿದೆ.


ಘೊಸ್ಟ್ ಚಿತ್ರದ ಪೋಸ್ಟರ್ ಈಗಾಗಲೇ ಭಾರೀ ಗಮನ ಸೆಳೆದಿದೆ. ಶಿವಣ್ಣನ ರೋಲ್ ಕೂಡ ಇಲ್ಲಿ ವಿಭಿನ್ನ ಅನಿಸುತ್ತಿದೆ. ಘೋಸ್ಟ್ ಚಿತ್ರವನ್ನ ಬಹುತೇಕ ಜೈಲ್ ಸೆಟ್​​ನಲ್ಲಿಯೇ ತೆಗೆಯೋ ಪ್ಲಾನ್ ಅನ್ನ ಡೈರೆಕ್ಟರ್ ಶ್ರೀನಿ ಹಾಕಿಕೊಂಡಿದ್ದಾರೆ.


ಜೈಲ್​ ಸೆಟ್​​ನಲ್ಲಿಯೇ ಮೊದಲ ಹಂತದ ಚಿತ್ರೀಕರಣ ಪೂರ್ಣ
ಈ ಹಿನ್ನೆಲೆಯಲ್ಲಿಯೇ ಮಿನರ್ವ ಮಿಲ್ಸ್ ನಲ್ಲಿ ಜೈಲ್ ಸೆಟ್ ಹಾಕಲಾಗಿದೆ. ಮೊದಲ ಹಂತದ ಚಿತ್ರೀಕರಣವನ್ನ ಇಲ್ಲಿಯೇ ಮಾಡಲಾಗಿದೆ. ಮಲೆಯಾಳಂ ನಟ ಜಯರಾಮ್ ಮತ್ತು ಶಿವಣ್ಣನ ಮುಖಾ-ಮುಖಿಯ ದೃಶ್ಯಗಳನ್ನ ಇದೇ ಜೈಲ್​ ಸೆಟ್​ನಲ್ಲಿಯೇ ಚಿತ್ರೀಕರಿಸಲಾಗಿದೆ.


ಇದನ್ನೂ ಓದಿ: Kannada Movie On Koragajja: ಕಾಂತಾರದಂತಹ ಮತ್ತೊಂದು ಸಿನಿಮಾ! ಇದು ಕೊರಗಜ್ಜನ ರಿಯಲ್ ಕಥೆ


ಹೆಚ್ಚು ಕಡಿಮೆ ಮೂರರಿಂದ ನಾಲ್ಕು ಹಂತದಲ್ಲಿ ಘೋಸ್ಟ್ ಚಿತ್ರವನ್ನ ತೆಗೆಯೋ ಪ್ಲಾನ್ ಇದೆ. ಈ ಹಿನ್ನೆಲೆಯಲ್ಲಿ ಅಂದುಕೊಂಡಂತೇನೆ ಡೈರೆಕ್ಟರ್ ಶ್ರೀನಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.


ಈ ಗ್ಯಾಪ್​ ನಲ್ಲಿ ಶಿವಣ್ಣ ಈಗಾಗಲೇ ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಡೈರೆಕ್ಟರ್ ಶ್ರೀನಿ ಕೂಡ ತಮ್ಮ ಇತರ ಸಿನಿಮಾದ ಕೆಲಸದಲ್ಲಿ ನಿರತರಾಗಿದ್ದಾರೆ.

First published: