• Home
  • »
  • News
  • »
  • entertainment
  • »
  • Vedha Film First Song: ಶಿವರಾಜ್​ ಕುಮಾರ್ ವೇದ ಸಿನಿಮಾದ ಮೊದಲ ಹಾಡು ರಿಲೀಸ್​ಗೆ ಡೇಟ್​​ ಫಿಕ್ಸ್

Vedha Film First Song: ಶಿವರಾಜ್​ ಕುಮಾರ್ ವೇದ ಸಿನಿಮಾದ ಮೊದಲ ಹಾಡು ರಿಲೀಸ್​ಗೆ ಡೇಟ್​​ ಫಿಕ್ಸ್

ಇದೇ 27 ರಂದು "ಗಿಲ್ಲಕ್ಕೋ ಶಿವ" ಹಾಡು ರಿಲೀಸ್

ಇದೇ 27 ರಂದು "ಗಿಲ್ಲಕ್ಕೋ ಶಿವ" ಹಾಡು ರಿಲೀಸ್

ವೇದ ಸಿನಿಮಾದಲ್ಲಿ ಯಾವ ರೀತಿಯ ಹಾಡುಗಳು ಇರುತ್ತವೆ? ಕ್ರಾಂತಿಕಾರಿ ಹಾಡುಗಳೇ ಇರಬಹುದು ಅನ್ನೋ ಅಂದಾಜು ಇದೆ. ಅಷ್ಟರಲ್ಲಿಯೇ ಗಿಲ್ಲಕ್ಕೋ ಶಿವ ಹಾಡು ಬೇರೆ ಫೀಲ್ ಕೊಡುತ್ತಿದೆ. ಶಿವಣ್ಣನ ಪಾತ್ರದ ಖದರ್ ಅನ್ನ ಇದು ಇನ್ನಷ್ಟು ಹೆಚ್ಚಿಸುವಂತೆ ಇದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಅಭಿನಯದ ವೇದ ಸಿನಿಮಾದ ಒಂದೊಂದೇ ಅಪ್​ಡೇಟ್ ಹೊರ ಬೀಳ್ತಾ ಇವೆ. ಇಲ್ಲಿವರೆಗೂ ಡೈರೆಕ್ಟರ್ ಎ.ಹರ್ಷ (A Harsha) ತಮ್ಮ ಚಿತ್ರದ ಪೋಸ್ಟರ್​ಗಳನ್ನ ಮಾತ್ರ ರಿಲೀಸ್ ಮಾಡಿದ್ದರು. ಆ ಮೂಲಕ ಚಿತ್ರದ ಕ್ಯಾರೆಕ್ಟರ್​ಗಳನ್ನೂ ಈಗೀಗ ರಿವೀಲ್ ಮಾಡಿದ್ದಾರೆ. ಆದರೆ ಇಲ್ಲಿವರೆಗೂ ಈ ಸಿನಿಮಾ ಇತರ ವಿಷಯಗಳನ್ನ ಇನ್ನೂ ಬಿಟ್ಟುಕೊಟ್ಟಿಲ್ಲ. ಅಷ್ಟರಲ್ಲಿಯೇ ಈಗ ಈ ಸಿನಿಮಾದ ಒಂದು ವಿಶೇಷ ಹಾಡಿನ (Special Song) ಝಲಕ್ ರಿವೀಲ್ ಆಗಿದೆ. ಇದರಲ್ಲಿ ಶಿವರಾಜ್ ಕುಮಾರ್ ಎಂಟ್ರಿ ಸಖತ್ ಆಗಿಯೇ ಇದೆ. ಇದಕ್ಕೂ ಹೆಚ್ಚಾಗಿ ಈ ಹಾಡಲ್ಲಿ ಬಿಳಿ ಪಾರಿವಾಳ ಬಂದು ಶಿವಣ್ಣನ (Shivanna) ಹೆಗಲ ಬಳಿ ಹಾರಿ ಬಂದು ಕುಳಿತುಕೊಳ್ಳುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.


ಕನ್ನಡದ ವೇದ ಸಿನಿಮಾ ಹೆಚ್ಚು ಗಮನ ಸೆಳೆಯುತ್ತಿದೆ. ತನ್ನ ಪೋಸ್ಟರ್ ಮತ್ತು ಟೀಸರ್ ಮೂಲಕ ಈಗಾಗಲೇ ವೇದ ಅತಿ ದೊಡ್ಡ ಭರವಸೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ವೇದ ಸಿನಿಮಾದ ನಿರೀಕ್ಷೆ ತುಂಬಾನೇ ಹೆಚ್ಚುತ್ತಲೇ ಇದೆ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರ ಜೀವನದಲ್ಲಿ ವೇದ ತುಂಬಾ ವಿಶೇಷ ಚಿತ್ರವೇ ಆಗಿದೆ. ಅದರಲ್ಲೂ ಇದು 125 ನೇ ಚಿತ್ರ ಅನ್ನೋ ವಿಶೇಷವೂ ಈ ಚಿತ್ರಕ್ಕಿದೆ.


Kannada Actor Shivaraj Kumar Acted Vedha Film First Song Release on this 27th
ವೇದ ಸಿನಿಮಾದ ಮೊದಲ ಹಾಡು ರಿಲೀಸ್​ಗೆ ಡೇಟ್​​ ಫಿಕ್ಸ್


ವೇದ ಚಿತ್ರದಲ್ಲಿ ಕ್ರಾಂತಿಕಾರಿ ಕತೆ-ಶಿವಣ್ಣನ ಉಗ್ರ ರೂಪ
ಶಿವರಾಜ್ ಕುಮಾರ್ ತಮ್ಮ ಈ ಚಿತ್ರದಲ್ಲಿ ವಿಶೇಷವಾಗಿಯೇ ಕಾಣಿಸಿಕೊಂಡಿದ್ದಾರೆ. ಕ್ರಾಂತಿಕಾರಿ ರೂಪದಲ್ಲೂ ಕೆಚ್ಚೆದೆಯಂದಲೇ ಅಭಿನಿಸಿದ್ದಾರೆ.


1960 ಹಿನ್ನೆಲೆಯ ಈ ಸಿನಿಮಾದಲ್ಲಿ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಬೇರೆ ರೀತಿಯಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಮತ್ತು ಇತ್ತೀಚಿಗೆ ಬಿಟ್ಟಿರೋ ಟೀಸರ್ ಭಾರೀ ಭರವಸೆಯನ್ನೆ ಮೂಡಿಸಿವೆ.




ಚಿತ್ರದಲ್ಲಿ ಶಿವಣ್ಣನ ಕ್ಯಾರೆಕ್ಟರ್ ಹೇಗಿರುತ್ತದೆ ಅನ್ನೋದನ್ನ ವೆಪನ್ ಆಫ್​ ವೇದ ಟೀಸರ್ ತೋರಿಸಿಕೊಟ್ಟಿದೆ. ಅದರ ಬೆನ್ನಲ್ಲಿಯೇ ಈಗ ಈ ಚಿತ್ರದ ಮೊಟ್ಟ ಮೊದಲ ಹಾಡು ರಿಲೀಸ್ ಆಗುತ್ತಿದೆ.


ವೇದ ಚಿತ್ರದ "ಗಿಲ್ಲಕ್ಕೋ ಶಿವ" ಹಾಡು ಸಖತ್
ವೇದ ಸಿನಿಮಾದಲ್ಲಿ ಯಾವ ರೀತಿಯ ಹಾಡುಗಳು ಇರುತ್ತವೆ? ಕ್ರಾಂತಿಕಾರಿ ಹಾಡುಗಳೇ ಇರಬಹುದು ಅನ್ನೋ ಅಂದಾಜು ಇದೆ. ಅಷ್ಟರಲ್ಲಿಯೇ ಗಿಲ್ಲಕ್ಕೋ ಶಿವ ಹಾಡು ಬೇರೆ ಫೀಲ್ ಕೊಡುತ್ತಿದೆ. ಶಿವಣ್ಣನ ಪಾತ್ರದ ಖದರ್ ಅನ್ನ ಇದು ಇನ್ನಷ್ಟು ಹೆಚ್ಚಿಸುವಂತೇನೆ ಇದೆ.




ಇದೇ 27 ರಂದು "ಗಿಲ್ಲಕ್ಕೋ ಶಿವ" ಹಾಡು ರಿಲೀಸ್
ವೇದ ಚಿತ್ರದ ಮೊಟ್ಟ ಮೊದಲ "ಗಿಲ್ಲಕ್ಕೋ ಶಿವ" ಹಾಡು ರಿಲೀಸ್ ಆಗುತ್ತಿದೆ. ಅರ್ಜುನ್ ಜನ್ಯ ಸಂಗೀತದ ಈ ಹಾಡನ್ನ ಇದೇ 27 ರಂದು ಈ ಹಾಡನ್ನ ಅಧಿಕೃತವಾಗಿಯೇ ಸಿನಿಮಾ ತಂಡ ಬಿಡುಗಡೆ ಮಾಡುತ್ತಿದೆ. ಪಾಂಡವಪುರದಲ್ಲಿ ಭಾನುವಾರ ನಡೆಯೋ ಬಿಗ್ ಇವೆಂಟ್​​ನಲ್ಲಿ ಸಂಜೆ 5 ಗಂಟೆ ಹೊತ್ತಿಗೆ ಈ ಒಂದು ಗಿಲ್ಲಕ್ಕೋ ಶಿವ ಹಾಡಿನ ಲಿರಿಕಲ್ ಸಾಂಗ್ ರಿಲೀಸ್ ಆಗುತ್ತಿದೆ.


ಇದೇ ಡಿಸೆಂಬರ್ 23 ಕ್ಕೆ ವೇದ ಸಿನಿಮಾ ಎಲ್ಲೆಡೆ ರಿಲೀಸ್
ಕನ್ನಡದ ವೇದ ಸಿನಿಮಾ ಕನ್ನಡದಲ್ಲಿಯೇ ರಿಲೀಸ್ ಆಗುತ್ತಿದೆ. ಇದೇ ಡಿಸೆಂಬರ್​-23 ರಂದು ರಾಜ್ಯದೆಲ್ಲೆಡೆ ವೇದ ಬಿಡುಗಡೆ ಆಗುತ್ತಿದೆ.


ಇದನ್ನೂ ಓದಿ: Serial Actress Marriage: ಅಮ್ಮನ ಪಾತ್ರ ಮಾಡ್ತಿದ್ದ ನಟಿ ಇಷ್ಟು ಚಿಕ್ಕವರಾ? ಮದುವೆ ಜೀವನಕ್ಕೆ ಕಾಲಿಟ್ಟ ಸ್ವಾತಿ ಹೆಚ್ ವಿ


ಈ ಮೂಲಕ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಹಾಗೂ ಸಿನಿ ಪ್ರೇಮಿಗಳಿಗೆ ವೇದನ ಹೊಸದೊಂದು ಕಥೆಯನ್ನೆ ಹೇಳೋಕೆ ಬರ್ತಾಯಿದ್ದಾರೆ. ಹಾಗೇನೆ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮೂರು ಕಾಲಘಟ್ಟದ ಪಾತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆನೂ ಈಗಲೇ ಹುಟ್ಟಿಕೊಂಡಿದೆ.

First published: