ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ) ಅಭಿಮಾನಿಗಳ ಜೊತೆಗೆ ತುಂಬಾ ಫ್ರೆಂಡ್ಲಿ ಆಗಿಯೇ ಇರುತ್ತಾರೆ. ಕೊಂಚ ಕೋಪ ಜಾಸ್ತಿ ಆದ್ರೆ ಅಷ್ಟೇ, ಪ್ರೀತಿಯಿಂದಲೇ ಗದರಿ ಬಿಡ್ತಾರೆ. ಇದು ಶಿವಣ್ಣನ ನೇಚರ್ ಅಂತ ಬಹುತೇಕರಿಗೆ ಗೊತ್ತೇ ಇದೆ. ಈ ಕಾರಣಕ್ಕೋ ಏನೋ, ಶಿವರಾಜ್ ಕುಮಾರ್ ಬಂದಾಗ ಅಭಿಮಾನಿಗಳು ಕೂಗಾಟ-ಕಿರುಚಾಟ (Shiva Rajkumar Fans Craze) ಮಾಡ್ತಾನೇ ಇರ್ತಾರೆ. ಶಿವರಾಜ್ ಕುಮಾರ್ ಅದನ್ನ ನೋಡ್ತಾನೇ ಬಂದಿದ್ದಾರೆ. ಅಭಿಮಾನಿಗಳೂ ಏನೂ ಬದಲಾಗಿಲ್ಲ. ಶಿವರಾಜ್ ಕುಮಾರ್ ಕಂಡು ಖುಷಿಯಿಂದಲೇ ಕೂಗಾಡಿ ಬಿಡ್ತಾರೆ. ಇದಕ್ಕೆ ಕೊಂಚ ಬೇಸರಗೊಂಡ (Shivanna) ಶಿವರಾಜ್ಕುಮಾರ್ ಏನ್ ಮಾಡಿದ್ರು ಗೊತ್ತೇ? ಇಲ್ಲಿದೆ ಓದಿ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸದ್ಯ ವೇದ ಸಿನಿಮಾ ಖುಷಿಯಲ್ಲಿದ್ದಾರೆ. ವೇದ ಸಿನಿಮಾ ಚೆನ್ನಾಗಿಯೇ ಹೋಗುತ್ತಿದೆ. ಕಳೆದ ಶುಕ್ರವಾರ ತೆರೆ ಕಂಡ ಈ ಚಿತ್ರವನ್ನ ಜನ ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ.
ಒಳ್ಳೆ ಸಿನಿಮಾ ಅನ್ನೋ ಅಭಿಪ್ರಾಯವೂ ಮೂಡಿದೆ. ಚಿತ್ರವನ್ನ ನೋಡಿದ ಪ್ರೇಕ್ಷಕರಿಗೆ ಒಂದು ಧನ್ಯವಾದ ಹೇಳಬೇಕು ಎಂದು ಸಿನಿಮಾ ಟೀಮ್ ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಸ್ಟಾರ್ ಕಾಸ್ಟ್ ಎಲ್ಲ ಥಿಯೇಟರ್ಗೆ ವಿಸಿಟ್ ಕೊಡ್ತಾ ಇದೆ.
ಶಿವಣ್ಣನಿಗೆ ಗಾನವಿ-ಅದಿತಿ ಸಾಗರ್ ಸಾಥ್
ವೇದ ಸಿನಿಮಾದಲ್ಲಿ ಹೆಣ್ಣುಮಕ್ಕಳ ಹೋರಾಟದ ಹಾದಿ ಇದೆ. ಅನ್ಯಾಯ ಸಹಿಸೋದು ಬೇಡ, ಅದರ ವಿರುದ್ಧ ಹೋರಾಟ ಮಾಡಲೇಬೇಕು ಅನ್ನೋದು ಇಲ್ಲಿದೆ. ಅದನ್ನ ಅಷ್ಟೇ ಚೆನ್ನಾಗಿಯೇ ಇಲ್ಲಿ ತೋರಿಸಲಾಗಿದೆ.
ಹೆಣ್ಣುಮಕ್ಕಳಿಗೆ ಆಗುವ ಸಮಸ್ಯೆಯನ್ನ ಇಲ್ಲಿ ಅಷ್ಟೇ ಅದ್ಬುತವಾಗಿಯೇ ಹೇಳಲಾಗಿದೆ. ಅದಕ್ಕೆ ಒಂದು ಸರಿಯಾದ ನ್ಯಾಯವನ್ನೂ ಕೊಟ್ಟಿದ್ದಾರೆ. ಅದಕ್ಕೇನೆ ವೇದ ಸಿನಿಮಾ ನೋಡುಗರ ಹೃದಯ ಕದಿಯುತ್ತಿದೆ. ಇಂತಹ ಸಿನಿಮಾ ಬೇಕು ಅನ್ನೋರು ಇದ್ದಾರೆ.
ಮಹಿಳೆಯರಿಗೆ ಕಾನ್ಫಿಡೆನ್ಸ್-ಗಂಡಸರಿಗೆ ಎಚ್ಚರಿಕೆ
ಹೌದು, ವೇದ ಸಿನಿಮಾ ನಿಜಕ್ಕೂ ಗಂಡಸರಿಗೆ ಎಚ್ಚರಿಕೆ ಘಂಟೆಯಾಗಿದೆ. ಮಹಿಳೆಯರಿಗೆ ಕಾನ್ಫಿಡೆನ್ಸ್ ತುಂಬುವ ಕೆಲಸ ಕೂಡ ಮಾಡಿದೆ. ಹಾಗಾಗಿಯೇ ಈ ಚಿತ್ರವನ್ನ ಅನೇಕರು ಮಚ್ಚಿಕೊಂಡಿದ್ದಾರೆ.
ಇದರ ಬಗ್ಗೆ ಇನ್ನಷ್ಟು-ಮತ್ತಷ್ಟು ಅನ್ನೋ ಹಾಗೆ ಅಭಿಮಾನಿಗಳಿಗೆ ಹೇಳಬೇಕು ಅಂತಲೂ ಶಿವಣ್ಣ ಥಿಯೆಟರ್ ಗೆ ಭೇಟಿಕೊಡ್ತಿದ್ದಾರೆ. ಹಾಗೆ ಭೇಟಿಕೊಟ್ಟಾಗಲೇ ಅಭಿಮಾನಿಗಳಿಗೆ ಶಿವಣ್ಣ ಒಂದು ಕಿವಿ ಮಾತು ಹೇಳಿದ್ದಾರೆ. ಅದೇನೂ ಅನ್ನೋದು ಇಲ್ಲಿದೆ ಓದಿ.
ಅಭಿಮಾನ ಎದೆಯಲ್ಲಿರಬೇಕು-ಕಿರುಚಾಡೋದು ಅಲ್ಲ
ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳ ಜೊತೆಗೆ ಫ್ರೆಂಡ್ಲಿ ಆಗಿಯೇ ಇರ್ತಾರೆ. ಅದನ್ನ ತಮ್ಮದೇ ರೀತಿಯಲ್ಲಿಯೇ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಂತಹ ಶಿವರಾಜ್ ಕುಮಾರ್ ಆಗೊಮ್ಮೆ ಈಗೊಮ್ಮೆ ಗದರೋದು ಇದೆ. ಅದರ ಝಲಕ್ ಇದಾಗಿದೆ.
ಶಿವರಾಜ್ ಕುಮಾರ್ ಸದ್ಯ ಥಿಯೇಟರ್ ವಿಸಿಟ್ ಮಾಡುತ್ತಿದ್ದಾರೆ. ಹಾಗೆ ಮೈಸೂರಿನ ಉಡ್ಲ್ಯಾಂಡ್ ಥಿಯೇಟರ್ಗೆ ಭೇಟಿಕೊಟ್ಟಾಗ ಅಭಿಮಾನದ ಖುಷಿಗೆ ಪಾರವೇ ಇರಲಿಲ್ಲ. ಅಷ್ಟೊಂದು ಅಭಿಮಾನಿಗಳು ಸೇರಿ ಶಿವಣ್ಣನನ್ನ ಕಂಡು ಖುಷಿಯಿಂದಲೇ ಕೂಗಾಡಿದ್ದಾರೆ ಚೀರಾಡಿದ್ದಾರೆ.
ಇದನ್ನೂ ಓದಿ: #AskSRK: ಶಾರುಖ್ ಖಾನ್ಗೆ ಏನ್ ಆಗಿದೆ? ಫ್ಯಾನ್ಸ್ಗೆ ಹೀಗಾ ಮಾತಾಡೋದು!
ನಾವು ಯಾತಕ್ಕೆ ಬಂದಿದ್ದೇವೆ ಅಂತ ಹೇಳುತ್ತೇವೆ. ಮೊದಲು ಮಾತನಾಡಲು ಬಿಡ್ರೋ. ಹೀಗೆ ಕಿರುಚಾಡಿದ್ರೆ ಹೇಗೆ, ನಾವು ಯಾಕೆ ಬಂದಿದ್ದೇವೆ ಅನ್ನೋದೆ ನಿಮಗೆ ಗೊತ್ತಾಗೋದಿಲ್ಲ.
ಕಿರುಚಾಡಿದ್ರೆ ಹೇಗೆ? ಅಭಿಮಾನ ಎದೆಯಲ್ಲಿರಬೇಕು, ಕಿರುಚಾಡೊದಲ್ಲ. ಕಿರುಚಾಡಬೇಡಿ ಅಂತಲೇ ಶಿವಣ್ಣ ಸಲಹೆ ಕೊಟ್ಟಿದ್ದಾರೆ. ಹೀಗೆ ತಮ್ಮ ಅಭಿಮಾನಿಗಳಿಗೆ ಶಿವಣ್ಣ ಕೊಟ್ಟ ಸಲಹೆಯ ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ ಅಂತಲೇ ಹೇಳಬಹುದು.
ಇನ್ನು ಥಿಯೇಟರ್ ವಿಸಿಟ್ ನಲ್ಲಿ ಶಿವರಾಜ್ ಕುಮಾರ್ ಅವರಿಗೆ ನಿರ್ದೇಶಕ ಎ.ಹರ್ಷ, ನಟಿಯರಾದ ಗಾನವಿ, ಅದಿತಿ ಸಾಗರ್ ಹಾಗೂ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ