ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Rajkumar Theater Visit) ಕುಮಾರ್ ಮತ್ತ ಹುಬ್ಬಳ್ಳಿಗೆ ಬಂದಿದ್ದರು. ಹಾಗೆ ಹುಬ್ಬಳ್ಳಿಗೆ ಬಂದಾಗ ನೇರವಾಗಿ ಈ ಸಲ ಅಪ್ಸರಾ ಥಿಯೇಟರ್ಗೆ (Shiva Rajkumar in Hubballi) ಆಗಮಿಸಿದ್ದರು. ಇದಕ್ಕೆ ಕಾರಣವೂ ಇದೆ. ಇದೇ ಥಿಯೇಟರ್ ಅಂಗಳದಲ್ಲಿಯೇ (Shiva Rajkumar Visits Apsara) ತಮ್ಮ ಹುಬ್ಬಳ್ಳಿ ನಂಟಿನ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳನ್ನ ಹಂಚಿಕೊಂಡರು. ಆನಂದ್ ಚಿತ್ರ ಆ ದಿನಗಳನ್ನ ಇಲ್ಲಿ ನೆನಪಿಸಿಕೊಂಡ್ರು. ಹೀಗೆ ಹುಬ್ಬಳ್ಳಿ ಊರು ತಮಗೆ ಎಷ್ಟು ವಿಶೇಷ ಅನ್ನೋದನ್ನ ಹೇಳ್ತಾ ಹೋದ್ರು. ಹುಬ್ಬಳ್ಳಿಯ ಸುಜಾತಾ ಥಿಯೇಟರ್ನಲ್ಲಿ ತಮ್ಮ (Shivanna in Hubballi) ಅಭಿನಯದ ಆನಂದ್ ಚಿತ್ರವೂ ಬಂದಿತ್ತು ಅನ್ನೋದನ್ನ ಕೂಡ ಇಲ್ಲಿ ನೆನಪಿಸಿಕೊಂಡ್ರು. ಇದೆಲ್ಲ ಅದ್ಮೇಲೆ ಮುಂದೇನ್ ಆಯಿತು ಗೊತ್ತೇ? ಇಲ್ಲಿದೆ ಓದಿ.
ಹ್ಯಾಟ್ರಿಕ್ ಹೀರೋ ಶಿವಣ್ಣ-ಸಿದ್ದಾರೂಢ ಮಠದ ನಂಟು
ಶಿವರಾಜ್ ಕುಮಾರ್ ಹುಬ್ಬಳ್ಳಿಗೆ ಬಂದಿದ್ದರು. ತಮ್ಮ ನಿರ್ಮಾಣದ ವೇದ ಚಿತ್ರದ ಥಿಯೇಟರ್ ವಿಸಿಟ್ಗೆ ಅಪ್ಸರಾ ಥಿಯೇಟರ್ಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಚಿತ್ರ ತಂಡವನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದರು.
ಇದೇ ವೇಳೆ ವೇದ ಚಿತ್ರದ ನಾಯಕ ವೇದ ತಮ್ಮ ಹಳೆ ದಿನಗಳಿಗೆ ಜಾರಿದರು. ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠದಲ್ಲಿ ತಮ್ಮ ಅಜ್ಜಿ ಇದ್ದರು. ಬಹಳ ದಿನಗಳವರೆಗೂ ಅವರು ಇಲ್ಲಿಯೇ ಇದ್ದರು. ಹೀಗೆ ನಮ್ಮ ಫ್ಯಾಮಿಲಿಗೂ ಸಿದ್ದಾರೂಢ ಮಠಕ್ಕೂ ಅಂದಿನಿಂದಲೂ ಒಂದು ನಂಬಿಕೆ ಇದೇ ಎಂದು ಹೇಳಿಕೊಂಡ್ರು.
ಆನಂದ್ ಸಿನಿಮಾ ನೆನಪಿಸಿಕೊಂಡ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಮೊದಲ ಸಿನಿಮಾ ಆನಂದ್ ಚಿತ್ರವನ್ನೂ ನೆನಪಿಸಿಕೊಂಡ್ರು. ಹುಬ್ಬಳ್ಳಿಗೆ ಆಗಾಗ ಬರ್ತಾನೇ ಇರುತ್ತವೆ. ಹುಬ್ಬಳ್ಳಿಯ ಸುಜಾತಾ ಥಿಯೇಟರ್ನಲ್ಲಿ ಆನಂದ್ ಸಿನಿಮಾ ರಿಲೀಸ್ ಆಗಿತ್ತು. ಆಗಲೂ ಇಲ್ಲಿಗೆ ಬಂದಿದ್ದೇ ಅಂತಲೂ ಶಿವಣ್ಣ ಹೇಳಿಕೊಂಡ್ರು.
ಹುಬ್ಬಳ್ಳಿ ತಮಗೆ ಸದಾ ವಿಶೇಷವಾದ ಊರು ಅನ್ನೋದನ್ನ ತಮ್ಮ ಮಾತಿನಲ್ಲಿಯೇ ಹೇಳಿದರು. ಹಳೆ ದಿನಗಳನ್ನ ನೆನಪಿಸಿಕೊಂಡು ಖುಷಿಪಟ್ಟರು. ಹೀಗೆ ಶಿವಣ್ಣ ಅಪ್ಸರಾ ಥಿಯೇಟ್ನಲ್ಲಿ ಹಳೆ ದಿನಗಳನ್ನ ರೀಕಾಲ್ ಮಾಡಿಕೊಂಡರು.
ಆದರೆ, ಅಭಿಮಾನಿಗಳು ಸುಮ್ನೆ ಇರಬೇಕಲ್ಲ. ಅಣ್ಣ ಒಂದು ಡ್ಯಾನ್ಸ್ ಅಂತಲೇ ಬೇಡಿಕೆ ಇಟ್ಟರು. ಆದರೆ ಶಿವಣ್ಣ ಡ್ಯಾನ್ಸ್ ಮಾಡಲಿಲ್ಲ. ಬದಲಾಗಿ, ವೇದ ಚಿತ್ರದ ತಾವೇ ಹಾಡಿದ ಪುಷ್ಪ ಹಾಡನ್ನ ಹಾಡಿಯೇ ಬಿಟ್ಟರು.
ಶಿವಣ್ಣ ಪಕ್ಕದಲ್ಲಿಯೇ ನಿಂತು ಗಿಲ್ಲಕ್ಕೋ ಶಿವ ಅದಿತಿ ಸಾಗರ್
ಕನ್ನಡದ ವೇದ ಸಿನಿಮಾದಲ್ಲಿ ಗಿಲ್ಲಕ್ಕೋ ಶಿವ ಅನ್ನೋ ಫುಲ್ ಎನರ್ಜಿಯ ಒಂದು ಹಾಡು ಇದೆ. ಇದರನ್ನ ತೆಲುಗು ಗಾಯಕಿ ಮಂಗ್ಲಿ ಹಾಡಿದ್ದಾರೆ. ಆದರೆ ಹುಬ್ಬಳ್ಳಿಯ ಅಪ್ಸರಾ ಥಿಯೇಟರ್ ನಲ್ಲಿ ಅದಿತಿ ಸಾಗರ್ ಹಾಡಿದರು. ಹಾಡಿದ ಬಳಿಕ ಅಲ್ಲಿ ಬೇರೆ ಲೆವಲ್ನಲ್ಲಿ ಎನರ್ಜಿನೇ ಕ್ರಿಯೇಟ್ ಆಗಿ ಬಿಡ್ತು.
ಪುಷ್ಪ ಪಾತ್ರಧಾರಿ ಗಾನವಿ ಲಕ್ಷ್ಮಣ ಕೂಡ ಇಲ್ಲಿಗೆ ಆಗಮಿಸಿದ್ದರು. ಎಂದಿನಂತೆ ತಮ್ಮ ಸಾಫ್ಟ್ ಶೈಲಿಯಲ್ಲಿಯೇ ಗಾನವಿ ಮಾತನಾಡಿದರು. ಆ ಬಳಿಕ ಚಿತ್ರದ ಡೈರೆಕ್ಟರ್ ಹರ್ಷಾ ಮಾತನಾಡಿದರು.
ಅಪ್ಸರಾ ಥಿಯೇಟರ್ನಲ್ಲಿ ಜುಂಜಪ್ಪನ ಹಾಡಿನ ಗುಂಗು
ವೇದ ಚಿತ್ರದಲ್ಲಿ ಇನ್ನೂ ಒಂದು ಹಾಡಿದೆ. ಇದು ಸದ್ಯದ ಸಂಚಲನವೇ ಆಗಿದೆ. ಇದನ್ನ ಜಾನಪದ ಗಾಯಕ ಮೋಹನ್ ಕುಮಾರ್ ಹಾಡಿದ್ದಾರೆ.
ಅವರೂ ಕೂಡ ಥಿಯೇಟರ್ ವಿಸಿಟ್ಗೆ ಶಿವಣ್ಣನ ಜೊತೆಗೆ ಬಂದಿದ್ದರು. ಹಾಗೇನೆ ವೇದಿಕೆ ಮೇಲೆ ಜುಂಜಪ್ಪನ ಹಾಡನ್ನ ಹಾಡಿದರು. ಅಲ್ಲಿದ್ದ ಜನರನ್ನ ಕೆಲ ಸಮಯ ಎಂಟರಟೈನ್ ಮಾಡಿದರು.
ಹೀಗೆ ಎಲ್ಲರೂ ಮಾತನಾಡಿದ್ರು. ತಮ್ಮ ವೇದ ಚಿತ್ರವನ್ನ ನೋಡಲು ಥಿಯೇಟರ್ಗೆ ಬಂದಿದ್ದ ಜನರಿಗೆ ತಮ್ಮದೇ ರೀತಿಯಲ್ಲಿ ಧನ್ಯವಾದ ತಿಳಿಸಿ ಹೊರಟು ಬಿಟ್ಟರು. ಜನ ಕೂಡ ಇವರ ಆಗಮನದಿಂದ ತುಂಬಾ ಖುಷಿಯಲ್ಲೂ ಇದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ