• Home
  • »
  • News
  • »
  • entertainment
  • »
  • Shiva Rajkumar: ಮತ್ತೆ ಮಚ್ಚು ಹಿಡಿದ ಶಿವಣ್ಣ! ಇದ್ಯಾವ ಸಿನಿಮಾ ಗೊತ್ತೇ?

Shiva Rajkumar: ಮತ್ತೆ ಮಚ್ಚು ಹಿಡಿದ ಶಿವಣ್ಣ! ಇದ್ಯಾವ ಸಿನಿಮಾ ಗೊತ್ತೇ?

ಹ್ಯಾಟ್ರಿಕ್ ಹೀರೋ ವೇದ ಚಿತ್ರದಲ್ಲಿ ಮಚ್ಚು ಹಿಡಿದದ್ದ್ಯಾಕೆ?

ಹ್ಯಾಟ್ರಿಕ್ ಹೀರೋ ವೇದ ಚಿತ್ರದಲ್ಲಿ ಮಚ್ಚು ಹಿಡಿದದ್ದ್ಯಾಕೆ?

ಶಿವರಾಜ್ ಕುಮಾರ್ ಮಚ್ಚು ಹಿಡಿದ್ರೆ ಸಿನಿಮಾ ಗೆಲ್ಲುತ್ತದೆ ಅನ್ನೋ ನಂಬಿಕೆ ಇದೆ. ಅದು ಬಿಡಿ ಈಗ ಶಿವಣ್ಣ ತಮ್ಮ ನಿರ್ಮಾಣದ ಚಿತ್ರಕ್ಕೇನೆ ಮಚ್ಚು ಹಿಡಿದಿದ್ದಾರೆ. ಆ ಸಿನಿಮಾ ಈಗಾಗಲೇ ಭಾರಿ ಗಮನ ಸೆಳೆಯುತ್ತಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಮತ್ತೊಮ್ಮೆ ಮಚ್ಚು ಹಿಡಿದಿದ್ದಾರೆ. ಇಡೀ ಕನ್ನಡ ಇಂಡಸ್ಟ್ರಿಗೆ ಮಚ್ಚು ಹಿಡಿಯೋದನ್ನ ಕಲಿಸಿಕೊಟ್ಟ ಗುರು ಯಾರು? ಈ ಒಂದು ಪ್ರಶ್ನೆಗೆ ಶಿವರಾಜ್ ಕುಮಾರ್ ಹೆಸರೇ ಬರುತ್ತದೆ. ಶಿವಣ್ಣ ಮಚ್ಚು ಹಿಡಿದು ಓಂ (Om Cinema) ಸಿನಿಮಾದಲ್ಲಿ ಅಬ್ಬರಿಸಿದ ಮೇಲೆ ಅದೆಷ್ಟೋ ನಾಯಕರು ಮಚ್ಚು ಹಿಡಿದು ಸಿಲ್ವರ್ ಸ್ಕ್ರೀನ್ ಮೇಲೆ ಹೊಡೆದಾಡಿದ್ರು. ಆದರೆ ಅದು ಶಿವರಾಜ್ ಕುಮಾರ್ ಶೈಲಿಗೆ ಹೋಲಿಕೆ ಆಗಲೇ ಇಲ್ಲ. ಶಿವರಾಜ್ ಕುಮಾರ್​ಗೆ ಶಿವರಾಜ್ ಕುಮಾರ್ ಸಾಟಿ ಅನ್ನೋ ಹಾಗೆ ಶಿವರಾಜ್ ಕುಮಾರ್ ಮಚ್ಚು ಮಾಂತ್ರಿಕನೆ ಆಗಿದ್ದಾರೆ. ಈಗ ಮತ್ತೊಮ್ಮೆ ಶಿವರಾಜ್ ಕುಮಾರ್ ಮಚ್ಚು ಹಿಡಿದಿದ್ದಾರೆ. ಈ ಸಿನಿಮಾದ (Cinema Poster) ಪೋಸ್ಟರ್ ರಿಲೀಸ್ ಆಗಿದೆ. 

ಶಿವರಾಜ್ ಕುಮಾರ್ ಮಚ್ಚು ಹಿಡಿಯೋ ಗತ್ತೇ ಬೇರೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸುಮ್ನೆ ಹಾಗೆ ಮಚ್ಚು ಹಿಡಿಯೋದು ಕಡಿಮೆ. ಎಲ್ಲ ಚಿತ್ರದಲ್ಲೂ ಮಚ್ಚು ಹಿಡಿದುಕೊಂಡು ಓಡಾಡೋದು ಇಲ್ಲ ಬಿಡಿ.


ಶಿವರಾಜ್ ಕುಮಾರ್ ಈ ವಿಷಯದಲ್ಲಿ ಕೊಂಚ ಚೂಜಿನೇ ಅನಿಸುತ್ತದೆ. ಆದರೆ ಕಥೆಯ ಓಟಕ್ಕೆ ಸೀನ್​ ನ ಸರಿಯಾದ ಸಮಯಕ್ಕೆ ಮಚ್ಚು ಹಿಡಿದು ಪಾತ್ರವಾಗಿ ತಮ್ಮ ಗತ್ತು ತೋರಿಸಿದ್ದು ಇದೆ. ಓಂ ಸಿನಿಮಾದ ಮಚ್ಚು ಹಿಡಿಯೋ ಸೀನ್ ನೋಡಿದ್ರೆ ಅದರ ಗತ್ತು ಮತ್ತು ಗೈರತ್ತು ಎಲ್ಲರಿಗೂ ಗೊತ್ತಾಗುತ್ತದೆ.


ಈಗ ಮತ್ತೆ ಮಚ್ಚು ಹಿಡಿದ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಮಚ್ಚು ಹಿಡಿದ್ರೆ ಸಿನಿಮಾ ಗೆಲ್ಲುತ್ತದೆ ಅನ್ನೋ ನಂಬಿಕೆ ಇದೆ. ಅದು ಬಿಡಿ ಈಗ ಶಿವಣ್ಣ ತಮ್ಮ ನಿರ್ಮಾಣದ ಚಿತ್ರಕ್ಕೇನೆ ಮಚ್ಚು ಹಿಡಿದಿದ್ದಾರೆ. ಆ ಸಿನಿಮಾ ಈಗಾಗಲೇ ಭಾರಿ ಗಮನ ಸೆಳೆಯುತ್ತಿದೆ.


Kannada Actor Shivaraj Kumar Vedha Film New Teaser Will Release Soon
ವೆಪನ್ ಆಫ್ ವೇದ ವಿಶೇಷ ಟೀಸರ್ ರಿಲೀಸ್


ಕನ್ನಡದ ವೇದ ಸಿನಿಮಾ ಸೂಪರ್ ಆಗಿಯೇ ಬಂದಿದೆ. ಗಾಂಧಿನಗರದಲ್ಲೂ ಈ ಸಿನಿಮಾ ಬಗ್ಗೆ ಒಂದು ಕುತೂಹಲದ ನೋಟ ಇದೆ. ಅದರಲ್ಲೂ ಇದು 1960 ಕಥೆಯುಳ್ಳ ಸಿನಿಮಾ ಅಲ್ವೇ? ಅದಕ್ಕಾಗಿಯೇ ಶಿವರಾಜ್ ಕುಮಾರ್ ಇಲ್ಲಿ ಕಂಪ್ಲೀಟ್ ಬದಲಾಗಿದ್ದಾರೆ.


ಇದನ್ನೂ ಓದಿ: Matte Mayamruga: ಮಾಯಾಮೃಗದ ಶಾಸ್ತ್ರಿಗಳು ಎಲ್ಲಿ ಹೋದ್ರು? ಸೀರಿಯಲ್​ಗೆ ಬರಲ್ವಾ?


ಹ್ಯಾಟ್ರಿಕ್ ಹೀರೋ ವೇದ ಚಿತ್ರದಲ್ಲಿ ಮಚ್ಚು ಹಿಡಿದದ್ದ್ಯಾಕೆ?
ವೇದ ಸಿನಿಮಾ ಒಂದು ರೀತಿ ಕ್ರಾಂತಿಕಾರಿ ಸಿನಿಮಾ ಆಗಿದೆ. ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಒಬ್ಬ ಹೋರಾಟಗಾರನಂತೆ ಬಿಂಬಿತವಾಗಿದ್ದಾರೆ. ಸ್ವತಂತ್ರ ಸಿಕ್ಕ ಬಳಿಕ ನಡೆಯೋ ಕಥೆಯನ್ನ ಇದು ಹೊಂದಿದೆ ಅಂತಲೇ ಈಗಲೇ ಹೇಳಬಹುದು.


ಈ ಸಿನಿಮಾ ಮೂಲಕ ಶಿವರಾಜ್ ಕುಮಾರ್ ಮಹಿಳೆಯರಿಗೂ ಅತಿ ಹೆಚ್ಚು ಇಷ್ಟ ಆಗಲಿದ್ದಾರೆ. ಮಹಿಳೆಯರ ಪರವಾಗಿಯೇ ಶಿವಣ್ಣ ಹೋರಾಡುತ್ತಾರೆ ಅದನ್ನ ಈ ಹಿಂದಿನ ಪೋಸ್ಟರ್​ಗಳು ತೋರಿಸಿಕೊಟ್ಟಿವೆ ಎನ್ನಲಾಗ್ತಿದೆ.


Kannada Actor Shivaraj Kumar Vedha Film New Teaser Will Release Soon
ಈಗ ಮತ್ತೆ ಮಚ್ಚು ಹಿಡಿದ ಶಿವರಾಜ್ ಕುಮಾರ್


ಅದರಂತೆ ಸಿನಿಮಾದಲ್ಲಿ ಶಿವಣ್ಣ ಮಚ್ಚು ಹಿಡಿದು ಅಬ್ಬರಿಸಲಿದ್ದಾರೆ ಅನ್ನೋದನ್ನ ಇನ್ನೂ ಒಂದು ಪೋಸ್ಟರ್ ಈಗಲೇ ಹೇಳುತ್ತಿದೆ. ಹಾಗೇನೆ ಈಗ ಹೊರಬಂದ ಫೋಸ್ಟರ್ ಅಷ್ಟೇ ಜಬರ್​ದಸ್ತ್ ಆಗಿಯೇ ಇದೆ.


ವೆಪನ್ ಆಫ್ ವೇದ ವಿಶೇಷ ಟೀಸರ್ ರಿಲೀಸ್
ವೇದ ಸಿನಿಮಾದ ಒಂದು ವಿಶೇಷ ಟೀಸರ್ ರಿಲೀಸ್ ಆಗುತ್ತಿದೆ. ಇದೇ ಶುಕ್ರವಾರ ಸಂಜೆ 7 ಗಂಟೆಗೆ ವೆಪನ್ ಆಫ್ ವೇದ ಟೀಸರ್ ಹೊರಗೆ ಬರುತ್ತಿದೆ. ಇದರಲ್ಲಿ ಶಿವಣ್ಣ ಬಳಸಿದ ವೆಪನ್​​ಗಳ ಅಬ್ಬರ ತೋರಿಸ್ತಾರೆ ಅನಿಸುತ್ತದೆ. ಇದನ್ನ ಹೇಳಲಿಕ್ಕೆ ಡೈರೆಕ್ಟರ್ ಈಗೊಂದು ವಿಶೇಷ ಪೋಸ್ಟರ್ ಕೂಡ ಮಾಡಿದ್ದಾರೆ.


ಈ ಫೋಸ್ಟರ್​ ನಲ್ಲಿ ಶಿವರಾಜ್ ಕುಮಾರ್ ರೋಷಾ-ವೇಷದಲ್ಲಿಯೇ ಕಾಣಿಸಿಕೊಂಡಿದ್ದಾರೆ. ತಮ್ಮ ಮುಖದ ಎದುರು ಮಚ್ಚನ್ನ ಹಿಡಿದು ಆಕ್ರೋಶದಿಂದಲೂ ನೋಡಿದ್ದಾರೆ.
ಈ ಒಂದು ಫೋಸ್ಟರ್ ಮೂಲಕ ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದ ಇನ್ನೂ ಒಂದು ರೂಪ ಕಾಣಿಸಿಕೊಂಡಿದೆ. ಇಡೀ ಸಿನಿಮಾವನ್ನ ನೋಡಲು ನೀವು ಇದೇ ವರ್ಷ ಡಿಸೆಂಬರ್​-23 ರವರೆಗೂ ಕಾಯಲೇಬೇಕಾಗುತ್ತಿದೆ.


Kannada Actor Shivaraj Kumar Vedha Film New Teaser Will Release Soon
ಮತ್ತೆ ಮಚ್ಚು ಹಿಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್


ಯಾಕೆಂದ್ರೆ, ವೇದ ಸಿನಿಮಾ ಡಿಸೆಂಬರ್​-23 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಆ ದಿನ ಈ ಸಿನಿಮಾದ ಅಬ್ಬರ ಬೇರೆನೆ ಇರುತ್ತದೆ. ಹಾಗಂತ ನಾವು ಹೇಳ್ತಿಲ್ಲ. ಸಿನಿಮಾ ಪೋಸ್ಟರ್​ಗಳು ಆ ಒಂದು ದೊಡ್ಡ ಭರವಸೆ ಮೂಡಿಸುತ್ತಿವೆ. ವೇದ ಸಿನಿಮಾ ಶಿವರಾಜ ಕುಮಾರ್ ಅಭಿನಯದ 125ನೇ ಚಿತ್ರವೇ ಆಗಿದೆ.


ಇದನ್ನೂ ಓದಿ: Samantha: ನಾನಿನ್ನೂ ಸತ್ತಿಲ್ಲ! ಕಾಯಿಲೆ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಸಮಂತಾ


ಇದನ್ನ ಶಿವರಾಜ್ ಕುಮಾರ್ ನಿರ್ಮಾಣ ಸಂಸ್ಥೆ ನಿರ್ಮಿಸಿದೆ. ಎ.ಹರ್ಷ ಡೈರೆಕ್ಷನ್ ಮಾಡಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.


ವಿಶೇಷವೆಂದ್ರೆ ಈ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿ ಆಗಿದ್ದಾರೆ. ಜಿ ಸ್ಟುಡಿಯೋಸ್ ಈ ಚಿತ್ರದ ನಿರ್ಮಾಣದಲ್ಲಿ ಸಾಥ್ ಕೊಟ್ಟಿದೆ.

First published: