Shiva Rajkumar: ತೆಲುಗು ಸಿನಿಮಾದಲ್ಲಿ ಶಿವಣ್ಣ! ಯಾರ ಜೊತೆ? ಇಲ್ಲಿದೆ ಫುಲ್ ಡೀಟೆಲ್ಸ್

ಟಾಲಿವುಡ್​ಗೆ ಶಿವಣ್ಣನ ಭರ್ಜರಿ ರೀ ಎಂಟ್ರಿ!

ಟಾಲಿವುಡ್​ಗೆ ಶಿವಣ್ಣನ ಭರ್ಜರಿ ರೀ ಎಂಟ್ರಿ!

ಕನ್ನಡದ ವೇದ ಸಿನಿಮಾ ಬೇರೆ ಭಾಷೆಯಲ್ಲಿ ರಿಲೀಸ್ ಆಗುತ್ತದೆ ಅನ್ನೋದನ್ನು ಶಿವರಾಜ್​ಕುಮಾರ್ ಹೇಳಿಕೊಂಡಿದ್ದರು. ಕನ್ನಡ ವೇದ ಚಿತ್ರದ ಪ್ರಮೋಷನ್ ದಿನಗಳಲ್ಲಿ ಈ ವಿಷಯವನ್ನ ಸ್ವತಃ ಶಿವಣ್ಣ ಹೇಳಿದ್ದರು. ಅದರಂತೆ ಕನ್ನಡದ ವೇದ ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಮತ್ತೊಮ್ಮೆ ಟಾಲಿವುಡ್​​ಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ಶಿವಣ್ಣ, ಬಾಲಯ್ಯನ ಸಿನಿಮಾದಲ್ಲೂ ಅಭಿನಯಿಸಿದ್ದರು. ಅದಕ್ಕೂ ಮೊದಲು ಟಾಲಿವುಡ್​ (Tollywood) ಚಿತ್ರರಂಗದಲ್ಲಿ ಶಿವಣ್ಣನ (Shivanna) ನಂಟು ಇದ್ದೇ ಇದೆ. ಆದರೆ ಈಗ ಶಿವಣ್ಣ ಬೇರೆ ಚಿತ್ರದಲ್ಲಿ ಅಭಿನಯಿಸೋಕೆ ಹೋಗ್ತಿಲ್ಲ. ತಮ್ಮದೇ ಒಂದು ವಿಶೇಷ ಸಿನಿಮಾ ತೆಗೆದುಕೊಂಡು ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರ ಈಗಾಗಲೇ ಕನ್ನಡದಲ್ಲಿ ಭಾರೀ ಸೌಂಡ್ ಮಾಡಿದೆ. ಈ ಚಿತ್ರದಲ್ಲಿ ಶಿವನ ಖದರ್ (Tollywood Cinema) ಜೋರಾಗಿಯೇ ಬಂದಿದೆ. ಜನ ಕೂಡ ಈ ಚಿತ್ರವನ್ನ ಮೆಚ್ಚಿಕೊಂಡಾಡಿದ್ದಾರೆ.  ಟಾಲಿವುಡ್​ನಲ್ಲೂ ಈ ಚಿತ್ರ ಮೋಡಿ ಮಾಡುತ್ತದೆ ಎಂಬ ಭರವಸೆ ಈಗಲೇ ಶುರು ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.


ಟಾಲಿವುಡ್​ಗೆ ಶಿವಣ್ಣನ ಭರ್ಜರಿ ರೀ ಎಂಟ್ರಿ!


ಟಾಲಿವುಡ್ ಚಿತ್ರರಂಗ ಭರ್ಜರಿಯಾಗಿದೆ. ಇಲ್ಲಿ ನಿರ್ಮಾಣ ಆಗೋ ಚಿತ್ರಗಳು ದೊಡ್ಡ ಬಜೆಟ್ ಚಿತ್ರಗಳೇ ಆಗಿರುತ್ತವೆ. ಇಂತಹ ಈ ಇಂಡಸ್ಟ್ರಿಯಲ್ಲಿ ಕನ್ನಡದ ಕಲಾವಿದರೂ ಈಗೀಗ ಮಿಂಚುತ್ತಿದ್ದಾರೆ. ಡಾಲಿ ಧನಂಜಯ್, ದುನಿಯಾ ವಿಜಯ ಇಲ್ಲಿ ಹೆಸರು ಮಾಡಿದ್ದಾರೆ.


Kannada Actor Shiva Rajkumar Telugu Vedha Cinema going to Release soon
ಟಾಲಿವುಡ್​​ಗೆ ಮತ್ತೆ ಕಾಲಿಡ್ತಿರೋ ಹ್ಯಾಟ್ರಿಕ್ ಹೀರೋ ಶಿವಣ್ಣ


ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಇವರೆಲ್ಲರಿಗಿಂತಲೂ ಮೊದಲೇ ಅಭಿನಯಿಸಿ ಬಂದಿದ್ದಾರೆ. ಟಾಲಿವುಡ್​​ನ ಬಾಲಯ್ಯ ಅಭಿನಯದ ಗೌತಮಿ ಪುತ್ರ ಶಾತಕರ್ಣಿ ಚಿತ್ರದಲ್ಲಿ ಶಿವಣ್ಣ ಕ್ಯಾಮಿಯೋ ರೋಲ್ ಮಾಡಿದ್ದರು.




ಟಾಲಿವುಡ್​ನ ಯಾವ ಚಿತ್ರದಲ್ಲಿ ಶಿವಣ್ಣನ ಅಭಿನಯ
ಟಾಲಿವುಡ್​ನಲ್ಲಿ ಶಿವರಾಜ್​ ಕುಮಾರ್ ಅಭಿನಯಿಸೋದು ಪಕ್ಕಾ ಆಗಿದೆ. ಹಾಗೆ ಒಪ್ಪಿಕೊಂಡಿರೋ ಈ ಚಿತ್ರದ ಕಥೆ ಕನ್ನಡದಲ್ಲಿ ಈಗಾಗಲೇ ಹಿಟ್ ಆಗಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಭರ್ಜರಿಯಾಗಿಯೇ ಅಭಿನಯಿಸಿದ್ದಾರೆ. ಜನರ ಮನಸು ಕೂಡ ಗೆದ್ದಿದ್ದಾರೆ.


ಹೌದು, ಶಿವರಾಜ್​ ಕುಮಾರ್ ಟಾಲಿವುಡ್​ಗೆ ತಮ್ಮ ವೇದ ಚಿತ್ರವನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ದಿಲ್ ಕದ್ದ ಶಿವರಾಜ್​ ಕುಮಾರ್ ಈಗ ತಮ್ಮ ನಿರ್ಮಾಣದ ವೇದ ಸಿನಿಮಾವನ್ನ ಟಾಲಿವುಡ್​ನಲ್ಲೂ ರಿಲೀಸ್ ಮಾಡುತ್ತಿದ್ದಾರೆ.


ಟಾಲಿವುಡ್​ನ ತೆಲುಗು ಭಾಷೆಯಲ್ಲಿ ವೇದ ಚಿತ್ರ ರಿಲೀಸ್


ಕನ್ನಡದ ವೇದ ಸಿನಿಮಾ ಬೇರೆ ಭಾಷೆಯಲ್ಲಿ ರಿಲೀಸ್ ಆಗುತ್ತದೆ ಅನ್ನೋದನ್ನ ಶಿವರಾಜ್​ಕುಮಾರ್ ಹೇಳಿಕೊಂಡಿದ್ದರು. ಕನ್ನಡ ವೇದ ಚಿತ್ರದ ಪ್ರಮೋಷನ್ ದಿನಗಳಲ್ಲಿ ಈ ವಿಷಯವನ್ನ ಸ್ವತಃ ಶಿವಣ್ಣ ಹೇಳಿಕೊಂಡಿದ್ದರು. ಅದರಂತೆ ಕನ್ನಡದ ವೇದ ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.


ಕನ್ನಡದಲ್ಲಿ ವೇದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈ ಚಿತ್ರದ ಮೂಲಕ ಶಿವಣ್ಣ ಕನ್ನಡದ ಪ್ರೇಕ್ಷಕರಿಗೆ ಹೊಸ ರೀತಿ ಕಾಣಿಸಿಕೊಂಡರು. ಜನರ ಹೃದಯದಲ್ಲಿ ಒಂದು ಜಾಗೃತಿ ಕೂಡ ಮೂಡಿಸಿದ್ದರು.


ಕನ್ನಡದಲ್ಲಿ 50 ದಿನ ಪೂರೈಸಿದ ವೇದ ಸಿನಿಮಾ


ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಅಭಿನಯದ ವೇದ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಬಹು ನಿರೀಕ್ಷೆಯೊಂದಿಗೆ ಡಿಸೆಂಬರ್-23 ರಂದು ರಾಜ್ಯದೆಲ್ಲೆಡೆ ವೇದ ರಿಲೀಸ್ ಆಗಿತ್ತು. ಒಳ್ಳೆ ಓಪನಿಂಗ್​ನೊಂದಿಗೆ ಕನ್ನಡ ನಾಡಿನ ಜನರ ಹೃದಯವನ್ನ ಕನ್ನಡದ ವೇದ ಗೆದ್ದೆ ಬಿಟ್ಟಿತ್ತು.


Kannada Actor Shiva Rajkumar Telugu Vedha Cinema going to Release soon
ಟಾಲಿವುಡ್​ನ ಯಾವ ಚಿತ್ರದಲ್ಲಿ ಶಿವಣ್ಣನ ಅಭಿನಯ


ತೆಲುಗು ಭಾಷೆಯಲ್ಲಿ ವೇದ ಸಿನಿಮಾ ಅತೀ ಶೀಘ್ರದಲ್ಲಿ ರಿಲೀಸ್
ಭಜರಂಗಿ ಚಿತ್ರ ಖ್ಯಾತಿಯ ನಿರ್ದೇಶಕ ಎ.ಹರ್ಷ ನಿರ್ದೇಶನದ ಈ ವೇದ ಸಿನಿಮಾ ಈಗ ಟಾಲಿವುಡ್​ನಲ್ಲೂ ರಿಲೀಸ್ ಆಗುತ್ತಿದೆ. ಆದರೆ, ತೆಲುಗು ಭಾಷೆಯಲ್ಲಿ ವೇದ ಚಿತ್ರ ಯಾವ ದಿನ ರಿಲೀಸ್ ಆಗುತ್ತದೆ ಅನ್ನೋ ಡೇಟ್ ಮಾತ್ರ ಇನ್ನೂ ರಿವೀಲ್ ಆಗಿಲ್ಲ.


ಇದನ್ನೂ ಓದಿ:  Shiva Rajkumar: ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಎನರ್ಜಿಗೆ ಸಾಟಿನೇ ಇಲ್ಲ; ಶಿವಣ್ಣ ಕೈಯಲ್ಲಿರುವ ಸಿನಿಮಾಗಳ ಲಿಸ್ಟ್​?


ಆದರೆ ಟಾಲಿವುಡ್​ನಲ್ಲೂ ದೊಡ್ಡಮಟ್ಟದಲ್ಲಿಯೇ ತೆಲುಗು ವೇದ ಸಿನಿಮಾ ರಿಲೀಸ್ ಆಗುತ್ತದೆ. ಈಗಾಗಲೇ ಎಲ್ಲ ಸಿದ್ಧತೆ ನಡೆಯುತ್ತಿದೆ ಅನ್ನೋ ಮಾಹಿತಿ ಕೂಡ ಇದೆ. ಒಟ್ಟಾರೆ, ಶಿವರಾಜ್​ಕುಮಾರ್​ ತಮ್ಮ ವೇದ ಚಿತ್ರದ ಮೂಲಕ ಟಾಲಿವುಡ್​ಗೆ ಗ್ರ್ಯಾಂಡ್​ ಎಂಟ್ರಿ ಕೊಡ್ತಿದ್ದಾರೆ ಅನ್ನೋದು ಅಷ್ಟೇ ವಿಶೇಷವಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು