ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shiva Rajkumar) ಎಲ್ಲೆ ಹೋದ್ರೂ ಅಪ್ಪು ಅವರ ಜೊತೆಗೇನೆ ಇರ್ತಾರೆ. ಪೋಸ್ಟರ್ ರೂಪದಲ್ಲೋ, ಮಾತಿನಲ್ಲೋ, ಪತ್ರಕರ್ತರು ಕೇಳೋ ಪ್ರಶ್ನೆಯಲ್ಲೋ ಒಟ್ಟು ಪುನೀತ್ ರಾಜಕುಮಾರ್ ಸದಾ ಶಿವಣ್ಣನ (Shivanna) ಎದುರು ಹೀಗೆ ಬರ್ತಾನೇ ಇರ್ತಾರೆ. ಅಪ್ಪು ಎಂದೆಂದೂ ಅಮರ ಅನ್ನೋದು ಈ ಮೂಲಕವೇ ತಿಳಿಯುತ್ತದೆ. ಅಭಿಮಾನಿಗಳ ಮನದಲ್ಲಿರೋ ಅಪ್ಪು ಯಾವತ್ತೂ ಮರೆಯಾಗೋದಿಲ್ಲ. ಪವರ್ ಸಂಚಲನ (Power Star Puneeth Rajkumr) ಅಂದ್ರೆ ಅದೇ ಅಲ್ವೇ? ಪುನೀತ್ ಡ್ಯಾನ್ಸ್ ಮಾಡೋಕೆ ನಿಂತರೇ ಯಾರಿಗೂ ಸಾಟಿನೇ ಇಲ್ಲ. ಅವರಿಗೆ ಅವರೇ ಸಾಟಿ ಅನ್ನೋ ಸತ್ಯ ಗೊತ್ತಿದೆ. ಎಲ್ಲ ಇಂಡಸ್ಟ್ರಿಯಲ್ಲಿ ಅಪ್ಪು ರೀತಿ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡೋ (Powerful Dancer) ನಾಯಕ ನಟರಿದ್ದಾರೆ. ಅವರಲ್ಲಿ ಶಿವಣ್ಣ ಅಪ್ಪುನನ್ನ ಕಾಣುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ನೃತ್ಯ ವೈಭವ ಎಂದು ಮಾಸದು!
ಪವರ್ ಸ್ಟಾರ್ ಪುನೀತ್ ನೃತ್ಯದಲ್ಲಿ ಹೊಸತನ ಇರುತ್ತಿತ್ತು. ಹೊಸ ರೀತಿಯ ಸ್ಟೆಪ್ಗಳಿಗೆ ಅಪ್ಪು ಜೀವ ತುಂಬುತ್ತಿದ್ದರು. ಕೊರಿಯೋಗ್ರಾಫರ್ ಕಂಪೋಜ್ ಮಾಡುವ ಸ್ಟೆಪ್ಗಳನ್ನ ಅಭ್ಯಾಸ ಮಾಡಿಯೇ ಸೆಟ್ಗೆ ಹೋಗುತ್ತಿದ್ದರು.
ಇದರಿಂದ ಅಪ್ಪು ಸಿನಿಮಾದಲ್ಲಿ ಅದ್ಭುತ ನೃತ್ಯಕ್ಕೆ ಕೊರತೆ ಇರುತ್ತಿರಲಿಲ್ಲ. ಜನ ಕೂಡ ಪವರ್ ಸ್ಟಾರ್ ಪುನೀತ್ ನೃತ್ಯಕ್ಕೆ ಮನಸೋತು ಬಿಡುತ್ತಿದ್ದರು. ಪುನೀತ್ ಅಂದ್ರೆ ಡ್ಯಾನ್ಸ್, ಡ್ಯಾನ್ಸ್ ಅಂದ್ರೆ ಪುನೀತ್ ಅನ್ನೋದು ಜಗಜ್ಜಾಹೀರಾಗಿತ್ತು.
ಪುನೀತ್ ನೃತ್ಯಕ್ಕೆ ಯಾರಾದರೂ ಸಾಟಿ ಇದ್ದಾರಾ?
ತಮಿಳು ನಟ ವಿಶಾಲ್ ತಾಯಿ ಕೂಡ ಪುನೀತ್ ನೃತ್ಯವನ್ನ ಮೆಚ್ಚುತ್ತಿದ್ದರು. ಪುತ್ರ ವಿಶಾಲ್ಗೆ ನೃತ್ಯ ಮಾಡಿದ್ರೆ, ಪುನೀತ್ ರೀತಿ ಮಾಡ್ಬೇಕು ಅಂತಲೂ ಸಲಹೆ ಕೊಡ್ತಿದ್ದರು. ವಿಶಾಲ್ ಈ ವಿಷಯವನ್ನ ಬೆಂಗಳೂರಿಗೆ ಬಂದಾಗ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.
ಪುನೀತ್ ನೃತ್ಯವನ್ನ ಅಪ್ಪು ಗೆಳೆಯ ಮತ್ತು ನಟ ಜೂನಿಯರ್ ಎನ್ ಟಿ ಆರ್ ಕೂಡ ಮೆಚ್ಚಿಕೊಂಡಿದ್ದರು. ಪುನೀತ್ ನೃತ್ಯ ಮೆಚ್ಚುವ ಜೂನಿಯರ್ ಎನ್ಟಿ ಆರ್ ಕೂಡ ಒಬ್ಬ ಒಳ್ಳೆ ಡ್ಯಾನ್ಸರ್ ಅನ್ನೋದು ಗೊತ್ತೇ ಇದೆ. ಟ್ರಿಪಲ್ ಆರ್ ಚಿತ್ರದ ನಾಟು ನಾಟು ಅದಕ್ಕೆ ಸೂಪರ್ ಸಾಕ್ಷಿ ನೋಡಿ.
ಅಲ್ಲು ಅರ್ಜುನ್ ಡ್ಯಾನ್ಸ್ ಸೂಪರ್ ಅಲ್ವಾ?
ಟಾಲಿವುಡ್ನ ನಾಯಕ ನಟ ಪುಷ್ಟ ಖ್ಯಾತಿಯ ಹೀರೋ ಅಲ್ಲು ಅರ್ಜುನ್ ನೃತ್ಯವೂ ಅದ್ಭುತವೇ ಆಗಿರುತ್ತದೆ. ಕನ್ನಡಲ್ಲಿ ಅಪ್ಪು ಆಗಿದ್ದರೆ, ತೆಲುಗುದಲ್ಲಿ ಅಲ್ಲು ಅರ್ಜುನ್ ನೃತ್ಯದ ವೈಭವ ಎಲ್ಲ ಚಿತ್ರದಲ್ಲಿ ಭರ್ಜರಿ ಆಗಿರುತ್ತದೆ.
ಆದರೆ ಪುಷ್ಟ ಚಿತ್ರದಲ್ಲಿ ಇದ್ದ ಸ್ಟೆಪ್ ಬೇರೆ ಇತ್ತು. ಇಲ್ಲಿ ನೃತ್ಯಕ್ಕಿಂತಲೂ ಒಂದೇ ಒಂದು ಸ್ಟೆಪ್ ಅತಿ ಹೆಚ್ಚು ವೈರಲ್ ಆಯಿತು. ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್, ವಿಶಾಲ್ ಹೀಗೆ ಎಲ್ಲರೂ ತಮ್ಮದೇ ರೀತಿಯಲ್ಲಿ ನೃತ್ಯವನ್ನ ಮಾಡುತ್ತಲೇ ಜನರನ್ನ ರಂಜಿಸುತ್ತಿದ್ದಾರೆ.
ಟಾಲಿವುಡ್ನ ಆ ನಟರಲ್ಲಿ ಅಪ್ಪು ಕಂಡ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರ ತೆಲುಗು ಭಾಷೆಯಲ್ಲಿ ಶಿವ ವೇದ ಹೆಸರಿನಲ್ಲಿ ರಿಲೀಸ್ ಆಗುತ್ತಿದೆ. ಫೆಬ್ರವರಿ-09 ರಂದು ರಿಲೀಸ್ ಆಗ್ತಿರೋ ಈ ವೇಳೆಯಲ್ಲಿ ಟಾಲಿವುಡ್ನಲ್ಲಿ ಶಿವ ವೇದ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕೂಡ ನಡೆದಿದೆ.
ಇದಕ್ಕೂ ಮೊದಲು ಟಾಲಿವುಡ್ ವಾಹಿನಿಗಳಿಗೆ ಶಿವಣ್ಣ ಸಂದರ್ಶನ ಕೂಡ ಕೊಟ್ಟಿದ್ದಾರೆ. ಹಾಗೆ ನಡೆದ ಒಂದು ಸದರ್ಶನದಲ್ಲಿ ಅಪ್ಪು ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಸಂದರ್ಶಕರು ಕೇಳೋ ಪ್ರಶ್ನೆಗೂ ಅಷ್ಟೇ ಖುಷಿಯಿಂದಲೇ ಉತ್ತರ ಕೊಟ್ಟಿದ್ದಾರೆ.
ಅಲ್ಲು ಅರ್ಜುನ್-ಜೂನಿಯರ್ ಎನ್ಟಿಆರ್ ನೃತ್ಯ ನನಗಿಷ್ಟ!
ಅಲ್ಲು ಅರ್ಜುನ್ ಮತ್ತು ಜೂನಿಯರ್ ಎನ್ಟಿಆರ್ ಅಪ್ಪು ರೀತಿ ಡ್ಯಾನ್ಸ್ ಮಾಡುತ್ತಾರೆ. ಅಲ್ಲು ಅರ್ಜುನ್ ಡ್ಯಾನ್ಸ್ ನೋಡಿದ್ರೆ, ಅಪ್ಪು ಡ್ಯಾನ್ಸ್ ನೋಡಿದ ರೀತಿ ಆಗುತ್ತದೆ.
ಇದನ್ನೂ ಓದಿ: Ashika Ranganath: ಆಶಿಕಾ ರಂಗನಾಥ್ ಸೀರೆ ಫೋಟೋಸ್, ದೇವತೆ ಎಂದ ಅಭಿಮಾನಿಗಳು!
ಅಲ್ಲು ಅರ್ಜುನ್ ನೃತ್ಯಗಳಲ್ಲಿ ಇರೋ ಹಾಡುಗಳಲ್ಲಿ ಅಲಾ ವೈಕುಂಟಪುರಮುಲು ಚಿತ್ರದ ಬುಟ್ಟ ಬೊಮ್ಮ ಹಾಡು ನನಗೆ ಬಲು ಇಷ್ಟ ಅಂತಲೇ ಹೇಳಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅಲ್ಲದೇ, ಜೂನಿಯರ್ ಎನ್ಟಿಆರ್ ನೃತ್ಯದ ವಿಷಯದಲ್ಲೂ ಸೂಪರ್ ಅಂತಲೇ ಶಿವಣ್ಣ ಮನಬಿಚ್ಚಿ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ