ಕನ್ನಡದಲ್ಲಿ ಅನೇಕ ಕ್ಲಾಸಿಕ್ (Kannada Classic Film) ಸಿನಿಮಾಗಳಿವೆ. ಒಂದೊಂದು ಸಿನಿಮಾನೂ ಒಂದೊಂದು ಮುತ್ತು. ಅಂದಿನ ಈ ಕ್ಲಾಸಿಕ್ ಸಿನಿಮಾಗಳು ಈಗೀನ ಯುವಕರಿಗೆ ಇಷ್ಟ ಆಗುತ್ತವೆ. ಕನ್ನಡದಲ್ಲಿ (Kannada Actor Shiva Rajkumar) ಅಷ್ಟೊಂದು ಒಳ್ಳೆ ಸಿನಿಮಾ ಬಂದಿವೆ. ಈಗೀನ ಕಾಲಕ್ಕೆ ತಕ್ಕನಾಗಿಯೇ ಮತ್ತಷ್ಟು ಒಳ್ಳೆ ಕಥೆಯುಳ್ಳ ಚಿತ್ರಗಳು ನಿರ್ಮಾಣಗೊಂಡಿವೆ. ನಿರ್ಮಾಣಗೊಳ್ಳುತ್ತಲೇ (Real Star Upendra) ಇವೆ. ಅದರ ಮಧ್ಯ ಒಂದು ಕೂಗು ಸದಾ ಇರುತ್ತದೆ. ಕನ್ನಡದ ಕ್ಲಾಸಿಕ್ ಕಲ್ಟ್ ಚಿತ್ರಗಳ ಪಾರ್ಟ್-2 ಬರಬೇಕು (Kannada OM Cinema) ಅನ್ನೋದೇ ಆ ಕೂಗು ಆಗಿದೆ. ಅದರಂತೆ 1995 ರಲ್ಲಿ ತೆರೆ ಕಂಡಿದ್ದ ಕ್ಲಾಸಿಕ್ ಕಲ್ಟ್ ಸಿನಿಮಾ ಓಂ ಚಿತ್ರದ ಬಗ್ಗೆ ಚರ್ಚೆ ಇದ್ದೇ ಇದೆ.
ಈ ಸಿನಿಮಾದ ಪಾರ್ಟ್-2 ಬರಬೇಕು ಅನ್ನೋದು ಶಿವರಾಜ್ ಕುಮಾರ್ ಫ್ಯಾನ್ಸ್ ಆಸೆ ಆಗಿದೆ. ಉಪೇಂದ್ರ ಫ್ಯಾನ್ಸ್ ಕೂಡ ಇದೇ ನಿರೀಕ್ಷೆ ಮಾಡುತ್ತಾರೆ.
ಕನ್ನಡದ ಕ್ಲಾಸಿಕ್ ಕಲ್ಟ್ ಓಂ-2 ಸಿನಿಮಾ ಬರುತ್ತಾ?
ಕನ್ನಡದ ಕ್ಲಾಸಿಕ್ ಓಂ ಸಿನಿಮಾ ಅದ್ಭುತವಾಗಿಯೇ ಇದೆ. ಈಗಿನ ಕಾಲಕ್ಕೂ ಈ ಚಿತ್ರ ಪ್ರಸ್ತುತ ಅನಿಸುತ್ತದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಸತ್ಯ ಪಾತ್ರ ಮಾಡೋ ಮೂಲಕ ಅಂದಿನ ಯುವಕರ ದಿಲ್ ಕದ್ದಿದ್ದರು. ಅದೇ ಶಿವರಾಜ್ ಕುಮಾರ್ ಈಗಲೂ ಓಂ ಚಿತ್ರದ ಸತ್ಯ ಪಾತ್ರದ ಮೂಲಕ ಅತಿ ಹೆಚ್ಚು ಇಷ್ಟಾನೂ ಆಗುತ್ತಾರೆ.
ಸತ್ಯನ ಮಧು ಆಗಿ ನಟಿ ಪ್ರೇಮ ಕೂಡ ಬಹುವಾಗಿಯೇ ಇಷ್ಟ ಆಗುತ್ತಾರೆ. ಡೈರೆಕ್ಟರ್ ಉಪೇಂದ್ರ ಅವರು ಈ ಚಿತ್ರದ ಮೂಲಕ ಒಂದು ಮೈಲುಗಲ್ಲು ಸಾಧಿಸಿಯೇ ಬಿಟ್ಟರು. ರಿಯಲ್ ರೌಡಿಗಳನ್ನೂ ಈ ಚಿತ್ರದಲ್ಲಿ ತೆರೆ ಮೇಲೆ ತಂದು ಭೂಗತ ಜಗತ್ತಿನ ಕಥೆಯನ್ನೂ ಹೇಳಿದ್ದರು.
ಡೈರೆಕ್ಟರ್ ಉಪೇಂದ್ರ ಓಂ-2 ಸಿನಿಮಾ ಮಾಡ್ತಾರಾ?
ನಾಯಕ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಕ್ಲಾಸಿಕ್ ಓಂ ಸಿನಿಮಾ ಮಾಡಿ ಆಗಿದೆ. ಆದರೆ ಓಂ ರೀತಿಯ ಮತ್ತೊಂದು ಕ್ಲಾಸಿಕ್ ಕಲ್ಟ್ ಸಿನಿಮಾವನ್ನ ಉಪೇಂದ್ರ ಯಾವಾಗ ಮಾಡ್ತಾರೆ? ಸದ್ಯದಲ್ಲಿಯೇ ಬರುತ್ತದೆಯೇ? ಬರೋದೇ ಇಲ್ವೇ?
ಈ ಒಂದು ಪ್ರಶ್ನೆ ಇದ್ದೇ ಇದೆ. ಇದರ ಬೆನ್ನಲ್ಲಿಯೇ ಓಂ-2 ಬರುತ್ತದೆಯೇ? ಬಂದ್ರೆ ಯಾವಾಗ ಬರುತ್ತದೆ? ಶಿವಣ್ಣ ಮತ್ತು ಉಪೇಂದ್ರ ಕಾಂಬಿನೇಷನ್ ಧಮಾಕಾ ಯಾವಾಗ ಈ ಎಲ್ಲ ಪ್ರಶ್ನೆಗೆಳು ಕುತೂಹಲ ಮೂಡಿಸುತ್ತಲೇ ಇವೆ.
ನಾನು ಓಂ-2 ಸಿನಿಮಾ ಮಾಡೋಕೆ ರೆಡಿ
ಶಿವರಾಜ್ ಕುಮಾರ್ ಓಂ-2 ಮಾಡೋಕೆ ರೆಡಿ ಇದ್ದಾರೆ. ಕ್ಲಾಸಿಕ್ ಕಲ್ಟ್ ಚಿತ್ರದ ಮುಂದುವರೆದ ಭಾಗ ಮಾಡೋಕೆ ಯಾರು ಬೇಡ ಅನ್ನೋದಿಲ್ಲ. ಅಂತಹದ್ರಲ್ಲಿ ಓಂ-2 ಬರುತ್ತೇ ಅಂದರೆ ಬಿಡ್ತಾರಾ? ನೋ ವೇ ಚಾನ್ಸೇ ಇಲ್ಲ ಬಿಡಿ.
ಅದರಂತೆ ಶಿವರಾಜ್ ಕುಮಾರ್, ಓಂ-2 ಚಿತ್ರ ಮಾಡೋಕೆ ರೆಡಿ ಆಗಿದ್ದಾರೆ. ಆದರೆ ಡೈರೆಕ್ಟರ್ ಉಪೇಂದ್ರ ಒಪ್ಪಬೇಕಲ್ವೇ? ಅವರಿಗೆ ನೀವು ಹೇಳಿ. ನಾನು ಹೇಳುತ್ತೇನೆ. ಹೀಗೆ ಶಿವಣ್ಣ ಈಗ ಹೇಳಿದ್ದಾರೆ. ಯಾರಿಗೆ ಹೇಳಿದ್ದಾರೆ? ಯಾಕ್ ಹೇಳಿದ್ದಾರೆ. ಇಲ್ಲಿಯೇ ಮುಂದಿದೆ ಓದು.
ಓಂ-2 ಸಿನಿಮಾ ಮಾಡಿ ಎಂದ ಶಿವಣ್ಣನ ಫ್ಯಾನ್ಸ್ !
ಸದ್ಯ ಶಿವಣ್ಣ ಅಭಿನಯದ ವೇದ ಚಿತ್ರ ಭರ್ಜರಿಯಾಗಿ ಓಡುತ್ತಿದೆ. ಇದರ ಬೆನ್ನಲ್ಲಿಯೇ ಶಿವಣ್ಣ ಇನ್ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳ ಜೊತೆಗೂ ಮಾತನಾಡಿದ್ದಾರೆ. ಆಗಲೇ ಒಬ್ಬ ಫ್ಯಾನ್ ತಮ್ಮ ನೆಚ್ಚಿನ ನಾಯಕ ಶಿವಣ್ಣನಿಗೆ ಈ ಒಂದು ಪ್ರಶ್ನೆ ಕೇಳಿದ್ದಾರೆ.
ಶಿವಣ್ಣ ಓಂ-2 ಸಿನಿಮಾ ಮಾಡಿ ಎಂದು ಅಭಿಮಾನಿ ಮನವಿ ಮಾಡಿದ್ದಾರೆ. ಆಗ ಶಿವಣ್ಣ ಅದಕ್ಕೆ ಸ್ಪಂದಿಸಿದ್ದಾರೆ. ನಾನು ಓಂ-2 ಚಿತ್ರ ಮಾಡೋಕೆ ರೆಡಿ ಇದ್ದೇನೆ. ನೀವು ಉಪ್ಪಿಗೆ ಕೇಳಿ, ನಾನು ಅವರು ಸಿಕ್ಕಾಗ ಹೇಳುತ್ತೇನೆ. ಎಲ್ಲರೂ ಓಂ-2 ಕೇಳ್ತಿದ್ದಾರೆ ಅಂತಲೂ ಹೇಳುತ್ತೇನೆ ಎಂದು ಶಿವಣ್ಣ ಆ ಕೂಡಲೇ ತಿಳಿಸಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ ಓಂ-2 ಸಿನಿಮಾ ಬರುತ್ತಾ?
ಈ ಒಂದು ವಿಷಯ ಬಹು ದಿನಗಳಿಂದಲೂ ಇದ್ದೇ ಇದೆ. ಇದರ ಬಗ್ಗೆ ಆಗಾಗ ಶಿವಣ್ಣನನ್ನ ಕೇಳ್ತಾನೇ ಇರುತ್ತಾರೆ. ಅದಕ್ಕೆ ಶಿವಣ್ಣ ಕೂಡ ಉತ್ತರ ಕೊಡ್ತಾರೆ. ಅದೇ ರೀತಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಓಂ-2 ಬಗೆಗಿನ ಪ್ರಶ್ನೆ ಎದುರಿಸುತ್ತಲೇ ಇರುತ್ತಾರೆ.
ಇದನ್ನೂ ಓದಿ: Bigg Boss Kannada: ರಾಕೇಶ್ ಹಾಗೂ ರೂಪೇಶ್ ಶೆಟ್ಟಿ ಫೈನಲ್ಗೆ! ಉಳಿದ ಮೂವರು ಯಾರು?
ಆದರೆ ಇಲ್ಲಿವರೆಗೂ ಯಾವುದೂ ಅಧಿಕೃತವಾಗಿ ಅನೌನ್ಸ್ ಆಗಿಲ್ಲ. ಶಿವಣ್ಣನ ಗೀತಾ ಪಿಕ್ಚರ್ಸ್ ಮೂಲಕ ಇದು ಶೀಘ್ರದಲ್ಲಿಯೇ ಸಾಧ್ಯವಾದರೂ ಆಗಬಹುದು. ವೇಟ್ ಮಾಡೋಣ ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ