Shiva Rajkumar: ಭೈರತಿ ರಣಗಲ್ ಕಥೆ ಹೇಳಿ ಬಿಟ್ರಾ ಶಿವಣ್ಣ?

ಭೈರತಿ ರಣಗಲ್ ಪ್ರಿಕ್ವೆಲ್ ಆದ್ಮೇಲೆ ಸೀಕ್ವೆಲ್ ಸಿನಿಮಾ ಪ್ಲಾನ್

ಭೈರತಿ ರಣಗಲ್ ಪ್ರಿಕ್ವೆಲ್ ಆದ್ಮೇಲೆ ಸೀಕ್ವೆಲ್ ಸಿನಿಮಾ ಪ್ಲಾನ್

ಭೈರತಿ ರಣಗಲ್ ಸಿನಿಮಾದ ಸೀಕ್ರೆಟ್ ರಿವೀಲ್ ಮಾಡಿದ್ರೆ ಶಿವಣ್ಣ? ಚಿತ್ರದ ಪ್ರಿಕ್ವೆಲ್ ಆದ್ಮೇಲೆ ಸಿಕ್ವೆಲ್ ಮಾಡ್ತಾರಂತೆ ನಿಜಾನಾ?ಈ ಕುರಿತು ಒಂದಷ್ಟು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ (Bhairathi Ranagal Movie Updates) ಅಭಿನಯದ ಭೈರತಿ ರಣಗಲ್ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಲಕ್ಕಿ ದೇವಸ್ಥಾನ ಅಂತಲೇ ಕರೆಸಿಕೊಳ್ಳುವ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿಯೇ ಚಿತ್ರಕ್ಕೆ ಮುಹೂರ್ತ ಆಗಿದೆ. ಇಲ್ಲಿ (Kannada Actor Shiva Rajkumar) ಲಾಂಚ್ ಆದ ಸಿನಿಮಾಗಳು ಹಿಟ್ ಆಗುತ್ತವೆ ಅನ್ನುವ ನಂಬಿಕೆ ಇದೆ. ಸೂಪರ್ ಹಿಟ್ ಸಿನಿಮಾ ಟಗರು ಚಿತ್ರಕ್ಕೂ ಇಲ್ಲಿಯೇ ಮುಹೂರ್ತ ನೆರವೇರಿತ್ತು. ಇದು ಹಳೆ ಕಥೆ ಆಯಿತು ಬಿಡಿ. ಇದೀಗ ಭೈರತಿ ರಣಗಲ್ ಸರದಿ (Bhairathi Ranagal Movie) ಬಂದಿದೆ. ಈ ಚಿತ್ರ ವಿಶೇಷವಾಗಿಯ ಶುಕ್ರವಾರ ಸೆಟ್ಟೇರಿದೆ. ಮುಹೂರ್ತದ ಕಾರ್ಯಕ್ರಮ ಮುಗಿದ್ಮೇಲೆ ಪ್ರೆಸ್ ಮೀಟ್ ಕೂಡ ನಡೆದಿದೆ. ಆಗ ಇಲ್ಲಿ ಸಾಕಷ್ಟು ವಿಶೇಷತೆಗಳು ರಿವೀಲ್ ಆಗಿವೆ.


ಶಿವರಾಜ್ (Bhairathi Ranagal Updates) ಕುಮಾರ್ ಸಿನಿಮಾದ ಸರ್ಪ್ರೈಜ್ ಒಂದನ್ನ ಇದೇ ಸಮಯದಲ್ಲಿಯೇ ರಿವೀಲ್ ಮಾಡಿದ್ದಾರೆ.


Kannada Actor Shiva Rajkumar Reveal Secrets of Bhairathi Ranagal Movie At Movie Launch
ಭೈರತಿ ರಣಗಲ್ ಚಿತ್ರದಲ್ಲಿದೆ ಸಖತ್ ಸರ್ಪ್ರೈಜ್


ಭೈರತಿ ರಣಗಲ್ ಸಿನಿಮಾದ ಆ ಸೀಕ್ರೆಟ್ ಬಿಟ್ಟುಕೊಟ್ಟ ಶಿವಣ್ಣ


ಭೈರತಿ ರಣಗಲ್ ಸಿನಿಮಾದಲ್ಲಿ ನಾಯಕಿ ಇದ್ದಾರೆ. ಆದರೆ ಯಾರೂ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಚಿತ್ರದಲ್ಲಿ ನಾಯಕಿ ಇದ್ದಾರಾ ? ಅನ್ನುವ ಪ್ರಶ್ನೆಗೆ ಸ್ವತ ಶಿವಣ್ಣ ಉತ್ತರ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಾಯಕಿ ಇದ್ದಾರೆ. ಆದಾರು ಅನ್ನೋದನ್ನ ಹೇಳ್ತಿವಿ ಅಂತ ಉತ್ತರ ಕೊಟ್ಟಿದ್ದಾರೆ.




ಭೈರತಿ ರಣಗಲ್ ಪ್ರಿಕ್ವೆಲ್ ಮುಗಿದ್ಮೇಲೆ ಸಿಕ್ವೆಲ್ ಕೂಡ ಮಾಡ್ತೀವಿ ಅನ್ನುವ ಮಾತನ್ನ ಕೂಡ ಇದೇ ಸಮಯದಲ್ಲಿಯೇ ಶಿವಣ್ಣ ಹೇಳಿಕೊಂಡಿದ್ದಾರೆ. ಜೊತೆಗೆ ಇನ್ನೂ ಒಂದಷ್ಟು ವಿಷಯಗಳನ್ನ ಇದೇ ವೇಳೆ ರಿವೀಲ್ ಕೂಡ ಮಾಡಿದ್ದಾರೆ.




ಭೈರತಿ ರಣಗಲ್ ಸಿನಿಮಾದ ಬಗ್ಗೆ ಡೈರೆಕ್ಟರ್ ನರ್ತನ್ ತುಂಬಾ ದೊಡ್ಡ ಕನಸು ಇಟ್ಟುಕೊಂಡಿದ್ದಾರೆ. ಆ ಬಗ್ಗೆ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ. ಆದರೆ ನಾವು ಅಂದುಕೊಂಡಂತೆ ಎಲ್ಲವೂ ಆಗಲು ಸಾಧ್ಯವೇ ? ಇಲ್ಲ ಬಿಡಿ. ಆದರೆ ಪ್ರಯತ್ನ ಮಾಡ್ತಾನೆ ಇರಬೇಕು. ಅದು ಒಂದು ದಿನ ಆಗುತ್ತದೆ ಎಂದು ಶಿವಣ್ಣ ಹೇಳಿದ್ದಾರೆ.


ಭೈರತಿ ರಣಗಲ್ ಚಿತ್ರದಲ್ಲಿದೆ ಸಖತ್ ಸರ್ಪ್ರೈಜ್


ಶಿವಣ್ಣ ಈ ಒಂದು ಮಾತು ಹೇಳಲು ಒಂದು ದೊಡ್ಡ ಕಾರಣವೇ ಇದೆ. ಹೌದು, ಭೈರತಿ ರಣಗಲ್ ಸಿನಿಮಾದಲ್ಲಿ ಒಂದು ಸರ್ಪ್ರೈಜ್ ಪಾತ್ರ ಇದೆ. ಆ ಪಾತ್ರವನ್ನ ಯಾರು ಮಾಡ್ತಾರೆ ಅನ್ನೋ ಪ್ರಶ್ನೆ ಕೂಡ ಇದೆ. ಅದಕ್ಕಾಗಿಯೇ ಎಲ್ಲ ತಯಾರಿನೂ ಮಾಡಿಕೊಳ್ಳಲಾಗುತ್ತಿದೆ.


Kannada Actor Shiva Rajkumar Reveal Secrets of Bhairathi Ranagal Movie At Movie Launch
ಭೈರತಿ ರಣಗಲ್ ಸಿನಿಮಾದ ಆ ಸೀಕ್ರೆಟ್ ಬಿಟ್ಟುಕೊಟ್ಟ ಶಿವಣ್ಣ


ಈ ಒಂದು ಪಾತ್ರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ. ಆದರೆ ಯಾವುದು ಇನ್ನೂ ಫೈನಲ್ ಆಗಿಲ್ಲ. ಈ ಪಾತ್ರ ತುಂಬಾನೇ ಸ್ಪೆಷಲ್ ಆಗಿರುತ್ತದೆ ಅನ್ನೋದನ್ನ ಶಿವಣ್ಣ ಮುಹೂರ್ತದ ದಿನವೇ ಹೇಳಿಕೊಂಡಿದ್ದಾರೆ.


ಭೈರತಿ ರಣಗಲ್ ಪ್ರಿಕ್ವೆಲ್ ಆದ್ಮೇಲೆ ಸೀಕ್ವೆಲ್ ಸಿನಿಮಾ ಪ್ಲಾನ್


ಭೈರತಿ ರಣಗಲ್ ಸಿನಿಮಾದಲ್ಲಿ ಭೈರತಿ ಪಾತ್ರದಲ್ಲಿ ರಾವಣತ್ವವೂ ಇದೆ. ಆದರೆ ರಾವಣನಲ್ಲೂ ಒಬ್ಬ ದೇವರಿದ್ದಾನೆ. ಹಾಗಾಗಿಯೇ ಈ ಪಾತ್ರ ಸರಣಿ ರೂಪದಲ್ಲಿ ಬರ್ತಾನೇ ಇರುತ್ತದೆ ಅನ್ನೋ ವಿಷಯವನ್ನ ಕೂಡ ಶಿವಣ್ಣ ಈಗಲೇ ತಿಳಿಸಿದ್ದಾರೆ.


ಇದನ್ನೂ ಓದಿ:  Kabir Bedi: ಮತ್ತೆ ಬಂದ್ರು ಬಾಲಿವುಡ್ ಕಬೀರ್ ಬೇಡಿ; ಸಿನಿಮಾ ಯಾವುದು ಗೊತ್ತಾ?


ಸಿನಿಮಾದ ಇತರ ಮಾಹಿತಿ ಕೊಡೋದಾದರೆ, ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೊಡ್ತಿದ್ದಾರೆ. ಮಫ್ತಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿರೋ ನವೀನ್ ಕುಮಾರ್ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದು, ಚಿತ್ರೀಕರಣ ಇದೇ ಜೂನ್-10 ರಿಂದಲೇ ಶುರು ಆಗುತ್ತಿದೆ. ಸದ್ಯಕ್ಕೆ ಸಿನಿಮಾದ ಮುಹೂರ್ತ ಆಗಿದೆ. ಡೈರೆಕ್ಟರ್ ನರ್ತನ್ ಕೂಡ ಫುಲ್ ಖುಷ್ ಆಗಿದ್ದಾರೆ.

First published: