ಸ್ಯಾಂಡಲ್ವುಡ್ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Rajkumar) ಕುಮಾರ್ ಸದ್ಯ ವೇದ ಸಿನಿಮಾದ ಪ್ರಚಾರದಲ್ಲಿದ್ದಾರೆ. ಇದೇ ಡಿಸೆಂಬರ್-23ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಶಿವರಾಜ್ ಕುಮಾರ್ ಆ್ಯಂಡ್ ಟೀಮ್ ರಾಜ್ಯದೆಲ್ಲೆಡೆ ಪ್ರಚಾರ ಕೈಗೊಂಡಿದ್ದಾರೆ. (Shiva rajkumar New Movies) ಈ ಕಾರಣಕ್ಕಾಗಿಯೇ ಶಿವಣ್ಣ ಎಲ್ಲೆಡೆ ಓಡಾಡುತ್ತಿದ್ದಾರೆ. ಆಯಾ ಊರಿನ ಪತ್ರಕರ್ತರು ಕೇಳುವ ಭಿನ್ನ-ವಿಭಿನ್ನ ಪ್ರಶ್ನೆಗಳಿಗೂ ತಮ್ಮದೇ ಶೈಲಿಯಲ್ಲಿ ಉತ್ತರ ಕೊಡ್ತಾನೇ ಶಿವರಾಜ್ ಕುಮಾರ್ ಚಿತ್ರ (Shiva rajkumar Vedha Cinema) ಪ್ರಚಾರ ಮಾಡಿ ಬರ್ತಿದ್ದಾರೆ. ಆದರೆ ಶಿವಣ್ಣ (Shivanna Movie List ) ಅವರಿಗೆ ಈಗೊಂದು ಪ್ರಶ್ನೆ ಕೇಳಲಾಗಿದೆ. ಆ ಪ್ರಶ್ನೆ ಸಹಜವೂ ಆಗಿದೆ. ಅಷ್ಟೇ ವಿಶೇಷವೂ ಆಗಿದೆ. ಅದರ ಸುತ್ತ ಒಂದು ಸ್ಟೋರಿ ಇಲ್ಲಿದೆ ನೋಡಿ.
ಗ್ರೇಟ್ ಮನಸ್ಸಿನ ಸಿಂಪಲ್ ಶಿವಣ್ಣ ಯಾಕ್ ಇಷ್ಟ ಆಗ್ತಾರೆ?
ಕರುನಾಡ ಚಕ್ರವರ್ತಿ ಶಿವರಾಜ ಕುಮಾರ್ ಕನ್ನಡ ಇಂಡಸ್ಟ್ರೀಯಲ್ಲಿ ಎಲ್ಲರಿಗೂ ಫೇವರಿಟ್ ನಟರೇ ಆಗಿದ್ದಾರೆ. ದೊಡ್ಮನೆಯಿಂದ ಬಂದ್ರೂ ಸಹ ಸರಳವಾಗಿಯೇ ಇದ್ದಾರೆ. ಎಲ್ಲೂ ಹೀರೋಯಿಕ್ ಇಮೇಜ್ ಪ್ರದರ್ಶನ ಮಾಡೋದೇ ಇಲ್ಲ. ಅವರ ಸರಳತೆಗೆ ಇಡೀ ಇಂಡಸ್ಟ್ರೀಯ ಜನ ಅವರನ್ನ ಶಿವರಾಜ್ ಕುಮಾರ್ ಅನ್ನೋ ಬದಲು, ಪ್ರೀತಿಯಿಂದಲೇ ಶಿವಣ್ಣ ಅಂತಲೇ ಕರೆಯುತ್ತಾರೆ.
ಕನ್ನಡನಾಡಿನ ಈ ಶಿವಣ್ಣ ನಾಡಿನ ಜನತೆಗೂ ಅಷ್ಟೇ ಇಷ್ಟ ಆಗುತ್ತಾರೆ. ಇಂಡಸ್ಟ್ರೀಯಲ್ಲಿರೋ ಕಲಾವಿದರಿಗೂ ಬಹುವಾಗಿಯೇ ಇಷ್ಟ ಆಗುತ್ತಾರೆ. ಇಂಡಸ್ಟ್ರೀಯಲ್ಲಿ ಯಾರನ್ನೇ ನೀವೂ ಕೇಳಿದ್ರೂ ಅಷ್ಟೇ, ಎಲ್ಲರೂ ಶಿವರಾಜ್ ಕುಮಾರ್ ಅವರ ಸರಳತೆ ಮತ್ತು ಒಳ್ಳೆಯತನದ ಬಗ್ಗೇನೆ ಮಾತನಾಡುತ್ತಾರೆ ಹೊರತು ಯಾರೂ ಕೆಟ್ಟದಾಗಿ ಮಾತನಾಡೋದೇ ಇಲ್ಲ.
ಕನ್ನಡದಲ್ಲಿ ಶಿವಣ್ಣನ ಫೇವರಿಟ್ ನಟ ಯಾರು?
ಶಿವರಾಜಕುಮಾರ್ ಎಲ್ಲರಿಗೂ ಫೇವರಿಟ್-ಶಿವಣ್ಣನಿಗೆ ಯಾರು ಫೇವರಿಟ್? ಹೌದು, ಈ ಒಂದು ಕುತೂಹಲದ ಪ್ರಶ್ನೆ ಇದ್ದೇ ಇದೆ. ಶಿವರಾಜ್ ಕುಮಾರ್ ಎಲ್ಲರ ಜೊತೆಗೂ ಚೆನ್ನಾಗಿದ್ದಾರೆ. ಕನ್ನಡದ ಎಲ್ಲ ಸ್ಟಾರ್ ನಟರಿಗೂ ಶಿವಣ್ಣ ಬೇಕು. ಶಿವಣ್ಣನಿಗೂ ಎಲ್ಲರೂ ಬೇಕು. ಅಷ್ಟು ಪ್ರೀತಿ ಪಾತ್ರರಾಗಿಯೇ ಇದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.
ನಿಜ, ಶಿವಣ್ಣ ಯಾವ ನಟರ ಬಗ್ಗೆನೂ ಕೆಟ್ಟದಾಗಿ ಮಾತನಾಡಿಯೇ ಇಲ್ಲ. ಕ್ಯಾಮೆರಾ ಮುಂದೆ ಆದ್ರೂ ಅಷ್ಟೇ, ಕ್ಯಾಮೆರಾ ಹಿಂದೆ ಆದ್ರೂ ಅಷ್ಟೆ, ಶಿವರಾಜ್ ಕುಮಾರ್ ಎಂದೂ ಯಾವ ಕಲಾವಿದರ ಕುರಿತು ಯಾವುದೇ ರೀತಿಯ ಕಾಮೆಂಟ್ ಪಾಸ್ ಮಾಡೋದೇ ಇಲ್ಲ. ಇದು ಶಿವಣ್ಣ ಬದುಕಿನ ಅಸಲಿ ಸತ್ಯವೇ ಆಗಿದೆ.
ಕನ್ನಡದ ಆ ನಾಯಕ ನಟ ಶಿವಣ್ಣನ ಫೇವರಿಟ್
ಹೌದು, ಈ ಮಾತನ್ನ ಅದ್ಯಾರೋ ಹೇಳಿಯೇ ಇಲ್ಲ. ಸ್ವತಃ ಶಿವರಾಜಕುಮಾರ್ ಹೇಳಿಕೊಂಡಿದ್ದಾರೆ. ಪತ್ರಕರ್ತರು ಕೇಳುವ ಪ್ರಶ್ನೆಗೆ ಶಿವಣ್ಣ ತುಂಬಾ ಸರಳವಾಗಿ ತುಂಬಾ ಓಪನ್ ಆಗಿಯೇ ಕನ್ನಡದ ತಮ್ಮ ನೆಚ್ಚಿನ ನಾಯಕ ನಟ ಕುರಿತು ಹೇಳಿಕೊಂಡಿದ್ದಾರೆ.
ಶಿವಣ್ಣ ಇಷ್ಟ ಪಡೋ ಆ ನಟ ತುಂಬಾ ಸಿಂಪಲ್ ಆಗಿಯೇ ಇದ್ದಾರೆ. ಆ ಕಾರಣಕ್ಕೇನೆ ಶಿವಣ್ಣ ಆ ನಾಯಕ ನಟನನ್ನ ತುಂಬಾ ಇಷ್ಟ ಪಡ್ತಾರೆ. ಆ ನಟನ ಹೆಸರಲ್ಲಿ ದೊಡ್ಡ ದಾಖಲೆನೆ ಇದೆ. ಆ ಒಂದೇ ಒಂದು ದಾಖಲೆಯಿಂದಲೇ ಶಿವಣ್ಣ ಇಷ್ಟ ಪಡೋ ಆ ನಟ ಕನ್ನಡದ ಹೆಮ್ಮೆಯನ್ನ ಹೆಚ್ಚಿಸಿದ ಖ್ಯಾತಿಯನ್ನೂ ಪಡೆದಿದ್ದಾರೆ. ಅವರಾರು ಇಲ್ಲಿದೆ ಓದಿ.
ರಾಕಿ ಭಾಯ್ ಅಂದ್ರೆ ಶಿವಣ್ಣನಿಗೆ ತುಂಬಾ ಫೇವರಿಟ್
ರಾಕಿಂಗ್ ಸ್ಟಾರ್ ಯಶ್ ಇಡೀ ಕನ್ನಡ ನಾಡಿನ ಹೆಮ್ಮೆಯ ಸ್ಟಾರ್ ಆಗಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿಯೇ ಮಿಂಚುತ್ತಿದ್ದಾರೆ. ಕನ್ನಡದ ಈ ನಾಯಕ ನಟರೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಫೇವರಿಟ್ ನಟರೇ ಆಗಿದ್ದಾರೆ.
ರಾಕಿ ಭಾಯ್ ಯಶ್ರನ್ನ ಶಿವಣ್ಣ ತುಂಬಾ ಲೈಕ್ ಮಾಡುತ್ತಿದ್ದಾರೆ. ರಾಕಿ ಭಾಯ್ ಯಶ್ ಅವರ ಸಿಂಪ್ಲಿಸಿಟಿಯನ್ನ ಕೂಡ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಯಶ್ ಅವರ ಸಿಂಪ್ಲಿಸಿಟಿ ನನಗೆ ಬಲು ಇಷ್ಟ ಅಂತಲೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Janhvi Kapoor: ಕ್ಯಾಮೆರಾ ಮುಂದೆ ಜಾಕೆಟ್ ಬಿಚ್ಚಿದ ಜಾನ್ವಿ! ಸೂಪರ್ ಕೂಲ್ ಲುಕ್
ಹೀಗೆ ತಮ್ಮ ಪರ್ಸ್ನಲ್ ಫೇವರಿಟ್ ನಟನ ಬಗ್ಗೆ ಶಿವಣ್ಣ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಇಂಡಸ್ಟ್ರೀಯ ಇತರ ಕಲಾವಿದರೂ ಇವರಿಗೆ ಫೇವರಿಟ್ ಆಗಿದ್ದಾರೆ.
ಅವರಲ್ಲಿಯೇ ರಾಕಿ ಭಾಯ್ ಮೊದಲಿಗರು ಅಂತಲೇ ಹೇಳಬಹುದೇನೋ.
ಒಟ್ನಲ್ಲಿ, ಶಿವಣ್ಣ ತಾವೂ ಒಬ್ಬ ನಾಯಕರಾಗಿ ಮತ್ತೊಬ್ಬ ನಾಯಕನನ್ನ ಇಷ್ಟಪಟ್ಟು ನಾವೆಲ್ಲ ಒಂದೇ ಅನ್ನೋದನ್ನೂ ಈ ಮೂಲಕ ಹೇಳಿದ್ದಾರೆ ಅಂತಲೂ ತಿಳಿಯಬಹುದು ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ