• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Shiva Rajkumar: ಕಾಮನ್ ಮ್ಯಾನ್‌ಗೆ ಮುತ್ತು ಕೊಟ್ಟು ನೀವೇ ಸೆಲೆಬ್ರಿಟಿ ಎಂದ ಶಿವಣ್ಣ! ಇದಪ್ಪಾ ದೊಡ್ಮನೆ ಗುಣ ಅಂತಿದ್ದಾರೆ ಫ್ಯಾನ್ಸ್​

Shiva Rajkumar: ಕಾಮನ್ ಮ್ಯಾನ್‌ಗೆ ಮುತ್ತು ಕೊಟ್ಟು ನೀವೇ ಸೆಲೆಬ್ರಿಟಿ ಎಂದ ಶಿವಣ್ಣ! ಇದಪ್ಪಾ ದೊಡ್ಮನೆ ಗುಣ ಅಂತಿದ್ದಾರೆ ಫ್ಯಾನ್ಸ್​

ಅಭಿಮಾನಿಗಳಿಗೆ ವಿಶೇಷ ಗೌರವ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ

ಅಭಿಮಾನಿಗಳಿಗೆ ವಿಶೇಷ ಗೌರವ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ

ಶಿವಣ್ಣನ ಕಟೌಟ್ ಮುಂದೆ ಡ್ಯಾನ್ಸ್ ಮಾಡ್ತಿರೋ ದಢೂತಿ ಅಭಿಮಾನಿಯೊಬ್ಬನನ್ನ ಶಿವಣ್ಣ ನೋಡ್ತಾರೆ. ಅವನ ಡ್ಯಾನ್ಸ್ ಗೆ ಫಿದಾ ಆಗಿ ಬಿಡ್ತಾರೆ. ಆ ಕೂಡಲೇ ಆ ಅಭಿಮಾನಿ ದೇವರ ಕೆನ್ನೆಗೆ ಪ್ರೀತಿಯಿಂದ ಮುತ್ತು ಕೂಡ ಕೊಡ್ತಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ (Shiva Rajkumar New Updates) ಮತ್ತೆ ಕಿರುತೆರೆಗೆ ಬರ್ತಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋದ ಮೂಲಕ ಮತ್ತೊಮ್ಮೆ ಪುಟ್ಟ ಪರದೆಗೆ ಬರ್ತಿದ್ದಾರೆ. ಇದನ್ನ ಹೇಳಲಿಕ್ಕೆ (Shivanna New Show Promo) ಜೀ ಕನ್ನಡ ಚಾನೆಲ್ ಸ್ಪೆಷಲ್ ಪ್ರೊಮೋ ಮಾಡಿದೆ. ಇದನ್ನ ನೋಡಿದ್ರೆ ವಾರೇ ವ್ಹಾ ಅಂತಲೇ ನೀವೂ ಹೇಳುತ್ತೀರಿ, ಅಷ್ಟು ವಿಶೇಷವಾದ ಈ ಒಂದು ಪ್ರೊಮೋದಲ್ಲಿ ಸಾಕಷ್ಟು (DKD New Show Promo Release) ಇಂಟ್ರಸ್ಟಿಂಗ್ ವಿಷಯಗಳೇ ಇವೆ. ಓಂ ಸಿನಿಮಾದ ರಿಲೀಸ್ ಸೆಲೆಬ್ರೇಷನ್ ಕೂಡ ಒಂದು ಪ್ರೋಮೋದಲ್ಲಿ ನಾವು ನೋಡಬಹುದು. ಶಿವರಾಜ್ ಕುಮಾರ್ ಅವರ (DKD-7 Show First Promo Release) ಸರಳತೆಯ ಝಲಕ್ ಕೂಡ ಇಲ್ಲಿ ಸಿಗುತ್ತದೆ. ಇದರ ಸುತ್ತ ಒಂದು ಸ್ಟೋರಿ ಇದೆ.


ಅಭಿಮಾನಿಗಳನ್ನ ಸೆಲೆಬ್ರಿಟಿ ಮಾಡೋಕೆ ಬಂದ ಹ್ಯಾಟ್ರಿಕ್ ಹೀರೋ ಶಿವಣ್ಣ


ಶಿವರಾಜ್‌ ಕುಮಾರ್ ಸಿನಿಮಾ ಜೀವನದಲ್ಲಿ ಸಾಕಷ್ಟು ವಿಶೇಷ ಸಿನಿಮಾಗಳಿವೆ. ಮೊದಲ ಚಿತ್ರದಿಂದ ಹಿಡಿದು ಇತ್ತೀಚಿನ ವೇದ ಚಿತ್ರದವರೆಗೂ ಶಿವಣ್ಣ ಅದೇ ಎನರ್ಜಿಯಲ್ಲಿಯೇ ಮುನ್ನುಗ್ಗುತ್ತಿದ್ದಾರೆ. ಇವರ ಈ ಎನರ್ಜಿಗೆ ಯಾರೂ ಸಾಟಿ ಇಲ್ಲ. ಅದನ್ನ ಮ್ಯಾಚ್ ಮಾಡೋ ಸಾಹಸವನ್ನೂ ಯಾರೂ ಮಾಡೋದಿಲ್ಲ ಬಿಡಿ.


Kannada Actor Shiva Rajkumar New Reality Show Promo Now Released
ಅಭಿಮಾನಿಯ ಕೆನ್ನೆಗೆ ಸಿಹಿ ಮುತ್ತು ಕೊಟ್ಟು ಸೆಲ್ಫಿ ಪಡೆದ ಶಿವಣ್ಣ


ಅಷ್ಟು ವಿಶೇಷವಾಗಿಯೇ ಇರೋ ಶಿವಣ್ಣ, ಮತ್ತೊಮ್ಮೆ ಪುಟ್ಟ ಪರದೆಗೆ ಬಂದಿದ್ದಾರೆ. ಇವರ ಆಗಮನಕ್ಕೆ ಮತ್ತೊಮ್ಮೆ ವೇದಿಕೆ ಆಗಿರೋದು ಅದೇ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-7 ಅಂತ ಹೇಳಬಹುದು. ಹೌದು, ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಮತ್ತೊಮ್ಮೆ ಬರ್ತಿದ್ದಾರೆ.




ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-ಸೀಸನ್-7 ಸ್ಪೆಷಲ್ ಪ್ರೋಮೋ ರಿಲೀಸ್


ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-7 ರಲ್ಲಿ ಈ ಸಲ ತುಂಬಾ ವಿಶೇಷ ವಿಚಾರಗಳಿವೆ. ಅದರ ಝಲಕ್ ಇದೀಗ ಬಿಟ್ಟಿರೋ ಪ್ರೋಮೋದಲ್ಲಿಯೇ ಇದೆ. ನಿಜ, ಈ ಸಲ ಕಾಮನ್ ಮ್ಯಾನ್‌ಗಳನ್ನೂ ಸೆಲೆಬ್ರೆಟಿ ಮಾಡೋದು ಈ ಸಲದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋದ ಮೂಲ ಉದ್ದೇಶ ಅನ್ನೋದು ತಿಳಿಯುತ್ತದೆ.


ಇದನ್ನತಿಳಿಸಲಿಕ್ಕೆ ಇಲ್ಲೊಂದು ಸ್ಪೆಷಲ್ ಸ್ಕಿಟ್‌ ಅನ್ನ ಮಾಡಲಾಗಿದೆ. ಶಿವಣ್ಣ ತಮ್ಮ ಅಭಿನಯದ ಓಂ ಚಿತ್ರದ ರಿಲೀಸ್‌ಗೆ ಗೆಸ್ಟ್ ಆಗಿ ಕರೆದುಕೊಂಡು ಬರ್ತಾರೆ. ಆಗ ಅಲ್ಲಿ ಅಭಿಮಾನಿಗಳ ಜೊತೆಗೆ ಶಿವಣ್ಣ ಡ್ಯಾನ್ಸ್ ಕೂಡ ಮಾಡ್ತಾರೆ.


ಅಭಿಮಾನಿಯ ಕೆನ್ನೆಗೆ ಸಿಹಿ ಮುತ್ತು ಕೊಟ್ಟು ಸೆಲ್ಫಿ ಪಡೆದ ಶಿವಣ್ಣ


ಆದರೆ ಶಿವಣ್ಣನ ಕಟೌಟ್ ಮುಂದೆ ಡ್ಯಾನ್ಸ್ ಮಾಡ್ತಿರೋ ದಢೂತಿ ಅಭಿಮಾನಿಯೊಬ್ಬನನ್ನ ಶಿವಣ್ಣ ನೋಡ್ತಾರೆ. ಅವನ ಡ್ಯಾನ್ಸ್ ಗೆ ಫಿದಾ ಆಗಿ ಬಿಡ್ತಾರೆ. ಆ ಕೂಡಲೇ ಆ ಅಭಿಮಾನಿ ದೇವರ ಕೆನ್ನೆಗೆ ಪ್ರೀತಿಯಿಂದ ಮುತ್ತು ಕೂಡ ಕೊಡ್ತಾರೆ.



ಆ ಕ್ಷಣ ಆ ಅಭಿಮಾನಿಗೆ ಏನು ಮಾಡಬೇಕು ಅನ್ನೋದು ತಿಳಿಯೋದಿಲ್ಲ. ಆಗ ಸ್ವತಃ ಶಿವಣ್ಣ ಹೇಳ್ತಾರೆ. ನಾನು ನಿನ್ನ ಡ್ಯಾನ್ಸ್‌ಗೆ ಫ್ಯಾನ್ ಆಗಿ ಹೋದೆ. ಅದಕ್ಕೇ ಸೆಲೆಬ್ರೆಟಿ ಸಿಕ್ಕಾಗ ಸೆಲ್ಫಿ ತೆಗೆದುಕೊಳ್ಳಬೇಕು ಅಂತಲೇ ಹೇಳಿ ಡೈಲಾಗ್ ಹೊಡೆದು ಸೆಲ್ಫಿ ಕೂಡ ತೆಗೆದುಕೊಳ್ತಾರೆ.


Kannada Actor Shiva Rajkumar New Reality Show Promo Now Released
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-ಸೀಸನ್-7 ಸ್ಪೆಷಲ್ ಪ್ರೋಮೋ ರಿಲೀಸ್


ಅಭಿಮಾನಿಗಳಿಗೆ ವಿಶೇಷ ಗೌರವ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ


ಶಿವಣ್ಣ ಅಭಿಮಾನಿಗಳಿಗೆ ಈ ಮೂಲಕ ವಿಶೇಷ ಗೌರವವನ್ನೂಕೊಟ್ಟಿದ್ದಾರೆ. ಸಾಮಾನ್ಯ ವ್ಯಕ್ತಿ ಕೂಡ ಟ್ಯಾಲೆಂಟ್ ಇದ್ರೆ, ಸೆಲೆಬ್ರಿಟಿ ಆಗಬಹುದು ಅನ್ನೊದನ್ನ ಕೂಡ ಈ ಪ್ರೋಮೋದಲ್ಲಿ ನೋಡಬಹುದಾಗಿದೆ. ಇನ್ನು ಈ ಶೋ ಮೂಲಕ ಶಿವಣ್ಣ ಮತ್ತೊಮ್ಮೆ ಪುಟ್ಟ ಪರದೆಗೆ ಬರ್ತಿದ್ದಾರೆ ಅನ್ನೋದನ್ನ ಕೂಡ ನಾವು ಇದೇ ಪ್ರೋಮೋದಲ್ಲಿಯೇ ನೋಡಬಹುದು.


ಇದನ್ನೂ ಓದಿ: Yash: ಶ್ರೀಲಾಂಕಾದಲ್ಲಿ ಯಶ್ ಸಿನಿಮಾ ಶೂಟಿಂಗ್ ಶುರುವಾಯ್ತಾ? ಇಲ್ಲಿದೆ ಅಪ್ಡೇಟ್


ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-7 ಅತಿ ಶೀಘ್ರದಲ್ಲಿಯೇ ಬರ್ತಿದೆ. ಈ ವಿಷಯವನ್ನ ಹೇಳಲು ಜೀ ಕನ್ನಡ ಚಾನೆಲ್ ಇದೀಗ ಸ್ಪೆಷಲ್ ಪ್ರೋಮೋ ಮಾಡಿದೆ. ಅದನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಇನ್ನುಳಿದಂತೆ ಪ್ರೋಮೋ ಸಖತ್ ಆಗಿಯೇ ಬಂದಿದೆ. ಅಷ್ಟೇ ಸ್ಪೆಷಲ್ ಆಗಿಯೂ ಕಾಣಿಸುತ್ತಿದೆ.

First published: