• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Shivanna New Movie Updates: ಗೀತಾ ಪಿಕ್ಚರ್ಸ್ ಬಿಗ್ ಅನೌನ್ಸ್​ಮೆಂಟ್-ಏನಂತಾರೆ ಮಫ್ತಿ ಡೈರೆಕ್ಟರ್ ನರ್ತನ್?

Shivanna New Movie Updates: ಗೀತಾ ಪಿಕ್ಚರ್ಸ್ ಬಿಗ್ ಅನೌನ್ಸ್​ಮೆಂಟ್-ಏನಂತಾರೆ ಮಫ್ತಿ ಡೈರೆಕ್ಟರ್ ನರ್ತನ್?

ಬೈರತಿ ರಣಗಲ್ ಸಿನಿಮಾ ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರ !

ಬೈರತಿ ರಣಗಲ್ ಸಿನಿಮಾ ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರ !

ಶಿವರಾತ್ರಿ ದಿನ ಬೈರತಿ ರಣಗಲ್ ಚಿತ್ರದ ಬಿಗ್ ಅನೌನ್ಸ್​​ಮೆಂಟ್ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಡೈರೆಕ್ಟರ್ ನರ್ತನ್ Exclusive ನ್ಯೂಸ್-18 ಕನ್ನಡ ಡಿಜಿಟಲ್​ಗೆ ಮಾತನಾಡಿದ್ದಾರೆ. ಅವರ ಮಾತಿನ ಒಟ್ಟು ಮ್ಯಾಟರ್ ಇಲ್ಲಿದೆ ಓದಿ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ (Shiva Rajkumar New Movie) ನಿರ್ಮಾಣ ಸಂಸ್ಥೆಯ ಬಿಗ್ ಅನೌನ್ಸ್​ಮೆಂಟ್ ಏನು ಗೊತ್ತೇ? ಶಿವರಾತ್ರಿ ದಿನ ಶಿವಣ್ಣ ಏನ್ ರಿವೀಲ್ ಮಾಡ್ತಿದ್ದಾರೆ ಗೊತ್ತೇ? ಸರಿಯಾಗಿ 12.12 ಕ್ಕೆ ಏನ್ ಅನೌನ್ಸ್ ಆಗುತ್ತಿದೆ. ಹೌದು, ವೇದ ಚಿತ್ರ ಹಿಟ್ ಆದ್ಮೇಲೆ ಗೀತಾ ಪಿಕ್ಚರ್ಸ್ ಮತ್ತೊಂದು (Shivanna Movie Big Announcement) ಸಿನಿಮಾ ಮಾಡುತ್ತಿದೆ. ಆ ಸಿನಿಮಾ ಕೂಡ ಒಂದು ವಿಶೇಷ ಕಥೆಯನ್ನ ಹೊಂದಿದೆ. ಕಥೆಯನ್ನ ಕೇಳಿರೋ ಶಿವರಾಜ್ ಕುಮಾರ್ ಗ್ರೀನ್ (Shivanna New Movie) ಸಿಗ್ನಲ್ ಕೊಟ್ಟಿದ್ದಾರೆ. ಆ ಗ್ರೀನ್ ಸಿಗ್ನಲ್ ಕೊಟ್ಟು ಬಹಳ ದಿನಗಳೇ ಆಗಿದೆ. ಈಗ ಆ ಚಿತ್ರದ ಅನೌನ್ಸ್​​ಮೆಂಟ್ ಆಗುತ್ತಿದೆ. ಗೀತಾ ಪಿಕ್ಚರ್ಸ್ ನ 2ನೇ ಕಾಣಿಕೆ ಆಗಿರೋ ಈ ಚಿತ್ರದ Exclusive ಮಾಹಿತಿ ಇಲ್ಲಿದೆ.


ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಅಭಿನಯದ ಸಿನಿಮಾಗಳು ಪ್ರತಿ ವರ್ಷ ಸಾಲು ಸಾಲು ಬರುತ್ತವೆ. ಆದರೆ ಅವರ ನಿರ್ಮಾಣದ ವೇದ ಸಿನಿಮಾ ಹಚ್ಚಿದ ಕಿಚ್ಚು ಇನ್ನೂ ಇದೆ. ತೆಲುಗು ಚಿತ್ರರಂಗದಲ್ಲೂ ಈ ಚಿತ್ರದ ಹವಾ ಕ್ರಿಯೇಟ್ ಮಾಡಿದೆ. ಕನ್ನಡದಲ್ಲಂತೂ ವೇದ ಚಿತ್ರ ಒಂದು ರೀತಿ ವೇದ ವಾಖ್ಯವೇ ಆಗಿದೆ.


Kannada Actor Shiva Rajkumar New Movie Big Announcement
ಮಧ್ಯಾಹ್ನ 12.12ಕ್ಕೆ ಚಿತ್ರದ ಟೈಟಲ್ ಮಾತ್ರ ರಿವೀಲ್


ವೇದ ಚಿತ್ರ ಗೆದ್ದ ಖುಷಿಯಲ್ಲಿಯೇ ಗೀತಾ ಫಿಕ್ಚರ್ಸ್ ಇನ್ನೂ ಒಂದು ಅನೌನ್ಸ್ ಮೆಂಟ್ ಮಾಡುತ್ತಿದೆ. ತಮ್ಮ ನಿರ್ಮಾಣದ ಎರಡನೇ ಚಿತ್ರವನ್ನ ಶಿವರಾತ್ರಿ ದಿನವೇ ಅನೌನ್ಸ್ ಮಾಡೋಕೆ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್​ ಪ್ಲಾನ್ ಮಾಡಿದ್ದಾರೆ.
ಶಿವರಾತ್ರಿ ದಿನ ಮಧ್ಯಾಹ್ನ 12.12ಕ್ಕೆ ಚಿತ್ರದ ಟೈಟಲ್ ರಿವೀಲ್ ಆಗಲಿದೆ. ಈ ಚಿತ್ರದ ಡೈರೆಕ್ಟರ್ ಯಾರೂ ಅನ್ನೋದು ಕೂಡ ತಿಳಿಯುತ್ತದೆ. ಜೊತೆಗೆ ಈ ಸಿನಿಮಾದ ಇತರ ಮಾಹಿತಿ ಕೂಡ ರಿವೀಲ್ ಆಗಲಿದೆ.


ಹೌದು, ಇದಕ್ಕೂ ಮೊದಲೇ ಚಿತ್ರದ ನಿರ್ದೇಶಕರಾದ ನರ್ತನ್ ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಎಕ್ಸಕ್ಲೂಸಿವ್ ಮಾತನಾಡಿದ್ದಾರೆ. ಆ ಮಾತಿನ ಒಟ್ಟು ಚಿತ್ರಣ ಇಲ್ಲಿದೆ ಓದಿ.


- ಬೈರತಿ ರಣಗಲ್ ಚಿತ್ರದ ಟೈಟಲ್ ನಾಳೆ ಅನೌನ್ಸ್ ಅಗಲಿದೆ.

- ಮಧ್ಯಾಹ್ನ 12.12ಕ್ಕೆ ಚಿತ್ರದ ಟೈಟಲ್ ಮಾತ್ರ ರಿವೀಲ್ ಆಗಲಿದೆ.

- ಬೈರತಿ ರಣಗಲ್ ಚಿತ್ರದ ಕಥೆ ಕೆಲಸ ಬಹುತೇಕ ಪೂರ್ಣ ಆಗಿದೆ.

-ಬೈರತಿ ರಣಗಲ್ ಚಿತ್ರ ಮಫ್ತಿ ಚಿತ್ರದ ಸಿಕ್ವೆಲ್ ಅಲ್ವೇ ಅಲ್ಲ.

-ಬೈರತಿ ರಣಗಲ್ ಸಿನಿಮಾ ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರ ಆಗಿದೆ.

- ಬೈರತಿ ರಣಗಲ್ ಕಥೆ ಮಫ್ತಿ ಚಿತ್ರದ ಶ್ರೀಮುರಳಿ ಬರುವ ಮುಂಚಿನ ಕಥೆ ಆಗಿದೆ.

- ಬೈರತಿ ರಣಗಲ್ ಚಿತ್ರದ ಇತರ ಮಾಹಿತಿ ಶೀಘ್ರದಲ್ಲಿಯೇ ಹೊರ ಬೀಳಲಿದೆ.


ಮಫ್ತಿ ಡೈರೆಕ್ಟರ್ ನರ್ತನ್ ಅವರಿಗೆ ಹೀಗೆ ಫೋನ್​ನಲ್ಲಿ ನಾವು ಕೇಳುವ ಪ್ರಶ್ನೆಗೆ ಉತ್ತರಿಸುತ್ತಲೇ ಹೋದರು. ಇವರ ಮಾತಿನ ಒಟ್ಟು ತಾತ್ಪರ್ಯ ಇಷ್ಟೆ, ತಮ್ಮ ನಿರ್ದೇಶನದ ಬೈರತಿ ರಣಗಲ್ ಒಂದು ಪ್ರಿಕ್ವೆಲ್ ಚಿತ್ರ ಆಗಿದೆ.


ಈ ಚಿತ್ರಕ್ಕೆ ಬೈರತಿ ರಣಗಲ್ ಅಂತ ಶೀರ್ಷಿಕೆ ಇಟ್ಟಿದ್ದೇವೆ. ಶಿವರಾತ್ರಿಯ ದಿನ ಕೇವಲ ಟೈಟಲ್ ಮಾತ್ರ ಅನೌನ್ಸ್ ಆಗಲಿದೆ. ಇದರ ಹೊರತಾಗಿ ಚಿತ್ರೀಕರಣದ ಪ್ಲಾನಿಂಗ್ ನಡೆಯುತ್ತಿದೆ.


Kannada Actor Shiva Rajkumar New Movie Big Announcement
ಬೈರತಿ ರಣಗಲ್ ಚಿತ್ರದ ಕಥೆ ಕೆಲಸ ಬಹುತೇಕ ಪೂರ್ಣ


ಇದೇ ವರ್ಷ ಬೈರತಿ ರಣಗಲ್ ಸಿನಿಮಾ ಆರಂಭವಾಗುತ್ತದೆ. ಸದ್ಯಕ್ಕೆ ಇಷ್ಟೇ ಮಾಹಿತಿ. ಇತರ ಮಾಹಿತಿಯನ್ನ ಕೊಡ್ತಾ ಹೋಗುತ್ತೇವೆ ಅನ್ನೋ ಅರ್ಥದಲ್ಲಿಯೇ ಡೈರೆಕ್ಟರ್ ನರ್ತನ್ ಹೇಳಿದ್ದಾರೆ.


ಇದನ್ನೂ ಓದಿ: Love Birds Review: ಮದುವೆ ಬಗ್ಗೆ ದೊಡ್ಡ ಪಾಠ ಮಾಡ್ತಾರೆ ಲವ್​ ಬರ್ಡ್ಸ್​!


ಒಟ್ಟಾರೆ, ಶಿವರಾತ್ರಿಯ ವಿಶೇಷ ದಿನವೇ ಶಿವಣ್ಣ ಮತ್ತೊಂದು ಸಿನಿಮಾ ಅನೌನ್ಸ್ ಆಗಲಿದೆ. ಮಫ್ತಿ ಚಿತ್ರ ನೋಡಿ ಇಷ್ಟ ಪಟ್ಟ ಜನ, ಬೈರತಿ ರಣಗಲ್ ಚಿತ್ರದಲ್ಲಿ ಶಿವಣ್ಣನ ಮತ್ತೊಂದು ರೂಪದಲ್ಲಿಯೇ ಕಾಣಬಹುದು. ಯಾವುದಕ್ಕೂ ವೇಟ್ ಮಾಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು