ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Rajkumar Movies) ಕುಮಾರ್ ಎನರ್ಜಿಗೆ ಯಾರೂ ಸಾಟಿನೇ ಇಲ್ಲ ಬಿಡಿ. ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಸುದೀಪ್ ಸೇರಿ ಇನ್ನೂ ಹಲವು ಹೀರೋಗಳಿದ್ದಾರೆ. ಇವರೆಲ್ಲ ವರ್ಷಕ್ಕೆ (Shiva Rajkumar Latest Movie Updates) ಒಂದೋ ಎರಡೋ ಸಿನಿಮಾ ಮಾಡ್ತಾರೆ. ನಾಲ್ಕೈದು ಸಿನಿಮಾ ಒಪ್ಪಿರೋದು ಕಡಿಮೆನೆ. ವರ್ಷಕ್ಕೆ ಒಂದು ಅನ್ನೋ ಲೆಕ್ಕಕ್ಕೆ ಸಿನಿಮಾ ಪಯಣ ಮುಂದುವರೆಸಿದ್ದಾರೆ. ಶಿವರಾಜ್ (Shiva Rajkumar Updates) ಕುಮಾರ್ ವಿಚಾರದಲ್ಲಿ ಹಾಗಿಲ್ವೇ ಇಲ್ಲ. ವರ್ಷಕ್ಕೆ ನಾಲ್ಕೈದು ಚಿತ್ರಗಳನ್ನ ಒಪ್ಪುತ್ತಾರೆ. ಹೇಳಿದ ಟೈಮ್ಗೆ ಆಯಾ ಸಿನಿಮಾಗಳನ್ನ ಮುಗಿಸಿಕೊಡ್ತಾರೆ. ಆ ಲೆಕ್ಕದಂತೆ ಶಿವಣ್ಣನ 2023 ರ ಸಿನಿಮಾ (Kannada Hero Shiva Rajkumar) ಲೆಕ್ಕ ದೊಡ್ಡದೇ ಇದೆ. ಹೆಚ್ಚು ಕಡಿಮೆ 7 ರಿಂದ 8 ಸಿನಿಮಾಗಳು ಕೈಯಲ್ಲಿವೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಅಸಾಧಾರ ಎನರ್ಜಿ ಇರೋ ಹೀರೋ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎನರ್ಜಿಗೆ ನಿಜಕ್ಕೂ ಯಾರೂ ಸಾಟಿ ಇಲ್ವೇ ಇಲ್ಲ. ಸಿನಿಮಾ ಒಪ್ಪಿಕೊಳ್ಳುವ ಲೆಕ್ಕದಲ್ಲೂ ಅಷ್ಟೇ, ಆಫ್ ದಿ ರೆಕಾರ್ಡ್ ಓಡಾಟವೂ ಅಷ್ಟೆ. ಶಿವಣ್ಣ ಫುಲ್ ಎನರ್ಜಿಯಲ್ಲಿಯೇ ಇದ್ದಾರೆ. ಸಿನಿಮಾ ಜರ್ನಿಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಶಿವರಾಜ್ ಕುಮಾರ್ ಸಿನಿಮಾಗಳ ಲೆಕ್ಕ ಈಗಾಗಲೇ 125 ಆಗಿ ಹೋಗಿದೆ. ಇದಕ್ಕೂ ಮೊದಲೇ ಒಪ್ಪಿರೋ ಸಿನಿಮಾಗಳು, 2023 ರಲ್ಲಿ ಶುರು ಮಾಡ್ಬೇಕಿರೋ ಸಿನಿಮಾಗಳು ಹೀಗೆ ಈ ವರ್ಷವೂ ಹೆಚ್ಚು ಕಡಿಮೆ ಏಳೆಂಟು ಚಿತ್ರಗಳನ್ನ ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ.
ಜೋಗಿ ಜೋಳಿಗೆಯಲ್ಲಿರೋ ಚಿತ್ರಗಳಾವವು ಗೊತ್ತೇ?
ಜೋಗಿ ಚಿತ್ರ ಖ್ಯಾತಿಯ ಶಿವರಾಜ್ಕುಮಾರ್ ಈ ವರ್ಷ ಒಪ್ಪಿರೋ ಸಿನಿಮಾಗಳು ಯಾವವು? ಈ ಒಂದು ಪ್ರಶ್ನೆಗೆ ಲಿಸ್ಟ್ ದೊಡ್ಡದೇ ಇದೆ. ಅಷ್ಟೇ ವಿಶೇಷ ಅನಿಸೋ ಹೆಸರುಗಳೂ ಈ ಚಿತ್ರಗಳಿಗೆ ಇವೆ. ಆ ಒಂದು ಲಿಸ್ಟ್ ಇಲ್ಲಿದೆ ನೋಡಿ.
- 45 ಮೂವೀಸ್
- ಕರಟಕ ದಮನಕ
- ಸಾಗಾ ಆಫ್ ಅಶ್ವತ್ಥಾಮ
- ಘೋಸ್ಟ್
- ಕ್ಯಾಪ್ಟನ್ ಮಿಲ್ಲರ್
- ಜೈಲರ್
- ತೆಲುಗು ಚಿತ್ರ ಒಂದಿದೆ
ಶಿವರಾಜ್ ಕುಮಾರ್ ಒಪ್ಪಿರೋ ಸಿನಿಮಾ ಲಿಸ್ಟ್ ಇದಾಗಿದೆ. ಈಗಾಗಲೇ ಡೈರೆಕ್ಟರ್ ಶ್ರೀನಿಯ ಘೋಸ್ಟ್ ಸಿನಿಮಾದ ಎರಡು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರವನ್ನೂ ಶಿವಣ್ಣ ಒಪ್ಪಿದ್ದಾರೆ. ಅದು ಇನ್ನಷ್ಟೆ ಶುರು ಆಗಬೇಕಿದೆ.
45 ಮೂವೀಸ್-ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾ
ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಚಿತ್ರ ನಿರ್ದೇಶನಕ್ಕೂ ಮುಂದಾಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ 45 ಮೂವೀಸ್ ಅಂತಲೇ ಕರೆಯಲಾಗುತ್ತಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ರಾಜ್ ಬಿ ಶೆಟ್ಟಿ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕೂಡ ಅಭಿನಯಿಸುತ್ತಿದ್ದಾರೆ.
ಇನ್ನು ನೆಲ್ಸನ್ ನಿರ್ದೇಶನ ಜೈಲರ್ ಚಿತ್ರದಲ್ಲೂ ಶಿವಣ್ಣ ಅಭಿನಯಿಸಿ ಬಂದಿದ್ದಾರೆ. ಅರುಣ್ ಮಾತೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ವಿಶೇಷ ಪಾತ್ರವನ್ನೆ ಮಾಡಿದ್ದಾರೆ.
ಸಾಗಾ ಆಫ್ ಅಶ್ವತ್ಥಾಮ ಒಪ್ಪಿದ ಶಿವರಾಜ್ ಕುಮಾರ್
ಸಾಗಾ ಆಫ್ ಅಶ್ವತ್ಥಾಮ ಚಿತ್ರವೂ ವಿಶೇಷವಾಗಿಯೇ ಇದೆ. ಇದನ್ನ ಸಚಿನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸದ್ಯಕ್ಕೆ ಇಷ್ಟೇ ಮಾಹಿತಿ ಇದೆ. ಇನ್ನುಳಿದಂತೆ, ತೆಲುಗು ಚಿತ್ರವೊಂದನ್ನ ಶಿವಣ್ಣ ಒಪ್ಪಿದ್ದಾರೆ. ಆದರೆ ಆ ಬಗ್ಗೆ ಇನ್ನೂ ಯಾವ ವಿಷಯವೂ ಹೊರ ಬಿದ್ದಿಲ್ಲ.
ಇದನ್ನೂ ಓದಿ: Nikki Galrani Birthday: ಮದುವೆ ನಂತ್ರ ಗಂಡನೊಂದಿಗೆ ನಿಕ್ಕಿ ಗರ್ಲಾನಿ ಮೊದಲ ಬರ್ತ್ಡೇ!
ಇದರ ಮಧ್ಯ ಶಿವರಾಜ್ ಕುಮಾರ್ ಜಾಹೀರಾತಗಳನ್ನೂ ಒಪ್ಪಿದ್ದಾರೆ. ಅವುಗಳ ಕೆಲಸದಲ್ಲೂ ಬ್ಯುಸಿ ಇರ್ತಾರೆ. ಹಾಗೇನೆ ಈಗ ಘೋಸ್ಟ್ ಸಿನಿಮಾದ ಎರಡು ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಫೆಬ್ರವರಿಯಿಂದಲೇ ಈ ಚಿತ್ರದ ಮೂರನೇ ಹಂತದ ಶೂಟಿಂಗ್ ಶುರು ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ