ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shiva Rajkumar) ಅಭಿನಯದ ಘೋಸ್ಟ್ ಸಿನಿಮಾ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಶಿವರಾಜ್ಕುಮಾರ್ ಯಂಗ್ ಲುಕ್ ಅಂತೂ ಇನ್ನಿಲ್ಲದಂತೆ (Shiva Rajkumar Look Viral) ವೈರಲ್ ಆಗುತ್ತಿದೆ. ಎಲ್ಲೆಡೆ ಈ ಲುಕ್ ಬಗ್ಗೆ ಚರ್ಚೆ ಕೂಡ ಆಗುತ್ತಿದೆ. ಚಿತ್ರದಲ್ಲಿ ಶಿವಣ್ಣನ ಫ್ಲ್ಯಾಷ್ ಬ್ಯಾಕ್ (Flash Back Story) ಸ್ಟೋರಿ ಕೂಡ ಇದೆ. ಇದನ್ನ ಹೇಳಲಿಕ್ಕೆ ಶಿವಣ್ಣನ ಯಂಗ್ ರೂಪದ ಅಗತ್ಯವೇ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ತಯಾರಿ ಕೂಡ ನಡೆಯುತ್ತಿದೆ. ಇದರ ಮಧ್ಯ ಚಿತ್ರದ ಒಂದು ಬಿಗ್ ಅಪ್ಡೇಟ್ (Big News Big Updates) ಕೂಡ ಈಗ ಭಾರೀ ಸದ್ದು ಮಾಡುತ್ತಿದೆ. ಇದರ ಬಗ್ಗೆ ಚಿತ್ರದ ನಿರ್ದೇಶಕ ಶ್ರೀನಿ ನ್ಯೂಸ್-18 ಕನ್ನಡ ಡಿಜಿಟಲ್ಗೂ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನದ ಘೋಸ್ಟ್ ನಿರೀಕ್ಷೆ ಮೂಡಿಸಿದೆ. 2023 ರಲ್ಲಿ ನಿರೀಕ್ಷಿತ ಚಿತ್ರಗಳಲ್ಲಿ ಈ ಚಿತ್ರವೂ ಇದೆ ಅಂದ್ರೆ ತಪ್ಪಾಗೋದಿಲ್ಲ. ಚಿತ್ರೀಕರಣದ ಹಂತದಲ್ಲಿ ಘೋಸ್ಟ್ ತನ್ನ ವಿಶೇಷ ಪೋಸ್ಟರ್ ಮೂಲಕ ಗಮನ ಸೆಳೆದಿದೆ.
ಅದರಲ್ಲೂ ಚಿತ್ರದ ಶಿವರಾಜ್ ಕುಮಾರ್ ಯಂಗ್ ಲುಕ್ ಭಾರೀ ಕ್ರೇಜ್ ಹುಟ್ಟಿಸಿದೆ. ಗ್ಯಾಂಗ್ಸ್ಟರ್ ರೂಪದಲ್ಲಿ ಶಿವರಾಜ್ಕುಮಾರ್ ತುಂಬಾ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ಹಾಗೇ ಎಲ್ಲರನ್ನೂ ಸೆಳೆಯುತ್ತಿರೋ ಈ ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಶೇಷತೆ ಇದೆ.
ಶಿವಣ್ಣನ "ಘೋಸ್ಟ್" ಸಿನಿಮಾ ಬಿಗ್ ಅಪ್ಡೇಟ್!
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಘೋಸ್ಟ್ ಸಿನಿಮಾದ ಎರಡು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಈಗಾಗಲೇ ಚಿತ್ರದ ನಿರ್ದೇಶಕ ಶ್ರೀನಿ ಬೆಂಗಳೂರಿನಲ್ಲಿ ಜೈಲ್ ಸೆಟ್ನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣ ಮಾಡಿದ್ದಾರೆ.
ಘೋಸ್ಟ್ ಚಿತ್ರದ ಎರಡನೇ ಹಂತದ ಚಿತ್ರೀಕರಣವನ್ನ ಮೈಸೂರಿನಲ್ಲಿ ಮಾಡಿದ್ದಾರೆ. ಚಿತ್ರದ ಮಹತ್ವದ ದೃಶ್ಯಗಳನ್ನ ಇಲ್ಲಿಯೇ ಚಿತ್ರೀಕರಿಸಿದ್ದಾರೆ. ಇದರ ಮಧ್ಯ ಸಿನಿಮಾದ ಮೂರನೇ ಹಂತದ ಚಿತ್ರೀಕರಣದ ಪ್ಲಾನಿಂಗ್ ನಡೆಯುತ್ತಿದೆ.
ಘೋಸ್ಟ್ ಚಿತ್ರದ 3ನೇ ಹಂತದ ಚಿತ್ರೀಕರಣ ಎಲ್ಲಿ?
ಡೈರೆಕ್ಟರ್ ಶ್ರೀನಿ ತಮ್ಮ ಕನಸಿನ ಘೋಸ್ಟ್ ಚಿತ್ರವನ್ನ ಅದ್ಭುತವಾಗಿ ತೆಗೆಯುತ್ತಿದ್ದಾರೆ. ಒಳ್ಳೆ ದೃಶ್ಯಗಳನ್ನ ಪ್ಲಾನ್ ಮಾಡಿಕೊಂಡಿದ್ದಾರೆ. ಮೊದಲ ಮತ್ತು ಎರಡನೇ ಹಂತದಲ್ಲಿ ಒಳ್ಳೆ ದೃಶ್ಯಗಳನ್ನ ತೆಗೆದಿದ್ದಾರೆ.
ಮೂರನೇ ಹಂತದ ಚಿತ್ರೀಕರಣಕ್ಕೂ ಪ್ಲಾನ್ ಮಾಡುತ್ತಿದ್ದಾರೆ. ಮೊದಲ ಮತ್ತು ಎರಡನೇ ಹಂತದಲ್ಲಿ ಒಳಾಂಗಣ ದೃಶ್ಯಗಳನ್ನ ತೆಗೆದಿದ್ದಾರೆ. ಮೂರನೇ ಹಂತದಲ್ಲಿ ಹೊರಾಂಗಣದಲ್ಲಿ ಘೋಸ್ಟ್ ಚಿತ್ರದ ಚಿತ್ರೀಕರಣ ಮಾಡುವ ಯೋಚನೆ ಮಾಡಿದ್ದಾರೆ.
ಘೋಸ್ಟ್ ಚಿತ್ರದ ಕೊನೆ ಹಂತದ ಚಿತ್ರೀಕರಣ ಯಾವಾಗ?
ಫೆಬ್ರವರಿ 10 ರಂದು ಘೋಸ್ಟ್ ಚಿತ್ರದ 3ನೇ ಹಂತದ ಚಿತ್ರೀಕರಣ ಆರಂಭಗೊಳ್ಳಲಿದೆ. ಚಿತ್ರದ ಮಹತ್ವದ ದೃಶ್ಯಗಳನ್ನ ಈ ಮೂರನೇ ಹಂತದಲ್ಲಿ ತೆಗೆಯಲು ಡೈರೆಕ್ಟರ್ ಶ್ರೀನಿ ಪ್ಲಾನ್ ಮಾಡಿದ್ದಾರೆ.
ಡೈರೆಕ್ಟರ್ ಶ್ರೀನಿ ಒಟ್ಟು ಮೂರು ಹಂತದಲ್ಲಿ ಇಡೀ ಸಿನಿಮಾದ ಶೂಟಿಂಗ್ ಪ್ಲಾನ್ ಮಾಡಿದ್ದರು. ಅದರಂತೆ ಈಗಾಗಲೇ ಎರಡು ಹಂತದಲ್ಲಿ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಮೂರನೇ ಹಂತದಲ್ಲಿ ಚಿತ್ರದ ಶೂಟಿಂಗ್ ಕೆಲಸ ಪೂರ್ಣಗೊಳಿಸಲಿದ್ದಾರೆ.
ಚಿತ್ರೀಕರಣದ ಹಂತದಲ್ಲಿಯೇ "ಘೋಸ್ಟ್" ಬಿಗ್ ನ್ಯೂಸ್
ಘೋಸ್ಟ್ ಸಿನಿಮಾದ ಆಡಿಯೋ ರೈಟ್ಸ್ ಸೇಲ್ ಆಗಿದೆ. ಆನಂದ್ ಆಡಿಯೋ ಘೋಸ್ಟ್ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಕ್ಕು 1.5 ಕೋಟಿಗೆ ಹೋಗಿದೆ ಅನ್ನೋ ಮಾಹಿತಿ ಕೂಡ ಇದೆ.
ಇದನ್ನೂ ಓದಿ: Rishab Shetty-Pragathi Shetty: ಕಾಂತಾರ ಹೀರೋ ರಿಷಬ್ ದುಬೈ ಪ್ರವಾಸ! ವಿಡಿಯೋ ಶೇರ್ ಮಾಡಿದ ಪ್ರಗತಿ ಶೆಟ್ಟಿ
ಅರ್ಜುನ್ ಜನ್ಯ ಸಂಗೀತದ ವೇದ ಚಿತ್ರದ ಹಾಡುಗಳೂ ಸೂಪರ್ ಹಿಟ್ ಆಗಿವೆ. ಇದರ ಬೆನ್ನಲ್ಲಿಯೇ ಘೋಸ್ಟ್ ಚಿತ್ರದ ಆಡಿಯೋ ರೈಟ್ಸ್ ಹೆಚ್ಚಿನ ಮೊತ್ತಕ್ಕೆ ಹೋಗಿದೆ. ಇನ್ನುಳಿದಂತೆ ಮಾರ್ಚ್ ತಿಂಗಳಲ್ಲಿ ಚಿತ್ರದ ಮೂರನೇ ಹಂತದ ಚಿತ್ರೀಕರಣ ಪೂರ್ಣಗೊಳ್ಳಲಿದೆ. ತದನಂತರ ಚಿತ್ರೀಕರಣದ ನಂತರದ ಕೆಲಸದಲ್ಲಿ ಸಿನಿಮಾ ಟೀಮ್ ಬ್ಯುಸಿ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ