ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂದ್ರೆ (Shiva Rajkumar)ಎಲ್ಲರಿಗೂ ಗೌರವ ಇದೆ. ಮದ್ರಾಸ್ನಲ್ಲಿ ರಾಜ್ಕುಮಾರ್ ಮನೆಯನ್ನ ಒಂದು ರೀತಿ ಹೆಡ್ ಆಫೀಸ್ ಅಂತಲೂ ಕರೆಯುತ್ತಿದ್ದರು. ಮದ್ರಾಸ್ನಂತಹ ಊರಲ್ಲಿ ಕನ್ನಡಿಗರಿಗೆ ಇದು (Shivanna Hit movies) ಒಂದು ದೊಡ್ಡ ಆಫೀಸ್ ಆಗಿತ್ತು. ಬೆಂಗಳೂರಿಗೆ ಬಂದ್ಮೇಲೆ ದೊಡ್ಮನೆ ಆಗಿರೋದು ಗೊತ್ತೇ ಇದೆ. ಒಳ್ಳೆ ಸ್ನೇಹಿತರ ವಲಯದಲ್ಲಿ (Kannada Movie Star) ಬೆಳೆದ ಈ ಮನೆಯ ದೊಡ್ಡ ಮಗ ಶಿವರಾಜ್ ಕುಮಾರ್ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಶಿವಣ್ಣ ಆಗಿದ್ದಾರೆ. ಅಭಿನಯದ ಪ್ರತಿಭೆಯಿಂದಲೇ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಇವರ ಚಿತ್ರ ಜೀವನದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು (Hattric Hero Shiva Rajkumar) ಹ್ಯಾಟ್ರಿಕ್ ಹೀರೋ ಕೂಡ ಅನಿಸಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಚಿತ್ರ ಜೀವನಕ್ಕೆ ಈಗ 37 ವರ್ಷ ತುಂಬಿದೆ. 1986 ರಿಂದ 2023 ಲೆಕ್ಕವನ್ನ ತೆಗೆದುಕೊಂಡರೆ ಶಿವರಾಜ್ ಕುಮಾರ್ ತಮ್ಮ ಜೀವನದಲ್ಲಿ 37 ವರ್ಷ ಚಿತ್ರರಂಗದಲ್ಲಿಯೇ ಕಳೆದಿದ್ದಾರೆ.
ಆನಂದ ಚಿತ್ರದಿಂದ ಇಲ್ಲಿವರೆಗೂ ಯಶಸ್ವಿ 37 ವರ್ಷದ ಪಯಣ
ಆನಂದ ಸಿನಿಮಾ ಶಿವಣ್ಣನ ಬದುಕಿನ ಯಶಸ್ವಿ ಮೊದಲ ಹೆಜ್ಜೆ ಆಗಿದೆ. ಈ ಚಿತ್ರ 1986 ರಲ್ಲಿ ರಿಲೀಸ್ ಆಗಿತ್ತು. ಇದು ಸುಮ್ನೆ ಒಂದು ಸಿನಿಮಾ ಆಗಿ ಬರಲಿಲ್ಲ, 37 ವರ್ಷ ಶಿವಣ್ಣನ ಚಿತ್ರ ಜೀವನಕ್ಕೆ ಭದ್ರ ಬುನಾದಿ ಕೂಡ ಆಗಿತ್ತು.
ಆನಂದ ಚಿತ್ರ ಗೆದ್ದ ಮೇಲೆ ರಥಸಪ್ತಮಿ ಸಿನಿಮಾ ಬಂತು. ಇದು ಶಿವರಾಜ್ ಕುಮಾರ್ ಸಿನಿಮಾ ಜೀವನದ ಎರಡನೇ ಹಿಟ್ ಚಿತ್ರ ಆಗಿತ್ತು. ಮನಮೆಚ್ಚಿದ ಹುಡುಗಿ ಮೂರನೇ ಹಿಟ್ ಚಿತ್ರವಾಯಿತು. ಅಲ್ಲಿಗೆ ಕನ್ನಡಕ್ಕೆ ಹ್ಯಾಟ್ರಿಕ್ ಹೀರೋ ಸಿಕ್ಕೇ ಬಿಟ್ಟರು.
ಸೋಲು-ಗೆಲುವು ಲೆಕ್ಕ ಇಲ್ಲ-ಕಾಯಕವೇ ಕೈಲಾಸವೆಲ್ಲ!
ಶಿವರಾಜ್ ಕುಮಾರ್ ಸೋಲು ಮತ್ತು ಗೆಲುವು ಇವುಗಳನ್ನ ನೋಡದೇ ಪ್ರಾಮಾಣಿಕವಾಗಿಯೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ವರ್ಷಕ್ಕೆ ಮೂರು ಇಲ್ಲವೇ ನಾಲ್ಕು ಸಿನಿಮಾಗಳನ್ನ ಒಪ್ಪಿಕೊಂಡು ಯಶಸ್ವಿಯಾಗಿ ಮುನ್ನುಗುತ್ತಿದ್ದಾರೆ.
ಶಿವರಾಜ್ ಕುಮಾರ್ ಅವರ ಸಿನಿ ಜರ್ನಿಯಲ್ಲಿ ಅನೇಕ ನಿರ್ದೇಶಕರು ಬಂದಿದ್ದಾರೆ. ಆ ನಿರ್ದೇಶಕರು ಮಾಡಿರೋ ಪ್ರತಿ ಪ್ರಯೋಗಕ್ಕೂ ಒಗ್ಗಿಕೊಂಡ ಶಿವಣ್ಣ, ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ.
ಓಂ ಚಿತ್ರದ ಸತ್ಯನಿಗೆ ಇನ್ನೂ ಇದೇ ಭಾರೀ ಬೇಡಿಕೆ
ಓಂ ಚಿತ್ರದ ಮೂಲಕ ಶಿವರಾಜ್ ಕುಮಾರ್ ಸತ್ಯನಾಗಿ ಎಲ್ಲರ ಹೃದಯದಲ್ಲಿ ಈಗಲೂ ಇದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಡೈರೆಕ್ಷನ್ನಲ್ಲಿ ಬಂದ ಈ ಚಿತ್ರ ಈಗಲೂ ಬೇಡಿಕೆ ಉಳಿಸಿಕೊಂಡಿದೆ.
ಜೋಗಿ ಪ್ರೇಮ್ ಅವರು ಶಿವಣ್ಣನ ಪಾತ್ರ ಮತ್ತು ಹೇರ್ ಸ್ಟೈಲ್ ಮೇಲೆ ಸಾಕಷ್ಟು ಎಕ್ಸಪರಿಮೆಂಟ್ಸ್ ಮಾಡಿದ್ದಾರೆ. ಅದರ ಫಲವೇ ಶಿವರಾಜ್ ಕುಮಾರ್ ಲಾಂಗ್ ಹೇರ್ ಲುಕ್ಲ್ಲಿ ಪ್ರೇಮ್ ಚಿತ್ರದಲ್ಲಿ ಕಾಣಿಸಿಕೊಂಡು ಕಂಗೊಳಿಸಿದ್ದಾರೆ.
ಮಫ್ತಿ ಚಿತ್ರದ ಮೂಲಕ ವಿಭಿನ್ನವಾಗಿ ಕಂಡ ಶಿವರಾಜ್ ಕುಮಾರ್
ಜೋಗಿ, ಜೋಗಯ್ಯ, ದಿ ವಿಲನ್ ಹೀಗೆ ಹಲವಾರು ಸಿನಿಮಾಗಳು ಸಾಲು ಸಾಲು ಸಾಗುತ್ತವೆ. ಇದರ ಜೊತೆಗೆ ಶಿವರಾಜ್ ಕುಮಾರ್ ಅವರ ಮೇಲೆ ಇನ್ನೂ ಒಬ್ಬ ನಿರ್ದೇಶಕರು ಪ್ರಯೋಗ ಮಾಡಿದ್ದು ಇದೆ. ಅವರೇ ಮಫ್ತಿ ಡೈರೆಕ್ಟರ್ ನರ್ತನ್.
ಹೌದು, ಮಫ್ತಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರನ್ನ ವಿಭಿನ್ನವಾಗಿ ಅದರಲ್ಲೂ ವಿಲನ್ ರೂಪದಲ್ಲಿ ತೋರಿಸಿದ್ದು ಬೇರೆ ಯಾರೋ ಅಲ್ಲ, ಇದೇ ನವ ನಿರ್ದೇಶಕ ನರ್ತನ್ ಅವರೇ ಆ ಒಂದು ಕೆಲಸ ಮಾಡಿದ್ದರು.
ಅದಕ್ಕೇನೆ ಮಫ್ತಿ ಚಿತ್ರದ ಭೈರತಿ ರಣಗಲ್ ಪಾತ್ರ ಜನಕ್ಕೆ ಬೇರೆ ರೀತಿ ಕಾಣಿಸಿಕೊಂಡಿತ್ತು. ಪ್ರೇಕ್ಷಕರಿಗೆ ಹೊಸ ಭಾವನೆ ಮೂಡಿಸಿತ್ತು. ಅದೇ ರೀತಿನೇ ಈಗ ನರ್ತನ್ ಮತ್ತೆ ಭೈರತಿ ರಣಗಲ್ ಪಾತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಇದನ್ನ ಹೇಳಲಿಕ್ಕೆ ಭೈರತಿ ರಣಗಲ್ ಹೆಸರಿನ ಚಿತ್ರ ಈಗ ಅಧಿಕೃತವಾಗಿ ಅನೌನ್ಸ್ ಆಗಿದೆ.
ಹೊಸ ಹೊಸ ಪ್ರಯೋಗಕ್ಕೆ ಒಗ್ಗಿಕೊಳ್ಳುವ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಅವರನ್ನ ಇನ್ನೂ ಒಬ್ಬ ನಿರ್ದೇಶಕರು ವಿಭಿನ್ನವಾಗಿ ತೋರಿಸೋ ಕೆಲಸವನ್ನ ಡೈರೆಕ್ಟರ್ ಎ.ಹರ್ಷ ಕೂಡ ಮಾಡಿದ್ದಾರೆ. ಇವರ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ಭಜರಂಗಿ ಆಗಿ ಕಂಗೊಳಿಸಿದ್ದಾರೆ. ಭಜರಂಗಿ-2 ಚಿತ್ರದಲ್ಲೂ ಶಿವರಾಜ್ ಕುಮಾರ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದರು.
ಶಿವರಾಜ್ ಕುಮಾರ್ ನಿರ್ಮಾಣದ ವೇದ ಚಿತ್ರದಲ್ಲೂ ಶಿವರಾಜ್ ಕುಮಾರ್ ಹೊಸ ಕಥೆ ಹೇಳಿದ್ದಾರೆ. ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಇಲ್ಲಿ ಶಿವಣ್ಣನ ಜೊತೆಗೆ ಅಭಿನಯಿಸಿ ಜನರ ಮನಸನ್ನ ಕದ್ದಿದ್ದಾರೆ.
ಹೊಸ ಚಿತ್ರ ಹೊಸ ಪ್ರಯೋಗ-ಶಿವಣ್ಣನ ಸೂಪರ್ ಸಿನಿ ಜರ್ನಿ
ಹೀಗೆ ಶಿವರಾಜ್ ಕುಮಾರ್ ತಮ್ಮ ಚಿತ್ರ ಜೀವನದಲ್ಲಿ ಹೊಸ ಹೊಸ ಕಥೆಗಳನ್ನ ಕೇಳುತ್ತಲೇ, ಹೊಸ ಹೊಸ ಪಾತ್ರಗಳಿಗೆ ಜೀವ ತುಂಬತ್ತಲೇ, ಈಗ 37 ವರ್ಷ ಪೂರೈಸಿದ್ದಾರೆ. ವರ್ಷ ವರ್ಷದಂತೆ ಈ ವರ್ಷ ಕೂಡ ಶಿವರಾಜ್ ಕುಮಾರ್ ಒಂದು ಅರ್ಧ ಡಜನ್ ಸಿನಿಮಾ ಒಪ್ಪಿದ್ದಾರೆ
ಇದನ್ನೂ ಓದಿ: Unkissed Girl: ಈ ನಟಿಯನ್ನು ಅನ್ಕಿಸ್ಡ್ ಗರ್ಲ್ ಆಫ್ ಇಂಡಿಯಾ ಅಂತ ಕರೆಯೋದ್ಯಾಕೆ? ಈಕೆ ಒಮ್ಮೆಯೂ ಕಿಸ್ ಮಾಡಿಲ್ವಾ?
ಯೋಗರಾಜ್ ಭಟ್ಟರ ಸಿನಿಮಾ ಕೂಡ ಈ ಸಾಲಿನಲ್ಲಿದೆ. ಪರ ಭಾಷೆಯಲ್ಲಿ ಜೈಲರ್ ಕೂಡ ಇದೆ. ಧನುಷ್ ಸಿನಿಮಾ ಕೂಡ ಒಪ್ಪಿದ್ದಾರೆ. ಘೋಸ್ಟ್ ಚಿತ್ರದ ಮೂಲಕ ಈಗಾಗಲೇ ಹೊಸ ಪ್ರಯೋಗಕ್ಕೆ ಒಳಗಾಗಿ ಹಾಲಿವುಡ್ ಆ್ಯಕ್ಷನ್ ಚಿತ್ರದ ಹೀರೋ ರೀತಿ ಕಂಗೊಳಿಸುತ್ತಿದ್ದಾರೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ