• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bhairathi Ranagal Updates: ಭೈರತಿ ರಣಗಲ್ ಚಿತ್ರಕ್ಕೆ ಮುಹೂರ್ತ ಫಿಕ್ಸ್- ಕೆಲವೇ ದಿನಗಳಲ್ಲಿ ಶೂಟಿಂಗ್ ಶುರು

Bhairathi Ranagal Updates: ಭೈರತಿ ರಣಗಲ್ ಚಿತ್ರಕ್ಕೆ ಮುಹೂರ್ತ ಫಿಕ್ಸ್- ಕೆಲವೇ ದಿನಗಳಲ್ಲಿ ಶೂಟಿಂಗ್ ಶುರು

ಭೈರತಿ ರಣಗಲ್ ಚಿತ್ರದ ಕಥೆ ಶಿವಣ್ಣನಿಗೆ ಮೊದಲೇ ಗೊತ್ತಿದೆ?

ಭೈರತಿ ರಣಗಲ್ ಚಿತ್ರದ ಕಥೆ ಶಿವಣ್ಣನಿಗೆ ಮೊದಲೇ ಗೊತ್ತಿದೆ?

ಭೈರತಿ ರಣಗಲ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಸಿನಿಮಾದ ಒಂದಷ್ಟು ಮಾಹಿತಿ ಕೂಡ ಹೊರ ಬಂದಿದೆ. ಆದರೆ ಚಿತ್ರದ ಚಿತ್ರೀಕರಣ ಯಾವಾಗ? ಡೈರೆಕ್ಟರ್ ನರ್ತನ್ ರೆಡಿ ಆಗಿದ್ದಾರಾ? ಈ ಎಲ್ಲ ಡಿಟೈಲ್ಸ್ ಇಲ್ಲಿದೆ ಓದಿ.

  • News18 Kannada
  • 5-MIN READ
  • Last Updated :
  • Karnataka, India
  • Share this:
  • published by :

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Bhairathi Ranagal Updates) ಅಭಿನಯದ ಭೈರತಿ ರಣಗಲ್ ಸಿನಿಮಾ ಮುಹೂರ್ತ ಪ್ಲಾನಿಂಗ್‌ ಶುರು ಆಗಿದೆ. ಡೈರೆಕ್ಟರ್ ನರ್ತನ್ ಕೂಡ ತಮ್ಮ ಈ ಚಿತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರೀಕರಣಕ್ಕೂ ಮುಂಚೆ ಬೇಕಾಗೋ ಎಲ್ಲ ಸಿದ್ಧತೆಯನ್ನ ಮಾಡಿಕೊಳ್ಳುವಲ್ಲಿ (Shiva Rajkumar Movie Updates) ಬ್ಯುಸಿ ಆಗಿದ್ದಾರೆ. ಮಫ್ತಿ ಸಿನಿಮಾ ಮೂಲಕ ಶಿವಣ್ಣ ಭೈರತಿ ರಣಗಲ್ ಆಗಿ ರಣ..ರಣವಾಗಿ ಕಂಡರು. ಅದೇ ಭೈರತಿ ರಣಗಲ್ ಮತ್ತೆ ಬರ್ತಿದ್ದಾನೆ. ವಿಶೇಷವಾಗಿಯೇ (Narthan Movie Latest News) ಈ ಸಲ ಭೈರತಿ ರಣಗಲ್ ಚಿತ್ರದಲ್ಲಿ ಭೈರತಿಯ ಕಥೆ ಮಾತ್ರ ಇರುತ್ತದೆ. ಮಫ್ತಿ ಚಿತ್ರದಲ್ಲಿದ್ದ ಶ್ರೀಮುರಳಿ ಕಥೆ ಈ ಚಿತ್ರದಲ್ಲಿ ಬರೋದಿಲ್ಲ.


ಇದಕ್ಕೆ ಬಲವಾದ (Shivanna New Movie Updates) ಕಾರಣವೂ ಇದೆ. ಇದರ ಜೊತೆಗೆ ಈ ಚಿತ್ರವನ್ನ ಈ ಸಲ ಬೇರೆ ಲೆವಲ್‌ಗೆ ತೆಗೆದುಕೊಂಡು ಹೋಗುವ ಪ್ಲಾನ್ ಕೂಡ ಆಗಿದೆ.


Kannada Actor Shiva Rajkumar Bhairathi Ranagal Movie Latest Updates
ಭೈರತಿ ರಣಗಲ್ ಚಿತ್ರಕ್ಕೆ ಮಫ್ತಿ ಕಲಾವಿದರ ಆಯ್ಕೆ!


ಭೈರತಿ ರಣಗಲ್ ಸಿನಿಮಾದ ಕೆಲಸ ಜೋರಾಗಿಯೇ ನಡೆಯುತ್ತಿದೆ. ಚಿತ್ರೀಕರಣದ ಮುಂಚಿನ ತಯಾರಿಯಲ್ಲಿ ಸಿನಿಮಾದ ಡೈರೆಕ್ಟರ್ ನರ್ತನ್ ಮಗ್ನರಾಗಿದ್ದಾರೆ. ಕಥೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಓಕೆ ಆಗಿದೆ. ಮಫ್ತಿ ಸಿನಿಮಾ ಟೈಮ್‌ನಲ್ಲಿಯೇ ಡೈರೆಕ್ಟರ್ ನರ್ತನ್ ಈ ಚಿತ್ರದ ಕಥೆಯನ್ನ ಶಿವಣ್ಣನಿಗೆ ಹೇಳಿದ್ದರು.




ಭೈರತಿ ರಣಗಲ್ ಚಿತ್ರದ ಕಥೆ ಶಿವಣ್ಣನಿಗೆ ಮೊದಲೇ ಗೊತ್ತಿದೆ?


ಆಗಲೇ ಶಿವಣ್ಣ ಈ ಕಥೆಯನ್ನ ಒಪ್ಪಿದ್ದರು. ಆದರೆ ಸಿನಿಮಾ ಮಾಡಲು ಕಾಲ ಈಗ ಕೂಡಿ ಬಂದಿದೆ. ಚಿತ್ರ ಪ್ರೇಮಿಗಳೂ ಭೈರತಿ ರಣಗಲ್ ಪಾತ್ರವನ್ನ ಮಫ್ತಿ ಚಿತ್ರದಲ್ಲಿ ನೋಡಿ ತುಂಬಾನೇ ಖುಷಿ ಪಟ್ಟಿದ್ದರು. ಅಷ್ಟೇ ಆಶ್ಚರ್ಯ ಕೂಡ ಪಟ್ಟಿದ್ದರು. ಆದರೆ ಇದೇ ಪ್ರೇಕ್ಷಕರಿಗೆ ಭೈರತಿ ರಣಗಲ್ ಚಿತ್ರದಲ್ಲಿ ಶಿವಣ್ಣನ ಭೈರತಿ ರಣಗಲ್ ಪಾತ್ರ ಇಡಿಯಾಗಿಯೇ ಸಿಗುತ್ತದೆ ನೋಡಿ.


ಅಂದ್ರೆ, ಭೈರತಿ ರಣಗಲ್ ಸಿನಿಮಾ ಅನ್ನೋದು ಭೈರತಿ ರಣಗಲ್ ಕಥೆಯೇ ಆಗಿದೆ. ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರೋ ಈ ಚಿತ್ರದಲ್ಲಿ ಭೈರತಿ ರಣಗಲ್ ಕಥೇನೆ ಇದೆ. ಭೈರತಿ ರಣಗಲ್ ಹಿನ್ನೆಲೆ ಇಲ್ಲಿ ರೋಚಕವಾಗಿಯೇ ಮೂಡಿ ಬರಲಿದೆ. ಸಿನಿಮಾ ಡೈರೆಕ್ಟರ್ ನರ್ತನ್ ಒಂದ್ ಒಳ್ಳೆ ಕಥೆಯನ್ನೆ ಈಗ ಮಾಡಿದ್ದಾರೆ.


ಭೈರತಿ ರಣಗಲ್ ಚಿತ್ರಕ್ಕೆ ಮಫ್ತಿ ಕಲಾವಿದರ ಆಯ್ಕೆ!
ಭೈರತಿ ರಣಗಲ್ ಚಿತ್ರಕ್ಕೂ ಮಫ್ತಿಗೂ ಒಂದು ಲಿಂಕ್ ಇದೆ. ಅದುವೇ ಪ್ರೀಕ್ವೆಲ್ ಅನ್ನೋ ಲಿಂಕ್. ಹಾಗಾಗಿಯೇ ಭೈರತಿ ರಣಗಲ್ ಚಿತ್ರದಲ್ಲಿ ಮಫ್ತಿ ಚಿತ್ರದ ಕಲಾವಿದರಾದ ದೇವರಾಜ್, ಬಾಬು ಹಿರಣಯ್ಯ, ಮಧು ಗುರುಸ್ವಾಮಿ, ವಸಿಷ್ಠ ಸಿಂಹ ಅವರಂತಹ ಕಲಾವಿದರೂ ಇರಲಿದ್ದಾರೆ ಅನ್ನೋ ಸುದ್ದಿ ಕೂಡ ಇದೆ.


ಭೈರತಿ ರಣಗಲ್ ಚಿತ್ರದ ಕಲಾವಿದರ ಆಯ್ಕೆಯಲ್ಲಿಯೇ ಡೈರೆಕ್ಟರ್ ನರ್ತನ್ ಈಗ ತೊಡಗಿಕೊಂಡಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ್ ಅನ್ನ ನವೀನ್ ಕುಮಾರ್ ಮಾಡುತ್ತಿದ್ದಾರೆ. ಮಫ್ತಿ ಚಿತ್ರಕ್ಕೂ ಇದೇ ನವೀನ್ ಕ್ಯಾಮೆರಾ ವರ್ಕ್ ಮಾಡಿದ್ದರು.


ಭೈರತಿ ರಣಗಲ್ ಸಿನಿಮಾಕ್ಕೆ ಕೆಜಿಎಫ್‌ ರವಿ ಬಸ್ರೂರು ಸಂಗೀತ


ಭೈರತಿ ರಣಗಲ್ ಸಿನಿಮಾಕ್ಕೆ ಕೆಜಿಎಫ್ ರವಿ ಬಸ್ರೂರು ಸಂಗೀತ ಕೊಡ್ತಿದ್ದಾರೆ. ಸಿನಿಮಾದ ಬಹುತೇಕ ತಯಾರಿ ಆದಂತಿದೆ. ಹಾಗಾಗಿಯೇ ಈಗ ಸಿನಿಮಾ ಮುಹೂರ್ತದ ದಿನ ಕೂಡ ಫಿಕ್ಸ್ ಆಗುತ್ತಿದೆ. ಇದೇ ಮೇ ತಿಂಗಳಲ್ಲಿಯೇ ಭೈರತಿ ರಣಗಲ್ ಚಿತ್ರದ ಚಿತ್ರೀಕರಣ ಶುರು ಆಗುತ್ತಿದೆ.


Kannada Actor Shiva Rajkumar Bhairathi Ranagal Movie Latest Updates
ಭೈರತಿ ರಣಗಲ್ ಸಿನಿಮಾಕ್ಕೆ ಕೆಜಿಎಫ್‌ ರವಿ ಬಸ್ರೂರು ಸಂಗೀತ


ಆದರೆ ಶಿವಣ್ಣ ತಮ್ಮ ಇತರ ಕೆಲಸಗಳನ್ನ ಮುಗಿಸಿಕೊಂಡು, ಜೂನ್‌ ತಿಂಗಳಿನಿಂದ ಭೈರತಿ ರಣಗಲ್ ಟೀಮ್ ಸೇರಲಿದ್ದಾರೆ. ಭೈರತಿ ರಣಗಲ್ ಆಗಿ ಮತ್ತೊಮ್ಮೆ ಪಾತ್ರ ಪ್ರವೇಶ ಮಾಡಲಿದ್ದಾರೆ.


ಇದನ್ನೂ ಓದಿ: Karan Johar: ಕರಣ್ ಜೊತೆ ಕಾಫಿ ಕುಡಿಯಲು ರಿಷಬ್-ರಾಕಿ ಭಾಯ್ ರೆಡಿ!


ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗುತ್ತದೆ. ಶಿವರಾಜ್ ಕುಮಾರ್ ಅವರ ಗೀತಾ ಪಿಕ್ಚರ್ಸ್ ವೇದ ಸಿನಿಮಾ ಆದ್ಮೇಲೆ ಈ ಸಿನಿಮಾ ನಿರ್ಮಿಸಲು ಮುಂದಾಗಿದೆ.

top videos
    First published: