ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar Movie) ಅಭಿನಯದ ಘೋಸ್ಟ್ ಚಿತ್ರದ ಸುದ್ದಿ ದಿನವೂ ಹೊರ ಬೀಳುತ್ತಿವೆ. ಘೋಸ್ಟ್ ಚಿತ್ರ ಮೂರನೇ (Ghost Movie) ಹಂತದ ಚಿತ್ರೀಕರಣ ಇದೇ 10 ರಿಂದಲೇ ಶುರು ಆಗುತ್ತಿದ್ದು ಸಿನಿಮಾದ ಬಗ್ಗೆ ಇನ್ನೂ ಒಂದು ಸುದ್ದಿ ಹರಡುತ್ತಿದೆ. ಮೊನ್ನೆ ಮೊನ್ನೆ ಅನುಪಮ್ ಖೇರ್ (Anupam Kher) ಅಭಿನಯದ ವಿಷಯ ತಿಳಿದೆ ಇದೆ. ಅದು ಬಹುತೇಕ ಖಚಿತ ಕೂಡ ಆಗಿದೆ. ಆದರೆ ಈ ನಡುವೆ ಇನ್ನೂ ಒಂದು ಇಂಟ್ರಸ್ಟಿಂಗ್ ಸುದ್ದಿ ಸದ್ದು ಮಾಡುತ್ತಿದೆ. ಇದರ ಬಗ್ಗೆ ಚಿತ್ರದ (Director Srini Movie) ಡೈರೆಕ್ಟರ್ ಶ್ರೀನಿ, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಅನ್ನೋದರ ಸುತ್ತ ಇಲ್ಲೊಂದು ಸುದ್ದಿ ಇದೆ ಓದಿ.
ಘೋಸ್ಟ್ ಚಿತ್ರಕ್ಕೆ ವಿಜಯ್ ಸೇತುಪತಿ ಬರ್ತಾರಾ?
ಕನ್ನಡದ ಘೋಸ್ಟ್ ಚಿತ್ರದ ತಾರಾ ಬಳಗದ ವಿಷಯ ಒಂದೊಂದಾಗಿಯೇ ರಿವೀಲ್ ಆಗುತ್ತಿದೆ. ಮೊನ್ನೆ ಮೊನ್ನೆವರೆಗೂ ಅನುಪಮ್ ಖೇರ್ ಆಗಮನ ಸುದ್ದಿ ಇತ್ತು.
ಇದರ ಮಧ್ಯ ಕೆಜಿಎಫ್ ಚಿತ್ರದ ಅಮ್ಮನ ಪಾತ್ರಧಾರಿ ಅರ್ಚನಾ ಜೋಯಿಸ್ ಈ ಚಿತ್ರದಲ್ಲಿ ಪತ್ರಕರ್ತೆ ಪಾತ್ರ ಮಾಡಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡಿದೆ.
ಕನ್ನಡಕ್ಕೆ ವಿಜಯ್ ಸೇತುಪತಿ ಬರೋದು ನಿಜವೇ?
ಘೋಸ್ಟ್ ಚಿತ್ರದಲ್ಲಿ ಶಿವಣ್ಣನ ಜೊತೆಗೆ ಅಭಿನಯಿಸಲು ದೊಡ್ಡ ತಾರಾ ಬಳಗದ ಪ್ಲಾನ್ ಆದಂತಿದೆ. ಮಲೆಯಾಳಂ ನಟ ಜಯರಾಮ್ ಈ ಮೂಲಕ ಕನ್ನಡಕ್ಕೂ ಬಂದು ಹೋಗಿದ್ದಾರೆ. ತಮ್ಮ ಭಾಗದ ಒಂದು ಹಂತದ ಚಿತ್ರೀಕರಣ ಮುಗಿಸಿಕೊಟ್ಟು ಹೋಗಿದ್ದಾರೆ.
ಇದೇ ಚಿತ್ರದ ಮೂಲಕ ಅನುಪಮ್ ಖೇರ್ ಕೂಡ ಮೊದಲ ಬಾರಿಗೆ ಕನ್ನಡಕ್ಕೆ ಬರ್ತಿದ್ದಾರೆ. ಕನ್ನಡಿಗರ ಹೃದಯವನ್ನ ಗೆಲ್ಲೋಕೆ ಅನುಪಮ್ ಖೇರ್ ಸಜ್ಜಾಗುತ್ತಿದ್ದಾರೆ ಅಂತಲೇ ಹೇಳಬಹುದು.
ವಿಜಯ್ ಸೇತುಪತಿ ಜತೆ ಮಾತು-ಕತೆ ಆಗಿದಿಯೇ?
ತಮಿಳು ನಟ ವಿಜಯ್ ಸೇತುಪತಿ ಕನ್ನಡಕ್ಕೆ ಬರೋದು ನಿಜವೇ? ಈಗಾಗಲೇ ಸಿನಿಮಾ ಟೀಮ್ ವಿಜಯ್ ಅವರನ್ನ ಅಪ್ರೋಚ್ ಮಾಡಲಾಗಿದಿಯೇ? ಅಪ್ರೋಚ್ ಮಾಡಿದ್ದರೇ, ವಿಜಯ್ ಸೇತುಪತಿ ಏನಂದ್ರು? ಈ ಎಲ್ಲ ಪ್ರಶ್ನೆಗೆ ಉತ್ತರ ಕೂಡ ಸಿಕ್ಕಿದೆ. ಇದನ್ನ ಯಾರು ಕೊಟ್ಟರು ಗೊತ್ತೇ? ಹೇಳ್ತಿವಿ ನೋಡಿ.
ವಿಜಯ್ ಸೇತುಪತಿ ಆಗಮನದ ಬಗ್ಗೆ ಡೈರೆಕ್ಟರ್ ಶ್ರೀನಿ ಏನಂತಾರೆ?
ಘೋಸ್ಟ್ ಚಿತ್ರದ ಬಗ್ಗೆ ದಿನವೂ ಒಂದಿಲ್ಲ ಒಂದು ಸುದ್ದಿ ಇದ್ದೇ ಇರುತ್ತವೆ. ಅದರಲ್ಲಿ ಈಗ ವಿಜಯ್ ಸೇತುಪತಿ ಆಗಮನದ ವಿಷಯ ಹೆಚ್ಚು ಗಮನ ಸೆಳೆಯುತ್ತಿದೆ.
ಇದರ ಬಗ್ಗೆ ಚಿತ್ರದ ನಿರ್ದೇಶಕ ಶ್ರೀನಿ ಒಂದಷ್ಟು ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ವಿಜಯ್ ಸೇತುಪತಿ ಅವರನ್ನ ಕನ್ನಡಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಅಪ್ರೋಚ್ ಮಾಡಿರೋದು ಸತ್ಯ. ಆದರೆ ಯಾವುದು ಇನ್ನೂ ಫೈನಲ್ ಆಗಿಲ್ಲ ಎಂದು ನಿರ್ದೇಶಕ ಶ್ರೀನಿ, ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಫೆಬ್ರವರಿ-10 ರಿಂದ ಘೋಸ್ಟ್ ಸಿನಿಮಾ ಶೂಟಿಂಗ್ ಆರಂಭ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಚಿತ್ರೀಕರಣ ಮತ್ತೆ ಆರಂಭಗೊಳ್ಳುತ್ತಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣವನ್ನ ಡೈರೆಕ್ಟರ್ ಶ್ರೀನಿ ಮುಗಿಸಿದ್ದಾರೆ.
ಇದನ್ನೂ ಓದಿ: Film Fight: ಅಪ್ಪು ಜನ್ಮ ದಿನ ರಿಲೀಸ್ಗೆ ರೆಡಿಯಾಗಿವೆ 2 ಕನ್ನಡ ಸಿನಿಮಾ! ಉಪ್ಪಿ-ಗಣಿ ಫಿಲ್ಮ್ ಪೈಪೋಟಿ
ಮೂರನೇ ಕೊನೆ ಹಂತದ ಶೂಟಿಂಗ್ನ್ನ ಇದೇ ತಿಂಗಳ 10 ರಂದು ಶುರು ಮಾಡುತ್ತಿದ್ದಾರೆ. ಬೆಂಗಳೂರಲ್ಲಿಯೇ ಚಿತ್ರದ ಚಿತ್ರೀಕರಣ ಮಾಡೋ ಯೋಚನೆ ಕೂಡ ಡೈರೆಕ್ಟರ್ ಶ್ರೀನಿ ಮಾಡಿದ್ದಾರೆ. ಚಿತ್ರದ ನಿರ್ಮಾಪಕ ಸಂದೇಶ್ ತಮ್ಮ ಈ ಚಿತ್ರಕ್ಕೆ ಏನೂ ಕೊರತೆ ಆಗದ ರೀತಿಯಲ್ಲಿಯೇ ಡೈರೆಕ್ಟರ್ ಶ್ರೀನಿ ಕಲ್ಪನೆಗೆ ಸಪೋರ್ಟ್ ಮಾಡಿದ್ದಾರೆ.
ಒಟ್ಟಾರೆ, ಘೋಸ್ಟ್ ಸಿನಿಮಾ ಕನ್ನಡದ ಬಹು ನಿರಿಕ್ಷಿತ ಚಿತ್ರವೇ ಆಗಿದೆ. ಇನ್ನುಳಿದಂತೆ ಚಿತ್ರ ತಂಡ ಇತರ ಮಾಹಿತಿಯ್ನ ಹಂತ ಹಂತವಾಗಿಯೇ ಬಿಟ್ಟುಕೊಡುವ ಪ್ಲಾನ್ ಕೂಡ ಮಾಡಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ