ಕನ್ನಡದ ಘೋಸ್ಟ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ (Ghost Cinema Latest Updates) ಸ್ಪೆಷಲ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಶಿವಣ್ಣ ಹೀರೋನಾ ? ವಿಲನ್ನಾ ಅನ್ನುವ ಕುತೂಹಲ ಕೂಡ ಇದೆ. ಇದಕ್ಕೆ ಪೂರಕ ಅನ್ನುವ ಹಾಗೆ ಘೋಸ್ಟ್ ಚಿತ್ರದ (Shiva Rajkumar Acted Ghost Film) ಶಿವಣ್ಣನ ಗ್ಯಾಂಗ್‌ಸ್ಟರ್ ಯಂಗ್ ಲುಕ್ ಇರೋ ಒಂದು ಪೋಸ್ಟರ್ ಅತಿ ಹೆಚ್ಚು ಗಮನ ಸೆಳೆದಿತ್ತು. ಅದಾದ್ಮೇಲೆ ಹಾಲಿವುಡ್ ಸ್ಪರ್ಶದಂತೆ ಕಾಣೋ ಇನ್ನೂ ಒಂದು ಲುಕ್ ಕೂಡ ರಿಲೀಸ್ ಆಯಿತು. ಅದು ಸಹ ಸೂಪರ್ ಆಗಿಯೇ ಇತ್ತು. ಹಾಗೆ ಸಾಕಷ್ಟು ವಿಶೇಷತೆಗಳೊಂದಿಗೆ ಸದ್ದು ಮಾಡ್ತಿರೋ ಘೋಸ್ಟ್ ಸಿನಿಮಾದ ಹೊಸ ಮಾಹಿತಿ ಏನು ? ಚಿತ್ರದ ಟೀಸರ್ ಯಾವಾಗ ರಿಲೀಸ್ ಆಗುತ್ತದೆ.
ಇಲ್ಲಿವರೆಗೂ ಏನೆಲ್ಲ (Sandalwood Movie Updates) ಆಗಿದೆ. ಈ ಬಗ್ಗೆ ಚಿತ್ರದ ಡೈರೆಕ್ಟರ್ ಎಂ.ಜೆ.ಶ್ರೀನಿವಾಸ್ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ. ಈ ಬಗೆಗಿನ ಒಂದು ಸ್ಟೋರಿ ಇಲ್ಲಿದೆ ಓದಿ.
ಘೋಸ್ಟ್ ಸಿನಿಮಾದ ಶೂಟಿಂಗ್ ಯಾವ ಹಂತದಲ್ಲಿದೆ ?
ಘೋಸ್ಟ್ ಸಿನಿಮಾ ಶೂಟಿಂಗ್ ಎಲ್ಲಿಗೆ ಬಂದು ಅನ್ನುವ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿದೆ. ಈ ಸಿನಿಮಾದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ. ಈಗ ಡೈರೆಕ್ಟರ್ ಎಂ.ಜೆ.ಶ್ರೀನಿವಾಸ್ ಚಿತ್ರದ ಕೊನೆ ಹಂತದ ಚಿತ್ರೀಕರಣದಲ್ಲಿಯೇ ಬ್ಯುಸಿ ಇದ್ದಾರೆ.
ಇವತ್ತಿನಿಂದಲೇ ಸಿನಿಮಾದ ಕೊನೆ ಹಂತದ ಚಿತ್ರೀಕರಣದ ಕೆಲಸ ಶುರು ಮಾಡಿದ್ದಾರೆ. ಇದಾದ್ಮೇಲೆ ಚಿತ್ರೀಕರಣದ ನಂತರದ ಕೆಲಸದಲ್ಲಿಯೇ ಡೈರೆಕ್ಟರ್ ಎಂ.ಜೆ.ಶ್ರೀನಿವಾಸ್ ಬ್ಯುಸಿ ಆಗಲಿದ್ದಾರೆ.
ಘೋಸ್ಟ್ ಸಿನಿಮಾದ ಟೀಸರ್ ಯಾವಾಗ ರಿಲೀಸ್ ಅನ್ನುವ ಪ್ರಶ್ನೆಗೆ ಶ್ರೀನಿ ಉತ್ತರ ಕೊಟ್ಟಿದ್ದಾರೆ. ಹೌದು, ನಮ್ಮ ಸಿನಿಮಾ ಟೀಸರ್ ಅನ್ನ ಶಿವಣ್ಣನ ಜನ್ಮ ದಿನಕ್ಕೇನೆ ಮಾಡುತ್ತಿದ್ದೇವೆ ಎಂದು ಶ್ರೀನಿ ಹೇಳಿಕೊಂಡಿದ್ದಾರೆ.
ಜುಲೈ 12 ರಂದು ಏನ್ ಸ್ಪೆಷಲ್ ಇದೆ ಗೊತ್ತೇ ?
ಹೌದು, ಜುಲೈ 12 ರಂದು ಶಿವಣ್ಣನ ಜನ್ಮ ದಿನ ಇದೆ. ಈ ದಿನವೇ ಘೋಸ್ಟ್ ಚಿತ್ರದ ಟೀಸರ್ ರಿಲೀಸ್ ಮಾಡುವ ಪ್ಲಾನ್ ಅನ್ನ ಸಿನಿಮಾ ತಂಡ ಮಾಡಿದೆ.
ಇನ್ನು ಸಿನಿಮಾದಲ್ಲಿ ಮಾಲಿವುಡ್ ನಾಯಕ ನಟ ಜಯರಾಮ್ ಅಭಿನಯಸಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಈ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ಮಾಡಿದ್ದಾರೆ.
ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ಪಾತ್ರ ಹೇಗಿದೆ ?
ಬೆಂಗಳೂರಿಗೆ ಬಂದು ಶಿವಣ್ಣನ ಜೊತೆಗೆ ಅನುಪಮ್ ಖೇರ್ ಅಭಿನಯಿಸಿದ್ದಾರೆ. ಮೆನ್ ಇನ್ ಬ್ಲ್ಯಾಕ್ ಅನ್ನುವ ರೀತಿಯಲ್ಲಿಯೇ ಬ್ಲ್ಯಾಕ್ ಕಾಸ್ಟೂಮ್ ಧರಿಸಿಕೊಂಡು ಶಿವಣ್ಣ ಮತ್ತು ಅನುಪಮ್ ಖೇರ್ ಮಿಂಚಿದ್ದಾರೆ.
ಇದರ ಹೊರತಾಗಿ ಈ ಚಿತ್ರದ ಕೊನೆಯಲ್ಲಿ ಒಂದು ಟ್ವಿಸ್ಟ್ ಕೂಡ ಇದ್ದು, ನಿರ್ದೇಶಕ ಶ್ರೀನಿ ಇಲ್ಲಿ ಹೊಸದೊಂದು ಲಿಂಕ್ ಕೂಡ ಬಿಟ್ಟುಕೊಡಲಿದ್ದಾರೆ. ಆ ಲಿಂಕ್ ಏನು ಅನ್ನೋದು ಈಗೀನ ಕುತೂಹಲ ಆಗಿದೆ.
The last leg of #GHOST shooting begins, also we have an update coming your way SOON 😎@NimmaShivanna @SandeshPro @ArjunJanyaMusic @TSeries pic.twitter.com/kohtJi6Xkh
— SRINI (@lordmgsrinivas) May 22, 2023
ಇದೇ ಚಿತ್ರದಲ್ಲಿ ಡೈರೆಕ್ಟರ್ ಶ್ರೀನಿ ಇನ್ನೂ ಒಂದು ಪ್ರಯೋಗ ಮಾಡಿದ್ದಾರೆ. ತಮ್ಮ ಅಭಿನಯದ ಬೀರ್‌ಬಲ್ ಪಾತ್ರ ಮತ್ತು ಘೋಸ್ಟ್ ಪಾತ್ರದ ಒಂದು ಇಂಟ್ರಸ್ಟಿಂಗ್ ಮೀಟ್ ಕೂಡ ಪ್ಲಾನ್ ಮಾಡಿದ್ದಾರೆ. ಇದು ನಿಜಕ್ಕೂ ಕನ್ನಡಕ್ಕೆ ಹೊಸ ರೀತಿಯ ಅಪ್ರೋಚ್ ಅಂತಲೇ ಹೇಳಬಹುದು.
ಇದನ್ನೂ ಓದಿ: Abishek Ambareesh: ಅಂಬಿ ಪುತ್ರ ಅಭಿ-ಅವಿವಾ ಮದುವೆ ಡೇಟ್ ಫಿಕ್ಸ್! ಇಲ್ಲಿದೆ ಅಪ್ಡೇಟ್ಸ್
ಹೀಗೆ ಘೋಸ್ಟ್ ಸಿನಿಮಾ ಟೆಕ್ನಿಕಲಿ ಸ್ಟ್ರಾಂಗ್ ಆಗಿಯೇ ಇದೆ. ಅಷ್ಟೇ ಸ್ಪೆಷಲ್ ಆಗಿಯೇ ಬೆಳ್ಳಿ ತೆರೆ ಮೇಲೆ ಮೂಡಿ ಬರಲಿದೆ. ಸದ್ಯಕ್ಕೆ ಸಿನಿಮಾ ತಂಡ ಚಿತ್ರೀಕರಣದ ಕೊನೆಯ ಸ್ಕೆಡ್ಯೂಲ್ ಚಿತ್ರೀಕರಿಸೋವಲ್ಲಿ ಬ್ಯುಸಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ