ಕನ್ನಡದ ಸುಪ್ರೀಂ ಹೀರೋ ಶಶಿಕುಮಾರ್ (Supreme Hero shashikumar) ಬಣ್ಣ ಹಚ್ಚಿ ಬಹಳ ದಿನಗಳೇ ಆಗಿದೆ. ಆದರೆ ಈಗ ವಿಶೇಷ ವಿಷಯದ ಒಂದು ಚಿತ್ರಕ್ಕೆ ಬಣ್ಣ ಹಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಇದೆ. ಶಶಿಕುಮಾರ್ ಪುತ್ರ ನಟ ಅಕ್ಷಿತ್ ಶಶಿಕುಮಾರ್ (Akshith Shashikumar) ಕೂಡ ಅಭಿನಯಿಸಿದ್ದಾರೆ. ಅಪ್ಪ ಮತ್ತು ಮಗ ಒಟ್ಟಿಗೆ ತೆರೆ ಹಂಚಿಕೊಂಡ ಮೊದಲ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಕನ್ನಡದ ಸ್ಮೈಲಿಂಗ್ ಸ್ಟಾರ್ ಅದಿತಿ ಪ್ರಭುದೇವ (Aditi Prabhudeva) ಅಭಿನಯಿಸಿದ್ದಾರೆ. ನಾಯಕ ನಟ ಅಕ್ಷಿತ್ ಶಶಿಕುಮಾರ್ಗೆ ಜೋಡಿ ಆಗಿದ್ದಾರೆ. ಇವರ ಜೋಡಿಯ ಈ ಚಿತ್ರದ ಕೆಲಸ ಕಂಪ್ಲೀಟ್ ಆಗಿದೆ. ಈಗ (Movie Ready to Release) ರಿಲೀಸ್ಗೂ ರೆಡಿ ಇದೆ. ಇದರ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ.
ಕನ್ನಡದ ಚಿತ್ರರಂಗದಲ್ಲಿ ನಟ ಶಶಿಕುಮಾರ್ ನಿಜಕ್ಕೂ ಸುಪ್ರೀಂ ಹೀರೋ ಆಗಿದ್ದರು. ಇವರ ವಿಶಿಷ್ಠ ಶೈಲಿಯ ನೃತ್ಯಕ್ಕೆ ಜನ ಮನಸೋತಿದ್ದರು. ಲೇಡಿ ಫ್ಯಾನ್ಸ್ ಕೂಡ ಬೇಜಾನ್ ಇದ್ದರು. ಇವರ ಸಿನಿಮಾಗಳನ್ನ ನೋಡುವ ಜನ ಈಗಲೂ ಇದ್ದಾರೆ.
ಆದರೆ ಶಶಿಕುಮಾರ್ ಸಿನಿಮಾ ಮತ್ತು ರಾಜಕಾರಣ ಎರಡನ್ನೂ ಬ್ಯಾಲನ್ಸ್ ಮಾಡುತ್ತಿದ್ದಾರೆ. ಇದರ ಮಧ್ಯ ಪುತ್ರ ಅಕ್ಷಿತ್ ಶಶಿಕುಮಾರ್ ಹೀರೋ ಆಗಿದ್ದಾರೆ. ಈಗಾಗಲೇ ಒಂದೆರಡು ಸಿನಿಮಾಗಳನ್ನ ಮಾಡಿದ್ದಾರೆ. ಅದರಲ್ಲಿ ಒಂದು ಚಿತ್ರ ರಿಲೀಸ್ ಗೆ ರೆಡಿ ಇದೆ.
ಮಗನ ಜೊತೆಗೆ ತೆರೆ ಹಂಚಿಕೊಂಡ ಶಶಿಕುಮಾರ್
ಹೌದು, ಸುಪ್ರೀಂ ಹೀರೋ ಶಶಿಕುಮಾರ್ ಬೆಳ್ಳಿ ತೆರೆಗೆ ವಾಪಸ್ ಆಗಿದ್ದಾರೆ. ಪುತ್ರ ಅಕ್ಷಿತ್ ಶಶಿಕುಮಾರ್ ಅಭಿನಯದ ಖೆಯೋಸ್ ಅನ್ನುವ ವಿಶೇಷ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಈ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಅಪ್ಪ-ಮಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡದಲ್ಲಿ ಖೆಯೊಸ್ ಎಂಬ ವಿಶಿಷ್ಠಿ ಹೆಸರಿನ ಸಿನಿಮಾ
ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನೆ ಮಾಡಿದ್ದಾರೆ. ತಂದೆಯ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರೋದು ಒಂದು ಕಡೆಯಾದರೆ, ಇದೇ ಚಿತ್ರದಲ್ಲಿ ಅಕ್ಷಿತ್ ವಿಭಿನ್ನವಾಗಿಯೇ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಖೆಯೊಸ್ ಅಂದ್ರೆ ಏನು? ಇದಕ್ಕೆ ಉತ್ತರ ಸಿಂಪಲ್ ಆಗಿದೆ. ಮನಸ್ಸಿನಲ್ಲಿ ಆಗೋ ಗೊಂದಲಕ್ಕೆ ಖೆಯೋಸ್ ಅಂತಾರೆ ಅನ್ನೋದನ್ನ ಸಿನಿಮಾ ತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ ಇದೆ. ಮರ್ಡರ್ ಮಿಸ್ಟರಿ ಕೂಡ ಇರೋದು ವಿಶೇಷ.
ಖೆಯೊಸ್ ಕಥೆ ಮೆಡಿಕಲ್ ಕಾಲೇಜ್ ಸುತ್ತ-ಮುತ್ತ!
ಮೆಡಿಕಲ್ ಕಾಲೇಜಿನಲ್ಲಿ ನಡೆಯೋ ಖೆಯೊಸ್ ಕಥೆ ಇದಾಗಿದೆ. ಈ ಕಥೆಯಲ್ಲಿ ಎಲ್ಲವೂ ಇದೆ. ಹಾಗೆ ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಅವರಿಗೆ ಅದಿತಿ ಪ್ರಭುದೇವ ಜೋಡಿ ಆಗಿದ್ದಾರೆ. ಇವರ ಜೋಡಿಯ ಈ ಚಿತ್ರ ರಿಲೀಸ್ ಗೆ ರೆಡಿ ಆಗಿದೆ.
ಅಕ್ಷಿತ್ ಶಶಿಕುಮಾರ್ ಮತ್ತು ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಸೂಪರ್ ಜೋಡಿ ರೀತಿನೇ ಕಾಣುತ್ತಿದ್ದಾರೆ. ಡಾ.ಜಿ.ವಿ.ಪ್ರಸಾದ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಮತ್ತು ಜಿ.ವಿ.ಪ್ರಸಾದ್ ಸೇರಿ ಚಿತ್ರಕ್ಕೆ ಮೂರು ಹಾಡುಗಳನ್ನ ಬರೆದಿದ್ದಾರೆ. ವಿಜಯ್ ಹರಿತ್ಸ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದೇ ಫೆಬ್ರವರಿ 17 ರಂದು ಖೆಯೊಸ್ ಚಿತ್ರ ರಿಲೀಸ್
ಕನ್ನಡದ ಖೆಯೊಸ್ ಚಿತ್ರ ರೆಡಿ ಆಗಿದೆ. ಚಿತ್ರ ತಂಡ ರಿಲೀಸ್ಗೆ ಸಿದ್ಧಗೊಳ್ಳುತ್ತಿದೆ. ಈಗಾಗಲೇ ಚಿತ್ರದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಅದನ್ನ ಸಿನಿಮಾ ಟೀಮ್ ಅಧಿಕೃತವಾಗಿ ಘೋಷಣೆ ಮಾಡಿದೆ.
ಇದೇ ಫೆಬ್ರವರಿ 17 ರಂದು ಖೆಯೊಸ್ ಚಿತ್ರ ರಿಲೀಸ್ ಆಗುತ್ತಿದ್ದು, ಶಶಿಕುಮಾರ್ ಮತ್ತು ಅಕ್ಷಿತ್ ಶಶಿಕುಮಾರ್ ಈ ಚಿತ್ರದ ಮೂಲಕ ಒಟ್ಟಿಗೆ ಬರ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ