Sharan In Hubballi: ಕನ್ನಡ ನಟ ಶರಣ್ ಹುಬ್ಬಳ್ಳಿಯಲ್ಲಿಯೇ ಓದಿರೋದು, ನಿಮ್ಗೆ ಗೊತ್ತಾ?

ಉತ್ತರ ಕರ್ನಾಟಕದ ಭಾಷೆ ಕೂಡ ಬಲ್ಲರು ಶರಣ್!

ಉತ್ತರ ಕರ್ನಾಟಕದ ಭಾಷೆ ಕೂಡ ಬಲ್ಲರು ಶರಣ್!

"ಹುಬ್ಬಳ್ಳಿಗೆ ಹೋಗಿದ್ದಾಗ ನನ್ನ ಬಾಲ್ಯ ದಿನದ ಶಾಲೆಗೆ ಭೇಟಿ ನೀಡಿದ್ದೆ. ಆಶ್ಚರ್ಯ ಏನೆಂದರೆ ಅಲ್ಲಿನ ಆಂತರಿಕ ನೋಟ, ಗಾಳಿಯ ಸೊಬಗು, ನಾನು ಕೂತಿರುವ ನನ್ನ ಒಂದನೇ ತರಗತಿಯ ಕೊಠಡಿ,‌ ಎಲ್ಲಾ ಹಾಗೆಯೇ ಉಂಟು" ಎಂದು ಬರೆದುಕೊಂಡಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಹುಬ್ಬಳ್ಳಿ ಅಂತಿಂಥ ಊರಲ್ಲ. (Hubballi) ಇಲ್ಲಿ ಎಲ್ಲವೂ ಇದೆ. ಎಲ್ಲರಿಗೂ ಆಶ್ರಯ ಇದೆ. ಒಂದು ಕಾಲದಲ್ಲಿ ಕಲಾವಿದರಿಗೆ ಈ ಊರು ಜೀವನಕ್ಕೆ ಆಧಾರವೇ ಆಗಿತ್ತು. ಅಂತಹ ಈ ಊರಲ್ಲಿ ಈಗಲೂ ಸಿನಿಮಾದವ್ರು ಪ್ರಚಾರಕ್ಕೆ ಬರ್ತಾರೆ. ಹೆಚ್ಚು-ಕಡಿಮೆ 500 ಕಿಲೋಮೀಟರ್ (kannada actor sharan) ದೂರದಿಂದಲೇ ಸ್ಟಾರ್ ನಟರೆಲ್ಲ ಇಲ್ಲಿಗೆ ಬಂದು ಹೋಗ್ತಾರೆ. ಒಂದು ರೀತಿ ಈ ಊರು ಸೆಂಟರ್​ ಆಫ್ ಉತ್ತರ ಕರ್ನಾಟಕ ಅಂತಲೇ ಹೇಳಬಹುದು. ಅಂತಹ ಈ ಊರಲ್ಲಿಯೇ ನಾಟಕಗಳನ್ನ ನೋಡುವ ಜನ ಇದ್ರು. ಸಿನಿಮಾಗಳನ್ನ ಈಗ ಹೇಗೆ ನೋಡ್ತಾರೋ ಹಾಗೆ ಅಂದು ನಾಟಕಗಳನ್ನ ನೋಡೋಕೆ ಜನ ಕಂಪನಿಗಳಿಗೆ ಬರ್ತಾ ಇದ್ರು. ಹಾಗೆ ಕಂಪನಿ ನಾಟಕಗಳು ಹುಬ್ಬಳ್ಳಿಯಲ್ಲಿ (Hubli) ಬಹಳ ದಿನಗಳವರೆಗೂ ಇರುತ್ತಿದ್ದವು.


ಅಂತಹ ಈ ಊರಲ್ಲಿ ನಾಯಕ ನಟ (actor sharan) ಶರಣ್ ಮತ್ತು ನಟಿ ಶೃತಿ ಅವರು ಕೂಡ ಬೆಳೆದಿದ್ದಾರೆ. ಇಲ್ಲಿಯೇ ಓದಿದ್ದು ಇದೆ. ಇವರು ಓದಿರೋ ಸ್ಕೂಲ್ ಇನ್ನೂ ಇದೆ.


Kannada Actor Sharan Studied in Hubballi and Recently he visits to School
ನಾಯಕ ನಟ ಶರಣ್​ ಅವರಿಗೆ ಹುಬ್ಬಳ್ಳಿ ಯಾಕೆ ಆಪ್ತ?


ನಾಯಕ ನಟ ಶರಣ್​ ಅವರಿಗೆ ಹುಬ್ಬಳ್ಳಿ ಯಾಕೆ ಆಪ್ತ?


ಕನ್ನಡದ ನಾಯಕ ನಟ ಶರಣ್ ಹುಬ್ಬಳ್ಳಿಯಲ್ಲಿಯೇ ಬೆಳೆದವ್ರು. ಇಲ್ಲಿಯ ಪ್ರತಿ ರಸ್ತೆಗಳಿಂದಲೂ ಪರಿಚಿತರು. ಇವರಿಗೆ ಹುಬ್ಬಳ್ಳಿ ಒಂದು ವಿಶೇಷ ಊರೇ ಆಗಿದೆ. ಈ ಊರಿನ ಬಗ್ಗೆ ವಿಶೇಷ ಅಟ್ಯಾಚ್​​ಮೆಂಟ್ ಕೂಡ ಶರಣ್ ಅವರಿಗೆ ಇದೆ. ನಂಟು ಕೂಡ ಇದೆ. ಇದು ನಮ್ಮೂರು. ನಮ್ಮೆಲ್ಲರ ಊರು ಅನ್ನೋವಷ್ಟು ಹುಬ್ಬಳ್ಳಿ ಶರಣ್ ಅವರಿಗೆ ಆಪ್ತವೇ ಆಗಿದೆ.


ನಾಯಕ ನಟ ಶರಣ್ ಅವರಿಗೆ ಸಿನಿಮಾ ನಂಟಿಗೂ ಮುಂಚೆ ರಂಗಭೂಮಿಯ ನಂಟಿದೆ. ತಂದೆ- ಇಬ್ಬರು ತಾಯಂದಿರೂ ಕಲಾವಿದರು ಅಲ್ವೇ. ಅವರು ರಂಗಭೂಮಿಯಲ್ಲಿ ಕಲಾಸೇವೆ ಮಾಡಿದವ್ರೇ. ಆ ನಂಟಿನಿಂದ ಕಂಪೆನಿ ನಾಟಕಗಳು ಸಂಚರಿಸಿದ ಅಷ್ಟೂ ಊರಲ್ಲಿ ಶರಣ್ ಬೆಳೆದುಕೊಂಡೇ ಬಂದಿದ್ದಾರೆ. ಎಲ್ಲ ಊರಿನ ಬಗ್ಗೆನೂ ತಿಳಿದುಕೊಂಡೇ ಇದ್ದಾರೆ.




ಉತ್ತರ ಕರ್ನಾಟಕದ ಭಾಷೆ ಕೂಡ ಬಲ್ಲರು ಶರಣ್


ಹೌದು, ಇದಂತೂ ನಿಜ, ಶರಣ್ ಅವರ ಸ್ನೇಹಿತರು ಹುಬ್ಬಳ್ಳಿಯಲ್ಲಿದ್ದಾರೆ. ಆಗಾಗ ಇಲ್ಲಿಗೆ ಬಂದು ಹೋದಾಗ ಆ ಗೆಳೆಯರನ್ನ ಮೀಟ್ ಆಗ್ತಾರೆ. ಹಾಗೆ ಶರಣ್ ಹುಬ್ಬಳ್ಳಿಗೆ ಕಾರ್​ ನಲ್ಲಿ ಬಂದ್ರೆ, ಸಾಗೋ ರಸ್ತೆಗಳಲ್ಲಿ ನೆನಪಿನ ಬುತ್ತಿನೂ ಬಿಚ್ಚಿಕೊಳ್ಳುತ್ತದೆ.


ಇದಕ್ಕೆ ಕಾರಣ, ಹುಬ್ಬಳ್ಳಿ ಇವರಿಗೆ ಅಷ್ಟೊಂದು ಒಳ್ಳೆ ಮೆಮೊರೀಸ್​ಗಳನ್ನ ಕೊಟ್ಟಿದೆ. ತಮ್ಮ ನಿರ್ಮಾಣದ ಗುರು ಶಿಷ್ಯರು ಸಿನಿಮಾವನ್ನ ಹುಬ್ಬಳ್ಳಿಗೂ ಬಂದು ಪ್ರಮೋಟ್ ಮಾಡಿದರು. ಆಗ ಇವರು ಕಾರಿನಲ್ಲಿಯೆ ಬೆಂಗಳೂರಿನಿಂದ ಇಲ್ಲಿವರೆಗೂ ಬಂದಿದ್ದರು.


ಹುಬ್ಬಳ್ಳಿ ನನ್ನ ಊರು ಇಲ್ಲಿ ನಾನು ಬೆಳೆದಿದ್ದೇನೆ


ನಿಜ, ಶರಣ್ ಅವರು ಹುಬ್ಬಳ್ಳಿಯಲ್ಲಿಯೇ ಬೆಳೆದಿದ್ದಾರೆ. ಇಲ್ಲಿಯ ಎಸ್​.ಡಿ.ಎ.(Seventh Day Adventist High School) ನಲ್ಲಿ ಓದಿದ್ದಾರೆ. ನರ್ಸರಿಯಿಂದ 7 ನೇ ತರಗತಿಯವರೆಗೂ ಶರಣ್ ಇದೆ ಶಾಲೆಯಲ್ಲಿಯೇ ಓದಿದ್ದಾರೆ.


ಹೀಗೆ ಇಲ್ಲಿಯೇ ಓದಿರೋ ಶರಣ್ ಅವರಿಗೆ ಇಲ್ಲಿಯ ರೊಟ್ಟಿ ಚಟ್ನಿ, ಪಲ್ಯ ಎಲ್ಲವೂ ಇಷ್ಟ ಆಗುತ್ತವೆ. ತಮ್ಮ ಕಂಪನಿ ನಾಟಕ ಇದ್ದ ಜಾಗದ ಬಗ್ಗೆನೂ ಇಲ್ಲಿಗೆ ಬಂದಾಗ ನೆನಪಿಸಿಕೊಳ್ತಾರೆ. ಇಲ್ಲಿಯ ನವನಗರದಲ್ಲಿ ತಮ್ಮ ಒಬ್ಬ ಸಂಬಂಧಿಕರೂ ಇದ್ರು ಅನ್ನೋದನ್ನ ನೆನಪಿಸಿಕೊಳ್ತಾರೆ.


ಹುಬ್ಬಳ್ಳಿಯ ಇದೇ ಸ್ಕೂಲ್​ ನಲ್ಲಿಯೇ ನಟಿ ಶೃತಿ ಅವರು ಓದಿದ್ದಾರೆ
ಶರಣ್ ಮತ್ತು ಶೃತಿ ಅವರು ಹುಬ್ಬಳ್ಳಿಯಲ್ಲಿಯೇ ಇದ್ದೋರು. ಇಲ್ಲಿಯೇ ಬೆಳೆದವರು. ಬಾಲ್ಯದಲ್ಲಿ ಇಲ್ಲಿಯ ಮಾರುಕಟ್ಟೆಯಲ್ಲೂ ಓಡಾಡಿದವ್ರು. ಹೀಗೆ ಹುಬ್ಬಳ್ಳಿ ಈ ಕಲಾವಿದರಿಗೆ ಚಿರಪರಿಚಿತ ಊರೇ ಆಗಿದೆ.


Kannada Actor Sharan Studied in Hubballi and Recently he visits to School
ಕನ್ನಡ ಆಕ್ಟರ್ ಶರಣ್ ಹುಬ್ಬಳ್ಳಿಯಲ್ಲಿಯೇ ಓದಿರೋದು ನಿಮ್ಗೆ ಗೊತ್ತಾ?


ಶೃತಿ ಅವರು ಇದೇ ಊರಿನ ಇದೇ ಎಸ್​ಡಿಎ ಸ್ಕೂಲ್​ ನಲ್ಲಿಯೇ ಓದಿದ್ದಾರೆ. ಹೆಚ್ಚು ಕಡಿಮೆ ಮೂರ್ನಾಲ್ಕು ವರ್ಷ ಓದಿದ್ದಾರೆ. ಇಂತಹ ಈ ಸ್ಕೂಲ್​ ಗೆ ಇತ್ತೀಚಿಗೆ ಶರಣ್ ಅವರು ಮತ್ತೊಮ್ಮೆ ಹೋಗಿದ್ದರು. ಆ ಕ್ಷಣದ ನೆನಪುಗಳನ್ನ ಮತ್ತೆ ಮತ್ತೆ ಮೆಲುಕು ಹಾಕಿಕೊಂಡು ಬಂದಿದ್ದಾರೆ.


ಕ್ಲಾಸ್ ರೂಮ್​ ನಲ್ಲಿ ಕುಳಿತು ಬಾಲ್ಯದ ದಿನ ಮೆಲುಕು ಹಾಕಿದ ಶರಣ್
ನಾಯಕ ನಟ ಶರಣ್ ಕಳೆದ ವಾರ ಹುಬ್ಬಳ್ಳಿಗೆ ಬಂದಿದ್ದರು. ಹಾಗೆ ಇತ್ತಕಡೆಗೆ ಬಂದಾಗ ಇಲ್ಲಿಯ ಭವಾನಿ ನಗರದ ತಾವು ಓದಿದ ಎಸ್.ಡಿ.ಎ. ಶಾಲೆಗೂ ಹೋಗಿದ್ದರು. ಒಂದಷ್ಟು ಹೊತ್ತು ಇಲ್ಲಿಯೆ ಕುಳಿತು ಹಳೆ ದಿನಗಳನ್ನ ಮೆಲುಕು ಹಾಕಿದ್ದರು. ಹೀಗೆ..


"ಹುಬ್ಬಳ್ಳಿಗೆ ಹೋಗಿದ್ದಾಗ ನನ್ನ ಬಾಲ್ಯ ದಿನದ ಶಾಲೆಯೊಂದಿಗೆ ಭೇಟಿ ನೀಡಿದ್ದೆ. ಆಶ್ಚರ್ಯ ಏನೆಂದರೆ ಅಲ್ಲಿನ ಆಂತರಿಕ ನೋಟ, ಗಾಳಿಯ ಸೊಬಗು, ನಾನು ಕೂತಿರುವ ನನ್ನ ಒಂದನೇ ತರಗತಿಯ ಕೊಠಡಿ,‌ ಎಲ್ಲಾ ಹಾಗೆಯೇ ಉಂಟು" ಎಂದು ಬರೆದುಕೊಂಡಿದ್ದಾರೆ.


ಕನ್ನಡ ಚಿತ್ರರಂಗದ ನಾಯಕ ನಟರಲ್ಲಿ ಶರಣ್ ಕೂಡ ಒಬ್ಬರಾಗಿದ್ದಾರೆ. ಇವರು ಹಾಸ್ಯ ಕಲಾವಿದರಾಗಿದ್ದು ಈಗ ನಾಯಕ ನಟರಾಗಿರೋದು ಗೊತ್ತೇ ಇದೆ. ಆದರೆ ಈ ನಟಿಗೆ ತಾವು ಬೆಳದು ಬಂದ ಹಾದಿ ಮರೆತು ಹೋಗಿಲ್ಲ.


ಇದನ್ನೂ ಓದಿ:  Rishab Shetty: ಬಾಲಿವುಡ್ ಮಂದಿಯ ಫೇವರಿಟ್ ಆಗಿಬಿಟ್ರು ಕನ್ನಡದ ರಿಷಬ್ ಶೆಟ್ರು!

ಅದನ್ನ ನೆನಪಿಸುತ್ತಲೇ ತಾವು ಓದಿದ ತಾವು ಓಡಾಡಿದ ಊರನ್ನೂ ಮರೆತಿಲ್ಲ. ಹಾಗೆ ಹುಬ್ಬಳ್ಳಿಯ ಬಗ್ಗೆನೂ ವಿಶೇಷ ಪ್ರೀತಿಯನ್ನ ಶರಣ್ ಹೊಂದಿದ್ದಾರೆ. ಆಗಾಗ ಈ ಬಗ್ಗೆ ಅಷ್ಟೇ ಮನಬಿಚ್ಚಿ ಹೇಳಿಕೊಳ್ತಾರೆ ಅನ್ನೊದೇ ವಿಶೇಷ.

First published: