Actor Sharan: ನನ್ನೂರಲ್ಲಿಯೇ ಗುರು ಶಿಷ್ಯರು ಪ್ರಚಾರ ಮಾಡಿದ ಹೆಮ್ಮೆ; ಪಿಟಿ ಮಾಸ್ಟರ್ ಶರಣ್

ಉತ್ತರ ಕರ್ನಾಟಕದ ಊಟದ ರುಚಿನೇ ಬೇರೆ ಇದೆ. ರೊಟ್ಟಿ, ಚೆಟ್ನಿ ಇವೆಲ್ಲ ಖುಷಿ ಕೊಡುತ್ತವೆ. ಇಲ್ಲಿ ಜನ ಕೂಡ ನನ್ನ ಮೇಲೆ ವಿಶೇಷ ಪ್ರೀತಿ ತೋರಿಸ್ತಾನೇ ಇದ್ದಾರೆ. ಈ ಹಿಂದಿನ ಸಿನಿಮಾ ಪ್ರಚಾರಕ್ಕೆ ಬಂದಾಗಲೂ ಅದೇ ಪ್ರೀತಿ ಇತ್ತು.

ಹುಬ್ಬಳ್ಳಿ ಅಂದ್ರೆ ನನಗೆ ವಿಶೇಷ ಅಟ್ಯಾಚ್​ಮೆಂಟ್

ಹುಬ್ಬಳ್ಳಿ ಅಂದ್ರೆ ನನಗೆ ವಿಶೇಷ ಅಟ್ಯಾಚ್​ಮೆಂಟ್

  • Share this:
ಸ್ಯಾಂಡಲ್​​ವುಡ್​ ನಲ್ಲಿ ಗುರು ಶಿಷ್ಯರು (Guru Shishyaru) ಸಿನಿಮಾ ಸದ್ದು ಮಾಡುತ್ತಿದೆ. 1995 ರ ಕಾಲಘಟ್ಟದ ಈ ಸಿನಿಮಾ ನಿಮ್ಮ (Childhood)ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಕಳೆದೇ ಹೋದ ಖೋ ಖೋ ಆಟವನ್ನೂ ಇದು ನೆನಪಿಗೆ ತರುತ್ತದೆ. ಕ್ರೀಡೆ ಆಧರಿಸಿದ, ಪ್ರೀತಿ ಪ್ರೇಮದ ಕಥೆಯುಳ್ಳ, ಒಂದಷ್ಟು ಹಾಸ್ಯದ ಹೊನಲೂ ಹರಿಸೋ ಕನ್ನಡದ ಗುರು ಶಿಷ್ಯರು ಇದೇ ತಿಂಗಳ 23 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ. ಸಿನಿಮಾ (Cinema) ತಂಡ ಚಿತ್ರದ ತಾರಾ ಬಳಗದೊಂದಿಗೆ ಉತ್ತರ ಕರ್ನಾಟಕ ಸೇರಿದಂತೆ ಎಲ್ಲ ಕಡೆಗೆ ಪ್ರಚಾರ ಮಾಡುತ್ತಿದೆ. ಚಿತ್ರದ ಪ್ರಚಾರಕ್ಕಾಗಿಯೇ ಹುಬ್ಬಳ್ಳಿಗೆ ಬಂದಿದ್ದ ಶರಣ್ ನಮ್ಮ ಜೊತೆಗೆ ಮಾತನಾಡಿದರು. ತಮ್ಮ ನಿರ್ಮಾಣದ ಈ ಚಿತ್ರದ ವಿಶೇಷಗಳನ್ನ ಹೇಳಿಕೊಂಡರು. ಉತ್ತರ ಕರ್ನಾಟಕ ಭಾಷೆಯಲ್ಲೂ ಒಂದಷ್ಟು ರಿಯಾಕ್ಟ್ ಮಾಡಿದರು.

ಗುರು ಶಿಷ್ಯರು ಸಿನಿಮಾ ಖೋ ಖೋ ಆಧರಿಸಿದ ಕ್ರೀಡೆಯ ಸಿನಿಮಾ. ಇಲ್ಲಿ ಖೋ ಖೋ ಅಷ್ಟೇ ಅಲ್ಲ, ಗುರು ಮತ್ತು ಶಿಷ್ಯರ ನಡುವಿನ ಸಂಬಂಧದ ಕಥೆಯನ್ನೂ ಹೇಳುತ್ತಿದೆ. ಈ ಚಿತ್ರದ ಬಗ್ಗೆ ಶರಣ್ ಅವರಿಗೆ ವಿಶೇಷ ಪ್ರೀತಿ ಕೂಡ ಇದೆ. ಇಲ್ಲಿವರೆಗೂ ಇದ್ದ ಶರಣ್ ರೋಲ್ ಅನ್ನ ಇಲ್ಲಿ ನೀವೂ ಕಾಣೋದಿಲ್ಲ. ಮೋಹನ್ ಹೆಸರಿನ ಒಬ್ಬ ಪಿಟಿ ಮಾಸ್ತರ್​ ಅನ್ನ ನೀವೂ ನೋಡಬಹುದು.

ನಿಮಗೆ ಹುಬ್ಬಳ್ಳಿ ಬಗ್ಗೆ ವಿಶೇಷವಾದ ಅಟ್ಯಾಚ್ ಮೆಂಟ್ ಇದೆ ಅಲ್ವೇ?
ಶರಣ್: ಹುಬ್ಬಳ್ಳಿ ನಾನು ಹುಟ್ಟಿದ ಊರು. ಇಲ್ಲಿ ನಾನು ಓಡಾಡಿದ್ದೇನೆ. ನಮ್ಮ ತಂದೆಯ ನಾಟಕ ಕಂಪನಿ ಇಲ್ಲಿಯೇ ಇತ್ತು. ಇಲ್ಲಿ ನನ್ನ ಚಿತ್ರ ಪ್ರಚಾರ ಮಾಡೋದೇ ಒಂದು ಖುಷಿ.

ಹುಬ್ಬಳ್ಳಿ ಮಂದಿ ಮತ್ತು ಹುಬ್ಬಳ್ಳಿ ಊಟದ ಬಗ್ಗೆ ಹೇಗಿದೆ ಆ ನೆನಪುಗಳು?
ಶರಣ್: ಉತ್ತರ ಕರ್ನಾಟಕದ ಊಟದ ರುಚಿನೇ ಬೇರೆ ಇದೆ. ರೊಟ್ಟಿ, ಚೆಟ್ನಿ ಇವೆಲ್ಲ ಖುಷಿ ಕೊಡುತ್ತವೆ. ಇಲ್ಲಿ ಜನ ಕೂಡ ನನ್ನ ಮೇಲೆ ವಿಶೇಷ ಪ್ರೀತಿ ತೋರಿಸ್ತಾನೇ ಇದ್ದಾರೆ. ಈ ಹಿಂದಿನ ಸಿನಿಮಾ ಪ್ರಚಾರಕ್ಕೆ ಬಂದಾಗಲೂ ಅದೇ ಪ್ರೀತಿ ಇತ್ತು.

Actor Sharan Promoting His Guru Shishyaru Movie In Hubballi
ಹುಬ್ಬಳ್ಳಿಯಲ್ಲಿ ಗುರು ಶಿಷ್ಯರು ಸಿನಿಮಾ ಪ್ರಚಾರ


ಇದನ್ನೂ ಓದಿ: Bigg Boss Season 9: ಒಟಿಟಿಯಿಂದ ಬಿಗ್ ಬಾಸ್​ಗೆ ಹೊರಟ ಸ್ಪರ್ಧಿಗಳು; ಸೀಸನ್ 9ರಲ್ಲಿ ಈ ನಾಲ್ವರು ಇರ್ತಾರೆ!

ಗುರು ಶಿಷ್ಯರು ಸಿನಿಮಾದಲ್ಲಿ ನೀವು ಪಿಟಿ ಮಾಸ್ಟರ್, ರಿಯಲ್ ಆಗಿ ಪಿಟಿ ಮಾಸ್ತರನ್ನ ಕಾಡಿದ್ದು ಇದಿಯೇ?
ಶರಣ್: ಶಾಲೆಗಳಲ್ಲಿ ನಾನು ಪಿಟಿ ಮಾಸ್ತರ್​ ರನ್ನ ಕಾಡಿಲ್ಲ ಬಿಡ್ರಿ, ನಾನು ಅಂತ ಹುಡುಗ ಅಲ್ಲ. ಶಾಲ್ಯಾಗ್ ಹಿಂದಿನ ಬೆಂಚ್​ ನ್ಯಾಗ ಕುಂತ ಮಜಾ ಮಾಡ್ತಿದ್ವಿ ಅಷ್ಟೆ.

ನಿಮ್ಮ ಲೈಫ್​ ಅಲ್ಲಿ ನಿಮಗೆ ರಿಯಲ್ ಗುರುಗಳು ಯಾರು?
ಶರಣ್: ನಾನು 100ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಅದರ ನಿರ್ದೇಶಕರೆಲ್ಲ ನನ್ನ ಗುರುಗಳೇ ಆಗಿದ್ದಾರೆ. ಕೆಲಸ ಕೊಟ್ಟು ಕೆಲಸ ಕಲಿಸಿದ್ದಾರೆ. ಅವರೆಲ್ಲ ನನ್ನ ವಿಶೇಷ ಗುರುಗಳೇ ಅಲ್ವೆ ?

ಇದನ್ನೂ ಓದಿ: Ranveer Singh: ಬೆತ್ತಲೆ ಫೋಟೋಗಳೇ ರಣವೀರ್‌ ಸಿಂಗ್‌ ಸಿನಿ ಕರಿಯರ್‌ಗೆ ಕುತ್ತಾಗುತ್ತಾ? ವಿಚಾರಣೆ ವೇಳೆ ನಟ ಹೇಳಿದ್ದೇನು?

ಗುರು ಶಿಷ್ಯರು ಸಿನಿಮಾ ಖೋ ಖೋ ಆಟದ ಬಗ್ಗೆ ಜಾಗೃತಿ ಮೂಡಿಸುತ್ತಿದಿಯೇ?

ಶರಣ್: ಖೋ ಖೋ ಆಟ ನಮ್ಮ ನೆಲದ ಆಟವೇ ಆಗಿದೆ. ಆದರೆ ಇದು ಕಳೆದು ಹೋಗುತ್ತಿದೆ. ಇದನ್ನ ನಮ್ಮ ಸಿನಿಮಾ ಮೂಲಕ ಮತ್ತೆ ನೆನಪಿಸುತ್ತಿದ್ದೇವೆ. ಈ ಆಟದ ಬಗ್ಗೆ ಸಾಸಿವೆ ಕಾಳಿನಷ್ಟು ನಾವು ಜಾಗೃತಿ ಮೂಡಿಸುತ್ತಿದ್ದೇವೆ.

ಗುರು ಶಿಷ್ಯರು ಚಿತ್ರದ ನಿಮ್ಮ ಶಿಷ್ಯರ ಬಗ್ಗೆ ಏನು ಹೇಳಲಿಕ್ಕೆ ಇಷ್ಟ ಪಡ್ತೀರಾ?
ಶರಣ್: ಗುರು ಶಿಷ್ಯರು ಸಿನಿಮಾಕ್ಕಾಗಿ ಮಕ್ಕಳು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಚಿತ್ರದ ಖೋ ಖೋ ಆಟಕ್ಕಾಗಿಯೇ ತರಬೇತಿ ಪಡೆದಿದ್ದಾರೆ. ವೃತ್ತಿಪರ ಖೋ ಖೋ ಆಡೋವಷ್ಟು ಪರ್ಫೆಕ್ಟ್ ಆಗಿದ್ದಾರೆ.

Actor Sharan Promoting His Guru Shishyaru Movie In Hubballi
ಗುರು ಶಿಷ್ಯರು ಚಿತ್ರದಲ್ಲಿ ಪಿಟಿ ಮಾಸ್ತರ್ ಪಾತ್ರದಲ್ಲಿ ಅಭಿನಯ


ಗುರು ಶಿಷ್ಯರು ಸಿನಿಮಾವನ್ನ ಪ್ರೇಕ್ಷಕರು ಥಿಯೇಟರ್​ಗೆ ಬಂದು ಯಾಕ್ ನೋಡಬೇಕು?
ಶರಣ್: ಗುರು ಶಿಷ್ಯರು ಇದೇ ತಿಂಗಳ 23 ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರ ನೋಡೋಕೆ ಬರೋ ಪ್ರೇಕ್ಷಕರಿಗೆ ಮೋಸ ಆಗೋದಿಲ್ಲ. ಒಂದ್ ಒಳ್ಳೆ ಚಿತ್ರ ವೀಕ್ಷಿಸಿದ ಖುಷಿ ಅವರದ್ದಾಗುತ್ತದೆ. ಥಿಯೇಟರ್​ಗೆ ಬನ್ನಿ, ಸಿನಿಮಾ ನೋಡಿ.

ಗುರು ಶಿಷ್ಯರ ಮೂಲಕ ತಮ್ಮ ಪುತ್ರ ಹೃದಯ ಸೇರಿದಂತೆ ಇನ್ನು ಹಲವು ಯುವಕರಿಗೆ ಶರಣ್ ಮತ್ತು ತರುಣ್ ಒಳ್ಳೆ ವೇದಿಕೆ ಮಾಡಿಕೊಟ್ಟಿದ್ದು, ನಿರ್ದೇಶಕ ಜಡೇಶ್ ಹಂಪಿ ಕೂಡ ಈ ಚಿತ್ರದಲ್ಲಿ ಒಳ್ಳೆ ಕಂಟೆಂಟ್ ಅನ್ನೇ ತಂದಿದ್ದಾರೆ. ಅಜನೀಶ್ ಲೋಕನಾಥ್ ಹಾಡುಗಳು ಈಗಾಗಲೇ ಮೋಡಿ ಮಾಡ್ತಾನೇ ಇವೆ.
First published: