Sharan New Movie: ಶರಣ್ ಜನ್ಮ ದಿನಕ್ಕೆ ಹೊಸ ಸಿನಿಮಾ ಅನೌನ್ಸ್-ಅಮೃತಾ ಅಯ್ಯರ್ ಹೀರೋಯಿನ್!

ಹಾಸ್ಯ ನಾಯಕ ಶರಣ್ ಈಗ ಎಲೆಕ್ಟ್ರಿಷಿಯನ್ !

ಹಾಸ್ಯ ನಾಯಕ ಶರಣ್ ಈಗ ಎಲೆಕ್ಟ್ರಿಷಿಯನ್ !

ಶರಣ್ ಅಭಿನಯದ ಈ ಚಿತ್ರದಲ್ಲಿ ಕೇವಲ ಹಾಸ್ಯ ಇರೋದಿಲ್ಲ. ಇದು ಒಂದು ರೀತಿ ಡಾರ್ಕ್ ಕಾಮಿಡಿ ಅಂತೀವಲ್ಲ ಆ ರೀತಿಯ ಕಂಟೆಂಟ್​ನ್ನೆ ಹೊಂದಿದೆ. ಈ ಸಿನಿಮಾ ಮೂಲಕ ಶರಣ್ ಮತ್ತೊಮ್ಮೆ ಹೊಸ ರೀತಿಯ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್​​ ನಾಯಕ ನಟ ಶರಣ್ (Kannada Actor Sharan New Movie) ಚಿತ್ರ ಜೀವನದಲ್ಲಿ ಈಗ ಮತ್ತೊಂದು ಸಿನಿಮಾ ಸೇರ್ಪಡೆ ಆಗಿದೆ. ಶರಣ್ ಜನ್ಮ ದಿನದಂದು (Actor sharan Birthday) ಈ ಚಿತ್ರದ ಅನೌನ್ಸ್​ ಆಗಿದೆ ಅನ್ನೋದೇ ವಿಶೇಷ. ಛೂ ಮಂತರ್ ಚಿತ್ರದ ಮೂಲಕ ಶರಣ್ (Sharan New Movie Announced) ಮೊದಲ ಬಾರಿಗೆ ಹಾರರ್ ಮತ್ತು ಕಾಮಿಡಿ ಇರೋ ಚಿತ್ರ ಮಾಡಿದ್ದಾರೆ. ಈಗ ಒಪ್ಪಿರೋ ಈ ಚಿತ್ರವೂ ವಿಭಿನ್ನವಾಗಿಯೇ ಇರುತ್ತದೆ ಅನ್ನೋದು ಸದ್ಯದ ಮಾಹಿತಿ. ಪುಗ್ಸೆಟ್ಟೆ ಲೈಫು ಪುರುಸೊತ್ತೇ ಇಲ್ಲ ಬಳಿಕ ಡೈರೆಕ್ಟರ್ ಅರವಿಂದ್ ಕುಪ್ಲೀಕರ್ (Sharan New Movie Updates) ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.


ಈ ಚಿತ್ರದಲ್ಲಿ ಶರಣ್​ಗೆ ನಟಿ ಅಮೃತಾ ಅಯ್ಯರ್ ಜೋಡಿ ಆಗೋ ಸಾಧ್ಯತೆ ಇದೆ. ಇನ್ನು ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.


Kannada Actor Sharan New Movie Announced
ಶರಣ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತದ ಮೋಡಿ


ಹಾಸ್ಯ ನಾಯಕ ಶರಣ್ ಈಗ ಎಲೆಕ್ಟ್ರಿಷಿಯನ್
ಶರಣ್ ಅಭಿನಯದಲ್ಲಿ ಒಂದು ಹ್ಯೂಮರ್ ಟಚ್ ಇರುತ್ತದೆ. ಚಿತ್ರದಲ್ಲಿ ಹೀರೋ ಆದ್ರೂ, ಹಾಸ್ಯಕ್ಕೆ ಕೊರತೆ ಇರೋದಿಲ್ಲ. ಹಾಸ್ಯದ ಜೊತೆ ಜೊತೆಗೇನೆ ಶರಣ್ ಹೀರೊಯಿಸಂ ಅನ್ನ ವಿಭಿನ್ನವಾಗಿಯೇ ಅಭಿನಯಿಸುತ್ತಾರೆ.




ಹಾಸ್ಯ ನಾಯಕ ನಟ ಶರಣ್ ಚಿತ್ರ ಜೀವನದಲ್ಲಿ ಎಲ್ಲ ರೀತಿಯ ಪಾತ್ರ ಮಾಡಿದ್ದಾರೆ. ಅದೇ ರೀತಿ ಈಗ ತಮ್ಮ ನಾಯಕತ್ವದ ಒಂದು ಚಿತ್ರದಲ್ಲಿ ಎಲೆಕ್ಟ್ರಿಷಿಯನ್ ರೋಲ್ ನಿಭಾಯಿಸುತ್ತಿದ್ದಾರೆ.


ಉತ್ತರ ಕರ್ನಾಟಕ ಭಾಷೆ ಮಾತಾಡ್ತಾರೆ ಶರಣ್!
ನಾಯಕ ನಟ ಶರಣ್ ಅವರಿಗೆ ಉತ್ತರ ಕರ್ನಾಟಕ ಭಾಷೆಯ ಮೇಲೆ ಹಿಡಿತ ಇದೆ. ಉತ್ತರ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಶರಣ್​ ಅವರಿಗೆ ಹುಬ್ಬಳ್ಳಿ ಅಂದ್ರೆ ತುಂಬಾ ಇಷ್ಟದ ಊರು ಆಗಿದೆ. ಇಲ್ಲಿ ತಮ್ಮ ಗುರು ಶಿಷ್ಯರು ಚಿತ್ರ ಪ್ರಚಾರ ಮಾಡಿರೋದು ಗೊತ್ತೇ ಇದೆ.


ಇದೇ ಭಾಗದಲ್ಲಿ ಬೆಳೆದ ಶರಣ್, ಈಗ ಉತ್ತರ ಕರ್ನಾಟಕ ಭಾಷೆಯ ಸಿನಿಮಾ ಮಾಡುತ್ತಿದ್ದಾರೆ. ಇನ್ನು ಹೆಸರು ಇಡದ ಈ ಚಿತ್ರದ ಕಥೆ ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ ನಡೆಯುತ್ತದೆ.


ಪುಗ್ಸೆಟ್ಟೆ ಲೈಫ್​ ಡೈರೆಕ್ಟರ್ ಅರವಿಂದ್ ಕುಪ್ಲೀಕರ್ 2ನೇ ಚಿತ್ರ
ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಾರಿ ವಿಜಯ್ ಈ ಹಿಂದೆ ಒಂದು ಸಿನಿಮಾ ಮಾಡಿದ್ದರು. ಪುಗ್ಸೆಟ್ಟೆ ಲೈಫು ಪುರುಸೊತ್ತೇ ಇಲ್ಲ ಅನ್ನೋದು ಇದರ ಟೈಟಲ್ ಆಗಿತ್ತು. ಈ ಮೂಲಕ ಡೈರೆಕ್ಟರ್ ಆಗಿದ್ದ ಅರವಿಂದ್ ಕುಪ್ಲೀಕರ್ 2ನೇ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದು, ವಿಶೇಷವಾದ ಕಥೆಯೊಂದಿಗೆ ಶರಣ್ ಅವರನ್ನ ಇಲ್ಲಿ ಡೈರೆಕ್ಟ್ ಮಾಡುತ್ತಿದ್ದಾರೆ.


ಶರಣ್ ಅಭಿನಯದ ಈ ಚಿತ್ರದಲ್ಲಿ ಕೇವಲ ಹಾಸ್ಯ ಇರೋದಿಲ್ಲ. ಇದು ಒಂದು ರೀತಿ ಡಾರ್ಕ್ ಕಾಮಿಡಿ ಅಂತೀವಲ್ಲ ಆ ರೀತಿಯ ಕಂಟೆಂಟ್​ನ್ನ ಹೊಂದಿದೆ. ಈ ಸಿನಿಮಾ ಮೂಲಕ ಶರಣ್ ಮತ್ತೊಮ್ಮೆ ಹೊಸ ರೀತಿಯ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.


ಅರವಿಂದ್ ಕುಪ್ಲೀಕರ್ ಚಿತ್ರಕ್ಕೆ ಯಾರು ನಾಯಕಿ?
ಅರವಿಂದ್ ಕುಪ್ಲೀಕರ್ ಈಗಾಗಲೇ ನಾಯಕಿಯ ಆಯ್ಕೆ ಮಾಡಿರೋ ಸುದ್ದಿ ಕೂಡ ಹರಿದಾಡುತ್ತಿದೆ. ಶರಣ್​ ಅವರ ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರವೊಂದಿದೆ. ಅದನ್ನ ನಾಯಕಿನೇ ಮಾಡಬೇಕಿದೆ. ಆ ಪಾತ್ರಕ್ಕೆ ಸೂಕ್ತ ನಟಿಯ ಹುಡುಕಾಟವೂ ನಡೆಯುತ್ತಿದೆ.


Kannada Actor Sharan New Movie Announced
ಶರಣ್ ಜನ್ಮ ದಿನಕ್ಕೆ ಅನೌನ್ಸ್ ಆಗಿದೆ ಸಿನಿಮಾ


ಅದರ ಮಧ್ಯ ಈ ಒಂದು ರೊಲ್​ಗೆ ನಟಿ ಅಮೃತಾ ಅಯ್ಯರ್ ಸೂಕ್ತ ಅನ್ನುವ ಸುದ್ದಿ ಕೂಡ ಇದೆ. ಡೈರೆಕ್ಟರ್ ಅರವಿಂದ್ ಕುಪ್ಲೀಕರ್ ಕೂಡ ಇದನ್ನೇ ಈಗ ಹೇಳಿಕೊಂಡಿದ್ದಾರೆ.


ಶರಣ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತದ ಮೋಡಿ
ಶರಣ್ ನಟನೆಯ ಬಹುತೇಕ ಚಿತ್ರಗಳಿಗೆ ಅರ್ಜುನ್ ಜನ್ಯ ಸಂಗೀತ ಕೊಡ್ತಾರೆ. ಹಾಗೆ ಬಂದ ಹಾಡುಗಳಲ್ಲಿ ಒಂದಲ್ಲ ಒಂದು ಹಾಡು ಸೂಪರ್ ಹಿಟ್ ಆಗಿರುತ್ತದೆ. ಅದೇ ಜೋಡಿನೇ ಈ ಚಿತ್ರದಲ್ಲೂ ಮೋಡಿ ಮಾಡಲಿದೆ.


ಶರಣ್ ಅವರ ಈ ಚಿತ್ರಕ್ಕೂ ಅರ್ಜುನ್ ಜನ್ಯ ಸಂಗೀತ ಕೊಡುತ್ತಿದ್ದಾರೆ. ಅಲ್ಲಿಗೆ ನಾವು ಈ ಚಿತ್ರದಲ್ಲೂ ಒಳ್ಳೆ ಹಾಡುಗಳನ್ನ ನಿರೀಕ್ಷೆ ಮಾಡಬಹುದಾಗಿದ್ದು, ಈ ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಉಲ್ಲಾಸ್ ಹೈದೂರ್ ಕಲಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ.


ಇದೇ 20 ರಿಂದ ಸಿನಿಮಾ ಶೂಟಿಂಗ್ ಶುರು
ಸಿನಿಮಾದ ಶೂಟಿಂಗ್ ಕೂಡ ಪ್ಲಾನ್ ಆಗಿದೆ. ಇದೇ ತಿಂಗಳ 20 ರಂದು ಚಿತ್ರೀಕರಣ ಆರಂಭಗೊಳ್ಳುತ್ತಿದೆ. ಆದರೆ ಚಿತ್ರದ ಟೈಟಲ್ ಮತ್ತು ಇತರ ಮಾಹಿತಿ ಇನ್ನಷ್ಟೆ ಹೊರ ಬೀಳಬೇಕಿದೆ.


Kannada Actor Sharan New Movie Announced
ಅರವಿಂದ್ ಕುಪ್ಲೀಕರ್ ಚಿತ್ರಕ್ಕೆ ಯಾರು ನಾಯಕಿ?


ಶರಣ್ ಜನ್ಮ ದಿನಕ್ಕೆ ಅನೌನ್ಸ್ ಆಗಿದೆ ಸಿನಿಮಾ
ಫೆಬ್ರವರಿ-06 ಶರಣ್ ಅವರ ಜನ್ಮ ದಿನ. ಈ ದಿನದ ಹಿನ್ನೆಲೆಯಲ್ಲಿ ಡೈರೆಕ್ಟರ್ ಅರವಿಂದ್ ಕುಪ್ಲೀಕರ್ ತಮ್ಮ ಈ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಹೀಗೆ ಮೂರು ಕೆಲಸವನ್ನ ಡೈರೆಕ್ಟರ್ ಅರವಿಂದ್ ಕುಪ್ಲೀಕರ್ ಮಾಡುತ್ತಿದ್ದಾರೆ.


ಇದನ್ನೂ ಓದಿ:  Sharan Birthday: ಹಾಸ್ಯ ನಾಯಕ ನಟ ಶರಣ್ ಅವರ ಏಜ್ ಎಷ್ಟು? ಬರ್ತ್​ ಡೇ ಸಂಭ್ರಮದಲ್ಲಿ ಪಿಟಿ ಮಾಸ್ಟರ್!


ಇನ್ನು ಈ ಚಿತ್ರಕ್ಕೆ ಬಿ.ಬಸವರಾಜ್ ಮತ್ತು ಶ್ರೀಧರ್ ಬಂಡವಾಳ ಹಾಕುತ್ತಿದ್ದು, ಸದ್ಯಕ್ಕೆ ಸಿನಿಮಾ ತಂಡ ಚಿತ್ರದ ಬಗ್ಗೆ ಇಷ್ಟು ಅಧಿಕೃತ ಮಾಹಿತಿಯನ್ನ ಕೊಟ್ಟಿದೆ.

First published: