Guru Shishyaru: ಗುರು ಶಿಷ್ಯರು ರಿಲೀಸ್ ಡೇಟ್ ಫಿಕ್ಸ್! ನಿರೀಕ್ಷೆ ಹುಟ್ಟಿಸಿದ ಶರಣ್ ಹೊಸ ಸಿನಿಮಾ

ಇದೇ ಚಿತ್ರದ ಒಂದು ಟ್ರೈಲರ್ ಇಂದು ಸಂಜೆ ರಿವೀಲ್ ಆಗುತ್ತಿದೆ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತರುಣ್ ಸುಧೀರ್ ತಮ್ಮ ಈ ಚಿತ್ರದ ಕುರಿತು ಇನ್ನೊಂದಿಷ್ಟು ವಿಷಯ ಶೇರ್ ಮಾಡಿದ್ದಾರೆ.

ಗುರುಶಿಷ್ಯರು ರಿಲೀಸ್ ಡೇಟ್ ಫಿಕ್ಸ್

ಗುರುಶಿಷ್ಯರು ರಿಲೀಸ್ ಡೇಟ್ ಫಿಕ್ಸ್

  • Share this:
    ಕನ್ನಡದ ಗುರು ಶಿಷ್ಯರು ಸಿನಿಮಾ  (Guru Shishyaru) ತನ್ನ ಟೈಟಲ್​ನಿಂದಲೇ ಈಗ ಗಮನ ಸೆಳೆಯುತ್ತಿದೆ. ಈ ಹಿಂದಿನ ಗುರು ಶಿಷ್ಯರು ಸಿನಿಮಾ ಟೈಟಲ್ (Title) ಮಾತ್ರ ಇಲ್ಲಿದೆ. ಈಗಿನ ಈ ಚಿತ್ರದಲ್ಲಿ ಕ್ರೀಡಾಧಾರಿತ ಕಥೆ ಇದೆ. ಇದರ ಸುತ್ತ ಈಗಾಗಲೇ ಸಾಕಷ್ಟು ಕುತೂಹಲಗಳು ಹುಟ್ಟುಕೊಂಡಿವೆ. ಚಿತ್ರದ ಪೋಸ್ಟರ್ಸ್ ( Poster) ಸಾಂಗ್ಸ್ (Songs) ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿ ಆಗಿವೆ. ಮೊನ್ನೆ ರಿಲೀಸ್ ಆದ ಶಿಕ್ಷಕರ ಲಿರಿಕಲ್ ಸಾಂಗ್ ಕೂಡ ವಿಶೇಷವಾಗಿಯೇ ಹೃದಯ ತಟ್ಟಿದೆ. ಇದೇ ಚಿತ್ರದ ಒಂದು ಟ್ರೈಲರ್ ಇಂದು ಸಂಜೆ ರಿವೀಲ್ ಆಗುತ್ತಿದೆ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತರುಣ್ ಸುಧೀರ್ ತಮ್ಮ ಈ ಚಿತ್ರದ ಕುರಿತು ಇನ್ನೊಂದಿಷ್ಟು ವಿಷಯ ಶೇರ್ ಮಾಡಿದ್ದಾರೆ.

    ಇದೇ ಸೆಪ್ಟೆಂಬರ್-23ಕ್ಕೆ ಗುರು ಶಿಷ್ಯರು ಸಿನಿಮಾ ರಿಲೀಸ್
    ಗುರು ಶಿಷ್ಯರು ಸಿನಿಮಾ ಟಾಕ್ ಚೆನ್ನಾಗಿದೆ. ಟೈಟಲ್​ನಿಂದಲೇ ಮೊದಲ ನೋಟಕ್ಕೆ ಸೆಳೆದು ಬಿಡೋ ಕನ್ನಡದ ಗುರು ಶಿಷ್ಯರು ಚಿತ್ರದಲ್ಲಿ ಹಲವು ವಿಶೇಷತೆಗಳೇ ಇವೆ. ಕ್ರೀಡಾಧಾರಿತ ಚಿತ್ರ ಇದಾಗಿರೋದ್ರಿಂದ ಇಲ್ಲಿ ನಿಜ ಆಟವೂ ಇದೆ. ಬದುಕಿನ ಕಥೆನೂ ಇದ್ದಂತೆ ಕಾಣುತ್ತದೆ. ಇದೇ ತಿಂಗಳು 23 ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

    Gurushishyaru Ready to Release
    ಗುರು ಶಿಷ್ಯರು ಚಿತ್ರದಲ್ಲಿ ಶರಣ್ ಲುಕ್


    ಇಂದು ಗುರು ಶಿಷ್ಯರು ಚಿತ್ರದ ಟ್ರೈಲರ್ ರಿಲೀಸ್
    ಚಿತ್ರದ ಕಂಟೆಂಟ್ ಏನೂ ಅನ್ನೋದನ್ನ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಸಿನಿಮಾದ ಹಾಡುಗಳು ಈಗಾಗಲೇ ಹೇಳಿಕೊಂಡಿವೆ. ಆದರೆ, ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಟ್ರೈಲರ್ ರಿಲೀಸ್ ಆಗುತ್ತಿದೆ. ಅಲ್ಲಿ ನೆರೆದವರಿಗೂ ಈ ಟ್ರೈಲರ್ ಪ್ರದರ್ಶನ ಆಗುತ್ತಿದೆ. ಆಗಲೇ ಇಡೀ ಗುರು ಶಿಷ್ಯರು ಚಿತ್ರದ ಇನ್ನಷ್ಟು ಕುತೂಹಲಭರಿತ ವಿಷಯ ಹೊರಬೀಳಲಿದೆ.

    ಶಿಕ್ಷಕರ ದಿನಾಚರಣೆ ದಿನ ನಾಳೆ ಸೋಷಿಯಲ್ ಮೀಡಿಯಾಲ್ಲಿ ಟ್ರೈಲರ್ ರಿಲೀಸ್
    ನಾಳೆ ಶಿಕ್ಷಕರ ದಿನಾಚರಣೆ. ಈ ದಿನವೇ ಸಿನಿಮಾ ಈ ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಆಗುತ್ತದೆ. ಆಗ ಇದನ್ನ ಎಲ್ಲರೂ ನೋಡಬಹುದು. ನೋಡಿ ಖುಷಿಪಡಬಹುದು. ಇದು ಸಿನಿಮಾ ತಂಡ ಈಗಾಗಲೇ ಮಾಡಿಕೊಂಡ ಪಕ್ಕಾ ಪ್ಲಾನ್. ಇದರ ಹೊರತಾಗಿ ಚಿತ್ರದಲ್ಲಿ ಮೊನ್ನ ರಿಲೀಸ್ ಮಾಡಿರೋ ಶಿಕ್ಷಕರ ಬಗೆಗಿನ ಹಾಡು ವೈರಲ್ ಆಗಿದೆ.

    ಇದನ್ನೂ ಓದಿ: Real Star Uppi: ಬುದ್ದಿವಂತನ ಸಿನಿಮಾ ಎಲ್ಲಿವರೆಗೆ ಬಂತು? ಡೈರೆಕ್ಟರ್​ ಹೇಳಿದ್ದೇನು

    ಗುರುಗಳ ಬಗ್ಗೆ ಗುರು ಶಿಷ್ಯರು ಚಿತ್ರದಲ್ಲಿ ಅದ್ಭುತ ಹಾಡು
    ಗುರು ಶಿಷ್ಯರು ಎಲ್ಲ ಪ್ರೇಕ್ಷಕರನ್ನೂ ಸೆಳೆಯೋ ಹಾಗೆ ಕಾಣುತ್ತಿದೆ. ಎಂತಹ ವ್ಯಕ್ತಿ ಆದರೂ ಸರಿಯೇ, ಅವರ ಜೀವನದಲ್ಲಿ ಬರೋ ಗುರುಗಳ ಬಗ್ಗೆ  ಗೌರವ, ಪ್ರೀತಿ  ಇದ್ದೇ ಇರುತ್ತದೆ. ಅಂತಹ ಗುರುಗಳಿಗೆ ಗೌರವ ಸಲ್ಲಿಸೋ ಹಾಡೊಂದನ್ನ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದುಕೊಟ್ಟಿದ್ದಾರೆ. ಬಳಪ ಹಿಡಿಯೋ ಭಗವಂತ ಅಂತಲೇ ಶುರು ಆಗೋ ಈ ಹಾಡನ್ನ ವಿಜಯ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ.



    ಇದನ್ನೂ ಓದಿ: Dhruva Sarja-Prerana: ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ; ಪ್ರೇರಣಾ ಬೇಬಿ ಬಂಪ್ ಫೋಟೋಸ್

    ಗುರು ಶಿಷ್ಯರು ಚಿತ್ರವನ್ನ ಡೈರೆಕ್ಟ್ ಮಾಡಿದೋರು ಯಾರು ?
    ಗುರು ಶಿಷ್ಯರು ಚಿತ್ರದ ಹಿಂದೆ ಒಳ್ಳೆ ಟೆಕ್ನಿಷನ್​ಗಳೇ ಇದ್ದಾರೆ. ತರುಣ್ ಸುಧೀರ್ ರಂತಹ ಕ್ರಿಯೇಟಿವ್ ಡೈರೆಕ್ಟರ್ ಈ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ ಎಂದ್ರೆ ಏನೋ ವಿಷಯ ಇದೇ ಅಂತಲೇ ಅರ್ಥ, ಸ್ನೇಹಿತ, ನಾಯಕ ನಟ ಶರಣ್ ಕೂಡ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.ಇವರ ಈ  ಹೊಸ ಕನಸನ್ನ ನಿರ್ದೇಶಿಸೋ ಕೆಲಸವನ್ನ ಜಡೇಶ್ ಕೆ.ಹಂಪಿ ಮಾಡಿದ್ದಾರೆ. ಈಗ ಇದರ ಔಟ್ ಪುಟ್ ಕೂಡ ಹೊರ ಬಂದಿದೆ.  ಚಿತ್ರ ಸೆನ್ಸಾರ್ ಗೂ ಹೋಗಿದ್ದು ಸಿನಿಮಾದ ಬಗ್ಗೆ ಒಂದು ನಿರೀಕ್ಷೆ ಈಗಲೇ ಇದೆ.
    First published: