ಕನ್ನಡದ ಹಾಸ್ಯ ಕಲಾವಿದ (Sharan) ಶರಣ್ 100 ನೇ ಚಿತ್ರಕ್ಕೆ ಹೀರೋ ಆಗಿರೋದು ಇತಿಹಾಸ. ಅದೇ ಹಾಸ್ಯ ನಾಯಕ ನಟ ಶರಣ್, ನಿರ್ಮಾಪಕರಾಗಿ ಬೆಳೆದಿರೋದು ಅಷ್ಟೇ ಸತ್ಯ. ಅದೇ ನಾಯಕ, (Actor-Producer) ನಿರ್ಮಾಪಕ ಶರಣ್ ತಮ್ಮ ಸಿನಿ ಜರ್ನಿಯಲ್ಲಿ ಇನ್ನೂ ಒಂದು ಸಾಹಸ ಮಾಡಿದ್ದಾರೆ. ಇಲ್ಲಿವರೆಗೂ ತಮ್ಮ ಸಿನಿಮಾ (Cinema Jurny) ಜರ್ನಿಯಲ್ಲಿ ಟ್ರೈ ಮಾಡದೇ ಇರೋ ಜಾನರ್ ಅನ್ನೇ ಈಗ ಟ್ರೈ ಮಾಡಿದ್ದಾರೆ. ಅದು ವಿಶೇಷ ಜಾನರ್ ಅಂತಲೇ ಹೇಳಬಹುದು. ಕನ್ನಡದಲ್ಲಿ ಈಗಾಗಲೇ ಈ ರೀತಿ ಕಂಟೆಂಟ್ ಮೇಲೆ ಸಿನಿಮಾ ಬಂದಿದೆ. ಆದರೆ ಇಲ್ಲಿ ನಾಯಕ ಮತ್ತು ನಿರ್ದೇಶಕರಿಗೆ (Director) ಇದು ಮೊದಲ ಸಾಹಸವೇ ಆಗಿದೆ. ಇನ್ನೂ ಒಂದು ವಿಶೇಷ ಅಂದ್ರೆ ಇಲ್ಲಿ ಅಧ್ಯಕ್ಷರು ಇದ್ದಾರೆ. ಉಪಾಧ್ಯಕ್ಷರು ಇದ್ದಾರೆ.
ಇದರ ಸುತ್ತ ನಿರ್ಮಾಪಕ ತರುಣ್ ಶಿವಪ್ಪ ನ್ಯೂಸ್-18 ಡಿಜಿಟಲ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಅವರ ಮಾತಿನ ಒಟ್ಟು ವಿವರ ಇಲ್ಲಿದೆ ಓದಿ.
ಅಧ್ಯಕ್ಷರೂ ಇದ್ದಾರೆ-ಉಪಾಧ್ಯಕ್ಷರು ಇದ್ದಾರೆ!
ಹಾಸ್ಯ ನಾಯಕ ನಟ ಶರಣ್ ತಮ್ಮ ಚಿತ್ರ ಜೀವನದಲ್ಲಿ ಎಲ್ಲ ರೀತಿಯ ಜಾನರ್ನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಒಬ್ಬ ನಾಯಕನಾಗಿ ಹಾರರ್ ಸಿನಿಮಾದಲ್ಲಿ ನಟಿಸಿರೋದು ಇಲ್ಲವೇ ಇಲ್ಲ.
ಈಗ ಫಸ್ಟ್ ಟೈಮ್ ಶರಣ್ ತಮ್ಮ ಚಿತ್ರ ಜೀವನದಲ್ಲಿ ಇಂತಹ ಒಂದು ಜಾನರ್ ಅನ್ನ ಟ್ರೈ ಮಾಡಿದ್ದಾರೆ. ವಿಶೇಷವಾಗಿ ಇಲ್ಲಿ ಡಬಲ್ ಟ್ರಿಪಲ್ ಧಮಾಕಾನೂ ಇದೆ. ಅಧ್ಯಕ್ಷ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಶರಣ್ ಮತ್ತು ಚಿಕ್ಕಣ್ಣ ಜೋಡಿ ಇಲ್ಲೂ ಇರೋದೇ ವಿಶೇಷ.
ಹಾರರ್ ಕಾಮಿಡಿ ಚಿತ್ರದಲ್ಲಿ ಶರಣ್-ಚಿಕ್ಕಣ್ಣ ವಿಶೇಷ
ಶರಣ್ ತಮ್ಮ ಚಿತ್ರ ಜೀವನದ ಈ ವಿಶೇಷ ಸಿನಿಮಾದಲ್ಲಿ ಹಾಸ್ಯವನ್ನೂ ಮಾಡುತ್ತಾರೆ. ಭಯ ಕೂಡ ಪಡಿಸ್ತಾರೆ ಅಂತಲೂ ಹೇಳಬಹುದು. ಚಿಕ್ಕಣ್ಣ ಇಲ್ಲಿ ಇರೋದ್ರಿಂದ ಹಾರರ್ ಜೊತೆಗೆ ಹಾಸ್ಯವೂ ನಿಮ್ಗೆ ಇಲ್ಲಿ ಸಿಗುತ್ತದೆ.
ಅಂದ್ಹಾಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಇಬ್ಬರೂ ಕನ್ನಡದ ನಟಿಯರೇ ಅನ್ನೋದು ವಿಶೇಷ. ಹೌದು, ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೇನೆ ಈ ಹಾರರ್ ಸಿನಿಮಾದಲ್ಲಿ ನಾಯಕಿಯರೇ ದೆವ್ವವಾಗಿ ಕಾಡ್ತಾರಾ? ಗೊತ್ತಿಲ್ಲ.
ಛೂ ಮಂತರ್ ಎಂಬ ವಿಶೇಷ ಟೈಟಲ್!
ಶರಣ್ ಅಭಿನಯದ ಈ ಚಿತ್ರಕ್ಕೆ ಛೂ ಮಂತರ್ ಅನ್ನೋ ವಿಶೇಷ ಟೈಟಲ್ ಇಡಲಾಗಿದೆ. ನಿರ್ಮಾಪಕ ತರುಣ್ ಶಿವಪ್ಪ ಈ ಟೈಟಲ್ ಮೂಲಕ ಈಗ ಪ್ರಮೋಷನ್ ಕೆಲಸ ಶುರು ಮಾಡಿದ್ದಾರೆ.
ಕರ್ವ ಚಿತ್ರದ ನವನೀತ್ ಛೂ ಮಂತರ್ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಕರ್ವ ಚಿತ್ರ ನೋಡಿದ ಜನರಲ್ಲಿ ಈಗಲೂ ಒಂದು ಸಣ್ಣ ಭಯ ಇದ್ದೇ ಇರುತ್ತದೆ.
ಅಷ್ಟು ಪರಿಣಾಮಕಾರಿಯಾಗಿಯೇ ನವನೀತ್ ಕನ್ನಡದಲ್ಲಿ ಕರ್ವ ಸಿನಿಮಾ ಮಾಡಿದ್ದರು. ಅಂತಹ ಸಿನಿಮಾ ಕೊಟ್ಟ ನವನೀತ್ ಈಗ ಈ ಛೂ ಮಂತರ್ ಸಿನಿಮಾ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಅಷ್ಟು ಕೆಲಸ ಕೂಡ ಪೂರ್ಣಗೊಳಿಸಿದ್ದಾರೆ.
ಛೂ ಮಂತರ್ ಚಿತ್ರದ ಪ್ರೋಡ್ಯೂಸರ್ ಫುಲ್ ಖುಷ್!
ಛೂ ಮಂತರ್ ಚಿತ್ರವನ್ನ ನಿರ್ಮಿಸಿರೋ ತರುಣ್ ಶಿವಪ್ಪ ಖುಷಿಯಲ್ಲಿಯೇ ಇದ್ದಾರೆ. ದುಡ್ಡು ಹಾಕಿರೋ ತಮ್ಮ ಈ ಚಿತ್ರ ಚೆನ್ನಾಗಿಯೇ ಬಂದಿದೆ ಅಂತಲೂ ಹೇಳಿದ್ದಾರೆ.
ಇದನ್ನೂ ಓದಿ: Vasishta Simha-Haripriya: ಬೆಂಗಳೂರು ಏರ್ಪೋರ್ಟ್ನಲ್ಲಿ ಸ್ಯಾಂಡಲ್ವುಡ್ ಪ್ರಣಯಪಕ್ಷಿಗಳು
ಛೂ ಮಂತರ್ ಮೂಲಕ ಶರಣ್ ಹೊಸ ಜಾನರ್ ಟ್ರೈ ಮಾಡಿದ್ದಾರೆ. ಚಿಕ್ಕಣ್ಣ, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ಟೈಟಲ್ ಮೂಲಕವೇ ಸಿನಿಮಾ ಗಮನ ಸೆಳೆಯೋಕೆ ಶುರು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ