Kannada Actor Sharan: ಅಂಬಾಸಿಡರ್ ಕಾರ್ ಸ್ಥಿತಿ ಕಂಡು ಬೇಸರ! ಆ ದಿನಗಳ ನೆನಪಲ್ಲಿ ಶರಣ್

ಅಂಬಾಸಿಡರ್ ಕಾರ್‌ನೊಂದಿಗಿನ ನೆನಪು ಬಿಚ್ಚಿಟ್ಟ ಶರಣ್

ಅಂಬಾಸಿಡರ್ ಕಾರ್‌ನೊಂದಿಗಿನ ನೆನಪು ಬಿಚ್ಚಿಟ್ಟ ಶರಣ್

ಕಾರುಗಳ ಸರದಾರ ಈ ಅಂಬಾಸಿಡರ್ ಕಾರ್. ಇದನ್ನ ನಾನು ಶೂಟಿಂಗ್ ಸ್ಥಳದಲ್ಲಿ ಕಂಡಿದ್ದೇನೆ. ಇದು ನನ್ನ ಬಾಲ್ಯದ ಮತ್ತು ನಮ್ಮ ಕುಟುಂಬದ ಆತ್ಮೀಯ ಕಾರ್ ಕೂಡ ಹೌದು ಎಂದು ಶರಣ್ ಹೇಳಿಕೊಂಡಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಕನ್ನಡದ ಹಾಸ್ಯ ನಟ ಶರಣ್ ಅಭಿನಯದ ಛೂಮಂತರ್ (Kannada Actor Sharan Movie) ಸಿನಿಮಾ ಇನ್ನಷ್ಟೆ ರಿಲೀಸ್ ಆಗಬೇಕು. ಅದು ರಿಲೀಸ್ ಆಗೋ ಮೊದಲು ಶರಣ್ ಇನ್ನೂ ಒಂದು ಚಿತ್ರ ಒಪ್ಪಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಬಾಗಲಕೋಟೆಯಲ್ಲಿ ಈ ಸಿನಿಮಾದ (Good Old Sharan Memories) ಶೂಟಿಂಗ್ ಕೂಡ ಶುರು ಆಗಿದೆ. ಇದೇ ಒಂದು ಜಾಗದಲ್ಲಿಯೇ ನಟ ಶರಣ್ ಒಂದು ಅಂಬಾಸಿಡರ್ ಕಾರ್ ನೋಡಿದ್ದಾರೆ. ಇದರ ಸ್ಥಿತಿ ಹದಗೆಟ್ಟು ಹೋಗಿದೆ. ಕಾರ್ ಮಣ್ಣಲ್ಲಿ ಹುದುಗಿ ಹೋಗಿದೆ. ಬೋನೆಟ್ (Sharan Movie Latest Upates) ಎಗರಿ ಹೋಗಿದೆ. ಗ್ಲಾಸ್‌ಗಳೆಲ್ಲ ಹೊಡೆದು ಹೋಗಿವೆ. ಇದನ್ನ ಕಂಡ ಶರಣ್ ಬೇಸರ ಪಟ್ಟುಕೊಂಡಿದ್ದಾರೆ.


ತಮ್ಮ ಜೀವನದಲ್ಲಿ (Ambassador Memories Updates) ಅಂಬಾಸಿಡರ್ ಕಾರ್ ಎಷ್ಟು ಮಹತ್ವ ಪಡೆದಿತ್ತು ಅನ್ನೋದನ್ನ ಇದೀಗ ಮೆಲುಕು ಹಾಕಿದ್ದಾರೆ.


ಅಂಬಾಸಿಡರ್ ಕಾರ್‌ ಅಮರ ನೆನಪು ಹಂಚಿಕೊಂಡ ಶರಣ್


ಹಾಸ್ಯ ನಾಯಕ ನಟ ಶರಣ್ ಸದ್ಯ ಹೊಸ ಸಿನಿಮಾದ ಶೂಟಿಂಗ್ ಅಲ್ಲಿ ಬ್ಯುಸಿ ಇದ್ದಾರೆ.


Kannada Actor Sharan good Old Memories with Ambassador Car Share
ಅಂಬಾಸಿಡರ್ ಕಾರ್ ನಮ್ಮನೆ Pride ಆಗಿತ್ತು ಎಂದ ಶರಣ್


ಹಾಗೆ ಬಾಗಲಕೋಟೆಯಲ್ಲಿಯೇ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಒಂದು ಸಮಯದಲ್ಲಿ ನಟ ಶರಣ್ ಈ ಹಳೆ ಕಾರು ಕಂಡಿದ್ದಾರೆ.




ಹೌದು, ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಂಬಾಸಿಡರ್ ಕಾರ್‌ ಒಂದನ್ನ ನೋಡಿದ್ದಾರೆ. ಇದರ ಸ್ಥಿತಿ ನೋಡಿ ತುಂಬಾ ಬೇಜಾರು ಪಟ್ಟಿದ್ದಾರೆ.


ಕಾರುಗಳ ಸರದಾರ ಅಂಬಾಸಿಡರ್ ಕಾರ್ ಎಂದ ಶರಣ್


ಅಂಬಾಸಿಡರ್ ಕಾರ್ ಅಂದ್ರೆ ಸುಮ್ನೆನಾ? ಎಲ್ಲ ಕಾರ್‌ಗಳ ರಾಜಾ ಈ ಅಂಬಾಸಿಡರ್ ಕಾರ್. ಅಂದಿನ ಕಾಲದಲ್ಲಿ ಈ ಕಾರ್ ಇದ್ದವ್ರೇ ದೊಡ್ಡ ಶ್ರೀಮಂತ ಅನ್ನೋ ನಂಬಿಕೆ ಇತ್ತು.




ಗಟ್ಟಿಮುಟ್ಟಾದ ಕಾರ್‌ ಇದಾಗಿತ್ತು, ಆ ಟೈಮ್‌ ಅಲ್ಲಿ ಈ ಒಂದು ಕಾರ್ ಹೆಚ್ಚು ಇದ್ದವು. ಕಾರ್ ಅಂದ್ರೆ ಅದು ಅಂಬಾಸಿಡರ್ ಕಾರ್ ಅನ್ನೋ ನಂಬಿಕೆ ಇತ್ತು.


ಅಂಬಾಸಿಡರ್ ಕಾರ್ ಎಂದೆಂದೂ ಅಮರ ಅಮರ !


ಆದರೆ ಕಾಲ ಬದಲಾದಂತೆ ಹೊಸ ಹೊಸ ಕಾರ್‌ಗಳು ಬಂದವು. ಜನರಿಗೆ ಈ ಅಂಬಾಸಿಡರ್ ಕಾರ್‌ ಅನ್ನ ಮರೆತೆ ಹೋದ್ರು.ಅದರ ಪರಿಣಾಮ ಕಾರುಗಳ ರಾಜಾ ಅಂಬಾಸಿಡರ್ ಕಾರ್ ಕಳೆದೆ ಹೋಗಿವೆ. ಒಂದು ವೇಳೆ ಉಳಿದಿದ್ರು ಕೂಡ ಅಲ್ಲೊಂದು ಇಲ್ಲೊಂದು ಇವೆ.


ಅವುಗಳನ್ನ ಮೆಂಟೇನ್ ಮಾಡಲು ಆಗದೇನೆ ಕೆಲವರು ಹಾಗೆ ನಿಲ್ಲಿಸಿ ಬಿಟ್ಟಿದ್ದಾರೆ. ಹಾಗೆ ನಿಂತ ಕಾರ್‌ವೊಂದರ ಮುಂದೆ ನಾಯಕ ನಟ ಶರಣ್ ನಿಂತು ಫೋಟೋ ತೆಗೆದುಕೊಂಡಿದ್ದಾರೆ.


Kannada Actor Sharan good Old Memories with Ambassador Car Share
ಅಂಬಾಸಿಡರ್ ಕಾರ್‌ನೊಂದಿಗಿನ ನೆನಪು ಬಿಚ್ಚಿಟ್ಟ ಶರಣ್


ಅಂಬಾಸಿಡರ್ ಕಾರ್ ನಮ್ಮನೆ Pride ಆಗಿತ್ತು ಎಂದ ಶರಣ್


ತಮ್ಮ ಜೀವನದಲ್ಲಿ ಅಂಬಾಸಿಡರ್ ಕಾರ್ ತುಂಬಾ ಸ್ಪೆಷಲ್ ಆಗಿತ್ತು ಅನ್ನೋದನ್ನ ಹೇಳಿಕೊಂಡಿದ್ದಾರೆ. ತಮ್ಮ ತಂದೆ ಬಳಿ ಈ ಕಾರ್ ಇತ್ತು. ನಮ್ಮ ಫ್ಯಾಮಿಲಿಯ ಪ್ರೈಡ್ ಕೂಡ ಇದಾಗಿತ್ತು.


ಈ ಕಾರ್‌ನಲ್ಲಿಯೇ 10 ವರ್ಷ ಓಡಾಡಿದ್ದೇವೆ. ಈ ಕಾರ್‌ನಲ್ಲಿ ಓಡಾಡಿದ ದಿನಗಳು ಈಗಲೂ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಆದರೆ ಇಂತಹ ಕಾರ್‌ಗಳು ಇದೀಗ ಕೇವಲ ನೆನಪು ಮಾತ್ರ ಅನ್ನೋ ಅರ್ಥದಲ್ಲಿಯೇ ಶರಣ್ ಹೇಳಿಕೊಂಡಿದ್ದಾರೆ.


ಅಂಬಾಸಿಡರ್ ಕಾರ್‌ನೊಂದಿಗಿನ ನೆನಪು ಬಿಚ್ಚಿಟ್ಟ ಶರಣ್


ತಮ್ಮ ಇನ್‌ಸ್ಟಾರ್ ಗ್ರಾಮ್ ಪೇಜ್‌ ನಲ್ಲೂ ಅಂಬಾಸಿಡರ್ ಕಾರ್ ಜೊತೆಗೆ ನಿಂತ ಒಂದು ಫೋಟೊ ಕೂಡ ಹಂಚಿಕೊಂಡಿದ್ದಾರೆ. ಹಾಗೇನೆ ಈ ಒಂದು ಸಾಲುಗಳನ್ನ ಕೂಡ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Shruti Hariharan: ಮೀಟೂ ಕೇಸ್! ಶ್ರುತಿ ಹರಿಹರನ್​ಗೆ ನೋಟಿಸ್


"ಈ ಕಾರುಗಳ ಸರದಾರ, ನನ್ನ ಶೂಟಿಂಗ್ ಸ್ಥಳದಲ್ಲಿ ನಾ ಕಂಡಿದ್ದು. ನನ್ನ ಬಾಲ್ಯದ ಹಾಗೂ ನಮ್ಮ ಕುಟುಂಬದವರ ಆತ್ಮೀಯ ವಾಹನವು ಕೂಡ ಈ "ಅಂಬಾಸಿಡರ್" ಎಂದು ಹೇಳಿಕೊಂಡಿದ್ದಾರೆ.


ಅಂಬಾಸಿಡರ್ ಕಾರ್‌ಗಳು ಈಗ ಕೇವಲ ನೆನಪು ಮಾತ್ರ


ಅಂಬಾಸಿಡರ್ ಕಾರ್ ಈಗ ಕೇವಲ ನೆನಪು ಮಾತ್ರ ಆಗಿದೆ. ಅಲ್ಲಿ ಇಲ್ಲಿ ಇದ್ದರೂ ಕೂಡ ಅವು ಆ್ಯಂಟಿಕ್ ಪೀಸ್ ಕೂಡ ಆಗಿವೆ. ಆದರೆ ಈ ಅಂಬಾಸಿಡರ್ ಕಾರ್‌ಗಳ ಜೊತೆಗೆ ಅನೇಕರಿಗೆ ಅನೇಕ ನೆನಪುಗಳು ಅಟ್ಯಾಚ್ ಆಗಿವೆ.


ಅದೇ ರೀತಿ ಶರಣ್ ತಮ್ಮನೆಯ ಐರಾವತ ಅಂಬಾಸಿಡರ್ ಕಾರ್‌ನೊಟ್ಟಿಗೆ ಇದ್ದ ನೆನಪುಗಳನ್ನ ಎಲ್ಲರೊಟ್ಟಿಗೆ ಈಗ ಹಂಚಿಕೊಂಡಿದ್ದಾರೆ.

First published: