• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Kannada Actor Sathy: ಆ ದಿನಗಳು ಸರ್ದಾರ್ ಖ್ಯಾತಿಯ ಸತ್ಯ ಕಾಲಿವುಡ್‌ನಲ್ಲಿ ಸಖತ್ ಮಿಂಚಿಂಗ್; ವೆಟ್ರಿಮಾನ್ ವಿಡುದಲೈ ಚಿತ್ರದಲ್ಲಿ ಭಾರೀ ಸ್ಕೋರ್!

Kannada Actor Sathy: ಆ ದಿನಗಳು ಸರ್ದಾರ್ ಖ್ಯಾತಿಯ ಸತ್ಯ ಕಾಲಿವುಡ್‌ನಲ್ಲಿ ಸಖತ್ ಮಿಂಚಿಂಗ್; ವೆಟ್ರಿಮಾನ್ ವಿಡುದಲೈ ಚಿತ್ರದಲ್ಲಿ ಭಾರೀ ಸ್ಕೋರ್!

ವೆಟ್ರಿಮಾರ್‌ನ ಸಿನಿಮಾದಲ್ಲಿ ಆ ದಿನಗಳು ಸರ್ದಾರ್ ಸತ್ಯ

ವೆಟ್ರಿಮಾರ್‌ನ ಸಿನಿಮಾದಲ್ಲಿ ಆ ದಿನಗಳು ಸರ್ದಾರ್ ಸತ್ಯ

ಸರ್ದಾರ್ ಸತ್ಯ ಇತ್ತೀಚಿಗೆ ರಿಲೀಸ್ ಆದ ವಿಡುದಲೈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ವೇಲ್ಮುರುಗನ್ ಹೆಸರಿನ ಪಾತ್ರದಲ್ಲಿ ಸತ್ಯ ಅಭಿನಯಿಸಿದ್ದಾರೆ. ಎಸ್.ಐ ಪಾತ್ರದ ಮೂಲಕ ಇಡೀ ಚಿತ್ರದಲ್ಲಿ ತಮ್ಮದೇ ರೀತಿಯಲ್ಲಿ ಅಬ್ಬರಿಸಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಕನ್ನಡದಲ್ಲಿ ಆ ದಿನಗಳು ಸಿನಿಮಾ ಬಂದಿತ್ತು. ಈ ಚಿತ್ರದ (Sardar Sathya Tamil Movie) ಮೂಲಕ ಅನೇಕ ಕಲಾವಿದರು ಬೆಳಕಿಗೆ ಬಂದ್ರು. ನಟ ಚೇತನ್ ಎಲ್ಲರಿಗೂ ಪರಿಚಯ ಆದ್ರು.ಇದೇ ಚಿತ್ರದಲ್ಲಿ ರಂಗಭೂಮಿ ಕಲಾವಿದ ಸತ್ಯ ಕೂಡ ಅಭಿನಯಿಸಿದ್ದರು. ಸರ್ದಾರ ಹೆಸರಿನ ಪಾತ್ರದ ಮೂಲಕ ಸತ್ಯ ಎಲ್ಲರ ಹೃದಯ ಗೆದ್ದೇ (Viduthalai Part Tamil Movie) ಬಿಟ್ಟರು. ಇದಾದ್ಮೇಲೆ ಸತ್ಯ ಅವರನ್ನ ಹುಡುಕಿಕೊಂಡು ಮತ್ತಷ್ಟು ಸಿನಿಮಾಗಳ ಬಂದವು. ಆ ಲೆಕ್ಕದಲ್ಲಿ ಸ್ಲಂ ಬಾಲ, ರಾಜಧಾನಿ, ದ್ಯಾವ್ರೇ, ಚಂಬಲ್‌ದಂತಹ ಚಿತ್ರದಲ್ಲೂ ಸತ್ಯ ಕಾಣಿಸಿಕೊಂಡ್ರು. ಆದರೆ ಸತ್ಯ ಹೀರೋ ಕೂಡ ಆದ್ರು. ಆ ಚಿತ್ರದ ಹೆಸರು ಗುಂಡ್ರುಗೋವಿ ಅನ್ನೋದು ಎಲ್ಲರಿಗೂ (Sathya New movie Updates) ತಿಳಿದಿದೆ.


ಈ ಸಿನಿಮಾ ಬಂದ್ಮೇಲೆ ಸತ್ಯ ಮತ್ತೊಂದು ಚಿತ್ರದಲ್ಲಿ ಹೀರೋ ಆದರು.  ಆ ಚಿತ್ರದ ಹೆಸರು ಬೀರ, ಆದರೆ ಈ ಚಿತ್ರ ಏನ್ ಆಯಿತು? ಸತ್ಯ ಮುಂದೆ ಕಳದೆ ಹೋದ್ರೆ? ಈ ಎಲ್ಲ (Sardar Sathya Movie Updates) ಪ್ರಶ್ನೆಗಳು ಇರೋವಾಗ್ಲೇ, ಕನ್ನಡದ ಇದೇ ಸತ್ಯ ಪಕ್ಕದ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇವರ ಈ ಸಿನಿಮಾದ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.


Kannada Actor Satya Now Shining in Kollywood Movie
ಕಾಲಿವುಡ್‌ನಲ್ಲಿ ಕನ್ನಡದ ಸರ್ದಾರ್ ಸತ್ಯ ಮಿಂಚಿಂಗ್!


ಕನ್ನಡದಿಂದ ತಮಿಳು ಚಿತ್ರರಂಗಕ್ಕೆ ಹೋದವ್ರು ಸಾಕಷ್ಟು ಜನ ಇದ್ದಾರೆ. ಈಗಲೂ ಹೋಗಿ ಅನೇಕರು ನಟಿಸಿ ವಾಪಸ್ ಬರ್ತಾರೆ. ಆದರೆ ಎಲ್ಲರಿಗೂ ಅಲ್ಲಿ ಸಕ್ಸಸ್ ಸಿಗೋದಿಲ್ಲ. ಆದರೂ ಈ ಸಿನಿಮಾರಂಗ ಕನ್ನಡದ ಪ್ರತಿಭಾವಂತ ಕಲಾವಿದರಿಗೆ ಆಹ್ವಾನ ಕೊಡುತ್ತಲೇ ಇರುತ್ತದೆ.
ತಮಿಳು ಚಿತ್ರದಲ್ಲಿ ಸರ್ದಾರ್ ಖ್ಯಾತಿ ಸತ್ಯ ನಟನೆ


ಆ ದಿನಗಳು ಚಿತ್ರದ ಸರ್ದಾರ್ ಪಾತ್ರದ ಖ್ಯಾತಿಯ ನಟ ಸತ್ಯ ಕೂಡ ತಮಿಳು ಚಿತ್ರರಂಗಕ್ಕೆ ಹೋಗಿದ್ದಾರೆ. ಬಂದ ಆಫರ್‌ ಅನ್ನ ಅಷ್ಟೇ ಪ್ರೀತಿಯಿಂದಲೇ ಸ್ವೀಕರಿಸಿದ್ದಾರೆ. ಕನ್ನಡದ ನಿರ್ದೇಶಕ ಜೇಕಬ್ ವರ್ಗೀಸ್ ಅವರ ಸ್ನೇಹಿತ ವೆಟ್ರಿಮಾನ್ ಸಿನಿಮಾದಲ್ಲಿ ಕನ್ನಡದ ಸತ್ಯ ಅಭಿನಯಿಸಿದ್ದಾರೆ.


ಹೌದು, ಸರ್ದಾರ್ ಸತ್ಯ ಇತ್ತೀಚಿಗೆ ರಿಲೀಸ್ ಆದ ವಿಡುದಲೈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ವೇಲ್ಮುರುಗನ್ ಹೆಸರಿನ ಪಾತ್ರದಲ್ಲಿ ಸತ್ಯ ಅಭಿನಯಿಸಿದ್ದಾರೆ. ಎಸ್.ಐ ಪಾತ್ರದ ಮೂಲಕ ಇಡೀ ಚಿತ್ರದಲ್ಲಿ ತಮ್ಮದೇ ರೀತಿಯಲ್ಲಿ ಅಬ್ಬರಿಸಿದ್ದಾರೆ.


ವೆಟ್ರಿಮಾರ್‌ನ ಸಿನಿಮಾದಲ್ಲಿ ಆ ದಿನಗಳು ಸರ್ದಾರ್ ಸತ್ಯ


ತಮಿಳಿನ ವಿಜಯ್ ಸೇತುಪತಿ, ಸೂರಿ, ಗೌತಮ್ ವಾಸುದೇವ್ ಮೆನನ್ ಅವರ ಅಭಿನಯದ ಮಧ್ಯೆ ನಟ ಸತ್ಯ ವಿಶೇಷವಾಗಿಯೇ ಕಾಣಿಸುತ್ತಾರೆ. ಇವರೆಲ್ಲರೂ ಅಭಿನಯಿಸಿರೋ ಈ ಚಿತ್ರವನ್ನ ವೆಟ್ರಿಮಾನ್ ಅದ್ಭುತವಾಗಿಯೇ ತೆಗೆದಿದ್ದಾರೆ.


ವೆಟ್ರಿಮಾರನ್ ಸಿನಿಮಾ ಅಂದ್ಮೇಲೆ ವಿಶೇಷವಾಗಿಯೇ ಇರುತ್ತವೆ. ವಿಡುದಲೈ ಕೂಡ ಅಷ್ಟೇ ಸ್ಪೆಷಲ್ ಆಗಿಯೇ ಇದೆ. ಇದನ್ನ ನೋಡಿದವ್ರು ಈ ಚಿತ್ರವನ್ನ ಇಷ್ಟಪಟ್ಟಿದ್ದಾರೆ. ತಮ್ಮದೇ ರೀತಿಯಲ್ಲಿ ಚಿತ್ರದ ಬಗ್ಗೆ ಹೇಳಿಕೊಳ್ತಾರೆ.


Kannada Actor Satya Now Shining in Kollywood Movie
ತಮಿಳು ಚಿತ್ರದಲ್ಲಿ ಸರ್ದಾರ್ ಖ್ಯಾತಿ ಸತ್ಯ ನಟನೆ


ಕಾಲಿವುಡ್‌ನಲ್ಲಿ ಕನ್ನಡದ ಸರ್ದಾರ್ ಸತ್ಯ ಮಿಂಚಿಂಗ್!


ಜನರಿಂದ ಮೆಚ್ಚುಗೆ ಪಡೆದ ಈ ಚಿತ್ರದಲ್ಲಿ ಸರ್ದಾರ್ ಖ್ಯಾತಿಯ ನಟ ಸತ್ಯ ಅಭಿನಯಿಸಿದ್ದಾರೆ. ಹಾಗೆ ಕನ್ನಡದಿಂದ ತಮಿಳಿಗೆ ಹೋಗಲು ಕಾರಣವೂ ಇದೆ. ಚಾಮರಾಜನಗರ ಮೂಲದ ಸತ್ಯ ಅವರಿಗೆ ತಮಿಳು ಕೂಡ ಚೆನ್ನಾಗಿಯೇ ತಿಳಿದಿದೆ. ಹಾಗಾಗಿಯೇ ಅವರಮ್ಮ ತಮಿಳು ಚಿತ್ರರಂಗದಲ್ಲೂ ಅಭಿನಯಿಸು ಅಂತಲೇ ಹೇಳಿದ್ದರು.


ಇದನ್ನೂ ಓದಿ: Shehnaaz Gill: ಸಿನಿಮಾಕ್ಕಾಗಿ ತೂಕವನ್ನು ಜಾಸ್ತಿ ಮಾಡ್ಕೊತಾರಂತೆ ಶೆಹನಾಜ್ ಗಿಲ್! ಹನಿ ಸಿಂಗ್​ಗೆ ಹೇಳಿದ್ದೇಕೆ ಈ ನಟಿ?


ಅದೇ ಸ್ಪೂರ್ತಿಯಿಂದಲೇ ಸತ್ಯ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಒಳ್ಳೆ ರೆಸ್ಪಾನ್ಸ್ ಪಡೆದಿದ್ದಾರೆ. ವೆಟ್ರಿಮಾನ್ ಅವರ ಈ ವಿಡುದಲೈ ಸಿನಿಮಾದ ಪಾರ್ಟ್ ಒನ್ ಮಾತ್ರ ಬಂದಿದೆ. ಪಾರ್ಟ್-2 ಸಿನಿಮಾ ಕೂಡ ರಿಲೀಸ್ ಆಗುತ್ತದೆ. ಅದಕ್ಕೂ ಮೊದಲೇ ಸತ್ಯ ತಮ್ಮ ಪಾತ್ರದ ಮೂಲಕ ಎಲ್ಲರನ್ನ ಸೆಳೆದು ಬಿಟ್ಟಿದ್ದಾರೆ.

First published: