ಸ್ಯಾಂಡಲ್ವುಡ್ನ ಲೂಸಿಯಾ (Matinee Song Shoot in Manali) ಚಿತ್ರದ ನಾಯಕ ನಟ ಲೂಸಿಯಾ ಸತೀಶ್ ಮತ್ತು ನಟಿ ಅದಿತಿ ಪ್ರಭುದೇವ ಕುಲು ಮನಾಲಿಯ (Kullu Manali) ಸುಂದರ ತಾಣದಲ್ಲಿ ಅದ್ಭುತ ರೋಮ್ಯಾಂಟಿಕ್ (Romantic Song Shoot) ಸಾಂಗ್ವೊಂದನ್ನ ಚಿತ್ರೀಕರಿಸಿಕೊಂಡು ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಉಸಿರಾಡಲು ತೊಂದರೆ ಅಗುವಂತ ಸ್ನೋಫಾಲ್ (Snowfall) ಆಗೋವಂತೆ ಇರುವ ತಾಣದಲ್ಲಿಯೇ ರೋಮ್ಯಾಂಟಕ್ ಹಾಡೊಂದನ್ನ ಚಿತ್ರೀಕರಿಸಿಕೊಂಡು ಬಂದಿದ್ದಾರೆ. ಸ್ವಿಜರ್ಲ್ಯಾಂಡ್ನ್ನೂ ಮಿರಿಸೋ ಅದ್ಭುತ ಜಾಗ ನಮ್ಮಲ್ಲಿಯೇ ಇದೆ ಅನ್ನೋದನ್ನ ಅಷ್ಟೇ ಖುಷಿಯಿಂದಲೇ ನಟ ನೀನಾಸಂ ಸತೀಶ್ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ಗೆ ಸತೀಶ್ ತಮ್ಮ ಈ ಅನುಭವವನ್ನ ಇಲ್ಲಿ ವಿಶೇಷವಾಗಿಯೇ ಹಂಚಿಕೊಂಡಿದ್ದಾರೆ. ಅವರ ಮಾತಿನಲ್ಲಿ ಒಳ್ಳೆ ಹಾಡವೊಂದನ್ನ ಚಿತ್ರೀಕರಿಸಿಕೊಂಡು ಬಂದ ಖುಷಿ ತುಂಬಿ ತುಳುಕುತ್ತಿದೆ.
ಮ್ಯಾಟ್ನಿ ಚಿತ್ರದ ಮನಾಲಿ ಹಾಡಿನ ಅನುಭವ ಹಂಚಿಕೊಂಡ ಸತೀಶ್!
ಹೌದು, ಅಂದ್ಹಾಗೆ ಈ ಚಿತ್ರದ ಹೆಸರು ಮ್ಯಾಟ್ನಿ ಅನ್ನೋದು ಅಷ್ಟೇ ವಿಶೇಷವಾಗಿಯೇ ಇದೆ. ಈ ಚಿತ್ರದಲ್ಲಿ ವಿಶೇಷವಾಗಿ ನಾಯಕ ನಟ ನೀನಾಸಂ ಸತೀಶ್ ಅವರಿಗೆ ಇಬ್ಬರು ನಾಯಕಿಯ ಜೋಡಿ ಇದೆ.
ಆದರೆ ಮನಾಲಿಯಲ್ಲಿ ಸತೀಶ್ ಮತ್ತು ಅದಿತಿ ಪ್ರಭುದೇವ ಅವರ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹೆಚ್ಚು ಕಡಿಮೆ ಮೂರ್ನಾಲ್ಕು ದಿನಗಳವರೆಗೂ ಮನಾಲಿಯ ಸುಂದರ ತಾಣದಲ್ಲಿ ರೋಮ್ಯಾಂಟಿಕ್ ಹಾಡನ್ನ ಚಿತ್ರೀಕರಿಸಲಾಗಿದೆ.
ಮನಾಲಿಯಲ್ಲಿ ಸತೀಶ್-ಅದಿತಿ ರೋಮ್ಯಾಂಟಿಕ್ ಸಾಂಗ್ ಶೂಟ್
ಕೋರಿಯೋಗ್ರಾಫರ್ ಸಂತೋಷ್ ನೃತ್ಯ ನಿರ್ದೇಶನದಲ್ಲಿ ಸತೀಶ್ ಮತ್ತು ಅದಿತಿ ಪ್ರಭುದೇವ ರೋಮ್ಯಾಂಟಿಕ್ ಹಾಡನ್ನ ಚಿತ್ರೀಕರಿಸಿದ್ದಾರೆ. ಸ್ನೋ ಬೀಳೊ ಸಮಯದಲ್ಲಿ ಸಾಮಾನ್ಯವಾಗಿ ಇಲ್ಲಿ ವಾತಾರವರಣದಲ್ಲಿ ವ್ಯತ್ಯಾಸ ಆಗುತ್ತದೆ.
ಆದರೂ ಮ್ಯಾಟ್ನಿ ಸಿನಿಮಾ ತಂಡಕ್ಕೆ ಸ್ನೋದಲ್ಲಿ ಚಿತ್ರೀಕರಿಸೋ ಅವಕಾಶ ಸಿಕ್ಕಿದೆ. ಇದರಿಂದ ಇಡೀ ಸಿನಿಮಾದ ಈ ಒಂದು ಹಾಡು ಯಾವ ಹಾಲಿವುಡ್-ಬಾಲಿವುಡ್ ಸಿನಿಮಾಗೆ ಕಮ್ಮಿಯಿಲ್ಲದ ರೀತಿಯಲ್ಲಿಯೇ ಬಂದಿದೆ ಎಂದು ನಾಯಕ ನಟ ನೀನಾಸಂ ಸತೀಶ್ ಹೇಳಿದ್ದಾರೆ.
ಕುಲು ಮನಾಲಿ ಮುಂದೆ ಸ್ವಿಜರ್ಲ್ಯಾಂಡ್ ಏನೂ ಅಲ್ಲ!
ಮನಾಲಿಯ ಸುಂದರ ರಮಣಿಯ ತಾಣವನ್ನ ಕಂಡ್ರೆ, ಯಾವ ಸ್ವಿಜರ್ಲ್ಯಾಂಡ್ ಕೂಡ ಇದರ ಮುಂದೆ ಏನೂ ಅಲ್ಲ. ಹಾಗಿರೋ ಮನಾಲಿಯಲ್ಲಿ ಕಡಿಮೆ ತಾಪಮಾನ ಇರೋ ತಾಣದಲ್ಲಿ ಹೋಗಲು ಅವಕಾಶ ಇರಲಿಲ್ಲ. ಸ್ನೋ ಬೀಳುವ ಕಾರಣದಿಂದಲೇ ಅಲ್ಲಿ ಅವಕಾಶ ಇರಲಿಲ್ಲ.
ಆದರೆ ನಮಗೆ ಅಲ್ಲಿ ಹೋಗಿ ಚಿತ್ರೀಕರಿಸೋ ಅವಕಾಶ ಸಿಕ್ಕಿದೆ. ಅದನ್ನ ಅಷ್ಟೇ ಅದ್ಭುತವಾಗಿಯೇ ಚಿತ್ರೀರಿಸಿಕೊಂಡು ಬಂದಿದ್ದೇವೆ. ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಇನ್ನೂ ಒಂದೆರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ.
ಮ್ಯಾಟ್ನಿ ಸಿನಿಮಾದ ಇತರ ಮ್ಯಾಟರ್ ಏನು ಗೊತ್ತೇ?
ಇನ್ನುಳಿದಂತೆ ಚಿತ್ರೀಕರಣದ ಇತರ ಕೆಲಸಗಳೂ ನಡೆಯುತ್ತಿವೆ. ಪೂರ್ಣಚಂದ್ರ ತೇಜಸ್ವಿ ನಮ್ಮ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಮನೋಹರ್ ಕ್ಯಾಂಪಲ್ಲಿ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.
ಸುಧಾಕರ್ ಮತ್ತು ಕೀರ್ತನ್ ಪೂಜಾರ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ನಾಗಭೂಷಣ್, ಶಿವರಾಜ್ ಕೆ.ಆರ್.ಪೇಟೆ, ಪೂರ್ಣಚಂದ್ರ ಮೈಸೂರು, ನವ ನಟ ದಿಗಂತ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Paavana Gowda: ಬೊಂಬೆಗಳ ಲವ್ ಚಿತ್ರ ಖ್ಯಾತಿಯ ಪಾವನಾ ಹೊಸ ಅವತಾರ್! ಗೌಳಿ ಚಿತ್ರದಲ್ಲಿ ಇವರ ಪಾತ್ರವೇನು?
ಇನ್ನೇನು ಸಿನಿಮಾದ ಎಲ್ಲ ಕೆಲಸ ಮುಗಿಸಿಕೊಂಡು ಮ್ಯಾಟ್ನಿ ಸಿನಿಮಾದ ಬಾಕಿ ಇರೋ ಕೆಲಸವನ್ನ ಸಿನಿಮಾ ಟೀಮ್ ಈಗ ಪ್ಲಾನ್ ಮಾಡುತ್ತಿದ್ದು, ಸದ್ಯಕ್ಕೆ ಮನಾಲಿಯಲ್ಲಿ ಹಾಡಿನ ಚಿತ್ರೀಕರಣ ಮಾಡಿರೋ ಖುಷಿಯಲ್ಲಿಯೇ ಬೆಂಗಳೂರಿಗೆ ವಾಪಸ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ