ಸ್ಯಾಂಡಲ್‌ವುಡ್ ನಾಯಕ ನಟ ನೀನಾಸಂ ಸತೀಶ್ (Sathish Ninasam New Movie) ಲೂಸಿಯಾ ಚಿತ್ರದಿಂದಲೇ ಹೆಚ್ಚು ಖ್ಯಾತಿ ಪಡೆದರು. ರಾಕಿ ಭಾಯ್ ಯಶ್ ಅಭಿನಯದ ಡ್ರಾಮಾ ಚಿತ್ರದಲ್ಲೂ ಸತೀಶ್ ಮಹತ್ವದ ಪಾತ್ರವನ್ನ ನಿರ್ವಹಿಸಿದ್ದರು. ಇವರೇ ಅಭಿನಯಿಸಿದ್ದ ರಾಕೆಟ್ ಚಿತ್ರವೂ ಗಮನ ಸೆಳೆಯೋ ಕೆಲಸ ಮಾಡಿತ್ತು. ಮೊನ್ನೆ ಮೊನ್ನೆ (Sathish New Movie with Suri) ಪೆಟ್ರೋಮ್ಯಾಕ್ಸ್ ಚಿತ್ರದ ಬಹುತೇಕ ಕೆಲಸವನ್ನ ಪೂರ್ಣಗೊಳಿಸಿದ್ದಾರೆ. ಆದರೆ ಈಗ ಇನ್ನೂ ಒಂದು ಸಿನಿಮಾ ಮಾಡೋಕೆ ಮುಂದೆ ಬಂದಿದ್ದಾರೆ. ಇದು ಪಕ್ಕ ಆ್ಯಕ್ಷನ್ ಸಿನಿಮಾ ಆಗಿರುತ್ತದೆ. ಇದಕ್ಕೂ ಹೆಚ್ಚಾಗಿ ಈ (Kannada Film New Updates) ಚಿತ್ರಕ್ಕೆ ದುನಿಯಾ ಸೂರಿಯವರೇ ಮಾಸ್ಟರ್ ಮೈಂಡ್ ಅಂದ್ರೂ ತಪ್ಪಿಲ್ಲ. ಸಿನಿಮಾವನ್ನ ಇವರ ಶಿಷ್ಯ ಸುರೇಶ್ ಡೈರೆಕ್ಟ್ ಮಾಡಿದ್ದಾರೆ.
ಈ ಕುರಿತು ಸತೀಶ್ ನೀನಾಸಂ, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ (Sathish Ninasam Action Cinema) ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅದು ಇಂತಿದೆ ಓದಿ.
ದುನಿಯಾ ಸೂರಿ ನೇತೃತ್ವದಲ್ಲಿ ಸತೀಶ್ ಹೊಸ ಸಿನಿಮಾ
ಸತೀಶ್ ನೀನಾಸಂ ಚಿತ್ರರಂಗದಲ್ಲಿ ವಿಶೇಷವಾಗಿಯೇ ಕಾಣಿಸುತ್ತಾರೆ. ಎಲ್ಲ ಹೀರೋಗಳಿರೋ ಮ್ಯಾನರಿಸಂ ಬೇರೆ ಇರುತ್ತದೆ. ಸತೀಶ್ ನೀನಾಸಂ ಮ್ಯಾನರಿಸಂ ಒಂದು ರೀತಿ ಹಳ್ಳಿ ಯುವಕರ ದಾಟಿಯಲ್ಲಿಯೇ ಬರುತ್ತದೆ. ಮಂಡ್ಯ ಕಡೆಯ ಯುವಕರನ್ನ ಪ್ರತಿನಿಧಿಸೋ ಹಾಗೇನೆ ಇವರ ಮ್ಯಾನರಿಸಂ ಇದೆ. ಮಾತಿನ ದಾಟಿಯಲ್ಲೂ ಆ ಸೊಗಡು ಕಂಡು ಬರುತ್ತದೆ.
ನೀನಾಸಂ ಸತೀಶ್ ಅವರಿಗೆ ಈ ವಿಷಯ ಗೊತ್ತಿದೆ. ಅದನ್ನ ಅರ್ಥ ಮಾಡಿಕೊಂಡೇ ಸಿನಿಮಾ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆ ಪೆಟ್ರೋಮ್ಯಾಕ್ಸ್ ಚಿತ್ರದ ಚಿತ್ರೀಕರಣವನ್ನೂ ಬಹುತೇಕ ಪೂರ್ಣಗೊಳಿಸಿದ್ದಾರೆ. ಆದರೆ ಇಲ್ಲಿಯವರೆಗೂ ದುನಿಯಾ ಸೂರಿ ಶೈಲಿಯ ಸಿನಿಮಾದಲ್ಲಿ ನೀನಾಸಂ ಸತೀಶ್ ಅಭಿನಯಿಸಿರೋದು ಇಲ್ವೇ ಇಲ್ಲ. ಇದೀಗ ಅಂತಹ ಒಂದು ಅವಕಾಶ ಬಂದಿದೆ.
ಪಕ್ಕಾ ಆ್ಯಕ್ಷನ್ ಸಿನಿಮಾದಲ್ಲಿ ಲೂಸಿಯಾ ಸತೀಶ್
ನಿಜ, ನೀನಾಸಂ ಸತೀಶ್ ತಮ್ಮ ಚಿತ್ರ ಜೀವನದಲ್ಲಿ ಪಕ್ಕಾ ಆ್ಯಕ್ಷನ್ ಸಿನಿಮಾ ಮಾಡಿದ್ದೇ ಇಲ್ಲ. ಈಗ ಆ ಅವಕಾಶ ಬಂದಿದೆ. ದುನಿಯಾ ಸೂರಿ ಅವರ ತಂಡದಲ್ಲಿಯೇ ಪಳಗಿದ ಸುರೇಶ್, ಸತೀಶ್ ಅವರಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಪಕ್ಕಾ ಆ್ಯಕ್ಷನ್ ಇರೋ ಚಿತ್ರವೇ ಆಗಿದೆ. ಇಲ್ಲಿವರೆಗೂ ಸತೀಶ್ ಇಂತಹ ಚಿತ್ರದಲ್ಲಿ ಕಾಣಿಸಿಕೊಂಡೇ ಇಲ್ಲ ನೋಡಿ.
ಸ್ವತಃ ಸತೀಶ್ ಹೇಳೋವಂತೆ, ನನ್ನ ಚಿತ್ರ ಜೀವನದಲ್ಲಿ ಈ ರೀತಿಯ ಸಿನಿಮಾ ಮೊದಲಾಗಿದೆ. ಸೂರಿ ಅವರ ನೇತೃತ್ವದಲ್ಲಿಯೇ ಈ ಚಿತ್ರ ರೆಡಿ ಆಗುತ್ತದೆ. ಅವರ ಮುಂದಾಳತ್ವದಲ್ಲಿಯೇ ಚಿತ್ರ ನಿರ್ಮಾಣ ಆಗುತ್ತದೆ. ಆದರೆ ಅವರ ತಂಡದಲ್ಲಿರೋ ಸುರೇಶ್ ಇಡೀ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದಾರೆ ಎಂದು ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಸತೀಶ್ ಹೇಳಿದ್ದಾರೆ.
ಸತೀಶ್ ನೀನಾಸಂ ಚಿತ್ರ ಜೀವನದ ಮಹತ್ವದ ಸಿನಿಮಾ
ಸತೀಶ್ ಅವರು ಈ ಚಿತ್ರವನ್ನ ತಾವೇ ನಿರ್ಮಿಸೋ ಯೋಚನೆಯನ್ನ ಕೂಡ ಮಾಡುತ್ತಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರ ನಿರ್ಮಿಸಬೇಕು ಅನ್ನುವ ಆಸೆ ಕೂಡ ಅವರ ಮಾತಿನಿಂದಲೇ ತಿಳಿಯುತ್ತದೆ. ಆದರೆ ಯಾವುದು ಇನ್ನೂ ಫೈನಲ್ ಆಗಿಲ್ಲ ಬಿಡಿ. ಹಾಗಂತ ಬೇರೆ ನಿರ್ಮಾಪಕರೂ ಮಾಡೋದಿಲ್ವೇ ಅಂತ ಕೇಳಿದ್ರೆ, ಅದು ಚಾನ್ಸಸ್ ಇದೆ ನೋಡಬೇಕು ಅಂತ ಸತೀಶ್ ವಿವರಣೆ ಕೊಡ್ತಾರೆ.
ದುನಿಯಾ ಸೂರಿ ಅವರ ಶೈಲಿಯಲ್ಲಿಯೇ ಸತೀಶ್ ಮುಂದಿನ ಸಿನಿಮಾ ಬರುತ್ತದೆ. ಕಲ್ಟ್ ಸಿನಿಮಾ ಅಂತೀವಲ್ಲ. ಆ ರೀತಿಯ ಸಾಹಸಭರಿತ ವಿಭಿನ್ನ ಶೈಲಿಯ ಚಿತ್ರವೇ ಇದಾಗಿರುತ್ತದೆ. ಆ ಒಂದು ಭರವಸೆಯನ್ನ ನೀನಾಸಂ ಸತೀಶ್ ಈಗಲೆ ಕೊಟ್ಟಿದ್ದಾರೆ.
ನೀನಾಸಂ ಸತೀಶ್ ಚಿತ್ರ ಜೀವನದ ಹೊಸ ಶೈಲಿ ಸಿನಿಮಾ
ಸತೀಶ್ ಅವರ ಸಿನಿಮಾ ಜೀವನದಲ್ಲಿ ಈ ಒಂದು ಸಿನಿಮಾ ಹೊಸ ರೀತಿಯಲ್ಲಿಯೇ ಬರುವ ಹಾಗೆ ಕಾಣುತ್ತದೆ. ಇದಕ್ಕೆ ಬೇಕಾಗೋ ತಯಾರಿಯನ್ನ ಕೂಡ ಸತೀಶ್ ಈಗ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಒಂದಷ್ಟು ಮೂಲ ಮಾಹಿತಿಯನ್ನ ಕೊಟ್ಟಿದ್ದಾರೆ.
ಇದನ್ನೂ ಓದಿ: Shiva Rajkumar: ಶಿವಣ್ಣನ ಘೋಸ್ಟ್ ಮೂಲಕ ಕನ್ನಡಕ್ಕೆ ಕಾಲಿಟ್ಟ T-Series; ಖುಷಿ ಹಂಚಿಕೊಂಡ ಡೈರೆಕ್ಟರ್ ಶ್ರೀನಿ
ಆದರೆ ಸಿನಿಮಾ ಶೂಟಿಂಗ್ ಇನ್ನೂ ಆರಂಭಗೊಂಡಿಲ್ಲ. ಮೇ ತಿಂಗಳು ಇಲ್ಲವೇ ಜೂನ್ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು ಡೈರೆಕ್ಟರ್ ಸೂರಿ ನೇತೃತ್ವದಲ್ಲಿಯೇ ಈ ಚಿತ್ರ ಶುರು ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ