Sathish Ninasam: ನೀನಾಸಂ ಸತೀಶ್ ಸಿನಿಮಾ ಕಂಪ್ಲೀಟ್! ಏನಂತಾರೆ ಮ್ಯಾಟ್ನಿ ಮ್ಯಾನ್?

ಮ್ಯಾಟ್ನಿ ಸಿನಿಮಾದಲ್ಲೂ ರಚಿತಾ-ಸತೀಶ್ ಸೂಪರ್ ಸಾಂಗ್

ಮ್ಯಾಟ್ನಿ ಸಿನಿಮಾದಲ್ಲೂ ರಚಿತಾ-ಸತೀಶ್ ಸೂಪರ್ ಸಾಂಗ್

ಸತೀಶ್ ನೀನಾಸಂ ತುಂಬಾ ಖುಷಿಯಲ್ಲಿದ್ದಾರೆ. ಇವರ ಖುಷಿಗೆ ಮ್ಯಾಟ್ನಿ ಸಿನಿಮಾ ಕಾರಣ ಅಂತ ಹೇಳಬಹುದು. ಇಡೀ ಸಿನಿಮಾದ ಕೆಲಸ ಈಗ ದಿಲ್ ಖುಷ್ ಮಾಡಿದೆ. ಇದೇ ಖುಷಿಯಲ್ಲಿ ಸತೀಶ್ ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಮಾತನಾಡಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ ನಾಯಕ ನಟ ನೀನಾಸಂ ಸತೀಶ್ ತುಂಬಾ (Matinee Movie Dubbing Complete) ಖುಷಿಯಲ್ಲಿದ್ದಾರೆ. ತಮ್ಮ ಅಭಿನಯದ ಮ್ಯಾಟ್ನಿ ಸಿನಿಮಾದ ಕೆಲಸದಿಂದ ಸತೀಶ್ ದಿಲ್ ಖುಷ್ ಆಗಿದೆ. ಇದೇ ಸಂತೋಷದಲ್ಲಿಯೇ ತಮ್ಮ (Sathish Ninasam New Movie) ಸಿನಿಮಾದಲ್ಲಿರೋ ವಿಶೇಷತೆಗಳನ್ನ ಕೂಡ ಇದೀಗ ಹಂಚಿಕೊಂಡಿದ್ದಾರೆ. ಚಿತ್ರದ ಪ್ರತಿ ವಿಚಾರದ ಸಂಕ್ಷಿಪ್ತ ಚಿತ್ರಣವನ್ನ ಕೂಡ ಕೊಟ್ಟಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ತಮ್ಮ ಚಿತ್ರ ಯಾವ ರೀತಿ ರುಚಿಸಲಿದೆ (Kannada Actor Sathish Ninasam) ಅನ್ನೋ ಅಭಿಪ್ರಾಯವನ್ನು ಈಗ ಶೇರ್ ಮಾಡಿದ್ದಾರೆ. ಮ್ಯಾಟ್ನಿ ಸಿನಿಮಾದ ಈ ಎಲ್ಲ ವಿಷಯವನ್ನ ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಸತೀಶ್ ಇದೀಗ ಹಂಚಿಕೊಂಡಿದ್ದಾರೆ. ಆ ಮಾಹಿತಿಯ (Sandalwood Film Updates) ಒಂದು ಚಿತ್ರಣ ಇಲ್ಲಿದೆ ಓದಿ.


ಮ್ಯಾಟ್ನಿ ಸಿನಿಮಾ ಹೊಸ ಮ್ಯಾಟರ್ ಏನು ಗೊತ್ತೇ ?


ಮ್ಯಾಟ್ನಿ ಸಿನಿಮಾದ ಶೂಟಿಂಗ್ ಕೆಲಸ ಪೂರ್ಣಗೊಂಡಿದೆ. ಡಬ್ಬಿಂಗ್ ಕೆಲಸ ಕೂಡ ನಡೀತಾನೇ ಇತ್ತು. ಅದು ಕೂಡ ಈಗ ಕಂಪ್ಲೀಟ್ ಆಗಿದೆ. ಡೈರೆಕ್ಟರ್ ಮನೋಹರ್ ಕಂಪಲ್ಲಿ ಇದೀಗ ಎಲ್ಲ ಕೆಲಸವನ್ನ ಪೂರ್ಣಗೊಳಿಸಿದ್ದಾರೆ. ನಿರ್ದೇಶಕರ ಕೆಲಸವನ್ನ ಮೆಚ್ಚಿರೋ ನಾಯಕ ನಟ ನೀನಾಸಂ ಸತೀಶ್ ತುಂಬಾ ಖುಷಿಯಲ್ಲಿದ್ದಾರೆ.


Kannada Actor Sathish Ninasam New Matinee Movie Now Dubbing Complete
ಮ್ಯಾಟ್ನಿ ಸಿನಿಮಾ ಒಂದು ಕಂಪ್ಲೀಟ್ ಪ್ಯಾಕೇಜ್-ಸತೀಶ್


ತಮ್ಮ ಚಿತ್ರದಲ್ಲಿ ಒಳ್ಳೆ ಹಾಡುಗಳೇ ಇವೆ ಅನ್ನೋದನ್ನ ಮನದುಂಬಿ ಹೇಳಿಕೊಂಡಿದ್ದಾರೆ. ಅಯೋಗ್ಯ ಸಿನಿಮಾದಲ್ಲಿ "ಏನಮ್ಮಿ ಹಾಡು" ಸೂಪರ್ ಹಿಟ್ ಆಗಿತ್ತು.




ಮ್ಯಾಟ್ನಿ ಸಿನಿಮಾದಲ್ಲೂ ರಚಿತಾ-ಸತೀಶ್ ಸೂಪರ್ ಸಾಂಗ್


ಅದೇ ರೀತಿನೇ ಮ್ಯಾಟ್ನಿ ಸಿನಿಮಾದಲ್ಲೂ "ಸಂಜೆ ಮೇಲೆ ಸುಮ್ನೆ ಹಂಗೆ ಪೋನ್ ಮಾಡ್ಲಾ ನಿಂಗೆ " ಅನ್ನುವ ಹಾಡು ಇದೆ. ಇದು ಕೂಡ ಸೂಪರ್ ಹಿಟ್ ಆಗುತ್ತದೆ ಅನ್ನುವ ನಿರೀಕ್ಷೆ ಈಗಲೇ ಮೂಡಿದೆ ಅಂತಲೇ ಸತೀಶ್ ನೀನಾಸಂ ಹೇಳುತ್ತಾರೆ.


Quze Link



ಮ್ಯಾಟ್ನಿ ಚಿತ್ರದಲ್ಲಿ ಇಬ್ಬರು ಹೀರೋಯಿನ್ಸ್


ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ, ನೀನಾಸಮ ಸತೀಶ್ ಅವರಿಗೆ ಜೋಡಿ ಆಗಿದ್ದಾರೆ. ಈ ನಾಯಕಿಯರಿಗೆ ಒಂದೊಂದು ಸ್ಪೆಷಲ್ ಸಾಂಗ್ ಕೂಡ ಈ ಚಿತ್ರದಲ್ಲಿವೆ.


ಮನಾಲಿಯಲ್ಲಿ ಅದಿತಿ ಪ್ರಭುದೇವ ಮತ್ತು ಸತೀಶ್ ಜೋಡಿಯ ಹಾಡನ್ನ ಚಿತ್ರೀಕರಿಸಿದ್ದಾರೆ. ಈ ಹಾಡ ಕೂಡ ಸೂಪರ್ ಆಗಿಯೇ ಬಂದಿದೆ.


ಮ್ಯಾಟ್ನಿ ಸಿನಿಮಾ ಒಂದು ಕಂಪ್ಲೀಟ್ ಪ್ಯಾಕೇಜ್-ಸತೀಶ್


ಸಂಜೆ ಮೇಲೆ ಸುಮ್ನೆ ಹಂಗೆ ಪೋನ್ ಮಾಡ್ಲಾ ನಿಂಗೆ ಅನ್ನುವ ಹಾಡಲ್ಲಿ ರಚಿತಾ ರಾಮ್ ಇದ್ದಾರೆ. ಹೀಗೆ ಒಳ್ಳೆ ಹಾಡುಗಳೆ ಮ್ಯಾಟ್ನಿ ಸಿನಿಮಾದಲ್ಲಿವೆ.


Kannada Actor Sathish Ninasam New Matinee Movie Now Dubbing Complete
ಮ್ಯಾಟ್ನಿ ಮೂವಿ ಹೊಸ ಮ್ಯಾಟರ್ ಏನು ಗೊತ್ತೇ ?


ಮ್ಯಾಟ್ನಿ ಪಕ್ಕಾ ಎಂಟರಟೈನರ್ ಸಿನಿಮಾ


ಮ್ಯಾಟ್ನಿ ಸಿನಿಮಾವೊಂದ ಕಂಪ್ಲೀಟ್ ಪ್ಯಾಕೇಜ್ ಆಗಿದೆ. ಪ್ರೇಕ್ಷಕರು ಈ ಚಿತ್ರವನ್ನ ತುಂಬಾನೆ ಎಂಜಾಯ್ ಮಾಡಬಹುದು ಅಂತಲೇ ನೀನಾಸಂ ಸತೀಶ್ ಭರವಸೆಯ ಮಾತುಗಳನ್ನ ಈಗಲೇ ಹೇಳಿಕೊಂಡಿದ್ದಾರೆ.


ಮ್ಯಾಟ್ನಿ ಮೂವಿ ಹೊಸ ಮ್ಯಾಟರ್ ಏನು ಗೊತ್ತೇ ?


ಮ್ಯಾಟ್ನಿ ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ, ಪೂರ್ಣ ಮತ್ತು ನಾಗಭೂಷಣ್ ಅಭಿನಯಿಸಿದ್ದಾರೆ. ಈ ಮೂಲಕ ಸಿನಿಮಾ ಸಖತ್ ಎಂಟರಟೈನಿಂಗ್ ಆಗಿಯೇ ಇರುತ್ತದೆ ಅನ್ನುವ ಖುಷಿಯನ್ನ ಕೂಡ ಸತೀಶ್ ಈಗ ಶೇರ್ ಮಾಡಿದ್ದಾರೆ.


ಮ್ಯಾಟ್ನಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಕ್ಯಾಮೆರಾಮನ್ ಸುಧಾಕರ್ ಎಸ್ ರಾಜ್ ಕೆಲಸವನ್ನ ಸತೀಶ್ ತುಂಬಾನೇ ಮೆಚ್ಚಿಕೊಂಡಿದ್ದಾರೆ. ಇನ್ನು ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ.


ಇದನ್ನೂ ಓದಿ: Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್


ಸದ್ಯಕ್ಕೆ ಸಿನಿಮಾ ತಂಡ ಡಬ್ಬಿಂಗ್ ಕೆಲಸವನ್ನ ಪೂರ್ಣಗೊಳಿಸಿದೆ. ಅದೇ ಖುಷಿಯಲ್ಲಿಯೇ ಇಡೀ ಟೀಮ್ ರಿಲೀಸ್ ತಯಾರಿಯತ್ತ ಗಮನ ಹರೆಸಿದೆ.

First published: