• Home
  • »
  • News
  • »
  • entertainment
  • »
  • Bigg Boss Season 9: ರೇಡಿಯೋ ಜಾಕಿ ರೂಪೇಶ್ ಶೆಟ್ಟಿ-ಜ್ಯೋತಿಷಿ ಆರ್ಯವರ್ಧನ್ ಬಿಗ್ ಬಾಸ್ ಎಂಟ್ರಿ

Bigg Boss Season 9: ರೇಡಿಯೋ ಜಾಕಿ ರೂಪೇಶ್ ಶೆಟ್ಟಿ-ಜ್ಯೋತಿಷಿ ಆರ್ಯವರ್ಧನ್ ಬಿಗ್ ಬಾಸ್ ಎಂಟ್ರಿ

ಓಟಿಟಿ ಮನೆಯಿಂದ ಬಿಗ್ ಮನೆಗೆ

ಓಟಿಟಿ ಮನೆಯಿಂದ ಬಿಗ್ ಮನೆಗೆ

ಓಟಿಟಿ ಬಿಗ್ ಬಾಸ್ ನ ಸ್ಪರ್ಧಿಗಳಿಗೆ ಮತ್ತೊಮ್ಮೆ ಚಾನ್ಸ್ ಸಿಕ್ಕಿದೆ. ಅದನ್ನ ಸದುಪಯೋಗ ಪಡೆಸಿಕೊಳ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಗದ್ದಲದೊಂದಿಗೆ ಹೆಸರಾಗಿರೋ ಒಂದಷ್ಟು ಹೆಸರು ಇಲ್ಲಿವೆ.

  • Share this:

ಬಿಗ್ ಬಾಸ್ (Big Boss Season-9) ಮನೆಗೆ ಮೊದಲ ಸ್ಪರ್ಧಿಯಾಗಿ ನಟ-ಕಲಾ ನಿರ್ದೇಶಕ ಅರುಣ್ ಸಾಗರ್ (Arun Sagr) ಎಂಟ್ರಿ ಆಗಿದ್ದಾರೆ. ಇವರ ಹಿಂದೆ ಯಾರೆಲ್ಲ ಹೋಗ್ತಾರೆ ಅನ್ನೋ ಕುತೂಹಲವೂ ಇದೆ. ಆದರೆ, ಅದಕ್ಕೂ ಮೊದಲೇ ಈ ಮನೆಗೆ ಓಟಿಟಿ ಬಿಗ್ (OTT Big Boss ) ಬಾಸ್ ಮನೆಯ ಸ್ಪರ್ಧಿ ಆರ್ಯವರ್ಧನ್ ಹಾಗೂ ರೂಪೇಶ್ ಶೆಟ್ಟಿ ಹೆಸರು ಕೂಡ ಇದೆ. ಇವರು ಯಾವ ಕ್ರಮಾಂಕದಲ್ಲಿ ಮನೆಯೊಳಗೆ ಹೋಗುತ್ತಾರೆ ಅನ್ನೊ ಕುತೂಹಲ ಕೂಡ ಇದೆ. ಅದರಂತೆ ಈಗಾಗಲೇ ಮೊದಲ ಸ್ಪರ್ಧಿಯಾಗಿ ಅರುಣ್ ಸಾಗರ್ ಮನೆಯೊಳಗೆ ಹೋದ್ರೆ, ನಟಿ ಮಯೂರಿ (Actress Mayuri) ಎರಡನೇ ಸ್ಪರ್ಧಿಯಾಗಿಯೇ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ. ಆದರೆ ರೇಡಿಯೋ ಜಾಕಿ ರೂಪೇಶ್ ಶೆಟ್ಟಿ ಹಾಗೂ ಜ್ಯೋತಿಷಿ ಆರ್ಯವರ್ಧನ್ ಯಾವಾಗ ಮನೆಯೊಳಗೆ ಹೋಗ್ತಾರೆ ಅನ್ನೋ ಕ್ಯೂರಿಯೋಸಿಟಿ ಕೂಡ ಇದೆ.


ಓಟಿಟಿ ಬಿಗ್ ಬಾಸ್ ಮನೆಯ ರೂಪೇಶ್ ಶೆಟ್ಟಿ ಬಿಗ್ ಮನೆ ಎಂಟ್ರಿ ಹೇಗಿರುತ್ತೇ ?
ಬಿಗ್ ಬಾಸ್ ಸೀಸನ್-09 ಶುರು ಆಗಿದೆ. ಮನೆಯೊಳಗೆ ಸ್ಪರ್ಧಿಗಳು ಹೋಗುತ್ತಿದ್ದಾರೆ. ಮೊದಲ ಸ್ಪರ್ಧಿ ಅರುಣ್ ಸಾಗರ್ ಅಂತ ಗೊತ್ತಾಗಿದೆ. ಎರಡನೇ ಸ್ಪರ್ಧಿ ನಟಿ ಮಯೂರಿ ಅಂತ ಈಗಾಗಲೇ ಗೊತ್ತಾಗಿ ಹೋಗಿದೆ.


Kannada Actor Roopesh Shetty and Aryavardhan Going to enter Big Boss-09
ಆರ್ಯವರ್ಧನ್ ಗುರುಜಿ


ಇದರ ಹೊರತಾಗಿ ಓಟಿಟಿ ಬಿಗ್ ಬಾಸ್ ಮನೆಯಿಂದ ನೇರವಾಗಿ ಬಿಗ್ ಬಾಸ್ ಸೀಸನ್-09 ಕ್ಕಾಗಿಯೇ ಬಿಗ್ ಮನೆಗೆ ಹೋಗ್ತಿರೋರ ಲಿಸ್ಟ್ ನಲ್ಲಿ ರೇಡಿಯೋ ಜಾಕಿ ಹಾಗೂ ನಟ ರೂಪೇಶ್ ಶೆಟ್ಟಿ ಹೆಸರು ಕೂಡ ಇದೆ.


ರೂಪೇಶ್ ಶೆಟ್ಟಿ ಓಟಿಟಿ ಬಿಗ್ ಮನೆಯಲ್ಲಿ ಸಖತ್ ಸೌಂಡ್ ಮಾಡಿದ್ದಾರೆ. ತಮ್ಮದೇ ರೀತಿಯಲ್ಲಿ ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಈಗ ಬಿಗ್ ಮನೆಗೆ ಹೋಗುವ ಚಾನ್ಸ್ ಕೂಡ ಪಡೆದುಕೊಂಡಿರೋದು ವಿಶೇಷವೇ ಸರಿ.


ಇದನ್ನೂ ಓದಿ:Bigg Boss Season 9: ಸಾನಿಯಾ ಎಂಬ ಹಾಟ್ ಹುಡುಗಿ, ರಾಕೇಶ್ಎಂಬ ಸೂಪರ್ ಕೂಲ್ ಹುಡುಗ! ಬಿಗ್​ಬಾಸ್ ಮನೆಯಲ್ಲಿ ಹೇಗಿರುತ್ತೆ ಇವರ ಆಟ?


ಬಿಗ್ ಬಾಸ್-09 ಮನೆಯಲ್ಲಿ ಪ್ರವೀಣರು ಮತ್ತು ನವೀನರು ಇರೋ ಈ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ, ತುಳು ಹಾಗೂ ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಆ್ಯಕ್ಟಿಂಗ್ ಕರೀಯರ್ ಆರಂಭಿಸೋ ಮೊದಲು, ಮಂಗಳೂರಿನಲ್ಲಿ ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ.


ಅದೇ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. ಇವರ ಈ ಹೊಸ ಪಯಣಕ್ಕೆ ಗುಡ್ ಲಕ್ ಹೇಳಿ ಬಿಡೋಣ ಅಲ್ವೇ. ಹೌದು, ಬಿಗ್ ಮನೆಯ ಈ ಸೀಸನ್​ ನಲ್ಲಿ ಯಾರೆಲ್ಲ ಹೇಗೆ ಆಡ್ತಾರೆ ಅನ್ನೋ ಸಹಜ ಕುತೂಹಲ ಈಗಲೇ ಶುರು ಆಗಿದೆ.


ಜ್ಯೋತಿಷಿ ಆರ್ಯವರ್ಧನ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡ್ತಾರೆ
ಬಿಗ್ ಬಾಸ್ ಸೀಸನ್-09 ರಲ್ಲಿ ಜ್ಯೋಷಿತಿ ಆರ್ಯವರ್ಧನ್ ಕೂಡ ಪ್ರವೇಶ ಮಾಡುತ್ತಿದ್ದಾರೆ. ಓಟಿಟಿ ಬಿಗ್ ಬಾಸ್ ಮನೆಯಲ್ಲೂ ಆರ್ಯವರ್ಧನ್ ಪ್ರವೇಶ ಪಡೆದಿದ್ದರು. ತಮ್ಮ ವಿಶಿಷ್ಟ ಮನಸ್ಥಿತಿಯಿಂದಲೇ ಆರ್ಯವರ್ಧನ್ ಸಾಕಷ್ಟು ಗಮನ ಸೆಳೆದರು.


ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಸಖತ್ ಮಜಾ ಕೂಡ ಮಾಡಿದ್ದಾರೆ. ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡದ್ದು ಇದೇ ಓಟಿಟಿ ಬಿಗ್ ಬಾಸ್ ಮನೆಯಲ್ಲಿಯೇ, ಅದೇ ಹೊಸ ಲುಕ್ ನಲ್ಲೂ ಆರ್ಯವರ್ಧನ್ ಓಟಿಟಿ ಬಿಗ್ ಬಾಸ್ ಪ್ರಿಯರ ಗಮನ ಸೆಳೆದರು.


Kannada Actor Roopesh Shetty and Aryavardhan Going to enter Big Boss-09
ಓಟಿಟಿ ಮನೆಯಿಂದ ಬಿಗ್ ಮನೆಗೆ ರೂಪೇಶ್ ಶೆಟ್ಟಿ


ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಇದೇ ಆರ್ಯವರ್ಧನ್ ಈಗಾಗಲೇ ತಾಲೀಮು ಪಡೆದುಕೊಂಡೇ ಬಂದಂತಿದೆ. ಹಾಗಾಗಿಯೇ ತುಂಬಾ ವಿಶ್ವಾಸದಲ್ಲಿಯೇ ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಎಂಟ್ರಿ ಕೊಡುತ್ತಿದ್ದಾರೆ.


ಓಟಿಟಿ ಬಿಗ್ ಮನೆಗೆ ಹೋಗುವ ಮೊದಲು, ಆರ್ಯವರ್ಧನ್ ಟಿವಿ ಚಾನಲ್​ಗಳಲ್ಲಿ ಜ್ಯೋತಿಷಿ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದ್ದರು. ತಮ್ಮದೇ ರೀತಿಯಲ್ಲಿಯೇ ಜ್ಯೋತಿಷಿ ಹೇಳುತ್ತಿದ್ದ ಆರ್ಯವರ್ಧನ್, ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಓಪನ್ ಆಗಿಯೇ ಇದ್ದರು. ಒಬ್ಬ ಜ್ಯೋತಿಷಿ ಅಂತ ತೋರಿಸಿಕೊಳ್ಳದೇ ವಿಭಿನ್ನವಾಗಿಯೇ ಕಾಣಿಸಿಕೊಂಡರು.


ಇದನ್ನೂ ಓದಿ: Bigg Boss Season 9: ಬಿಗ್​ಬಾಸ್​ ಸೀಸನ್​ 9ರ ಫಸ್ಟ್​ ಕಂಟೆಸ್ಟೆಂಟ್​ ಇವ್ರೇ, ಮತ್ತೆ ದೊಡ್ಮನೆ ಸೇರಿದ ಕಿಚ್ಚನ ಕ್ಲೋಸ್ ಫ್ರೆಂಡ್​!


ಈಗ ಇದೇ ಆರ್ಯವರ್ಧನ್ ಬಿಗ್ ಬಾಸ್ ಸೀಸನ್-09 ರಲ್ಲಿ ಪ್ರವೇಶ ಪಡೆಯೋ ಅವಕಾಶ ಪಡೆದಿದ್ದಾರೆ. ಓಟಿಟಿ ಬಿಗ್ ಬಾಸ್ ಸಹ ಸ್ಪರ್ಧಿ ನಟ ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಜೊತೆ ಜೊತೆಗೇನೆ ಬಿಗ್ ಬಾಸ್ ವೇದಿಕೆ ಮೇಲೆ ಬಂದಿದ್ದಾರೆ.


ಇವರ ಎಂಟ್ರಿ ಹೇಗಿರುತ್ತದೆ ಅನ್ನೋ ಕುತೂಹಲ ಕೂಡ ಇದೆ. ಉಳಿದಂತೆ ಈ ಸಲದ ಈ ಆಟದಲ್ಲಿ ಯಾರೆಲ್ಲ ಏನೆಲ್ಲ ಮಾಡ್ತಾರೆ ಅನ್ನೋ ಕುತೂಹಲ ಭರಿತ ಪ್ರಶ್ನೆ ಕೂಡ ಇದೆ.

First published: