Rockline Sudhakar Passes Away: ಶೂಟಿಂಗ್ ವೇಳೆ ಹೃದಯಾಘಾತ; ಹಿರಿಯ ನಟ ರಾಕ್​ಲೈನ್ ಸುಧಾಕರ್ ನಿಧನ

ಅಜಿತ್, ಉಡುಂಬಾ, ಟೋಪಿವಾಲಾ, ಜೂಮ್, ಚಮಕ್, ಪಟಾಕಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಕ್​ಲೈನ್​ ಸುಧಾಕರ್ ನಟಿಸಿದ್ದರು.

news18-kannada
Updated:September 24, 2020, 12:12 PM IST
Rockline Sudhakar Passes Away: ಶೂಟಿಂಗ್ ವೇಳೆ ಹೃದಯಾಘಾತ; ಹಿರಿಯ ನಟ ರಾಕ್​ಲೈನ್ ಸುಧಾಕರ್ ನಿಧನ
ರಾಕ್​ಲೈನ್​ ಸುಧಾಕರ್
  • Share this:
ಶೂಟಿಂಗ್​ ಸಮಯದಲ್ಲೇ ಹೃದಯಾಘತ ಸಂಭವಿಸಿದ್ದರಿಂದ ಹಿರಿಯ ನಟ ರಾಕ್​ಲೈನ್​ ಸುಧಾಕರ್​ ಮೃತಪಟ್ಟಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಪೋಷಕ ಪಾತ್ರ ಹಾಗೂ ಕಾಮಿಡಿ ಪಾತ್ರಗಳಲ್ಲಿ ಅವರು ನಟಿಸಿದ್ದರು. ಅವರ ಅಗಲಿಕೆ ಇಡೀ ಚಿತ್ರರಂಗವೇ ಶೋಕ ವ್ಯಕ್ತಪಡಿಸಿದೆ.

ಕೆಲ ದಿನಗಳ ಹಿಂದಷ್ಟೇ ಸುಧಾಕರ್​ಗೆ ಕೊರೋನಾ ಸೋಂಕು ತಗುಲಿತ್ತು. ಇದಕ್ಕಾಗಿ ಅವರು ಚಿಕಿತ್ಸೆ ಪಡೆದು ಬಂದಿದ್ದರು. ಅವರು ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಮತ್ತೆ ಶೂಟಿಂಗ್​ ಕೆಲಸಗಳಲ್ಲಿ ಪಾಲ್ಗೊಂಡಿದ್ದರು. ಕೆ.ಎಂ. ಶಶಿಧರ್ ನಿರ್ದೇಶಿಸುತ್ತಿರುವ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿರುವ 'ಶುಗರ್ ಲೆಸ್' ಸಿನಿಮಾ ಶೂಟಿಂಗ್​ನಲ್ಲಿ ರಾಕ್ ಲೈನ್ ಸುಧಾಕರ್ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ. ಈ ಬಗ್ಗೆ  ನಿರ್ದೇಶಕ ಸುನಿ ಮಾಹಿತಿ ನೀಡಿದ್ದಾರೆ.




ಅಜಿತ್, ಉಡುಂಬಾ, ಟೋಪಿವಾಲಾ, ಜೂಮ್, ಚಮಕ್, ಪಟಾಕಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಕ್​ಲೈನ್​ ಸುಧಾಕರ್ ನಟಿಸಿದ್ದರು. ಅವರು ಮಾಡುತ್ತಿದ್ದ ಕಾಮಿಡಿ ಪಾತ್ರಗಳು ಎಲ್ಲರ ಗಮನ ಸೆಳೆದಿದ್ದವು.
Published by: Rajesh Duggumane
First published: September 24, 2020, 11:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading