ರಾಕಿ ಭಾಯ್ ಯಶ್ ಅಭಿನಯದ (Yash New Project New Look) ಚಿತ್ರದ ಬಗ್ಗೆ ಒಂದಿಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಮುಂದಿನ ಸಿನಿಮಾದ ಬಜೆಟ್ ಎಷ್ಟು? ರಾಕಿ ಭಾಯ್ (Rocking Star Yash) ಮುಂದಿನ ಚಿತ್ರದ ಕಥೆ ಏನು? ರಾಕಿಂಗ್ ಸ್ಟಾರ್ ತಮ್ಮ ಈ ಚಿತ್ರವನ್ನ ಯಾವಾಗ ಅನೌನ್ಸ್ ಮಾಡ್ತಾರೆ.? ಈ ಎಲ್ಲ ಪ್ರಶ್ನೆಗಳು ದಿನೇ ದಿನೇ ಕುತೂಹಲ ಮೂಡಿಸುತ್ತಲೇ ಇವೆ. ಇದರ ಬೆನ್ನಲ್ಲಿಯೆ ಈಗ ಕೆಜಿಎಫ್ (KGF-3 Movie) ಕಿಂಗ್ ರಾಕಿ ಭಾಯ್ ಮುಂದಿನ (Rocking Star New Movie) ಚಿತ್ರದ ಲುಕ್ ಹೇಗಿರುತ್ತದೆ ಅನ್ನೋ ಕುತೂಹ ಕೂಡ ಈಗ ಹೆಚ್ಚುತ್ತಲೇ ಇದೆ. ಇದರ ಸುತ್ತ ಒಂದು ವಿಶ್ಲೇಷನಾತ್ಮಕ ಸ್ಟೋರಿ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ ಡೆಡಿಕೇಷನ್ ಸೂಪರ್!
ರಾಕಿಂಗ್ ಸ್ಟಾರ್ ಯಶ್ ಡೆಡಿಕೇಷನ್ ಮೆಚ್ಚಲೇಬೇಕು. ತಮ್ಮ ಚಿತ್ರ ಜೀವನದಲ್ಲಿ ಒಂದೇ ಚಿತ್ರಕ್ಕೆ ಮೂರ್ನಾಲ್ಕು ವರ್ಷ ಕಾಯೋದು ಅಷ್ಟು ಸುಲಭವೇ ಅಲ್ಲ. ಒಂದೇ ಚಿತ್ರಕ್ಕಾಗಿಯೇ ಒಂದೇ ಮೂಡ್ನಲ್ಲಿರೋದು ಅಷ್ಟು ಸರಳವೂ ಅಲ್ಲ.
ಆದರೆ ರಾಕಿಂಗ್ ಸ್ಟಾರ್ ಯಶ್ ಆ ಒಂದು ಕೆಲಸ ಮಾಡಿದ್ದಾರೆ. ಕೆಜಿಎಫ್-1 ಮತ್ತು ಕೆಜಿಎಫ್-2 ಚಿತ್ರಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಅಷ್ಟೊಂದು ಡೆಡಿಕೇಟೆಡ್ ಆಗಿರೋ ರಾಕಿ ಭಾಯ್, ತಮ್ಮ ಮುಂದಿನ ಚಿತ್ರಕ್ಕಾಗಿಯೇ ಲುಕ್ ಬದಲಿಸ್ತಾರಾ? ಈ ಒಂದು ಪ್ರಶ್ನೆ ಕಾಡುತ್ತಿದೆ.
ಕೆಜಿಎಫ್ ಚಿತ್ರಕ್ಕಾಗಿ ಯಶ್ ಲಾಂಗ್ ಬಿಯರ್ಡ್ ಲುಕ್
ರಾಕಿಂಗ್ ಸ್ಟಾರ್ ಯಶ್ ಅಭಿನಯದಲ್ಲಿ ಕೆಜಿಎಫ್ ಸಿನಿಮಾ ಬಂತು. ಈ ಚಿತ್ರಕ್ಕಾಗಿಯೇ ಯಶ್ ಲಾಂಗ್ ಬಿಯರ್ಡ್ ಮೆಂಟೇನ್ ಮಾಡಿದ್ದರು. ಅದೇ ಲುಕ್ ಅನ್ನೇ ಕೆಜಿಎಫ್-2 ಚಿತ್ರಕ್ಕೂ ಮೆಂಟೇನ್ ಮಾಡಿದ್ದರು. ಆದರೆ ಈ ಈಗ ಲುಕ್ ಬದಲಾಗುತ್ತದೆಯೇ? ಅನ್ನೋ ಪ್ರಶ್ನೆ ಈಗ ಎದ್ದಿದೆ.
2025ಕ್ಕೆ ಕನ್ನಡದ ಕೆಜಿಎಫ್-3 ಸಿನಿಮಾ ಶುರು
ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಕೆಜಿಎಫ್-3 ಆಗಿರುತ್ತದೆ ಅನ್ನೋ ನಿರೀಕ್ಷೆ ಇತ್ತು. ಆದರೆ ಡೈರೆಕ್ಟರ್ ಪ್ರಶಾಂತ್ ನೀಲ್ ಸದ್ಯಕ್ಕೆ ಬ್ಯುಸಿ ಇದ್ದಾರೆ. ಸಲಾರ್ ಸಿನಿಮಾದ ಕೆಲಸದಲ್ಲಿಯೇ ನಿರತರಾಗಿದ್ದಾರೆ. ಈ ಚಿತ್ರ ಮುಗಿಯುತ್ತಿದ್ದಂತೇನೆ, ಜೂನಿಯರ್ ಎನ್.ಟಿ.ಆರ್ ಚಿತ್ರವನ್ನೂ ಪ್ರಶಾಂತ್ ನೀಲ್ ಮಾಡಲಿದ್ದಾರೆ.
ಇವರೆಡೂ ಪ್ರೋಜೆಕ್ಟ್ ಮುಗಿಯೋ ಹೊತ್ತಿಗೆ ಹೆಚ್ಚು ಕಡಿಮೆ ಎರಡು ವರ್ಷಗಳೇ ಕಳೆಯುತ್ತದೆ. ಅಲ್ಲಿಗೆ 2025 ಬಂದೇ ಬಿಡುತ್ತದೆ. ಆಗಲೇ ಕೆಜಿಎಫ್-3 ಚಿತ್ರ ಶುರು ಆಗುತ್ತದೆ. ಒಂದೇ ವರ್ಷದಲ್ಲಿಯೇ ಅಂದ್ರೆ, 2026ಕ್ಕೆ ಕೆಜಿಎಫ್-3 ರಿಲೀಸ್ ಕೂಡ ಆಗುತ್ತದೆ.
ಹೀಗಂತ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ. ಅಲ್ಲಿಗೆ ರಾಕಿಂಗ್ ಸ್ಟಾರ್ ಯಶ್ ಲಾಂಗ್ ಬಿಯರ್ಡ್ ಲುಕ್ ಅಲ್ಲಿಯೇ ಎರಡು ವರ್ಷ ಇರ್ತಾರಾ? ಅನ್ನೋ ಪ್ರಶ್ನೆ ಈಗ ಕುತೂಹಲ ಮೂಡಿಸಿದೆ.
ರಾಕಿಂಗ್ ಸ್ಟಾರ್ ಯಶ್ ಬಿಯರ್ಡ್ ಲುಕ್ ಇರುತ್ತಾ?
ಕೆವಿಎನ್ ಪ್ರೋಡಕ್ಷನ್ ಹೌಸ್ ಜೊತೆಗೇನೆ ಯಶ್ ಮುಂದಿನ ಸಿನಿಮಾ ಇರುತ್ತದೆ. ಈ ಚಿತ್ರಕ್ಕಾಗಿಯೇ ರಾಕಿ ಭಾಯ್ ರೆಡಿ ಆಗುತ್ತಿದ್ದಾರೆ. ಇನ್ನೇನು ದುಬೈಯಿಂದ ಬಂದ್ಮೇಲೆ ರಾಕಿ ಭಾಯ್ ತಮ್ಮ ಮುಂದಿನ ಚಿತ್ರದ ಡಿಟೈಲ್ಸ್ ಕೊಡ್ತಾರೆ ಅಂತಲೇ ಹೇಳಲಾಗುತ್ತಿದೆ.
ಇದರ ಬೆನ್ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಲುಕ್ ಬಗ್ಗೇನೂ ಒಂದು ಕುತೂಹಲ ಇದೆ. ಕೆವಿಎನ್ ಪ್ರೋಡಕ್ಷನ್ ಹೌಸ್ ಚಿತ್ರಕ್ಕಾಗಿಯೇ ರಾಕಿಂಗ್ ಸ್ಟಾರ್ ಯಶ್ ಲುಕ್ ಬದಲಿಸ್ತಾರಾ ಅನ್ನೋ ಪ್ರಶ್ನೆ ಕೂಡ ಇದೆ.
ಇದನ್ನೂ ಓದಿ: Milana Nagaraj: ಲವ್ ಬರ್ಡ್ಸ್ ಫಸ್ಟ್ ಲುಕ್ ರಿಲೀಸ್! ಇದು ಲವ್ ಮಾಕ್ಟೆಲ್ Part-3 ಸಿನಿಮಾನಾ?
ತಮ್ಮ ಈ ಮುಂದಿನ ಚಿತ್ರಕ್ಕೂ ಯಶ್ ಲಾಂಗ್ ಬಿಯರ್ಡ್ ಲುಕ್ ಕ್ಯಾರಿ ಮಾಡ್ತಾರಾ ಅನ್ನುವ ಕುತೂಹಲವೂ ಇದೆ. ಆದರೆ ಈ ಬಗ್ಗೆ ಯಶ್ ಎಲ್ಲೂ ಏನೂ ಹೇಳಿಕೊಂಡಿಲ್ಲ. ದುಬೈನಿಂದ ಬಂದ್ಮೇಲೆ ಎಲ್ಲವನ್ನೂ ಹೇಳಬಹುದು ಎಂಬ ನಿರೀಕ್ಷೆ ಕೂಡ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ