ರಾಕಿಂಗ್ ಸ್ಟಾರ್ ಯಶ್ ಅಭಿನಯದ (Rocking Star Yash New Movie) ಸಿನಿಮಾಗಳ ನಿರೀಕ್ಷೆ ಹೆಚ್ಚುತ್ತಲೇ ಇದೆ. ರಾಕಿ ಭಾಯ್ ಬೆಂಗಳೂರು ಟು ಮುಂಬೈ, ಮುಂಬೈ ಟು ಬೆಂಗಳೂರು ಟ್ರಾವಲ್ ಮಾಡ್ತಾನೇ ಇದ್ದಾರೆ. ಇವರ ಓಡಾಟದಿಂದ ಸಿನಿ ಪ್ರೇಕ್ಷಕರಲ್ಲಿ (Yash New Movie Updates) ಕುತೂಹಲವೂ ಇದೆ. ಏನೂ ಆಗುತ್ತಿಲ್ಲ ಅನ್ನುವ ಸಣ್ಣದೊಂದು ಬೇಸರವೂ ಇದೆ. ಇದರ ಮಧ್ಯ ಪ್ರೇಮಿಗಳ ವಾರ ಯಶ್ (Googly Movie) ಅಭಿನಯದ ಗೂಗ್ಲಿ ಚಿತ್ರ ರಿಲೀಸ್ ಆಗಿದೆ. ಒಂದು ವಾರಗಳ ಕಾಲ ಬೆಂಗಳೂರಿನ ಓರಾಯನ್ ಮಾಲ್ನ ಪಿವಿಆರ್ನಲ್ಲಿ ಮರು ಬಿಡುಗಡೆಯಾಗಿದೆ. ಕಳೆದ ಜನವರಿ-ತಿಂಗಳು 8 ರಂದು ಯಶ್ ಮತ್ತು ರಾಧಿಕಾ ಅಭಿನಯದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ (Yash Old Movie) ಚಿತ್ರವೂ ರಿಲೀಸ್ ಆಗಿತ್ತು.
ರಾಕಿ ಭಾಯ್ ಮುಂದಿನ ಸಿನಿಮಾ ಹೇಗೆ ಇರುತ್ತದೆ?
ಇದರ ಮಧ್ಯ ರಾಕಿಂಗ್ ಸ್ಟಾರ್ ಯಶ್ ಕ್ರಿಯೇಟಿವ್ ಟೀಮ್ ಈಗೊಂದು ಕೆಲಸ ಮಾಡಿದೆ. ಇವರ ಕೆಲಸದ ಆ ಕ್ರಿಯೇಟಿವ್ ವೀಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅದು ಬೇಜಾನ್ ಸೌಂಡ್ ಮಾಡುತ್ತಿದೆ.
ಸಿನಿಮಾ ಪ್ರೇಮಿಗಳು ಈ ವೀಡಿಯೋ ನೋಡಿದ್ರೆ, ಅತಿ ಶೀಘ್ರದಲ್ಲಿಯೇ ರಾಕಿ ಭಾಯ್ ತಮ್ಮ ಮುಂದಿನ ಸಿನಿಮಾದ ಬಿಗ್ ನ್ಯೂಸ್ ಕೊಡ್ತಾರೆ ಅನ್ನೊದೇ ಆಗಿದೆ. ಅದನ್ನ ಒಮ್ಮೆ ಗಮನಿಸಿದ್ರೆ, ಅಲ್ಲಿ ರಾಕಿ ಭಾಯ್ ಕಿಂಗ್ ಅನ್ನೋದು ಸ್ಪಷ್ಟವಾಗಿಯೇ ತಿಳಿಯುತ್ತದೆ.
ಮುಂದಿನ ಚಿತ್ರದಲ್ಲಿ ರಾಕಿ "ಕಿಂಗ್" ಅಂತೆ ಹೌದೇ?
ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರದಲ್ಲಿ ಕಿಂಗ್ ಆಗಿ ಬರ್ತಾರಾ ಅನ್ನುವ ಅನುಮಾನ ಕೂಡ ಮೂಡುತ್ತಿದೆ. ಸಿನಿಮಾ ಪ್ರೇಮಿಗಳಲ್ಲಿ ಈ ಒಂದು ಕುತೂಹಲ ಮೂಡಿದೆ. ರಾ "ಕಿಂಗ್" ಸ್ಟಾರ್ ಯಶ್ ಅತಿ ಶೀಘ್ರದಲ್ಲಿಯೇ ಬರ್ತಿದ್ದಾರೆ. ಅತ್ಯಂತ ಘನಘೋರ ಯುದ್ಧ ಮಾಡಲು ಖಂಡಿತವಾಗಿಯೂ ರಾ "ಕಿಂಗ್" ಸ್ಟಾರ್ ಬರ್ತಿದ್ದಾರೆ.
ಯಶ್ ಕ್ರಿಯೇಟಿವ್ ಟೀಮ್ ವಿಡಿಯೋ ವೈರಲ್
ಕಿಂಗ್ ರಾಕಿ ಭಾಯ್ ಆಗಮನ ಇನ್ನೇನು ಸನಿಹಕ್ಕೆ ಇದೆ. ಇದನ್ನ ನೋಡಲು ಕಾಯ್ತಾಯಿರಿ ಅನ್ನೋದೇ ಈ ವಿಡಿಯೋ ಒಟ್ಟು ತಿರುಳಾಗಿದೆ. ರಾಕಿ ಭಾಯ್ ಅಭಿಮಾನಿಗಳಲ್ಲಿ ಈ ಒಂದು ವಿಡಿಯೋ ಹೊಸದೊಂದು ಅತಿ ದೊಡ್ಡ ಭರವಸೆ ಮೂಡಿಸಿದೆ.
𝐑𝐞𝐭𝐮𝐫𝐧 𝐎𝐟 𝐀 𝐊𝐢𝐧𝐠 To The Bloodiest Battlefield.
3D Render Of #Yash19 Announcement. ( Fan Art )
Enhancing the Quality of Art#Yash #YashBoss #YashCreativeTeam pic.twitter.com/5woE4g2LeP
— Yash Creative Team (@RSYCreativeTeam) February 9, 2023
ರಾಕಿ ಮಾತು ಈಗ ವಿಶ್ವ ಸಿನಿಮಾ ಸುತ್ತವೇ ಹೆಚ್ಚು!
ಹಾಲಿವುಡ್ ಟೆಕ್ನಿಷನ್ಗಳ ಜೊತೆಗೂ ರಾಕಿ ಭಾಯ್ ಕಾಣಿಸಿಕೊಳ್ತಿರೋದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಅದರ ಬೆನ್ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಮಾತು ಭಾರತವನ್ನ ದಾಟಿ ಹೋಗಿವೆ.
ಆರಂಭದಲ್ಲಿ ಪ್ಯಾನ್ ಇಂಡಿಯಾ ಸಿನಿಮಾದ ಕನಸು ಕಂಡಿದ್ದ ರಾಕಿ ಭಾಯ್ ಯಶ್, ಆ ಒಂದು ಗುರಿಯನ್ನ ಮುಟ್ಟಿದ್ದಾರೆ. ಅದರ ಹಿಂದೇನೆ ಇವರ ಮಾತು ವಿಶ್ವದ ಸಿನಿಮಾದತ್ತ ವಾಲಿದೆ.
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಅನೌನ್ಸ್ಮೆಂಟ್ ಯಾವಾಗ?
ವಿಶ್ವ ಮಟ್ಟದಲ್ಲಿಯೇ ಚಿತ್ರ ಮಾಡಬೇಕು ಅನ್ನೋದೇ ಯಶ್ ಮಾತಿನ ಒಟ್ಟು ತಾತ್ಪರ್ಯ ಅಂತ ಹೇಳಬಹುದು. ಹಾಗಾಗಿಯೇ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾದ ಅನೌನ್ಸ್ಮೆಂಟ್ ಡಿಲೇಟ್ ಆಗ್ತಾಯಿದೆ ಅನ್ನೋದು ಒಟ್ಟು ಈಗೀನ ಚರ್ಚೆಯ ವಿಷಯವೇ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಚಿತ್ರದ ಬಗೆಗಿನ ಕುತೂಹಲ ಇನ್ನಿಲ್ಲದಂತೆ ದಿನವೂ ಒಂದೊಂದು ರೂಪ ಪಡೆಯುತ್ತಲೇ ಇದೆ. ಅದೇ ಗ್ಯಾಪ್ನಲ್ಲಿಯೇ ಯಶ್ ಕ್ಲಾಸಿಕ್ ಸಿನಿಮಾಗಳು ಮತ್ತೆ ಮತ್ತೆ ರಿಲೀಸ್ ಆಗುತ್ತಿವೆ. ಜನವರಿ-08 ರಂದು ಮಿಸ್ಟರ್ ಆ್ಯಂಡ್ ಮಿಸಸ್ ಸಿನಿಮಾ ರಿಲೀಸ್ ಆಗಿತ್ತು.
ಇದನ್ನೂ ಓದಿ: Kabzaa Movie: ಕಬ್ಜ ಚಿತ್ರದಲ್ಲಿ ಇವರೇ ಉಪ್ಪಿಗೆ ಬಲಗೈ ಬಂಟ!
ಪ್ರೇಮಿಗಳ ದಿನಕ್ಕೆ ರಾಕಿಯ ಗೂಗ್ಲಿ ಮರು ಬಿಡುಗಡೆ!
ಪ್ರೇಮಿಗಳ ದಿನದ ಅಂಗವಾಗಿಯೇ ಒಂದು ವಾರಗಳ ಕಾಲ ಬೆಂಗಳೂರಿನ ಓರಾಯನ್ ಮಾಲ್ನ ಪಿವಿಆರ್ ನಲ್ಲಿ ಇದೇ 10 ರಿಂದ ಗೂಗ್ಲಿ ಚಿತ್ರವೂ ಪ್ರದರ್ಶನ ಕಾಣುತ್ತಿದೆ.
ಈ ವಿಷಯ ಕೇಳಿ ಆಶ್ಚರ್ಯ ಪಟ್ಟ ನಟ-ನಿರ್ದೇಶಕ ಪವನ್ ಒಡೆಯರ್, ತುಂಬಾ ಖುಷಿಪಟ್ಟಿದ್ದಾರೆ. ಪ್ರೇಮಿಗಳ ವಾರ ಇದಾಗಿದ್ದು, ಜನರು ಪ್ರೀತಿ-ಪ್ರೇಮದ ಗೂಗ್ಲಿ ಚಿತ್ರವನ್ನ ಎಂಜಾಯ್ ಮಾಡಲಿ ಅಂತಲೇ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ