ಕನ್ನಡ ನಾಡಿನ ಕನ್ನಡ ಚಿತ್ರರಂಗದ (KGF Film Untold Story) ಗರಿಮೆ ಹಿರಿಮೆಯನ್ನ ಹೆಚ್ಚಿಸಿದ ಸಿನಿಮಾಗಳು ಸಾಕಷ್ಟು ಇವೆ. ಆದರೆ ಕೆಜಿಎಫ್ ಸಿನಿಮಾ ಮಾಡಿರೋ ಸಾಧನೆ (Prashanth Neel) ಯಾರೂ ಮಾಡಲಿಲ್ಲ. ಕೆಜಿಎಫ್ ಬಂದ್ಮೇಲೆ ಸಾಲು ಸಾಲು ಸಿನಿಮಾಗಳು ಕನ್ನಡ ಕೀರ್ತಿಯ ಪತಾಕೆಯನ್ನ ಹಾರಿಸುತ್ತಲೇ ಇವೆ. ಏನೇ ಆದರೂ ಈ ವಿಚಾರದಲ್ಲಿ ಮೊದಲ ಸಾಲಿನಲ್ಲಿ ಕೆಜಿಎಫ್ (KGF Cinema) ಸಿನಿಮಾ ನಿಲ್ಲುತ್ತದೆ. ಈ ಸಿನಿಮಾ ತೆಗೆಯೋ ಮೊದಲು ಡೈರೆಕ್ಟರ್ ಪ್ರಶಾಂತ್ ನೀಲ್ ಉಗ್ರಂ ಸಿನಿಮಾ ಮಾಡಿದ್ದರು. ಇದು ಇವರ ಮೊದಲ ಸಿನಿಮಾ ಅನ್ನುವುದು ಎಲ್ಲರಿಗೂ ಗೊತ್ತಿರೋ ವಿಷಯವೇ (Kannada Super Hit Cinema) ಆಗಿದೆ. ಆದರೆ ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ಕೆಜಿಎಫ್ ಚಿತ್ರದ ಕಥೆ ಪ್ರಶಾಂತ್ ನೀಲ್ ಮನದಲ್ಲಿ ರೂಪಗೊಂಡಿದೆ.
ಉಗ್ರಂ ಚಿತ್ರಕ್ಕೂ ಕೆಜಿಎಫ್ ಚಿತ್ರಕ್ಕು ಏನ್ ನಂಟು?
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಉಗ್ರಂ ಸಿನಿಮಾ ವಿಶೇಷವಾಗಿಯೇ ಇದೆ. ಕನ್ನಡ ನಾಡಿನ ಜನಕ್ಕೆ ಈ ಚಿತ್ರ ಹೊಸ ಅನುಭವ ಕೊಟ್ಟಿದೆ.
ಇದೇ ಚಿತ್ರದ ಚಿತ್ರೀಕರಣಕ್ಕೆ ಎಂದು ಕೆಜಿಎಫ್ನ ಸೈನೈಡ್ ಹಿಲ್ಸ್ಗೆ ಇಡೀ ಟೀಮ್ ಹೋಗಿತ್ತು. ಇಲ್ಲಿ ನಡೆದ ಕಥೆಗಳನ್ನ ಪ್ರಶಾಂತ್ ನೀಲ್ ಅವರಿಗೆ ಇಲ್ಲಿಯ ಜನ ಹೇಳ್ತಾ ಇದ್ದರು.
ಕೆಜಿಎಫ್ ಹೋದಾಗಲೇ ರಾಕಿ ಕ್ಯಾರೆಕ್ಟರ್ ರೂಪಗೊಂಡಿತ್ತು!
ಆ ಸಮಯದಲ್ಲಿಯೇ ಇವರಲ್ಲಿದ್ದ ಆ ಒಬ್ಬ ರಾಕಿಯ ಕಥೆಗೆ ಕಂಟೆಂಟ್ ಸಿಕ್ಕಿತ್ತು ನೋಡಿ. ಮಹತ್ವಾಕಾಂಕ್ಷಿ ಮತ್ತು ಅತಿ ಆಸೆಯ ರಾಕಿ ಅನ್ನುವ ಕ್ಯಾರೆಕ್ಟರ್ಗೆ ಸರಿಯಾದ ಗುರಿ ಇದೇ ಅನ್ನುವುದನ್ನ ಪ್ರಶಾಂತ್ ನೀಲ್ ಮನವರಿಕೆ ಮಾಡಿಕೊಂಡರು.
ಉಗ್ರಂ ಚಿತ್ರದ ಚಿತ್ರೀಕರಣದ ಮಧ್ಯೆ ಕೆಜಿಎಫ್ ಗೋಲ್ಡ್ ಮೈನ್ ಕಥೆಗಳನ್ನ ಕೇಳುತ್ತಲೇ ಬಂದಿದ್ದ ಪ್ರಶಾಂತ್ ನೀಲ್, ದಿನಗಳದಂತೆ ಕೆಜಿಎಫ್ ನರಾಚಿಯ ಸ್ಪಷ್ಟ ಕಲ್ಪನೆ ಕೂಡ ಸಿಗ್ತಾ ಹೋಗಿತ್ತು.
ಉಗ್ರಂ ಸಮಯದಲ್ಲಿ ಕೆಜಿಎಫ್ ರಾಕಿ ಕನಸು ಕಂಡ ಪ್ರಶಾಂತ್
ಬ್ರಿಟಿಷ್ ಕಾಲದಲ್ಲಿ ಕೆಜಿಎಫ್ ಸ್ಥಿತಿ ಹೇಗಿತ್ತು? ಇಲ್ಲಿ ಆ ಸಮಯದಲ್ಲಿ ಏನೆಲ್ಲ ಆಯಿತು? ಹೀಗೆ ಅಸಲಿ ವಿಷಯಗಳನ್ನ ತಿಳಿಯುತ್ತ ಹೋಗಿದ್ದ ಪ್ರಶಾಂತ್ ನೀಲ್ ಅವರಿಗೆ ಕೆಜಿಎಫ್ ಚಿತ್ರದ ಸ್ಪಷ್ಟ ಕಲ್ಪನೆ ಸಿಕ್ಕೆ ಬಿಡ್ತು ನೋಡಿ.
ಆದರೆ ಆ ಕೂಡಲೇ ಈ ಚಿತ್ರ ಮಾಡೋದಾದ್ರೂ ಹೇಗೆ? ಮೊದಲು ಉಗ್ರಂ ತೆರೆಗೆ ಬರಲಿ ಅಂತ್ಲೇ ಪ್ರಶಾಂತ್ ನೀಲ್ ಕಾದರು. ಅದು ಬಂದು ಜನರ ಅಭಿರುಚಿಯನ್ನ ಬದಲಿಸಿತು.
ಉಗ್ರಂ ಅಂಗಳದಲ್ಲಿ ಹುಟ್ಟಿದ್ದ ನರಾಚಿಯ ರಾಕಿ ಭಾಯ್
ಉಗ್ರಂ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಮರು ಜೀವ ಕೊಡ್ತು. ಪ್ರಶಾಂತ್ ನೀಲ್ ಎಂಬ ಒಬ್ಬ ಅದ್ಭುತ ಕಲ್ಪನೆಯ ಡೈರೆಕ್ಟರ್ ಕೊಡ್ತು. ಕೆಜಿಎಫ್ ಸಿನಿಮಾ ಮಾಡಬೇಕು ಅಂತಲೇ ಪ್ರಶಾಂತ್ ನೀಲ್ ಹಠ ಹಿಡಿದಿದ್ದರು.
ಇವರ ಈ ಒಂದು ಅತಿ ದೊಡ್ಡ ಹಠಕ್ಕೆ ಸಾಥ್ ಕೊಟ್ಟವರು ರಾಕಿ ಭಾಯ್ ಯಶ್ ಹಾಗೂ ಹೊಂಬಾಳೆ ಸಂಸ್ಥೆ. ಹಾಗಾಗಿಯೇ ಕೆಜಿಎಫ್ ಸಿನಿಮಾ ಆಯಿತು. ಕೆಜಿಎಫ್ ಚಿತ್ರದ ಕಥೆಯನ್ನ ಒಂದೇ ಭಾಗದಲ್ಲಿ ಹೇಳಿಬಿಡಬೇಕು ಅಂತಲೇ ಪ್ರಶಾಂತ್ ನೀಲ್ ಅಂದುಕೊಂಡಿದ್ದರು.
ರಾಕಿ ಭಾಯಿಂದಲೇ ಕೆಜಿಎಫ್-2 ಸಿನಿಮಾ ಬಂತು
ಆದರೆ ರಾಕಿ ಭಾಯ್ ಮುಂದಾಲೋಚನೆಯಿಂದ ಕೆಜಿಎಫ್ ಭಾಗ-2 ರೆಡಿ ಆಯಿತು ಅನ್ನೋರು ಇದ್ದಾರೆ. ಹೀಗೆ ಕೆಜಿಎಫ್ ಬಂದು ಇತಿಹಾಸ ಬರೆದು ಬಿಟ್ಟಿತು. ಎರಡೂ ಭಾಗದಲ್ಲೂ ಅಷ್ಟೇ ಯಶಸ್ಸು ಪಡೆದ ಕೆಜಿಎಫ್ ಚಿತ್ರದ ರೂಪಗೊಂಡ ಕಥೆ ನಿಜಕ್ಕೂ ಮಾದರಿಯಾಗಿಯೇ ಇದೆ.
ಆದರೆ ಕೆಜಿಎಫ್ ಚಿತ್ರದಿಂದಲೇ ರಾಕಿ ಭಾಯ್ ಆಗಿದ್ದು ಅನ್ನೋರು ಇದ್ದಾರೆ. ಹಾಗಂತ ಹೇಳೋರಿಗೆ ಪ್ರಶಾಂತ್ ನೀಲ್ ತುಂಬಾ ಚೆನ್ನಾಗಿಯೇ ಹೇಳುತ್ತಾರೆ. ಕೆಜಿಎಫ್ನಿಂದ ರಾಕಿ ಭಾಯಿ ಆಗಿಲ್ಲ. ರಾಕಿ ಭಾಯಿಂದಲೇ ಕೆಜಿಎಫ್ ಹುಟ್ಟಿದೆ ಅಂತಲೇ ಹೇಳಿ ಬಿಡ್ತಾರೆ.
ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ರಾಕಿಗೆ ವಿಭಿನ್ನ ರೂಪ
ಇದು ನಿಜ ಕೂಡ ಯಾಕೆಂದ್ರೆ ರಾಕಿ ಅನ್ನುವ ಪಾತ್ರದಲ್ಲಿ ಯಶ್ ಅಭಿನಯಿಸಿದ್ದರು. ನಟ-ನಿರ್ದೇಶಕ-ಸಂಕಲನಕಾರ ನಾಗೇಂದ್ರ ಅರಸ್, ರಾಕಿ ಅನ್ನುವ ಹೆಸರಿಟ್ಟುಕೊಂಡು ಚಿತ್ರ ಮಾಡಿದ್ದರು.
ಇದನ್ನೂ ಓದಿ: Kalpana: ಚಿನ್ನದ ಸರ ಅಡವಿಟ್ಟು ಮನೆ ಬಾಡಿಗೆ ಕಟ್ಟಿದ್ರು ಕಲ್ಪನಾ! ಅವರು ಸೊಕ್ಕಿನ ಹೆಣ್ಣಲ್ಲ, ಸ್ವಾಭಿಮಾನದ ಖನಿ
ಆದರೆ ರಾಕಿ ಅನ್ನುವ ಆ ಹೆಸರು ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ಬೇರೆ ರೂಪ ಪಡೆದುಕೊಂಡಿತ್ತು. ಮಹತ್ವಾಕಾಂಕ್ಷಿ ರಾಕಿ ಆಗಿ ನರಾಚಿಯ ಪಡೆದುಕೊಳ್ಳುವ ರಾಕಿ ಭಾಯ್ ಆಗಿ ಬೆಳೆದು ನಿಂತಿತು. ಅದಕ್ಕೇನೆ ಈ ವಿಭಿನ್ನ ರಾಕಿ ಭಾಯ್ ಅನ್ನ ಎಲ್ಲರೂ ಸ್ವೀಕರಿಸಿ ಗೆಲುವು ಕೊಟ್ಟಿದ್ದಾರೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ